ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭವಿಷ್ಯವಾಣಿ 5. ಜನರಿಂದ ನಾಶ ಆಗ್ತಿರೋ ಭೂಮಿ

ಭವಿಷ್ಯವಾಣಿ 5. ಜನರಿಂದ ನಾಶ ಆಗ್ತಿರೋ ಭೂಮಿ

ಭವಿಷ್ಯವಾಣಿ 5. ಜನರಿಂದ ನಾಶ ಆಗ್ತಿರೋ ಭೂಮಿ

“ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ [ದೇವರು] ನಾಶಮಾಡೋ ಸಮಯ ಬಂದಿದೆ.”—ಪ್ರಕಟನೆ 11:18.

● ನೈಜೀರಿಯದ ಕೆಪೋರ್‌ ಅನ್ನೋ ಸ್ಥಳದಲ್ಲಿ ಪಿರಿ ಅನ್ನುವವರು ಈಚಲು ಮರದಿಂದ ಹೆಂಡ ತೆಗೆಯೋ ಕೆಲಸ ಮಾಡ್ತಾರೆ. ನೈಜರ್‌ ಡೆಲ್ಟದಲ್ಲಿ ಆಗ್ತಿದ್ದ ತೈಲ ಸೋರಿಕೆಯಿಂದ ನಾನು ಮಾಡ್ತಿದ್ದ ಕೆಲಸಕ್ಕೆ ತುಂಬ ಪೆಟ್ಟು ಬಿತ್ತು. “ಈ ತೈಲ ಸೋರಿಕೆಯಿಂದ ನಮ್ಮ ಹೊಳೆಯಲ್ಲಿ ಹರಿಯುತ್ತಿದ್ದ ನೀರು ಹಾಳಾಗಿ ಅದ್ರಲಿದ್ದ ಮೀನೆಲ್ಲ ಸತ್ತು ಹೋಯ್ತು. ಆ ನೀರಿಂದ ನಮ್ಮ ಚರ್ಮ ಕೂಡ ಹಾಳಾಯ್ತು. ಒಟ್ಟಿನಲ್ಲಿ ನಮ್ಮ ಜೀವನನೇ ತಲೆ ಕೆಳಗಾಗಿಬಿಡ್ತು.”

ನಿಜ ಏನು? ತಜ್ಞರು ಹೇಳೋ ಪ್ರಕಾರ ಇಡೀ ಲೋಕದಲ್ಲಿರೋ ಸಮುದ್ರಗಳಿಗೆ ಸುಮಾರು 65 ಲಕ್ಷ ಕಸ ಪ್ರತಿ ವರ್ಷ ಸೇರುತ್ತೆ. ಆ ಕಸದಲ್ಲಿ ಅರ್ಧಕರ್ಧದಷ್ಟು ಪ್ಲಾಸ್ಟಿಕ್‌ ಇರುತ್ತೆ. ಈ ಪ್ಲಾಸ್ಟಿಕ್‌ ನೂರಾರು ವರ್ಷ ನೀರಲ್ಲಿ ತೇಲುತ್ತಾ ಇರುತ್ತೆ ಹೊರತು ಮಣ್ಣಲ್ಲಿ ಸೇರಿಕೊಂಡು ನಾಶ ಆಗಲ್ಲ. ಮನುಷ್ಯರು ಭೂಮಿಯನ್ನ ಮಲೀನಗೊಳಿಸುವುದು ಅಲ್ಲದೇ ಭೂಮಿಯಲ್ಲಿರೋ ನೈಸರ್ಗಿಕ ಸಂಪತ್ತುಗಳನ್ನ ಅತಿಯಾಗಿ ಬಳಸ್ಕೊಂಡು ಅದನ್ನ ನಾಶಮಾಡ್ತಿದ್ದಾರೆ. ಜನರು ಒಂದು ವರ್ಷದಲ್ಲಿ ಉಪಯೋಗಿಸೋ ನೈಸರ್ಗಿಕ ಸಂಪ್ತತನ್ನ ಮತ್ತೆ ತಯಾರಿಸಲಿಕ್ಕೆ ಭೂಮಿ ಒಂದು ವರ್ಷ ಐದು ತಿಂಗಳು ತಗೊಳ್ಳುತ್ತೆ. ಇದು ಹೀಗೆ ಮುಂದುವರಿದರೆ ಇಸವಿ 2035 ರಷ್ಟಕ್ಕೆ ನಮಗೆ ಒಂದು ಭೂಮಿ ಸಾಕಾಗಲ್ಲ 2 ಭೂಮಿ ಬೇಕಾಗುತ್ತೆ ಅಂತ ಸಿಡ್ನಿ ಮಾರ್ನಿಂಗ್‌ ಹೆರಲ್ಡ್‌ ಎಂಬ ಆಸ್ಟ್ರೇಲಿಯದ ವಾರ್ತಾಪತ್ರಿಕೆ ತಿಳಿಸುತ್ತೆ.

ತಪ್ಪು ಅಭಿಪ್ರಾಯಗಳು? ಮನುಷ್ಯರ ಕೈಯಲ್ಲಿ ಈಗ ಆಗಿರೋ ಅನಾಹುತನಾ ಸರಿಪಡಿಸೋಕೆ ಆಗುತ್ತೆ, ಭೂಮಿಯನ್ನ ಉಳಿಸೋಕೆ ಆಗುತ್ತೆ.

ಈ ಅಭಿಪ್ರಾಯ ಸರಿನಾ? ನಮ್ಮ ಪರಿಸರನ ಉಳಿಸೋಕೆ ಇವತ್ತು ತುಂಬ ಜನ ಕಷ್ಟಪಟ್ಟು ದುಡಿತ್ತಿದ್ದಾರೆ. ಆದರೂ ಇವತ್ತು ಭೂಮಿಯಲ್ಲಿ ಮಾಲಿನ್ಯ ಹೆಚ್ಚಾಗಿ ಅದು ಹಾಳಾಗ್ತಿದೆಯೇ ಹೊರತು ಸರಿ ಹೋಗ್ತಿಲ್ಲ.

ನಿಮ್ಮ ಅಭಿಪ್ರಾಯ ಏನು? ಹಾಳಾಗ್ತಿರೋ ಭೂಮಿಯನ್ನ ನಾನು ಸರಿಮಾಡ್ತಿನಿ ಅಂತ ದೇವರು ಮಾತು ಕೊಟ್ಟಿದ್ದಾನೆ. ದೇವರಿಂದ ಮಾತ್ರ ಈ ಸಮಸ್ಯೆಗೆ ಒಂದು ಪರಿಹಾರನ ಕೊಡೋಕೆ ಸಾಧ್ಯ ಅಂತ ನಿಮಗನಿಸುತ್ತಾ?

ಕೊನೆ ದಿನಗಳಲ್ಲಿ ಬರೀ ಕೆಟ್ಟ ವಿಷಯಗಳು ಮಾತ್ರ ಅಲ್ಲ ಕೆಲವು ಒಳ್ಳೇ ವಿಷಯಗಳು ಕೂಡ ನಡೆಯುತ್ತೆ ಅನ್ನೋದನ್ನ ಬೈಬಲ್‌ ಭವಿಷ್ಯವಾಣಿ ತಿಳಿಸುತ್ತೆ. ಈಗ ಒಂದು ಉದಾಹರಣೆಯನ್ನ ನೋಡೋಣ.

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರ]

“ನಾನು ನನ್ನದು ಅಂತ ಮಾಡ್ಕೊಂಡಿರೋದು ಒಂದು ಸುಂದರವಾದ ತೋಟವಿರೋ ಒಂದು ಜಾಗ ಅಲ್ಲ, ಬದಲಾಗಿ ಒಂದು ಕಸದ ಗುಂಡಿ ಅಂತ ಈ ನಡುವೆ ಅನಿಸ್ತಿದೆ.”—ಎರಿನ್‌ ಟ್ಯಾಂಬರ್‌, ಇವರು ಅಮೆರಿಕದ ಗಲ್ಫ್‌ ಕೋಸ್ಟ್‌ನಲ್ಲಿ ಇರೋರು. 2010 ರಲ್ಲಿ ಮೆಕ್ಸಿಕೋ ಗಲ್ಫ್‌ನಲ್ಲಿ ನಡೆದ ತೈಲ ಸೋರಿಕೆಯ ಕೆಟ್ಟ ಪರಿಣಾಮಗಳ ಬಗ್ಗೆ ವರದಿ ನೀಡಿದವರು.

[ಪುಟ 8 ರಲ್ಲಿರುವ ಚೌಕ]

ಇದಕೆಲ್ಲಾ ಕಾರಣ ದೇವರಾ?

ಇವತ್ತು ನಡಿತಿರೋ ಎಲ್ಲಾ ಕೆಟ್ಟ ವಿಷಯಗಳನ್ನ ಬೈಬಲ್‌ನಲ್ಲಿ ಮೊದಲೇ ಹೇಳಿರೋದ್ರಿಂದ, ಇದಕ್ಕೆಲ್ಲಾ ಕಾರಣ ದೇವರಾ? ದೇವರು ನಮ್ಗೆ ಕಷ್ಟ ಕೊಡ್ತಿದ್ದಾನಾ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಯೆಹೋವನ ಸಾಕ್ಷಿಗಳು ಪ್ರಕಾಶಿಸಿರೊ ”ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?” ಪುಸ್ತಕದ 11 ನೇ ಅಧ್ಯಾಯದಲ್ಲಿದೆ.

[ಪುಟ 8ರಲ್ಲಿರುವ ಚಿತ್ರ ಕೃಪೆ]

U.S. Coast Guard photo