ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವರ್ಷದ ಅತಿ ಮುಖ್ಯ ದಿನಕ್ಕಾಗಿ ಸಿದ್ಧರಾಗಿದ್ದೀರೊ?

ವರ್ಷದ ಅತಿ ಮುಖ್ಯ ದಿನಕ್ಕಾಗಿ ಸಿದ್ಧರಾಗಿದ್ದೀರೊ?

ವರ್ಷದ ಅತಿ ಮುಖ್ಯ ದಿನಕ್ಕಾಗಿ ಸಿದ್ಧರಾಗಿದ್ದೀರೊ?

ತನ್ನ ಮರಣಕ್ಕೆ ಕೆಲವೇ ಗಳಿಗೆಗಳಿದ್ದಾಗ ಯೇಸು ತನ್ನ ಮರಣದ ಸ್ಮಾರಕವಾಗಿ ಒಂದು ವಿಶೇಷ ಏರ್ಪಾಡನ್ನು ಸ್ಥಾಪಿಸಿದನು. ಈ ಏರ್ಪಾಡು “ಕರ್ತನ ಸಂಧ್ಯಾ ಭೋಜನ” ಅಥವಾ “ಕರ್ತನ ಭೋಜನ” ಎಂದು ಸುಪ್ರಸಿದ್ಧವಾಗಿದೆ. (1 ಕೊರಿಂಥ 11:20) “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂಬುದು ಯೇಸುವಿನ ಆಜ್ಞಾಪಣೆಯಾಗಿತ್ತು. ಈ ಆಚರಣೆ ಎಷ್ಟು ಮಹತ್ವದ್ದು ಎನ್ನುವುದು ಇದರಿಂದ ತಿಳಿದುಬರುತ್ತದೆ. (ಲೂಕ 22:19) ಯೇಸುವಿನ ಮಾತನ್ನು ಪಾಲಿಸಲು ನೀವು ಬಯಸುತ್ತೀರೋ? ಹಾಗಾದರೆ, ಆತನ ಮರಣದ ವಾರ್ಷಿಕೋತ್ಸವವನ್ನು ವರ್ಷದ ಅತ್ಯಂತ ಪ್ರಾಮುಖ್ಯ ದಿನವಾಗಿ ವೀಕ್ಷಿಸುವುದು ಅತ್ಯಗತ್ಯ.

ಈ ವಾರ್ಷಿಕೋತ್ಸವವನ್ನು ಯಾವ ತಾರೀಖಿನಲ್ಲಿ ಆಚರಿಸಬೇಕು? ಈ ಆಚರಣೆಯ ಮಹತ್ವವನ್ನು ಸಂಪೂರ್ಣವಾಗಿ ಮನಗಾಣಲು ನೀವೇನು ಮಾಡಬಲ್ಲಿರಿ? ಈ ಪ್ರಶ್ನೆಗಳನ್ನು ಪ್ರತಿಯೊಬ್ಬ ಕ್ರೈಸ್ತನು ಪರಿಗಣಿಸುವುದು ಅಗತ್ಯ.

ಎಷ್ಟು ಸಲ ಆಚರಿಸಬೇಕು?

ಮುಖ್ಯ ಘಟನೆಗಳನ್ನು ಪ್ರತಿ ವರ್ಷ ಅವು ನಡೆದ ದಿನದಂದು ನೆನಪಿಸಿಕೊಳ್ಳುತ್ತೇವೆ. ಡಿಸೆಂಬರ್‌ 26, 2004ರಂದು ತಮಿಳ್ನಾಡಿನಲ್ಲಿ ಸುನಾಮಿ ಅಪ್ಪಳಿಸಿದಾಗ ಎಷ್ಟೋ ಮಂದಿ ಪ್ರಾಣ ಕಳಕೊಂಡರು. ಅವರನ್ನು ಕಳಕೊಂಡ ನೋವು ಬಂಧುಮಿತ್ರರನ್ನು ಸದಾ ಕಾಡುತ್ತಿರುತ್ತದಾದರೂ ಪ್ರತಿ ವರ್ಷ ಆ ದಿನ ಬಂದಾಗ ಅದು ವಿಶೇಷ ಮಹತ್ವ ಹೊಂದಿರುತ್ತದೆ.

ಅದೇ ರೀತಿಯಲ್ಲಿ ಬೈಬಲ್‌ ಸಮಯದಲ್ಲಿ ಮಹತ್ವಪೂರ್ಣ ಘಟನೆಗಳನ್ನು ವಾರ್ಷಿಕವಾಗಿ ಸ್ಮರಿಸುತ್ತಿದ್ದರು. (ಎಸ್ತೇರಳು 9:21, 27) ಇಸ್ರಾಯೇಲ್ಯರನ್ನು ಈಜಿಪ್ಟಿನ ದಾಸತ್ವದಿಂದ ಅದ್ಭುತಕರ ರೀತಿಯಲ್ಲಿ ಬಿಡುಗಡೆ ಮಾಡಿದ್ದರ ಸ್ಮಾರಕವಾಗಿ ಆ ಜಯವನ್ನು ಪ್ರತಿ ವರ್ಷ ಆಚರಿಸಬೇಕು ಎಂದು ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ್ದನು. ಈ ಉತ್ಸವವನ್ನು ಬೈಬಲ್‌ನಲ್ಲಿ ಪಸ್ಕ ಹಬ್ಬ ಎಂದು ಕರೆಯಲಾಗಿದೆ. ಬಿಡುಗಡೆ ಪಡೆದ ಅದೇ ತಾರೀಖಿನಲ್ಲಿ ಪ್ರತಿ ವರ್ಷ ಇಸ್ರಾಯೇಲ್ಯರು ಅದನ್ನು ಆಚರಿಸುತ್ತಿದ್ದರು.—ವಿಮೋಚನಕಾಂಡ 12:24-27; 13:10.

ಈ ಪಸ್ಕ ಹಬ್ಬವನ್ನು ಯೇಸು ಆಗ ತಾನೇ ತನ್ನ ಶಿಷ್ಯರೊಂದಿಗೆ ಆಚರಿಸಿ ಮುಗಿಸಿದ್ದನು. ಆನಂತರ ತನ್ನ ಮರಣದ ಸ್ಮಾರಕವಾಗಿ ಒಂದು ವಿಶೇಷ ಭೋಜನದ ಏರ್ಪಾಡನ್ನು ಸ್ಥಾಪಿಸಿದನು. ಅಂದು ಸ್ಥಾಪಿಸಿದ ಆಚರಣೆ ಇಂದಿಗೂ ಕ್ರೈಸ್ತರಿಗೆ ನಮೂನೆಯಾಗಿದೆ. (ಲೂಕ 22:7-20) ಪಸ್ಕ ಹಬ್ಬ ವಾರ್ಷಿಕವಾಗಿ ಆಚರಿಸಲಾಗುತ್ತಿತ್ತು. ಅದೇ ರೀತಿಯಲ್ಲಿ ಪಸ್ಕ ಹಬ್ಬದ ಪ್ರತಿಯಾಗಿ ಯೇಸು ಸ್ಥಾಪಿಸಿದ ಈ ಹೊಸ ಆಚರಣೆಯೂ ವರ್ಷಕ್ಕೊಮ್ಮೆ ಆಚರಿಸಲ್ಪಡಬೇಕು. ಯಾವ ತಾರೀಖಿನಂದು ಆಚರಿಸಬೇಕು ಎಂದು ಈಗ ನೋಡೋಣ.

ಯಾವತ್ತು?

ಇದನ್ನು ತಿಳಿಯುವ ಮುಂಚೆ ಎರಡು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಮೊದಲನೆಯದಾಗಿ, ಬೈಬಲ್‌ ಸಮಯಗಳಲ್ಲಿ ಹೊಸ ದಿನದ ಆರಂಭ ಸೂರ್ಯಾಸ್ತಮಾನದ ನಂತರ ಆಗುತ್ತಿತ್ತು ಮತ್ತು ಮರುದಿನ ಸೂರ್ಯಾಸ್ತಮಾನದಲ್ಲಿ ಕೊನೆಗೊಳ್ಳುತ್ತಿತ್ತು. ಒಂದು ಸಂಜೆಯಿಂದ ಮರುದಿನದ ಸಂಜೆಯವರಿಗೆ ಒಂದು ದಿನ ಎಂದು ಲೆಕ್ಕಿಸಲಾಗುತ್ತಿತ್ತು.—ಯಾಜಕಕಾಂಡ 23:32.

ಎರಡನೆಯದಾಗಿ, ನಾವು ಬಳಸುವ ಕ್ಯಾಲೆಂಡರಿಗೂ ಬೈಬಲ್‌ ಸಮಯಗಳಲ್ಲಿ ಬಳಸಲಾಗುತ್ತಿದ್ದ ಕ್ಯಾಲಂಡರಿಗೂ ಸ್ವಲ್ಪ ವ್ಯತ್ಯಾಸವಿದೆ. ನಮ್ಮ ಕ್ಯಾಲೆಂಡರ್‌ನಲ್ಲಿ ಮಾಸಗಳಿಗೆ ಮಾರ್ಚ್‌, ಏಪ್ರಿಲ್‌ ಎಂಬ ಹೆಸರುಗಳಿರುವಂತೆ ಬೈಬಲ್‌ ಸಮಯಗಳಲ್ಲಿ ಅಡಾರ್‌ (ಕನ್ನಡದಲ್ಲಿ ಫಾಲ್ಗುನಮಾಸ), ನೈಸಾನ್‌ (ಚೈತ್ರಮಾಸ) ಎಂಬ ಮಾಸಗಳಿದ್ದವು. (ಎಸ್ತೇರಳು 3:7) ಯೆಹೂದ್ಯರು ಮಾಸಗಳನ್ನು ಅಮಾವಾಸ್ಯೆಯಿಂದ ಅಮಾವಾಸ್ಯೆ ವರೆಗೆ ಲೆಕ್ಕಿಸುತ್ತಿದ್ದರು. ಅವರ ಕ್ಯಾಲೆಂಡರ್‌ ಪ್ರಕಾರ ಪಸ್ಕ ಹಬ್ಬ ವರ್ಷದ ಮೊದಲನೇ ತಿಂಗಳಾದ ನೈಸಾನ್‌ನ ಹದಿನಾಲ್ಕನೆಯ ದಿನದಂದು ಬೀಳುತ್ತಿತ್ತು. (ಯಾಜಕಕಾಂಡ 23:5; ಅರಣ್ಯಕಾಂಡ 28:16) ಅದೇ ನೈಸಾನ್‌ 14ನೇ ತಾರೀಖು ನಮ್ಮ ಕರ್ತನಾದ ಯೇಸುವನ್ನು ರೋಮನ್ನರು ಶೂಲಕ್ಕೇರಿಸಿದರು. ಇಸ್ರಾಯೇಲ್ಯರು ಮೊಟ್ಟಮೊದಲ ಬಾರಿ ಪಸ್ಕ ಹಬ್ಬವನ್ನು ಆಚರಿಸಿದ 1,545 ವರ್ಷಗಳ ನಂತರ ಅದೇ ತಾರೀಖಿನಲ್ಲಿ ಯೇಸು ಸಾವನ್ನಪ್ಪಿದನು. ಹಾಗಾಗಿ, ನೈಸಾನ್‌ 14 ನಿಜಕ್ಕೂ ಒಂದು ಮಹತ್ವಪೂರ್ಣ ತಾರೀಖು!

ನಮ್ಮ ಕ್ಯಾಲೆಂಡರ್‌ನಲ್ಲಿ ನೈಸಾನ್‌ 14 ಯಾವ ದಿನ ಬೀಳುತ್ತದೆ ಎಂದು ಲೆಕ್ಕಮಾಡಿ ನೋಡೋಣ. ಮೊದಲು ನೈಸಾನ್‌ ತಿಂಗಳು ಯಾವಾಗ ಪ್ರಾರಂಭವಾಗುತ್ತದೆಂದು ನೋಡೋಣ. ಮೇಷ ಸಂಕ್ರಾಂತಿಗೆ (ಉತ್ತರಾರ್ಧಗೋಳದಲ್ಲಿ ವಸಂತಕಾಲದ ಆರಂಭಕ್ಕೆ) ಅತಿ ಹತ್ತಿರದ ಅಮಾವಾಸ್ಯೆ ಚಂದ್ರನು ಸೂರ್ಯಾಸ್ತಮಾನದ ಸಮಯದಲ್ಲಿ ಯೆರೂಸಲೇಮಿನಲ್ಲಿ ಕಾಣಿಸಿಕೊಳ್ಳುವ ದಿನವೇ ನೈಸಾನ್‌ 1. ಹದಿನಾಲ್ಕನೆಯ ದಿನ ನೈಸಾನ್‌ 14. ಸಾಮಾನ್ಯವಾಗಿ ಈ ದಿನ ಪೂರ್ಣಿಮೆಯ ದಿನವಾಗಿರುತ್ತದೆ. ಈ ಲೆಕ್ಕಾಚಾರದ ಪ್ರಕಾರ ಈ ವರ್ಷ, ಏಪ್ರಿಲ್‌ 5ರ ಸೂರ್ಯಾಸ್ತಮಾನದಿಂದ ನೈಸಾನ್‌ 14 ಆರಂಭವಾಗುತ್ತದೆ. *

ಯೇಸುವಿನ ಮರಣವನ್ನು ಸ್ಮರಿಸಲು ಇಚ್ಛಿಸುವವರೊಂದಿಗೆ ಸೇರಿ ಈ ಆಚರಣೆಯನ್ನು ಮಾಡಲು ಯೆಹೋವನ ಸಾಕ್ಷಿಗಳು ಈ ವರ್ಷವೂ ಏರ್ಪಾಡು ಮಾಡುತ್ತಿದ್ದಾರೆ. ಈ ಆಚರಣೆಗೆ ನಿಮಗೂ ಆತ್ಮೀಯ ಸ್ವಾಗತ. ಸಮಯ ಮತ್ತು ಸ್ಥಳಕ್ಕಾಗಿ ನಿಮ್ಮ ನೆರೆಹೊರೆಯಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ. ಈ ಆಚರಣೆಯನ್ನು ಅವರು ಸಂಜೆಹೊತ್ತಿನಲ್ಲಿ ಸೂರ್ಯಾಸ್ತಮಾನದ ನಂತರ ಮಾಡಲಿದ್ದಾರೆ. ಏಕೆ? ಏಕೆಂದರೆ ಬೈಬಲ್‌ ಪ್ರಕಾರ ಇದೊಂದು “ಸಂಧ್ಯಾ ಭೋಜನ.” (1 ಕೊರಿಂಥ 11:20) 1,978 ವರ್ಷಗಳ ಮುಂಚೆ ಯೇಸು ಸ್ಥಾಪಿಸಿದ ಈ ವಿಶೇಷ ಏರ್ಪಾಡಿನ ವಾರ್ಷಿಕೋತ್ಸವ 2012ರಲ್ಲಿ ಏಪ್ರಿಲ್‌ 5ನೇ ತಾರೀಖು ಗುರುವಾರ ಸಂಜೆ ಬೀಳುತ್ತದೆ. ಇದು ಯೇಸುವಿನ ಮರಣ ದಿನವಾದ ನೈಸಾನ್‌ 14ರ ಆರಂಭವೂ ಆಗಿದೆ. ಯೇಸುವಿನ ಮರಣವನ್ನು ಸ್ಮರಿಸಲು ಇದು ಸೂಕ್ತವಾದ ದಿನವೇ ಸರಿ.

ಹೇಗೆ ಸಿದ್ಧರಾಗುವಿರಿ?

ವರ್ಷಕ್ಕೊಮ್ಮೆ ಬರುವ ಈ ಪ್ರಧಾನ ಸಂದರ್ಭಕ್ಕೆ ನೀವು ಹೇಗೆ ಸಿದ್ಧರಾಗುವಿರಿ? ಯೇಸು ಕ್ರಿಸ್ತನು ನಮಗಾಗಿ ಏನೆಲ್ಲಾ ಮಾಡಿದ್ದಾನೆ ಎನ್ನುವುದರ ಬಗ್ಗೆ ಮನನ ಮಾಡುವುದು ಒಂದು ವಿಧ. ಈ ವಿಚಾರದಲ್ಲಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಪುಸ್ತಕ ಸಹಾಯಕಾರಿ. ಇದನ್ನು ಓದಿ ಲಕ್ಷಾಂತರ ಮಂದಿ ಯೇಸುವಿನ ಮರಣದ ಮಹತ್ವವನ್ನು ಗ್ರಹಿಸಿ ಮಾನ್ಯತೆ ಬೆಳೆಸಿಕೊಂಡಿದ್ದಾರೆ.—ಮತ್ತಾಯ 20:28.

ಈ ಸಂದರ್ಭದ ಮಹತ್ವ ನಿಮ್ಮ ಮನದಾಳವನ್ನು ತಲಪಬೇಕಾದರೆ ಇನ್ನೊಂದು ಸಲಹೆ. ಯೇಸುವಿನ ಮರಣಕ್ಕೆ ಸ್ವಲ್ಪ ಮುಂಚೆ ನಡೆದ ಘಟನೆಗಳನ್ನು ಬೈಬಲ್‌ನಲ್ಲಿ ಓದಿ. ಇದಕ್ಕೆ ಸಹಾಯಕಾರಿಯಾಗಿ ಮುಂದಿನ ಪುಟಗಳಲ್ಲಿ ಒಂದು ಚಾರ್ಟ್‌ ಕೊಡಲಾಗಿದೆ. ಚಾರ್ಟಿನ ಮೊದಲನೇ ಕಾಲಂನಲ್ಲಿ, ಬೈಬಲ್‌ ಸಮಯದ ಕ್ಯಾಲೆಂಡರ್‌ನ ತಾರೀಖುಗಳು ಮತ್ತು ಅದರ ಸಮಾನವಾದ ನಮ್ಮ ಕ್ಯಾಲೆಂಡರಿನ ತಾರೀಖುಗಳು ಇವೆ. ಎರಡನೇ ಕಾಲಂನಲ್ಲಿ ಅಂದಂದಿನ ಘಟನೆಗಳ ಸಂಕ್ಷಿಪ್ತ ವಿವರಣೆ ಕೊಡಲಾಗಿದೆ. ಈ ಘಟನೆಗಳನ್ನು ನಾವು ಬೈಬಲ್‌ನ ಯಾವ ಭಾಗಗಳಲ್ಲಿ ನೋಡಬಹುದು ಹಾಗೂ ಅತ್ಯಂತ ಮಹಾನ್‌ ಪುರುಷ * ಪುಸ್ತಕದಲ್ಲಿ ಇದರ ವಿವರಣೆಯನ್ನು ಎಲ್ಲಿ ಪಡೆಯಬಹುದು ಎನ್ನುವ ಮಾಹಿತಿ ಮೂರನೇ ಕಾಲಂನಲ್ಲಿದೆ. ನೀವು ಈ ಚಾರ್ಟ್‌ನಲ್ಲಿ ಕೊಡಲಾಗಿರುವ ಬೈಬಲ್‌ ವಚನಗಳಲ್ಲಿ ಕೆಲವನ್ನಾದರೂ ಆಯಾ ದಿನ ಓದುವಂತೆ ಉತ್ತೇಜಿಸುತ್ತೇವೆ. ವರ್ಷದ ಅತ್ಯಂತ ಮುಖ್ಯ ದಿನವಾದ ಕ್ರಿಸ್ತನ ಸಂಧ್ಯಾ ಭೋಜನಕ್ಕಾಗಿ ಸನ್ನದ್ಧರಾಗಲು ಇದು ನಿಮಗೆ ನೆರವಾಗುತ್ತದೆ. (w11-E 02/01)

[ಪಾದಟಿಪ್ಪಣಿಗಳು]

^ ಪ್ಯಾರ. 11 ಈ ತಾರೀಖಿಗೂ ಇಂದಿನ ಯೆಹೂದ್ಯರು ಪಸ್ಕ ಹಬ್ಬವನ್ನು ಆಚರಿಸುವ ದಿನಕ್ಕೂ ವ್ಯತ್ಯಾಸವಿರಬಹುದು. ಅದೇಕೆ? ಅನೇಕ ಯೆಹೂದ್ಯರು ಈ ಹಬ್ಬವನ್ನು ನೈಸಾನ್‌ 15ರಂದು ಆಚರಿಸುತ್ತಾರೆ. ಇದು ವಿಮೋಚನಕಾಂಡ 12:6ರಲ್ಲಿನ ಆಜ್ಞೆಗೆ ಸಹಮತದಲ್ಲಿದೆ ಎಂದು ಅವರು ನಂಬುತ್ತಾರೆ. (ಕಾವಲಿನಬುರುಜು ಪತ್ರಿಕೆಯ ಫೆಬ್ರವರಿ 1, 1991, ಪುಟ 21ರಲ್ಲಿರುವ ಮಾಹಿತಿ ನೋಡಿ.) ಆದರೆ ಯೇಸು ಅದನ್ನು ನೈಸಾನ್‌ 14ರಂದೇ ಆಚರಿಸಿದನು. ಏಕೆಂದರೆ ಧರ್ಮಶಾಸ್ತ್ರದಲ್ಲಿನ ಆಜ್ಞೆ ಅದೇ ಆಗಿತ್ತು. ಈ ತಾರೀಖನ್ನು ಹೇಗೆ ಲೆಕ್ಕಿಸುವುದು ಎನ್ನುವುದಕ್ಕೆ ಹೆಚ್ಚು ಮಾಹಿತಿ ಬೇಕಿರುವುದಾದರೆ ಜೂನ್‌ 15, 1977ರ ಕಾವಲಿನಬುರುಜು ಪತ್ರಿಕೆಯ ಇಂಗ್ಲಿಷ್‌ ಸಂಚಿಕೆಯಲ್ಲಿ ಪುಟ 383-384 ನೋಡಿ.

^ ಪ್ಯಾರ. 14 ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಈ ಪುಸ್ತಕದ ಪುಟ 47-56, 206-208 ನೋಡಿ. ಇದನ್ನು www.watchtower.org ವೆಬ್‌ ಸೈಟ್‌ನಿಂದಲೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

^ ಪ್ಯಾರ. 15 ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 20ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೇಸುವಿನ ಮರಣವನ್ನು ಸ್ಮರಿಸಿ ಗುರುವಾರ, ಏಪ್ರಿಲ್‌ 5, 2012

[ಪುಟ 21ರಲ್ಲಿರುವ ಚಾರ್ಟು/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಅಂತಿಮ ವಾರ

2012, ಶನಿ. ಮಾರ್ಚ್‌ 31 ಸಬ್ಬತ್‌ ಮತ್ತಾಯ

2013 ․․․․․ ಮಾರ್ಕ

2014 ․․․․․ ಲೂಕ

ಯೋಹಾನ 11:55–12:1

g  t 101 ಪ್ಯಾರ. 2-4 *

ನೈಸಾನ್‌ 9 (ಸೂರ್ಯಾಸ್ತಮಾನದಿಂದ)

ಬೈಬಲ್‌ ಸಮಯಗಳಲ್ಲಿ, ಸೀಮೋನನ □ ಮತ್ತಾಯ 26:​6-13

ಒಂದು ದಿನ ಸೂರ್ಯಾಸ್ತಮಾನದಿಂದ ಮನೆಯಲ್ಲಿ ಔತಣ

ಆರಂಭಗೊಂಡು ಮರುದಿನ ಮರಿಯಳಿಂದ ಸುಗಂಧ □ ಮಾರ್ಕ 14:​3-9

ಸೂರ್ಯಾಸ್ತಮಾನದಲ್ಲಿ ತೈಲದ ಅಭಿಷೇಕ

ಕೊನೆಗೊಳ್ಳುತ್ತಿತ್ತು ಯೇಸು ಮತ್ತು ಲೂಕ

ಲಾಜರನನ್ನು ನೋಡಲು □ ಯೋಹಾನ 12:​2-11

ಯೆಹೂದ್ಯರ ಆಗಮನ □ g  t 101 ಪ್ಯಾರ. 5-9

2012, ಭಾನು. ಏಪ್ರಿಲ್‌ 1 ▪ ಯೆರೂಸಲೇಮಿನಲ್ಲಿ ಸಂಭ್ರಮ □ ಮತ್ತಾಯ 21:​1-11, 14-17

2013 ․․․․․ ಸಡಗರದ ಸ್ವಾಗತ

2014 ․․․․․ ದೇವಾಲಯದಲ್ಲಿ ಬೋಧನೆ □ ಮಾರ್ಕ 11:​1-11

ಲೂಕ 19:​29-44

ಯೋಹಾನ 12:​12-19

gt  102

ನೈಸಾನ್‌ 10 (ಸೂರ್ಯಾಸ್ತಮಾನದಿಂದ)

ಬೇಥಾನ್ಯದಲ್ಲಿ

ರಾತ್ರಿ ವಾಸ

2012, ಸೋಮ. ಏಪ್ರಿಲ್‌ 2 ▪ ಬೆಳ್ಳಂಬೆಳಗ್ಗೆ □ ಮತ್ತಾಯ 21:​12, 13,

2013 ․․․․․ ಯೆರೂಸಲೇಮ್‌ಗೆ ಪ್ರಯಾಣ 18, 19

2014 ․․․․․ ▪ ಆಲಯಾಭಿಮಾನಕ್ಕೆ ಪುರಾವೆ □ ಮಾರ್ಕ 11:​12-19

▪ ಸ್ವರ್ಗದಿಂದ ಯೆಹೋವ □ ಲೂಕ 19:​45-48

ದೇವರ ಮಹಾಧ್ವನಿ □ ಯೋಹಾನ 12:​20-50

g  t 103, 104

ನೈಸಾನ್‌ 11 (ಸೂರ್ಯಾಸ್ತಮಾನದಿಂದ)

2012, ಮಂಗಳ. ಏಪ್ರಿಲ್‌ 3 ▪ ದೇವಾಲಯದಲ್ಲಿ □ ಮತ್ತಾಯ 21:19–25:⁠46

2013 ․․․․․ ಬೋಧನೆ—ದೃಷ್ಟಾಂತ

2014 ․․․․․ ಕಥೆಗಳ ಮೂಲಕ

▪ ಫರಿಸಾಯರಿಗೆ □ ಮಾರ್ಕ 11:20–13:⁠37

ಛೀಮಾರಿ

▪ ವಿಧವೆಯ ಕಾಣಿಕೆಗೆ □ ಲೂಕ 20:1–21:⁠38

ಮೆಚ್ಚುಗೆ

▪ ಯೆರೂಸಲೇಮಿನ ಗತಿಯ ಯೋಹಾನ

ಬಗ್ಗೆ ಭವಿಷ್ಯವಾಣಿ

▪ ಭವಿಷ್ಯದಲ್ಲಿ ತನ್ನ ಸಾನ್ನಿಧ್ಯವನ್ನು □ g  t 105ರಿಂದ 112 ಪ್ಯಾರ. 1 ರ ತನಕ

ಗುರುತಿಸಲು ಸೂಚನೆ

ನೈಸಾನ್‌ 12 (ಸೂರ್ಯಾಸ್ತಮಾನದಿಂದ)

2012, ಬುಧ. ಏಪ್ರಿಲ್‌ 4 ▪ ಶಿಷ್ಯರೊಂದಿಗೆ □ ಮತ್ತಾಯ 26:​1-5, 14-16

2013 ․․․․․ ಬೇಥಾನ್ಯದಲ್ಲಿ

2014 ․․․․․ ▪ ಯೇಸುವನ್ನು ಹಿಡಿದುಕೊಡಲು □ ಮಾರ್ಕ 14:​1, 2, 10, 11

ಯೂದನ ಸಂಚು

ಲೂಕ 22:​1-6

ಯೋಹಾನ

g  t 112 ಪ್ಯಾರ. 2-​4

ನೈಸಾನ್‌ 13 (ಸೂರ್ಯಾಸ್ತಮಾನದಿಂದ)

2012, ಗುರು. ಏಪ್ರಿಲ್‌ 5 ▪ ಪಸ್ಕ ಹಬ್ಬಕ್ಕೆ □ ಮತ್ತಾಯ 26:​17-19

2013 ․․․․․ ಏರ್ಪಾಡು—ಪೇತ್ರ

2014 ․․․․․ ಯೋಹಾನರ ಮೂಲಕ

▪ ಅಲ್ಲಿಗೆ ಯೇಸು □ ಮಾರ್ಕ 14:​12-16

ಹಾಗೂ ಉಳಿದ □ ಲೂಕ 22:​7-13

10 ಶಿಷ್ಯರ ಯೋಹಾನ

ಆಗಮನ □ g  t 112 ಪ್ಯಾರ. 5 ರಿಂದ 113

ಪ್ಯಾರ. 1 ರ ತನಕ

ನೈಸಾನ್‌ 14 (ಸೂರ್ಯಾಸ್ತಮಾನದಿಂದ)

▪ ಪಸ್ಕ ಆಚರಣೆ □ ಮತ್ತಾಯ 26:​20-35

▪ ಶಿಷ್ಯರ ಪಾದ □ ಮಾರ್ಕ 14:​17-31

ತೊಳೆದ ಪ್ರಸಂಗ

▪ ಯೂದನ ನಿರ್ಗಮನ □ ಲೂಕ 22:​14-38

▪ ತನ್ನ ಮರಣದ □ ಯೋಹಾನ 13:1–17:⁠26

ಸ್ಮರಣೆಯ ಏರ್ಪಾಡು □ g  t 3 ಪ್ಯಾರ. 2 ರಿಂದ

16 ನೇ ಅಧ್ಯಾಯದ ಕೊನೆ ತನಕ

ಮಧ್ಯರಾತ್ರಿ ▪ ಗೆತ್ಸೇಮನೆ ತೋಟದಲ್ಲಿ □ ಮತ್ತಾಯ 26:​36-75

2012, ಶುಕ್ರ. ಏಪ್ರಿಲ್‌ 6 ಯೂದನ ದ್ರೋಹ,

2013 ․․․․․ ಯೇಸುವಿನ ದಸ್ತಗಿರಿ

2014 ․․․․․ ▪ ಶಿಷ್ಯರ ಪಲಾಯನ □ ಮಾರ್ಕ 14:​32-72

▪ ಹಿರೀ ಸಭೆಯಲ್ಲಿ □ ಲೂಕ 22:​39-62

ವಿಚಾರಣೆ

▪ ಪೇತ್ರನ □ ಯೋಹಾನ 18:​1-27

ನಿರಾಕರಣೆ □ g  t 117 ರಿಂದ

120 ನೇ ಅಧ್ಯಾಯದ ಕೊನೆ ತನಕ

▪ ಪುನಃ ಹಿರೀ □ ಮತ್ತಾಯ 27:​1-61

ಸಭೆಯಲ್ಲಿ ವಿಚಾರಣೆ

▪ ಪಿಲಾತನ ಮುಂದೆ, □ ಮಾರ್ಕ 15:​1-47

ಹೆರೋದನ ಮುಂದೆ, ಮತ್ತೆ

ಪಿಲಾತನ ಮುಂದೆ ವಿಚಾರಣೆ

▪ ಗಲ್ಲಿಗೇರಿಸುವ □ ಲೂಕ 22:63–23:⁠56

ತೀರ್ಪು

▪ ಮಧ್ಯಾಹ್ನ ಸುಮಾರು □ ಯೋಹಾನ 18:​28-40

ಮೂರು ಗಂಟೆಗೆ ಮರಣ

▪ ಯೇಸುವಿನ □ g  t 121 ರಿಂದ 127 ಪ್ಯಾರ. 7 ರ ತನಕ

ಶವಸಂಸ್ಕಾರ

ನೈಸಾನ್‌ 15 (ಸೂರ್ಯಾಸ್ತಮಾನದಿಂದ)

▪ ಸಬ್ಬತ್‌

2012, ಶನಿ. ಏಪ್ರಿಲ್‌ 7 ▪ ಸಮಾಧಿಗೆ □ ಮತ್ತಾಯ 27:​62-66

2013 ․․․․․ ಕಾವಲುಗಾರರನ್ನು ನೇಮಿಸಲು ಮಾರ್ಕ

2014 ․․․․․ ಪಿಲಾತನ ಸಮ್ಮತಿ ಲೂಕ

ಯೋಹಾನ

g  t 127 ಪ್ಯಾರ. 8-​9

ನೈಸಾನ್‌ 16 (ಸೂರ್ಯಾಸ್ತಮಾನದಿಂದ)

2012, ಭಾನು. ಏಪ್ರಿಲ್‌ 8 ▪ ಪುನರುತ್ಥಾನ □ ಮತ್ತಾಯ 28:​1-15

2013 ․․․․․ ▪ ಶಿಷ್ಯರ ಮುಂದೆ □ ಮಾರ್ಕ 16:​1-8

2014 ․․․․․ ಕಾಣಿಸಿಕೊಳ್ಳುವಿಕೆ □ ಲೂಕ 24:​1-49

ಯೋಹಾನ 20:​1-25

g  t 127 ಪ್ಯಾರ. 10 ರಿಂದ

129 ಪ್ಯಾರ. 10 ರ ತನಕ

[ಪಾದಟಿಪ್ಪಣಿ]

^ ಪ್ಯಾರ. 29 ಇಲ್ಲಿ ಕೊಟ್ಟಿರುವ ಸಂಖ್ಯೆಗಳು, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ (g t ) ಪುಸ್ತಕದ ಅಧ್ಯಾಯಗಳನ್ನು ಸೂಚಿಸುತ್ತದೆ. ಯೇಸುವಿನ ಅಂತಿಮ ಶುಶ್ರೂಷೆಯ ಬಗ್ಗೆ ಶಾಸ್ತ್ರಾಧಾರಿತವಾದ ಪೂರ್ಣ ವಿವರಣೆ ನೀಡುವ ಒಂದು ಚಾರ್ಟನ್ನು ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಂತರ ಬೈಬಲಿನ ಪುಟ 619-621 ರಲ್ಲಿ ಕೊಡಲಾಗಿದೆ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.