ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತುಂಬ ಬೇಗ ಒಳ್ಳೇ ಕಾಲ ಬರುತ್ತೆ!

ತುಂಬ ಬೇಗ ಒಳ್ಳೇ ಕಾಲ ಬರುತ್ತೆ!

ತುಂಬ ಬೇಗ ಒಳ್ಳೇ ಕಾಲ ಬರುತ್ತೆ!

“ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ . . . ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.”—ಕೀರ್ತ. 37:10, 11.

ಈ ಭವಿಷ್ಯವಾಣಿ ನೆರವೇರೋದನ್ನ ನೋಡೋಕೆ ನಿಮಗೆ ಆಸೆ ಇದ್ಯಾ? ಖಂಡಿತ ನಿಮಗೆ ಆ ಆಸೆ ಇದ್ದೇ ಇರುತ್ತೆ. ಇದು ಬೇಗ ನಿಜ ಆಗುತ್ತೆ ಅಂತ ನಂಬಲಿಕ್ಕೆ ಕಾರಣಗಳಿವೆ.

ನಾವು “ಕೊನೆ ದಿನಗಳಲ್ಲಿ” ಜೀವಿಸ್ತಿದ್ದೀವಿ ಅಂತ ತೋರಿಸೋ ಕೆಲವು ಭವಿಷ್ಯವಾಣಿಗಳನ್ನ ನಾವು ಕಳೆದ ಲೇಖನಗಳಲ್ಲಿ ಚರ್ಚೆ ಮಾಡಿದ್ದೀವಿ. (2 ತಿಮೊತಿ 3:1-5) ಈ ಘಟನೆಗಳ ಬಗ್ಗೆ ಮುಂಚೆನೇ ಬರೆದಿಡೋಕೆ ದೇವರು ಬೈಬಲ್‌ ಬರಹಗಾರರಿಗೆ ಹೇಳಿದನು. ಇದ್ರಿಂದ ನಮಗಿರೋ ನಿರೀಕ್ಷೆ ಬಲವಾಗುತ್ತೆ. (ರೋಮನ್ನರಿಗೆ 15:4) ಈ ಭವಿಷ್ಯವಾಣಿಗಳು ನೆರವೇರುತ್ತಿರುವುದರ ಅರ್ಥ ಬೇಗ ನಮ್ಮ ಕಷ್ಟಗಳೆಲ್ಲ ಕೊನೆ ಆಗುತ್ತೆ ಅನ್ನೋದೆ ಆಗಿದೆ.

ಕೊನೆ ದಿನಗಳು ಆದ ಮೇಲೆ ಏನಾಗುತ್ತೆ? ಮನುಷ್ಯರ ಮೇಲೆ ದೇವರು ಆಳ್ವಿಕೆ ಮಾಡ್ತಾರೆ. (ಮತ್ತಾಯ 6:9) ಆಗ ಭೂಮಿ ಮೇಲೆ ಯಾವಯಾವ ಬದಲಾವಣೆ ಬರುತ್ತೆ ಅಂತ ಬೈಬಲ್‌ ಹೇಳುತ್ತೆ. ಅದು ಯಾವುದಂದ್ರೆ:

ಆಗ ಜನರು ಹೊಟ್ಟೆಗಿಲ್ಲದೆ ಅಲಿಯಲ್ಲ. “ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ, ಪರ್ವತ ಶಿಖರಗಳ ಮೇಲೆ ಧಾನ್ಯ ತುಂಬಿತುಳುಕುತ್ತೆ.”—ಕೀರ್ತನೆ 72:16.

ಕಾಯಿಲೆ ಇರಲ್ಲ. “ದೇಶದಲ್ಲಿ ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ.”—ಯೆಶಾಯ 33:24.

ಭೂಮಿ ಮತ್ತು ಅದರ ವಾತಾವರಣ ಚೇತರಿಸಿಕೊಳ್ಳುತ್ತೆ. “ಕಾಡು ಮತ್ತು ಬರಡು ಭೂಮಿ ಸಂಭ್ರಮಪಡುತ್ತೆ, ಬಯಲು ಪ್ರದೇಶ ಉಲ್ಲಾಸಿಸ್ತಾ ಹೂಗಳಿಂದ ಕಂಗೊಳಿಸುತ್ತೆ.”—ಯೆಶಾಯ 35:1.

ಇವು ತುಂಬ ಬೇಗ ನೆರವೇರೋ ಭವಿಷ್ಯವಾಣಿಗಳಲ್ಲಿ ಕೆಲವು. ತುಂಬ ಬೇಗ ಒಳ್ಳೇ ಕಾಲ ಬರುತ್ತೆ ಅಂತ ಯಾಕೆ ಯೆಹೋವನ ಸಾಕ್ಷಿಗಳು ಅಷ್ಟು ದೃಢವಾಗಿ ನಂಬ್ತಾರೆ ಅಂತ ಅವರನ್ನೇ ಕೇಳಿ ತಿಳ್ಕೊಳ್ಳಿ.