ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಟುಂಬ ಆರಾಧನೆ ಮತ್ತು ವೈಯಕ್ತಿಕ ಅಧ್ಯಯನಕ್ಕೆ ಕೆಲವು ಸಲಹೆಗಳು . . .

ಕುಟುಂಬ ಆರಾಧನೆ ಮತ್ತು ವೈಯಕ್ತಿಕ ಅಧ್ಯಯನಕ್ಕೆ ಕೆಲವು ಸಲಹೆಗಳು . . .

ಕುಟುಂಬ ಆರಾಧನೆ ಮತ್ತು ವೈಯಕ್ತಿಕ ಅಧ್ಯಯನಕ್ಕೆ ಕೆಲವು ಸಲಹೆಗಳು . . .

ಇಸವಿ 2009ರಿಂದ ಹಿಡಿದು ಭೂವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸಭಾ ಕೂಟಗಳಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಲಾಯಿತು. ವಾರದ ಮಧ್ಯದಲ್ಲಿ ಎರಡು ದಿನಗಳಂದು ನಡೆಸಲಾಗುತ್ತಿದ್ದ ಕೂಟಗಳನ್ನು ಒಂದೇ ದಿನಕ್ಕೆ ಬದಲಾಯಿಸಲಾಯಿತು. ಆ ಇನ್ನೊಂದು ದಿನವನ್ನು ಕುಟುಂಬ ಆರಾಧನೆ ಅಥವಾ ವೈಯಕ್ತಿಕ ಅಧ್ಯಯನಕ್ಕೆ ಬಳಸುವಂತೆ ಪ್ರೋತ್ಸಾಹ ನೀಡಲಾಯಿತು. ಈ ಅವಕಾಶವನ್ನು ನೀವು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೀರಿ? ಇದರಿಂದ ಪೂರ್ಣ ಪ್ರಯೋಜನ ಪಡೆದುಕೊಳ್ಳುತ್ತಿದ್ದೀರಾ?

ಕುಟುಂಬ ಆರಾಧನೆಯಲ್ಲಿ ಏನನ್ನು ಅಧ್ಯಯನ ಮಾಡುವುದು ಎನ್ನುವ ಪ್ರಶ್ನೆ ಕೆಲವರಿಗಿತ್ತು. ಆಡಳಿತ ಮಂಡಲಿ ಎಲ್ಲ ಕುಟುಂಬಗಳಿಗಾಗಿ ಒಂದೇ ವಿಧಾನವನ್ನು ಶಿಫಾರಸ್ಸು ಮಾಡುವುದಿಲ್ಲ. ಏಕೆಂದರೆ ಒಬ್ಬೊಬ್ಬರ ಸನ್ನಿವೇಶ ಒಂದೊಂದು ರೀತಿಯಿರುತ್ತದೆ. ಆದ್ದರಿಂದ ಕುಟುಂಬದ ಶಿರಸ್ಸಾದವರು ಇಲ್ಲವೆ ಆಯಾ ವ್ಯಕ್ತಿಗಳು ವಾರದ ಈ ವಿಶೇಷ ದಿನದಂದು ಏನನ್ನು ಪರಿಗಣಿಸುವುದು ಉತ್ತಮ ಎಂಬುದನ್ನು ಸ್ವತಃ ನಿರ್ಣಯಿಸಬೇಕು.

ಕೆಲವರು ಕುಟುಂಬ ಆರಾಧನೆಯಲ್ಲಿ ಕೂಟಗಳಿಗಾಗಿ ತಯಾರಿ ಮಾಡುತ್ತಾರೆ. ಆದರೆ ಕುಟುಂಬ ಆರಾಧನೆ ಎಂದರೆ ಅದೊಂದೇ ಅಲ್ಲ. ಬೇರೆ ಕೆಲವರು ಬೈಬಲ್‌ ಓದಿ, ಚರ್ಚಿಸುತ್ತಾರೆ. ಮಕ್ಕಳಿರುವ ಕುಟುಂಬಗಳಲ್ಲಿ ಎಳೆಯ ಮಕ್ಕಳನ್ನು ಹುರಿದುಂಬಿಸಲಿಕ್ಕಾಗಿ ಬೈಬಲ್‌ ಘಟನೆಗಳನ್ನು ಅಭಿನಯಿಸುತ್ತಾರೆ ಸಹ. ನಮ್ಮ ಕೂಟದಲ್ಲಿ ಮಾಡುವಂತೆ ಪ್ರಶ್ನೋತ್ತರ ಚರ್ಚೆಯನ್ನೇ ಯಾವಾಗಲೂ ಇಲ್ಲಿ ಕೂಡ ಮಾಡಿದರೆ ಚೆನ್ನಾಗಿರಲಾರದು. ಕುಟುಂಬ ಆರಾಧನೆಯಲ್ಲಿ ಬಿಗು ವಾತಾವರಣ ಇಲ್ಲದಿದ್ದರೆ ಚರ್ಚೆಗಳು ತುಂಬ ಸ್ವಾರಸ್ಯಕರವಾಗಿರುತ್ತವೆ, ಎಲ್ಲರೂ ಹುರುಪು ಉಲ್ಲಾಸದಿಂದ ಭಾಗವಹಿಸುತ್ತಾರೆ. ಮಾತ್ರವಲ್ಲ ಕಲ್ಪನಾಶಕ್ತಿಯನ್ನು ಉಪಯೋಗಿಸುವಂತೆ ಹಾಗೂ ಸೃಜನಾತ್ಮಕರಾಗಿರುವಂತೆ ಸಹಾಯಮಾಡುತ್ತದೆ. ಇಂಥ ಕುಟುಂಬ ಆರಾಧನೆ ಅವಿಸ್ಮರಣೀಯವಾಗಿರುತ್ತದೆ ಮತ್ತು ಎಲ್ಲರೂ ಆನಂದಿಸುತ್ತಾರೆ.

ಮೂವರು ಮಕ್ಕಳ ತಂದೆಯೊಬ್ಬರು ಬರೆದದ್ದನ್ನು ಗಮನಿಸಿ: “ನಮ್ಮ ಕುಟುಂಬ ಆರಾಧನೆ ಹೆಚ್ಚಾಗಿ ಬೈಬಲ್‌ ಓದುವಿಕೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ನಾವೆಲ್ಲರೂ ಮುಂಚಿತವಾಗಿಯೇ ಬೈಬಲಿನ ಕೆಲವು ಅಧ್ಯಾಯಗಳನ್ನು ಓದಿಕೊಳ್ಳುತ್ತೇವೆ. ನಮ್ಮ ಮಕ್ಕಳು ಅವುಗಳಿಂದ ಸಂಶೋಧನೆಗಾಗಿ ಕೆಲವು ಅಂಶಗಳನ್ನು ಆರಿಸಿಕೊಂಡು ಅದನ್ನು ಕುಟುಂಬ ಆರಾಧನೆಯಲ್ಲಿ ಪ್ರಸ್ತುತಪಡಿಸುತ್ತಾರೆ. ಮೈಕಲ್‌ [ಏಳು ವರ್ಷ] ಸಾಮಾನ್ಯವಾಗಿ ಒಂದು ಚಿತ್ರ ಬಿಡಿಸುತ್ತಾನೆ ಅಥವಾ ಒಂದು ಪ್ಯಾರಗ್ರಾಫ್‌ ಬರೆದು ತರುತ್ತಾನೆ. ಡೇವಿಡ್‌ ಹಾಗೂ ಕೇಟ್ಲಿನ್‌ [13 ಮತ್ತು 15 ವರ್ಷ] ತಮ್ಮನ್ನೇ ಆ ಬೈಬಲ್‌ ಘಟನೆಯ ಪ್ರೇಕ್ಷಕರೆಂಬಂತೆ ಊಹಿಸಿಕೊಂಡು ಆ ಘಟನೆಯನ್ನು ವರ್ಣಿಸಿ ಬರೆಯುತ್ತಾರೆ. ಉದಾಹರಣೆಗೆ, ಯೋಸೇಫನು ಫರೋಹನ ಭಕ್ಷ್ಯಗಾರ ಹಾಗೂ ಪಾನದಾಯಕನ ಕನಸಿನ ಅರ್ಥವನ್ನು ತಿಳಿಸುವ ವೃತ್ತಾಂತವನ್ನು ನಾವೊಮ್ಮೆ ಓದಿದ್ದೆವು. ಆಗ ಕೇಟ್ಲಿನ್‌ ಆ ದೃಶ್ಯವನ್ನು ಸೆರೆಯಲ್ಲಿರುವ ಇನ್ನೊಬ್ಬ ಕೈದಿ ವಿವರಿಸುವಂಥ ರೀತಿಯಲ್ಲಿ ಬರೆದಿದ್ದಳು.”—ಆದಿಕಾಂಡ ಅಧ್ಯಾಯ 40.

ಎಲ್ಲರ ಸನ್ನಿವೇಶ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಒಂದು ವಿಧಾನ ಉತ್ತಮವಾದರೆ ಇನ್ನೊಬ್ಬರಿಗೆ ಇನ್ನೊಂದು ಉತ್ತಮ. ಮುಂದಿನ ಪುಟದಲ್ಲಿ ಕೆಲವೊಂದು ಸಲಹೆಗಳನ್ನು ಕೊಡಲಾಗಿದೆ. ಅದನ್ನು ನಿಮ್ಮ ಕುಟುಂಬ ಆರಾಧನೆಯಲ್ಲಿ ಅಥವಾ ವೈಯಕ್ತಿಕ ಅಧ್ಯಯನದಲ್ಲಿ ಬಳಸಬಹುದು. ಅಷ್ಟೇ ಅಲ್ಲ, ನೀವೇ ಇನ್ನೂ ಅನೇಕ ವಿಧಾನಗಳನ್ನು ಯೋಚಿಸಬಹುದು.

[ಪುಟ 6, 7ರಲ್ಲಿರುವ ಚೌಕ/ಚಿತ್ರ]

ಹದಿಹರೆಯದ ಮಕ್ಕಳಿರುವ ಕುಟುಂಬಗಳಿಗೆ:

ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಪುಸ್ತಕ ಓದಿ ಚರ್ಚಿಸಿ.

• “ಆ ಕಾಲದಲ್ಲಿ ನಾನಿದ್ದರೆ. . . ?” ಬೈಬಲ್‌ ಸನ್ನಿವೇಶಗಳ ಪ್ರ್ಯಾಕ್ಟಿಸ್‌ ಮಾಡಿ. (1996, ಮೇ 15ರ ಕಾವಲಿನಬುರುಜು ಪುಟ 14-15, ಪ್ಯಾರ. 17-18 ನೋಡಿ.)

• ದೊಡ್ಡ ಮತ್ತು ಚಿಕ್ಕ ಗುರಿಗಳ ಕುರಿತು ಚರ್ಚಿಸಿ.

• ಆಗಾಗ್ಗೆ ಬೈಬಲಾಧರಿತ ವಿಡಿಯೋಗಳನ್ನು ವೀಕ್ಷಿಸಿ ಚರ್ಚಿಸಿ.

ಕಾವಲಿನಬುರುಜು ಪತ್ರಿಕೆಯಲ್ಲಿರುವ “ಯುವಜನರಿಗಾಗಿ” ಲೇಖನವನ್ನು ಪರಿಗಣಿಸಿ.

ಮಕ್ಕಳಿಲ್ಲದ ದಂಪತಿಗಳಿಗೆ:

ಕುಟುಂಬ ಸಂತೋಷದ ರಹಸ್ಯ ಪುಸ್ತಕದ 1, 3, 11-16 ಅಧ್ಯಾಯಗಳನ್ನು ಚರ್ಚಿಸಿ.

• ಬೈಬಲ್‌ ಓದುವಿಕೆಯಲ್ಲಿ ಸಂಶೋಧನೆ ಮಾಡಿ ಕಂಡುಕೊಂಡ ಅಂಶಗಳನ್ನು ಹಂಚಿಕೊಳ್ಳಿ.

• ಸಭಾ ಬೈಬಲ್‌ ಅಧ್ಯಯನ ಅಥವಾ ಕಾವಲಿನಬುರುಜು ಅಧ್ಯಯನಕ್ಕೆ ತಯಾರಿ ಮಾಡಿ.

• ನಿಮ್ಮ ಶುಶ್ರೂಷೆಯನ್ನು ಹೆಚ್ಚಿಸುವ ವಿಧಾನಗಳ ಕುರಿತು ಚರ್ಚಿಸಿ.

ಒಬ್ಬಂಟಿ ಸಹೋದರ ಸಹೋದರಿಯರಿಗೆ ಅಥವಾ ಒಬ್ಬರೇ ಸತ್ಯದಲ್ಲಿರುವವರಿಗೆ:

• ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಯಾಗಿರುವ ಹೊಸ ಪ್ರಕಾಶನಗಳನ್ನು ಅಧ್ಯಯನ ಮಾಡಿ.

• ಪ್ರಸ್ತುತ ಹಾಗೂ ಹಿಂದಿನ ವರ್ಷಗಳ ವರ್ಷಪುಸ್ತಕ ಓದಿ.

• ನಿಮ್ಮ ಟೆರಿಟೊರಿಯಲ್ಲಿ ಸಾಮಾನ್ಯವಾಗಿ ಏಳುವ ಪ್ರಶ್ನೆಗಳನ್ನು ಅವಲೋಕಿಸಿ.

• ಕ್ಷೇತ್ರ ಸೇವೆಗಾಗಿ ನಿರೂಪಣೆಗಳನ್ನು ತಯಾರಿಸಿ.

ಪುಟಾಣಿ ಮಕ್ಕಳಿರುವ ಕುಟುಂಬಗಳಿಗೆ:

• ಬೈಬಲ್‌ ಘಟನೆಗಳನ್ನು ಅಭಿನಯಿಸಿ.

• ಇಂಗ್ಲಿಷ್‌ ಎಚ್ಚರ! ಪತ್ರಿಕೆಯ 30 ಮತ್ತು 31ನೇ ಪುಟಗಳಲ್ಲಿ ಮಕ್ಕಳಿಗಾಗಿ ಸಿದ್ಧಪಡಿಸಿರುವ ವಿವಿಧ ಗೇಮ್‌ಗಳನ್ನು ಆಡಿ.

• ಮಧ್ಯೆ ಮಧ್ಯೆ ಕಲ್ಪನಾಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಿ. (2011, ಫೆಬ್ರವರಿ 15ರ ಕಾವಲಿನಬುರುಜುವಿನಲ್ಲಿರುವ “ಪ್ರಯತ್ನ ಪ್ರತಿಫಲದಾಯಕ” ಲೇಖನ ನೋಡಿ.)

ಕಾವಲಿನಬುರುಜು ಪತ್ರಿಕೆಯಲ್ಲಿ ಬರುವ “ನಿಮ್ಮ ಮಕ್ಕಳಿಗೆ ಕಲಿಸಿರಿ” ಲೇಖನ ಚರ್ಚಿಸಿ.