ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭವಿಷ್ಯವಾಣಿ 1. ಭೂಕಂಪಗಳು

ಭವಿಷ್ಯವಾಣಿ 1. ಭೂಕಂಪಗಳು

ಭವಿಷ್ಯವಾಣಿ 1. ಭೂಕಂಪಗಳು

“ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪ ಆಗುತ್ತೆ.”—ಲೂಕ 21:11.

● ಹೈಟಿಯಲ್ಲಿ ನಡೆದ ಒಂದು ಭೂಕಂಪದಲ್ಲಿ ನೂರಾರು ಮನೆಗಳು ಕುಸಿದು ಬಿದ್ದವು. ಅದರ ಕೆಳಗಿಂದ ಒಂದು ಹೆಣ್ಣುಮಗುವಿನ ಅಳು ಅಲ್ಲಿ ಬಂದಿದ್ದ ನ್ಯೂಸ್‌ ರಿಪೋಟರ್ಸ್‌ಗೆ ಕೇಳಿಬಂತು. ಆ ಮಗುಗೆ ಬರೀ 16 ತಿಂಗಳು. ಹೇಗೋ ಆ ಮಗುನ ಕಾಪಾಡಿದರು, ಆದ್ರೆ ಅವಳ ಅಪ್ಪಅಮ್ಮ ಉಳಿಲಿಲ್ಲ.

ನಿಜ ಏನು? ಜನವರಿ 2010 ರಲ್ಲಿ ಹೈಟಿಯಲ್ಲಿ ನಡೆದ ಆ ಭೂಕಂಪದ ತೀವ್ರತೆ 7.0 ರಷ್ಟಿತ್ತು. ಆ ಭಾರೀ ಭೂಕಂಪದಿಂದ 3 ಲಕ್ಷಕ್ಕಿಂತ ಹೆಚ್ಚು ಜನ ಸತ್ತು ಹೋದ್ರು. ಕಣ್ಣು ಮುಚ್ಚಿ ತೆರೆಯೋದ್ರೊಳಗೆ 13 ಲಕ್ಷ ಜನ ಮನೆ ಕಳ್ಕೊಂಡು ಬೀದಿಗೆ ಬಂದರು. ಈ ತರ ಎಷ್ಟೋ ದೊಡ್ಡದೊಡ್ಡ ಭೂಕಂಪ ಆಗಿದೆ. ಉದಾಹರಣೆಗೆ 2009 ಏಪ್ರಿಲ್‌ ಇಂದ 2010 ಏಪ್ರಿಲ್‌ ಒಳಗೆ ಸುಮಾರು 18 ದೊಡ್ಡ ಭೂಕಂಪಗಳು ಲೋಕದ ಬೇರೆಬೇರೆ ಜಾಗದಲ್ಲಿ ಆಗಿವೆ.

ತಪ್ಪು ಅಭಿಪ್ರಾಯಗಳು: ಆಗಿನ ಕಾಲದಲ್ಲಿ ನ್ಯೂಸ್‌ ಪೇಪರ್‌, ಟೀವಿ ಇವೆಲ್ಲ ಇರಲಿಲ್ಲ ಅದಕ್ಕೆ ಭೂಕಂಪ ಆದ್ರೂ ಆಗದೇ ಇದ್ದರೂ ನಮಗೆ ಗೊತ್ತಾಗ್ತಾ ಇರಲಿಲ್ಲ. ತಂತ್ರಜ್ಞಾನ ಈಗ ತುಂಬ ಮುಂದುವರೆದಿದೆ. ಅದಕ್ಕೆ ಭೂಕಂಪ ಆದಾಗೆಲ್ಲ ನಮಗೆ ಗೊತ್ತಾಗ್ತಾ ಇದೆ.

ಈ ಅಭಿಪ್ರಾಯ ಸರಿನಾ? ಕೊನೇ ದಿನಗಳಲ್ಲಿ ಇಷ್ಟೇ ಭೂಕಂಪಗಳು ಆಗುತ್ತೆ ಅಂತ ಬೈಬಲ್‌ ಹೇಳಲ್ಲ ಅನ್ನೋದನ್ನ ನಾವು ಗಮನಿಸಬೇಕು. ಆದ್ರೆ ‘ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಮಹಾ ಭೂಕಂಪಗಳು ಆಗುತ್ತೆ’ ಅಂತ ಬೈಬಲ್‌ ಹೇಳುತ್ತೆ. ಕೊನೇ ದಿನಗಳಲ್ಲಿ ನಡೆಯೋ ಎಷ್ಟೋ ವಿಷಯಗಳಲ್ಲಿ ಇದೂ ಒಂದು.—ಮಾರ್ಕ 13:8; ಲೂಕ 21:11.

ನಿಮ್ಮ ಅಭಿಪ್ರಾಯ ಏನು? ಬೈಬಲ್‌ ತಿಳಿಸಿರುವ ಈ ಮಹಾಭೂಕಂಪಗಳನ್ನ ನೀವು ಈಗ ನೋಡ್ತಾ ಇದ್ದೀರಾ?

ಭೂಕಂಪಗಳು ಮಾತ್ರ ನಾವು ಕೊನೇ ದಿನಗಳಲ್ಲಿ ಇದ್ದೀವಿ ಅನ್ನೋದಕ್ಕೆ ಸೂಚನೆ ಅಲ್ಲ. ನೆರವೇರುತ್ತಾ ಇರುವ ಭವಿಷ್ಯವಾಣಿಗಳಲ್ಲಿ ಇದು ಒಂದಷ್ಟೇ. ಎರಡನೇ ಭವಿಷ್ಯವಾಣಿ ಯಾವುದು ಅಂತ ಈಗ ನೋಡೋಣ.

[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರ]

“ನಾವು (ಭೂ ಭೌತಶಾಸ್ತ್ರಜ್ಞರು) ಇದನ್ನ ಮಹಾಭೂಕಂಪಗಳು ಅಂತ ಕರಿತೀವಿ. ಆದ್ರೆ ಎಲ್ರೂ ಇದನ್ನ ಭಯಾನಕ ಅಂತ ಕರಿತಾರೆ.”—ಕೆನ್‌ ಹುಡ್ನಟ್‌, ಯು.ಎಸ್‌ ಜಿಯಾಲಜಿಕಲ್‌ ಸರ್ವೆ.

[ಪುಟ 4ರಲ್ಲಿರುವ ಚಿತ್ರ ಕೃಪೆ]

© William Daniels/Panos Pictures