ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭವಿಷ್ಯವಾಣಿ 3. ಕಾಯಿಲೆ

ಭವಿಷ್ಯವಾಣಿ 3. ಕಾಯಿಲೆ

ಭವಿಷ್ಯವಾಣಿ 3. ಕಾಯಿಲೆ

“ಬೇರೆಬೇರೆ ಸ್ಥಳಗಳಲ್ಲಿ ವ್ಯಾಧಿಗಳೂ ಇರುವುವು”.—ಲೂಕ 21:11, ಪವಿತ್ರ ಗ್ರಂಥ.

● ಸಾರ್ವಜನಿಕ ಆರೋಗ್ಯ ಅಧಿಕಾರಿಯಾದ ಬೊನ್‌ಜಾ಼ಲೆ ಇರೋದು ಆಫ್ರಿಕ ದೇಶದಲ್ಲಿ. ಈಗಾಗಲೇ ಅಲ್ಲಿ ಆಂತರಿಕ ಯುದ್ಧ ನಡೆಯುತ್ತಾ ಇದೆ. ಇದರ ಮಧ್ಯೆ ಈ ಅಧಿಕಾರಿ ಅಲ್ಲಿ ಮಾರ್‌ಬರ್ಗ್‌ ವೈರಸ್‌ನಿಂದ a ನರಳಿ ಸಾಯ್ತಿರೋ ಗಣಿ ಕೆಲಸಗಾರರಿಗೆ ತನ್ನಿಂದಾದಷ್ಟು ಸಹಾಯ ಮಾಡ್ತಿದ್ದಾನೆ. ಅವನು ಪಟ್ಟಣದಲ್ಲಿರೋ ತುಂಬ ಅಧಿಕಾರಿಗಳ ಹತ್ರ ಸಹಾಯ ಕೇಳ್ಕೊಂಡ. ಆದ್ರೆ ಯಾರೂ ಅವನಿಗೆ ಸಹಾಯ ಮಾಡಲಿಲ್ಲ. ಸುಮಾರು ನಾಲ್ಕು ತಿಂಗಳು ಕಳೆದ ಮೇಲೆ ಅವನಿಗೆ ಸಹಾಯ ಸಿಗುತ್ತೆ. ಅಷ್ಟರಲ್ಲಿ ಅವನ ಪ್ರಾಣನೇ ಹೋಗಿತ್ತು. ಯಾಕಂದ್ರೆ ಗಣಿ ಕೆಲಸ ಮಾಡ್ತಿದ್ದವರನ್ನ ಕಾಪಾಡಲಿಕ್ಕೆ ಹೋಗಿ ಅವನಿಗೂ ಆ ವೈರಸ್‌ ಅಂಟಿಕೊಂಡಿತು.

ನಿಜ ಏನು? ಶ್ವಾಸಕೋಶದ ಇನ್ಫೆಕ್ಷನ್‌ (ನ್ಯುಮೋನಿಯಾ), ಭೇದಿ, ಏಡ್ಸ್‌/ಹೆಚ್‌ ಐ ವಿ, ಕ್ಷಯರೋಗ (ಟಿಬಿ ಕಾಯಿಲೆ), ಮಲೆರಿಯಾ ಇಂಥ ಕಾಯಿಲೆಗಳಿಂದ ತುಂಬ ಜನ ನರಳ್ತಾ ಇದ್ದಾರೆ, ಪ್ರಾಣನೂ ಕಳ್ಕೊಂಡಿದ್ದಾರೆ. ಇತ್ತೀಚಿಗಿನ ರಿಪೋರ್ಟ್‌ ಪ್ರಕಾರ ಈ ಐದು ಕಾಯಿಲೆಗೆ ಸುಮಾರು 1 ಕೋಟಿ 7 ಲಕ್ಷ ಜನ ಬಲಿಯಾಗಿದ್ದಾರೆ. ಇನ್ನೊಂದು ಮಾತಲ್ಲಿ ಹೇಳುವುದಾದರೆ ಒಂದು ವರ್ಷದಲ್ಲಿ ಪ್ರತಿ ಮೂರು ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಈ ಕಾಯಿಲೆ ಬಂದು ಸತ್ತಿದ್ದಾನೆ.

ತಪ್ಪು ಅಭಿಪ್ರಾಯಗಳು: ಜನಸಂಖ್ಯೆ ಜಾಸ್ತಿ ಆದಂಗೆ ರೋಗಗಳು ಜಾಸ್ತಿ ಆಗ್ತವೆ. ಜಾಸ್ತಿ ಜನರು ಕೂಡ ಸೋಂಕಿತರಾಗ್ತಾರೆ.

ಈ ಅಭಿಪ್ರಾಯ ಸರಿನಾ? ಇವತ್ತು ಜನಸಂಖ್ಯೆ ಜಾಸ್ತಿ ಆಗ್ತಾ ಇದೆ ನಿಜ. ಅದೇ ಸಮಯದಲ್ಲಿ ರೋಗಗಳನ್ನ ಕಂಡುಹಿಡಿಯಲಿಕ್ಕೆ, ಅದನ್ನ ತಡೆಯಲಿಕ್ಕೆ ಮತ್ತು ಅದಕ್ಕೆ ಚಿಕಿತ್ಸೆ ಕೊಡೋಕೆ ಮನುಷ್ಯನಿಗಿರೋ ಸಾಮರ್ಥ್ಯನೂ ಜಾಸ್ತಿ ಆಗಿದೆ. ಹೀಗಿರುವಾಗ ಇಂಥ ಕಾಯಿಲೆಗಳು ಮತ್ತು ಈ ಕಾಯಿಲೆಗಳು ಮನುಷ್ಯರಿಗೆ ಬರೋದು ಕಮ್ಮಿ ಆಗಬೇಕಲ್ವಾ? ಆದರೆ ಅದು ಹಾಗೆ ಆಗ್ತಿಲ್ಲ.

ನಿಮ್ಮ ಅಭಿಪ್ರಾಯ ಏನು? ಬೈಬಲಲ್ಲಿ ಮುಂಚೆನೆ ಹೇಳಿರೋ ಹಾಗೆ ಇಂದು ಜನರು ಕಾಯಿಲೆಗಳಿಂದ ನರಳ್ತಾ ಇದ್ದಾರಾ?

ಭೂಕಂಪ, ಬರ ಮತ್ತು ಕಾಯಿಲೆಗಳು ಲಕ್ಷಾಂತರ ಜೀವವನ್ನ, ಜೀವನವನ್ನ ಬಲಿ ತಗೊಂಡಿದೆ. ಇನ್ನೊಂದು ಕಡೆ ಲಕ್ಷಾಂತರ ಜನರು ತಮ್ಮನ್ನ ಸಂರಕ್ಷಿಸಬೇಕಾದವರ ಕೈಯಿಂದಾನೇ ಕಷ್ಟ ಅನುಭವಿಸ್ತಿದ್ದಾರೆ. ಮುಂದೇನಾಗುತ್ತೆ ಅಂತ ಬೈಬಲಲ್ಲಿರೋ ಭವಿಷ್ಯವಾಣಿ ಹೇಳುತ್ತೆ.

[ಪಾದಟಿಪ್ಪಣಿ]

a ಮಾರ್‌ಬರ್ಗ್‌ ರಕ್ತ ಹೆಪ್ಪುಗಟ್ಟಿಸುವಿಕೆಯ ಜ್ವರ. ಇದು ಎಬೋಲಾ ವೈರಸ್‌ಗೆ ಸಂಬಂಧಪಟ್ಟಿರೋ ಜ್ವರ.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರ]

“ಒಂದು ಸಿಂಹ ನಮ್ಮನ್ನು ಹರಿದು ತಿನ್ನೋದು ಎಷ್ಟು ಭಯಾನಕನೋ ಅದೇ ತರ ಒಂದು ವೈರಸ್‌ ನಮ್ಮನ್ನ ಒಳಗಡೆಯಿಂದ ನಿಧಾನವಾಗಿ ತಿನ್ಕೊಂಡು ಬರೋದು ಅಷ್ಟೇ ಭಯಾನಕ.”—ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮೈಕಲ್‌ ಒಸ್ಟರ್‌ಹಾಮ್‌.

[ಪುಟ 6ರಲ್ಲಿರುವ ಚಿತ್ರ ಕೃಪೆ]

©William Daniels/Panos Pictures