ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏದೆನ್‌ ತೋಟ ಮನುಷ್ಯರ ನಿಜವಾದ ಬೀಡಾಗಿತ್ತಾ?

ಏದೆನ್‌ ತೋಟ ಮನುಷ್ಯರ ನಿಜವಾದ ಬೀಡಾಗಿತ್ತಾ?

ಏದೆನ್‌ ತೋಟ ಮನುಷ್ಯರ ನಿಜವಾದ ಬೀಡಾಗಿತ್ತಾ?

ನೀವೊಂದು ಸುಂದರ ತೋಟದಲ್ಲಿ ಇದ್ದೀರಾ ಅಂತ ನೆನಸಿ. ನಿಮ್ಮ ಸುತ್ತಮುತ್ತ ಕಿರಿಕಿರಿ ಮಾಡೋ ಸದ್ದು ಇಲ್ಲ. ಆರಾಮವಾಗಿ ಮತ್ತು ಶಾಂತಿಯಿಂದ ಇದ್ದೀರಾ. ನಿಮ್ಮ ಮನಸ್ಸಲ್ಲಿ ಯಾವುದೇ ಚಿಂತೆ ಇಲ್ಲ. ಕಾಯಿಲೆ, ಅಲರ್ಜಿ, ನೋವು ನಿಮ್ಮನ್ನ ಕಾಡ್ತಾ ಇಲ್ಲ. ಸಂತೋಷವಾಗಿ, ನೆಮ್ಮದಿಯಿಂದ ಇದ್ದೀರ. ಬಣ್ಣಬಣ್ಣದ ಹೂವುಗಳ ಮೇಲೆ, ಸ್ಫಟಿಕದಂತೆ ಸ್ವಚ್ಛವಾಗಿರೋ ತೊರೆಯ ಮೇಲೆ ಮತ್ತು ಹಚ್ಚಹಸಿರಾಗಿ ಕಂಗೊಳಿಸ್ತಿರೋ ಎಲೆಗಳ ಮೇಲೆ ನಿಮ್ಮ ಕಣ್ಣು ಹೋಗುತ್ತೆ. ಸೂರ್ಯನ ಬೆಳಕು ಮತ್ತು ನೆರಳಿನ ಜೊತೆ ಕಣ್ಣಾಮುಚ್ಚಾಲೇ ಆಡ್ತಿರೋ ಹುಲ್ಲುಗಾವಲನ್ನೂ ನೀವು ನೋಡ್ತೀರಾ!

ತಂಗಾಳಿ ನಿಮ್ಮನ್ನ ಕೋಮಲವಾಗಿ ಸ್ಪರ್ಶಿಸಿದಾಗ ಅದ್ರ ಜೊತೆ ಹೂಗಳ ಸುಗಂಧ ಸವಿತೀರ. ಎಲೆಗಳು ಅಲುಗಾಡುವ ಶಬ್ದ, ಕಲ್ಲಿಗೆ ತಾಗಿ ಜುಳು-ಜುಳು ಅಂತ ಹರಿಯುತ್ತಿರೋ ನೀರು, ಹಕ್ಕಿಗಳ ಚಿಲಿಪಿಲಿ, ಹುಳಗಳ ಕೂಗು ಇವನ್ನೆಲ್ಲ ಕೇಳಿಸಿಕೊಳ್ತಾ ಇರೋದನ್ನ ಊಹಿಸಿದಾಗ ಆ ಜಾಗದಲ್ಲಿ ನೀವೂ ಇರಬೇಕು ಅಂತ ಅನಿಸುತ್ತೆ ಅಲ್ವಾ?

ಲೋಕದಲ್ಲಿರೋ ಎಷ್ಟೋ ಜನ್ರು, ಮೊದಲ ಮಾನವರು ಇಂಥ ಜಾಗದಲ್ಲೇ ಬದುಕಿದರು ಅಂತ ನಂಬ್ತಾರೆ. ಎಷ್ಟೋ ಶತಮಾನಗಳ ತನಕ ಯೆಹೂದಿ ಧರ್ಮದವರು, ಕ್ರೈಸ್ತ ಧರ್ಮದವರು ಮತ್ತು ಇಸ್ಲಾಂ ಧರ್ಮದವರು ದೇವರು ಆದಾಮ ಹವ್ವರನ್ನ ಏದೆನ್‌ ತೋಟದಲ್ಲಿ ಜೀವಿಸೋಕೆ ಬಿಟ್ಟನು ಅನ್ನೋದನ್ನ ಕಲಿಸಿದ್ದಾರೆ. ಬೈಬಲ್‌ ಪ್ರಕಾರ ಅವರು ಆ ತೋಟದಲ್ಲಿ ಶಾಂತಿಯಿಂದ ಮತ್ತು ಸಂತೋಷದಿಂದ ನೂರಾರು ವರ್ಷ ಜೀವಿಸ್ತಾ ಇದ್ರು. ಒಬ್ಬರ ಜೊತೆ ಇನ್ನೊಬ್ರು ಪ್ರೀತಿಯಿಂದ, ಪ್ರಾಣಿಗಳ ಜೊತೆ ಶಾಂತಿಯಿಂದ ಮತ್ತು ಶಾಶ್ವತ ಜೀವನವನ್ನ ಕೊಟ್ಟ ದೇವರ ಜೊತೆ ಒಳ್ಳೆಯ ಸ್ನೇಹ ಸಂಬಂಧವನ್ನ ಕಾಪಾಡ್ಕೊಂಡು ನೆಮ್ಮದಿಯಾಗಿ ಬಾಳ್ತಿದ್ರು.—ಆದಿಕಾಂಡ 2:15-24.

ಒಂದು ಕಾಲದಲ್ಲಿ ಭೂಮಿ ಸುಂದರ ತೋಟ ಆಗಿತ್ತು ಅನ್ನೋ ವಿಷಯವನ್ನ ಹಿಂದೂ ಧರ್ಮದವರು ನಂಬ್ತಾರೆ. ಬೌದ್ಧ ಧರ್ಮದವರು, ತಮ್ಮ ಧರ್ಮದ ಮುಖಂಡರು ಜೀವಿಸಿದ್ದು ಭೂಮಿ ಸುಂದರ ತೋಟವಾಗಿದ್ದಾಗಲೇ ಅಂತ ನಂಬ್ತಾರೆ. ಆಫ್ರಿಕಾದ ಅನೇಕ ಧರ್ಮಗಳವರು ಆದಾಮ ಹವ್ವ ಕಥೆ ತರ ಬೇರೆ ಕಥೆಗಳನ್ನೂ ಹೇಳ್ತಾರೆ.

ಭೂಮಿ ಸುಂದರ ತೋಟ ಆಗಿತ್ತು ಅನ್ನೋ ನಂಬಿಕೆ ಅನೇಕ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಇದೆ. ಒಬ್ಬ ಬರಹಗಾರ ಹೀಗೆ ಹೇಳ್ತಾನೆ: “ಹಿಂದಿನ ಕಾಲದಲ್ಲಿ ಅನೇಕ ಸಂಸ್ಕೃತಿಗಳು ಏನು ನಂಬ್ತಿದ್ರು ಅಂದ್ರೆ ಮೊದಲ ಮಾನವರು ಸುಂದರ ತೋಟದಲ್ಲಿ ಜೀವಿಸ್ತಿದ್ರು. ಅವ್ರ ಜೀವನ ಪರಿಪೂರ್ಣವಾಗಿತ್ತು. ಅವ್ರಿಗೆ ಯಾವುದರ ಭಯನೂ ಇರಲಿಲ್ಲ, ಸಂತೋಷವಾಗಿರೋಕೆ ಏನೆಲ್ಲಾ ಬೇಕಿತ್ತೊ ಅದೆಲ್ಲಾ ಅವ್ರ ಹತ್ರ ಇತ್ತು. ಈ ನಂಬಿಕೆ ಇದ್ದಿದ್ರಿಂದನೇ ಅನೇಕ ಜನ್ರು ಕಳೆದು ಹೋದ ಆ ಸುಂದರ ತೋಟವನ್ನ ಮತ್ತೆ ಪಡೆಯೋಕೆ ತುಂಬಾ ಪ್ರಯತ್ನ ಹಾಕಿದ್ದಾರೆ.”

ಈ ಎಲ್ಲ ಕಥೆಗಳು, ಸಂಸ್ಕೃತಿಗಳು ಒಂದೇ ಮೂಲದಿಂದ ಬಂದಿರಬಹುದಾ? ಮನುಷ್ಯರ ಮನಸ್ಸಲ್ಲಿ ಈ ವಿಷಯ ಇಷ್ಟೊಂದು ಅಚ್ಚೊತ್ತಿರೋದಕ್ಕೆ ಯಾವುದಾದ್ರು ನಿಜವಾದ ವಿಷಯ ಕಾರಣ ಆಗಿರಬಹುದಾ? ನಿಜವಾಗ್ಲೂ ಏದೆನ್‌ ತೋಟ ಇತ್ತಾ? ಆದಾಮ-ಹವ್ವ ಅನ್ನೋ ವ್ಯಕ್ತಿಗಳು ನಿಜವಾಗ್ಲೂ ಬದುಕಿದ್ರಾ?

ಇಂದು ಅನೇಕ ಜನ್ರಿಗೆ ಈ ವಿಷಯದ ಮೇಲೆ ನಂಬಿಕೆ ಇಲ್ಲದೆ ಇರೋದ್ರಿಂದ ಇದೆಲ್ಲ ಸುಳ್ಳು ಅಂತ ಹೇಳ್ತಾರೆ. ಅನೇಕ ಧಾರ್ಮಿಕ ಮುಖಂಡರು ಸಹ, ಏದೆನ್‌ ತೋಟ ಅಸ್ತಿತ್ವದಲ್ಲೇ ಇರಲಿಲ್ಲ ಅಂತ ಹೇಳ್ತಾರೆ. ನಮಗೆಲ್ಲ ಪಾಠ ಕಲಿಸೋಕೆ ಅದೊಂದು ಕಟ್ಟುಕಥೆ ಅಷ್ಟೇ ಅಂತ ಅವರು ಹೇಳ್ತಾರೆ.

ಬೈಬಲ್‌ನಲ್ಲಿ ಅನೇಕ ಕಥೆಗಳಿವೆ. ಸ್ವತಃ ಯೇಸು ಕ್ರಿಸ್ತನೇ ಅನೇಕ ಪ್ರಸಿದ್ಧ ಕಥೆಗಳನ್ನ ಹೇಳಿದನು. ಆದ್ರೆ ಏದೆನ್‌ ತೋಟದ ಬಗ್ಗೆ ಇರೋ ವಿಷಯ ಬೈಬಲ್‌ನಲ್ಲಿ ಕಥೆಯಾಗಿ ಅಲ್ಲ, ಅದು ನಿಜವಾಗ್ಲೂ ಅಸ್ತಿತ್ವದಲ್ಲಿತ್ತು ಅಂತ ಇದೆ. ಏದೆನ್‌ ತೋಟ ಅಸ್ತಿತ್ವದಲ್ಲಿ ಇರಲಿಲ್ಲ ಅಂದಿದ್ರೆ ಬೈಬಲ್‌ನಲ್ಲಿರೋ ಬೇರೆ ವಿಷಯಗಳನ್ನ ನಂಬೋಕೆ ಕಷ್ಟ ಆಗುತ್ತೆ. ಹಾಗಾಗಿ ಕೆಲವು ಜನ್ರು ಯಾಕೆ ಏದೆನ್‌ ತೋಟದ ವಿಷಯವನ್ನ ನಂಬಲ್ಲ ಅಂತ ನಾವು ನೋಡೋಣ. ಜೊತೆಗೆ, ಈ ವಿಷಯ ತಿಳ್ಕೊಳ್ಳೋದು ಯಾಕಷ್ಟು ಮುಖ್ಯ ಅಂತನೂ ಕಲಿಯೋಣ.