ಮಾಹಿತಿ ಇರುವಲ್ಲಿ ಹೋಗಲು

ತೆರಿಗೆಯನ್ನ ಕಟ್ಟಲೇಬೇಕಾ?

ತೆರಿಗೆಯನ್ನ ಕಟ್ಟಲೇಬೇಕಾ?

ತೆರಿಗೆಯನ್ನ ಕಟ್ಟಲೇಬೇಕಾ?

ಹೆಚ್ಚಿನವರು ತೆರಿಗೆ ಕಟ್ಟೋಕೆ ಇಷ್ಟಪಡಲ್ಲ. ಯಾಕಂದರೆ ಆ ಹಣವನ್ನ ಸರಿಯಾದ ರೀತಿಯಲ್ಲಿ ಬಳಸಲ್ಲ, ಅದನ್ನ ಪೋಲು ಮಾಡ್ತಾರೆ, ಲೂಟಿ ಮಾಡ್ತಾರೆ ಅಂತ ನೆನಸುತ್ತಾರೆ. ತೆರಿಗೆಯನ್ನು ಸರಿಯಾದ ಕೆಲಸಕ್ಕೆ ಬಳಸದೆ ಕೆಟ್ಟ ಕೆಲಸಕ್ಕೆ ಬಳಸ್ತಾರೆ ಅನ್ನೋ ಕಾರಣಕ್ಕೂ ಕೆಲವರು ಅದನ್ನು ಕಟ್ಟೋಕೆ ಇಷ್ಟಪಡಲ್ಲ. ಪಾಶ್ಚಾತ್ಯ ದೇಶದಲ್ಲಿರೋ ಕೆಲವರು ಹೀಗೆ ಹೇಳ್ತಾರೆ: “ನಮ್ಮ ಮಕ್ಕಳನ್ನ ಸಾಯಿಸೋ ಬುಲೆಟ್‌ಗಳನ್ನ ತಗೊಳ್ಳೋಕೆ ಸರ್ಕಾರಕ್ಕೆ ನಾವು ದುಡ್ಡು ಕೊಡಲ್ಲ.”

ಅದೇ ತರ ತಾವು ಕಟ್ಟೋ ತೆರಿಗೆಯನ್ನ ದುರುಪಯೋಗಿಸುವುದು ಎಷ್ಟೋ ಜನರಿಗೆ ಇಷ್ಟ ಇಲ್ಲ. ತೆರಿಗೆ ಕಟ್ಟೋಕೆ ತನ್ನ ಮನಸ್ಸಾಕ್ಷಿ ಯಾಕೆ ಒಪ್ಪಲ್ಲ ಅಂತ ಮಹಾತ್ಮ ಗಾಂಧಿಯವರು ಹೀಗೆ ಹೇಳಿದ್ರು: “ಸಶಸ್ತ್ರ ಪಡೆಯಿರೋ ಸರ್ಕಾರಗಳನ್ನ ಬೆಂಬಲಿಸೋ ಒಬ್ಬ ವ್ಯಕ್ತಿ ತನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಪ ಮಾಡುತ್ತಿರುತ್ತಾನೆ. ತೆರಿಗೆಯನ್ನ ಕಟ್ಟಿ ಸರ್ಕಾರಕ್ಕೆ ಬೆಂಬಲ ಕೊಡೋ ಪ್ರತಿಯೊಬ್ಬರು ಅಂದರೆ ಚಿಕ್ಕವರು, ದೊಡ್ಡವರು ಸರ್ಕಾರ ಮಾಡುತ್ತಿರೋ ಪಾಪಕ್ಕೆ ಹೊಣೆ ಆಗಿರುತ್ತಾರೆ.”

ಅದೇ ತರ ಯುದ್ಧವನ್ನ ಬೆಂಬಲಿಸುವಂಥ ಕೆಲಸಗಳಿಗೆ ನಾನು ತೆರಿಗೆ ಕಟ್ಟೋಕೆ ಇಷ್ಟಪಡಲ್ಲ ಅಂತ 19ನೇ ಶತಮಾನದ ಹೆನ್ರಿ ಡೇವಿಡ್‌ ಥೋರೋ ಅನ್ನೋ ತತ್ವಜ್ಞಾನಿ ಹೇಳ್ತಾನೆ. ಅಷ್ಟೇ ಅಲ್ಲ, “ಒಬ್ಬ ಪ್ರಜೆಗೆ ತಪ್ಪು ಅಂತ ಅನಿಸಿರೋ ವಿಷಯವನ್ನು ಒತ್ತಾಯ ಮಾಡಿ ಮಾಡಿಸೋ ಅಧಿಕಾರ ಯಾವ ರಾಜಕೀಯ ವ್ಯಕ್ತಿಗಳಿಗೂ ಇಲ್ಲ. ಏನೇ ಮಾಡಿದ್ರು ಅವರವರ ಮನಸಾಕ್ಷಿ ಒಪ್ಪೋ ವಿಷಯಗಳನ್ನು ಮಾಡೋಕೆ ಬಿಟ್ಟು ಕೊಡಬೇಕು” ಅಂತ ಹೇಳಿದ್ರು.

ತೆರಿಗೆ ಕಟ್ಟೋದು ಕ್ರೈಸ್ತರಿಗೆ ತುಂಬ ಪ್ರಾಮುಖ್ಯ. ಯಾಕಂದರೆ ಕ್ರೈಸ್ತರು ಎಲ್ಲ ವಿಷಯದಲ್ಲೂ ಶುದ್ಧ ಮನಸ್ಸಾಕ್ಷಿಯನ್ನ ಕಾಪಾಡಿಕೊಳ್ಳಬೇಕು ಅಂತ ಬೈಬಲ್‌ ಕಲಿಸುತ್ತೆ. (2 ತಿಮೊತಿ 1:3) ಅಷ್ಟೇ ಅಲ್ಲ ಸರ್ಕಾರಕ್ಕೆ ಜನರಿಂದ ತೆರಿಗೆ ವಸೂಲಿ ಮಾಡೋ ಅಧಿಕಾರ ಇದೆ ಅಂತಾನೂ ಹೇಳುತ್ತೆ. ಅದರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಎಲ್ರೂ ಅಧಿಕಾರಿಗಳ [ಮಾನವ ಸರ್ಕಾರಗಳ] ಮಾತು ಕೇಳಬೇಕು. ಯಾಕಂದ್ರೆ ದೇವರು ಅಧಿಕಾರ ಕೊಡದಿದ್ರೆ ಯಾರಿಗೂ ಅಧಿಕಾರದ ಸ್ಥಾನದಲ್ಲಿ ಇರೋಕೆ ಆಗಲ್ಲ. ಈಗಿರೋ ಅಧಿಕಾರಿಗಳು ಬೇರೆ ಬೇರೆ ಸ್ಥಾನದಲ್ಲಿ ಇರೋದು ದೇವರ ಅನುಮತಿ ಇರೋದ್ರಿಂದಾನೇ. ಶಿಕ್ಷೆ ಆಗಬಾರದು ಅನ್ನೋ ಕಾರಣಕ್ಕೆ ಅಷ್ಟೇ ಅಲ್ಲ, ಒಳ್ಳೇ ಮನಸ್ಸಾಕ್ಷಿ ಇರಬೇಕಂದ್ರೂ ನೀವು ಅಧಿಕಾರಿಗಳ ಮಾತು ಕೇಳಬೇಕು. ಅದಕ್ಕೇ ನೀವು ತೆರಿಗೆ ಕಟ್ತೀರ. ಅಧಿಕಾರಿಗಳು ಯಾವಾಗ್ಲೂ ಜನಸೇವೆ ಮಾಡೋ ದೇವರ ಸೇವಕರು. ಇದಕ್ಕೇ ಅವರು ಯಾವಾಗ್ಲೂ ಕೆಲಸ ಮಾಡ್ತಿದ್ದಾರೆ. ಯಾರಿಗೆ ಏನೇನು ಕೊಡಬೇಕೋ ಅದನ್ನ ಕೊಡಿ. ಯಾರಿಗೆ ತೆರಿಗೆ ಕೊಡಬೇಕೋ ಅವ್ರಿಗೆ ತೆರಿಗೆಯನ್ನ ... ಕೊಡಿ.”—ರೋಮನ್ನರಿಗೆ 13:1, 5-7.

ಅದಕ್ಕೆ ಒಂದನೇ ಶತಮಾನದ ಕ್ರೈಸ್ತರು ಕಟ್ಟುತ್ತಿದ್ದ ತೆರಿಗೆಯನ್ನ ಮಿಲಿಟರಿಗೋಸ್ಕರ ಉಪಯೋಗಿಸುತ್ತಿದ್ರೂ, ಆ ಕ್ರೈಸ್ತರು ತೆರಿಗೆ ಕಟ್ಟೋದ್ರಲ್ಲಿ ಹೆಸರುವಾಸಿ ಆಗಿದ್ರು. ಈ ಬೈಬಲ್‌ ತತ್ವನ ಯೆಹೋವನ ಸಾಕ್ಷಿಗಳು ಪಾಲಿಸ್ತಾ ತೆರಿಗೆಯನ್ನ ಕಟ್ತಾರೆ. * ನಾವು ಬೆಂಬಲ ಕೊಡದೆ ಇರೋ ಕೆಲಸಗಳಿಗೆ ನಾವು ಯಾಕೆ ತೆರಿಗೆ ಕಟ್ಟಬೇಕು? ತೆರಿಗೆ ಕಟ್ಟೋ ಸಮಯ ಬಂದಾಗ ಒಬ್ಬ ಕ್ರೈಸ್ತ ತನ್ನ ಮನಸ್ಸಾಕ್ಷಿಯನ್ನ ಮೂಟೆ ಕಟ್ಟಬೇಕಾ?

ತೆರಿಗೆ ಮತ್ತು ಮನಸ್ಸಾಕ್ಷಿ

ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಕಟ್ಟುತ್ತಿದ್ದ ತೆರಿಗೆಯಲ್ಲಿ ಹೆಚ್ಚಿನ ಹಣ ಮಿಲಿಟರಿ ಸೇವೆಗೆ ಹೋಗ್ತಿತ್ತು. ಗಾಂಧಿ ಮತ್ತು ಥೋರೋ ಅವರು ಇಂಥ ಕೆಲಸಗಳಿಗೆ ತೆರಿಗೆ ಕಟ್ಟೋಕೆ ನಮ್ಮ ಮನಸ್ಸಾಕ್ಷಿ ಒಪ್ಪಲ್ಲ ಅಂತ ವಾದ ಮಾಡಿದಕ್ಕೆ ಇದೇ ಮುಖ್ಯ ಕಾರಣ.

ರೋಮನ್ನರಿಗೆ 13 ನೇ ಅಧ್ಯಾಯದಲ್ಲಿರೋ ಆಜ್ಞೆಯನ್ನ ಕ್ರೈಸ್ತರು ಶಿಕ್ಷೆ ಆಗಬಾರದು ಅನ್ನೋ ಕಾರಣಕ್ಕೆ ಅಲ್ಲ ಬದಲಿಗೆ “ಒಳ್ಳೆ ಮನಸ್ಸಾಕ್ಷಿ ಇರಬೇಕು” ಅನ್ನೋ ಕಾರಣಕ್ಕೆ ಅದನ್ನ ಪಾಲಿಸಿದರು. (ರೋಮನ್ನರಿಗೆ 13:5) ತನ್ನ ಮನಸಾಕ್ಷಿ ಒಪ್ಪದೇ ಇರೋ ಕೆಲಸಕ್ಕೆ ತೆರಿಗೆ ಹಣವನ್ನು ಉಪಯೋಗಿಸಿದ್ರೂ ಒಬ್ಬ ಕ್ರೈಸ್ತನ ಮನಸಾಕ್ಷಿ ಅದನ್ನು ಕಟ್ಟೋಕ್ಕೆ ಹೇಳುತ್ತೆ. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಮನಸ್ಸಾಕ್ಷಿ ಹೇಗೆ ಕೆಲಸ ಮಾಡುತ್ತೆ ಅಂತ ತಿಳ್ಕೋಬೇಕು. ಯಾಕಂದರೆ ನಾವು ಮಾಡ್ತಾ ಇರೋದು ಸರಿನಾ ಅಥವಾ ತಪ್ಪಾ ಅಂತ ಮನಸ್ಸಾಕ್ಷಿ ಹೇಳುತ್ತಿರುತ್ತೆ.

ಎಲ್ಲರಿಗೂ ಮನಸ್ಸಾಕ್ಷಿ ಇದೆ. ಆದ್ರೆ ಅದನ್ನು ಯಾವಾಗಲೂ ನಂಬೋಕೆ ಆಗಲ್ಲ ಅಂತ ಥೋರೋ ಹೇಳ್ತಾರೆ. ಅದಕ್ಕೆ ದೇವರ ಇಷ್ಟದ ಪ್ರಕಾರ ನಡಕೊಳ್ಳೋಕೆ ನಮ್ಮ ಮನಸ್ಸಾಕ್ಷಿಗೆ ತರಬೇತಿಕೊಡಬೇಕು. ಯಾಕಂದ್ರೆ ದೇವರು ತುಂಬ ವಿವೇಕಿ. ಹಾಗಾಗಿ ನಮ್ಮ ಯೋಚನಾ ರೀತಿಯನ್ನ ಬದಲಾಯಿಸಬೇಕು ಮತ್ತು ಆತನ ತರ ಯೋಚನೆ ಮಾಡೋದನ್ನ ಕಲಿಬೇಕು. (ಕೀರ್ತನೆ 19:7) ಅದಕ್ಕೆ ದೇವರು ಮಾನವ ಸರ್ಕಾರಗಳನ್ನು ಹೇಗೆ ನೋಡ್ತಾನೆ ಅನ್ನೋದನ್ನ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡಬೇಕು. ಅದನ್ನ ನಾವೀಗ ನೋಡೋಣ.

ಮಾನವ ಸರ್ಕಾರಗಳು “ಜನಸೇವೆ ಮಾಡೋ ದೇವರ ಸೇವಕರು” ಅಂತ ಅಪೊಸ್ತಲ ಪೌಲ ಹೇಳಿದನು. (ರೋಮನ್ನರಿಗೆ 13:6) ಈ ಮಾತಿನ ಅರ್ಥ ಏನು? ಈ ಸರ್ಕಾರಗಳು ಅಗತ್ಯ ಇರೋ ಕ್ರಮಗಳನ್ನ ಮತ್ತು ಜನರಿಗೆ ಬೇಕಾದ ಯೋಜನೆಗಳನ್ನ ರೂಪಿಸುತ್ತಾರೆ. ಭ್ರಷ್ಟಾಚಾರ ಇದ್ದರೂ ಸರ್ಕಾರ ನಾವು ಕೊಡೋ ತೆರಿಗೆಯನ್ನ ಬಳಸಿ ಅಂಚೆ ಕಛೇರಿಯ ಸೇವೆಯನ್ನ, ಶಿಕ್ಷಣವನ್ನ, ಅಗ್ನಿಶಾಮಕದಳದ ಸೇವೆಯನ್ನ ಮತ್ತು ಪೊಲೀಸ್‌ ಸೇವೆಯನ್ನ ಉಚಿತವಾಗಿ ಕೊಡ್ತಾರೆ. ಈ ಸರ್ಕಾರಗಳಲ್ಲಿ ಭ್ರಷ್ಟತೆ, ಕೆಟ್ಟತನ ತುಂಬಿದ್ರೂ ದೇವರು ಅದನ್ನ ಸ್ವಲ್ಪ ಕಾಲಕ್ಕೆ ಅನುಮತಿಸಿದ್ದಾನೆ. ಹಾಗಾಗಿ ನಾವು ದೇವರು ಮಾಡಿರೋ ಈ ಏರ್ಪಾಡಿಗೆ ಗೌರವ ತೋರಿಸಬೇಕು ಮತ್ತು ತೆರಿಗೆ ಕಟ್ಟಬೇಕು. ನಾವು ಹೀಗೆ ಮಾಡಬೇಕು ಅಂತ ದೇವರು ಆಸೆಪಡುತ್ತಾರೆ.

ಮಾನವ ಸರ್ಕಾರಗಳಿಗೆ ಈ ಭೂಮಿಯನ್ನು ಆಳೋಕೆ ಇರುವ ಅಧಿಕಾರ ಸ್ವಲ್ಪ ಸಮಯಕ್ಕೆ ಮಾತ್ರ ಇದೆ. ಈ ಮಾನವ ಸರ್ಕಾರಗಳನ್ನ ತೆಗೆದು ಹಾಕಿ ದೇವರು ತನ್ನ ಆಳ್ವಿಕೆಯನ್ನ ತರುತ್ತಾನೆ. ಹೀಗೆ ಶತಮಾನಗಳಿಂದ ಈ ಭೂಮಿಯನ್ನು ಹಾಳು ಮಾಡುತ್ತಿರೋ ಬಲು ಬೇಗನೆ ಈ ಭೂಮಿ ಮೇಲೆ ತರಲಿದ್ದಾನೆ. (ದಾನಿಯೇಲ 2:44; ಮತ್ತಾಯ 6:10) ಅಲ್ಲಿ ತನಕ ಮಾನವ ಸರ್ಕಾರದ ವಿರುದ್ಧ ದಂಗೆ ಏಳದೆ ಅವರಿಗೆ ಕಟ್ಟಬೇಕಾದ ತೆರಿಗೆಯನ್ನ ಕಟ್ಟಬೇಕು ಅಂತ ಯೆಹೋವ ಬಯಸುತ್ತಾನೆ.

ತೆರಿಗೆಯನ್ನ ಯುದ್ಧಕ್ಕೆ ಬಳಸುತ್ತಾ ಇರೋದ್ರಿಂದ ತೆರಿಗೆ ಕಟ್ಟೊದೇ ಪಾಪ ಅಂತ ಗಾಂಧಿಜಿಗೆ ಅನಿಸಿತು. ನಿಮಗೂ ಅದೇ ತರ ಅನಿಸ್ತಾ ಇದೆಯಾ? ಕೆಲವೊಮ್ಮೆ ಹಾಗನಿಸುತ್ತೆ ನಿಜ. ಆದರೆ ಹೀಗೆ ಯೋಚನೆ ಮಾಡಿ, ಒಬ್ಬ ವ್ಯಕ್ತಿ ಒಂದು ಜಾಗವನ್ನ ಕೆಳಗೆ ನಿಂತುಕೊಂಡು ನೊಡೋದಕ್ಕಿಂತಾ ಬೆಟ್ಟದ ಮೇಲೆ ನಿಂತುಕೊಂಡು ನೋಡಿದ್ರೆ ಅದು ಚೆನ್ನಾಗಿ ಕಾಣುತ್ತೆ. ಅದೇ ತರ ಒಂದು ವಿಷಯನ ಸರಿಯಾಗಿ ಯೋಚನೆ ಮಾಡೋಕೆ ನಮ್ಮ ಯೋಚನೆಯನ್ನ ಯೆಹೋವನ ಯೋಚನೆಗೆ ತಕ್ಕ ಹಾಗೆ ಹೊಂದಿಸಿಕೊಳ್ಳಬೇಕು. ಯಾಕಂದ್ರೆ ಯೆಹೋವ ದೇವರು ನಾವು ಯೋಚನೆ ಮಾಡೋ ತರ ಯೋಚಿಸಲ್ಲ. ಪ್ರವಾದಿ ಯೆಶಾಯನ ಮೂಲಕ ಯೆಹೋವ ಹೀಗೆ ಹೇಳಿದನು: “ಭೂಮಿಗಿಂತ ಆಕಾಶ ಎಷ್ಟೋ ಎತ್ರದಲ್ಲಿರೋ ತರ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳು ಎಷ್ಟೋ ಉನ್ನತವಾಗಿವೆ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳು ಎಷ್ಟೋ ಶ್ರೇಷ್ಠವಾಗಿವೆ.”—ಯೆಶಾಯ 55:8, 9.

ನಮ್ಮ ಮೇಲೆ ಯಾರಿಗೆ ಅಧಿಕಾರ ಇದೆ?

ತೆರಿಗೆ ಕಟ್ಟಬೇಕು ಅಂತ ಬೈಬಲ್‌ ಹೇಳುತ್ತೆ ನಿಜ. ಹಾಗಂತ ಸರ್ಕಾರ ಹೇಳೋ ಪ್ರತಿಯೊಂದನ್ನೂ ನಾವು ಕೇಳಬೇಕು ಅಂತೇನಿಲ್ಲ. ಯೆಹೋವ ದೇವರು ಮಾನವ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ಕೊಟ್ಟಿಲ್ಲ ಅಂತ ಯೇಸು ನಮಗೆ ಕಲಿಸಿದ್ದೇನೆ. ರೋಮನ್‌ ಸರ್ಕಾರಕ್ಕೆ ತೆರಿಗೆ ಕಟ್ಟೋದು ದೇವರ ದೃಷ್ಟಿಯಲ್ಲಿ ಸರಿಯಾದ ವಿಷಯನಾ ಅಂತ ಒಬ್ಬ ವ್ಯಕ್ತಿ ಯೇಸುವನ್ನು ಕೇಳಿದಾಗ ಆತನು ಏನು ಹೇಳ್ತಾನೆ ಗಮನಿಸಿ: “ರಾಜಂದು ರಾಜನಿಗೆ ಕೊಡಿ, ಆದ್ರೆ ದೇವರದ್ದು ದೇವರಿಗೆ ಕೊಡಿ”—ಮಾರ್ಕ 12:13-17.

‘ರಾಜನನ್ನ’ ಪ್ರತಿನಿಧಿಸುವ ಸರ್ಕಾರಗಳು ಹಣವನ್ನ ಪ್ರಿಂಟ್‌ ಮಾಡೋದ್ರಿಂದ ಅದನ್ನ ತೆರಿಗೆ ಮೂಲಕ ವಾಪಸು ಕೇಳೋದ್ರಲ್ಲಿ ತಪ್ಪಿಲ್ಲ. ಅದಕ್ಕೆ ಯೆಹೋವ ತೆರಿಗೆಯನ್ನ ಕಟ್ಟಿ ಅಂತ ಹೇಳ್ತಿದ್ದಾನೆ. “ಆದ್ರೆ ದೇವರದ್ದು ದೇವರಿಗೆ ಕೊಡಿ” ಅಂತ ಯೇಸು ಹೇಳಿದ ಮಾತಿನ ಅರ್ಥ ನಮ್ಮ ಜೀವ ಮತ್ತು ಆರಾಧನೆಯನ್ನ ಯೆಹೋವನಿಗೆ ಮಾತ್ರ ಕೊಡಬೇಕು ಬೇರೆ ಯಾವ ಮಾನವ ಸರ್ಕಾರಗಳಿಗೂ ಕೊಡಬಾರದು. ಆದ್ರೆ ಮಾನವ ಕೊಡೊ ನಿಯಮಗಳು ದೇವರ ನಿಯಮಕ್ಕೆ ವಿರುದ್ಧ ಆಗಿದ್ದರೆ “ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು. ಯಾಕಂದ್ರೆ ಆತನೇ ನಮ್ಮ ರಾಜ.”—ಅಪೊಸ್ತಲರ ಕಾರ್ಯ 5:29.

ನಾವು ಕಟ್ಟುತ್ತಿರೋ ತೆರಿಗೆಯನ್ನ ಸರ್ಕಾರ ಸರಿಯಾಗಿ ಬಳಸ್ತಿಲ್ಲ ಅಂತ ಗೊತ್ತಾದಾಗ ಅದು ನಮಗೆ ಇಷ್ಟ ಆಗಲ್ಲ. ಹಾಗಂತ ನಾವು ಸರ್ಕಾರದ ವಿರುದ್ಧ ಹೋರಾಡೋದಾಗಲಿ, ತೆರಿಗೆ ಕಟ್ಟಲ್ಲ ಅಂತ ಹೇಳೋದಾಗಲಿ ಮಾಡಲ್ಲ. ಯಾಕಂದ್ರೆ ನಾವು ಹಾಗೆ ಮಾಡಿದ್ರೆ ದೇವರು ನಮ್ಮ ಸಮಸ್ಯೆಗಳನ್ನೆಲ್ಲ ಸರಿ ಮಾಡ್ತಾನೆ ಅನ್ನೋ ನಂಬಿಕೆ ನಮಗಿಲ್ಲ ಅಂತ ತೋರಿಸಿ ಕೊಡ್ತಾ ಇರ್ತೀವಿ. “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ” ಅಂತ ಯೇಸು ಹೇಳಿದ. ಅದಕ್ಕೆ ದೇವರು ತನ್ನ ಮಗ ಯೇಸುವಿನ ಮೂಲಕ ಇದನ್ನೆಲ್ಲ ಸರಿ ಮಾಡೋವರೆಗೂ ನಾವು ತಾಳ್ಮೆಯಿಂದ ಕಾಯ್ತೀವಿ.—ಯೋಹಾನ 18:36.

ಬೈಬಲ್‌ ಬೋಧನೆಗಳನ್ನ ಪಾಲಿಸೋದ್ರಿಂದ ಸಿಗೋ ಪ್ರಯೋಜನಗಳು

ತೆರಿಗೆ ಕಟ್ಟೋ ನಿಯಮ ಪಾಲಿಸೋದ್ರಿಂದ ನಮಗೆ ತುಂಬ ಪ್ರಯೋಜನ ಇದೆ. ನಿಯಮ ಮುರಿಯುವವರಿಗೆ ಸಿಗೋ ಶಿಕ್ಷೆ ಸಿಗಲ್ಲ ಮತ್ತು ಎಲ್ಲಿ ಸಿಕ್ಕಿ ಬೀಳ್ತೀವಿ ಅನ್ನೋ ಭಯ ಇರಲ್ಲ. (ರೋಮನ್ನರಿಗೆ 13:3-5) ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆ ಮನಸ್ಸಾಕ್ಷಿ ಇರುತ್ತೆ. ಈ ನಿಯಮವನ್ನ ಪಾಲಿಸಿ ದೇವರನ್ನ ಗೌರವಿಸುತ್ತಾ ಇರುತ್ತೀವಿ. ಮೋಸ ಮಾಡಿ ತೆರಿಗೆ ಕಟ್ಟೋರಿಗೆ ಅಥವಾ ತೆರಿಗೆ ಕಟ್ಟದೆ ಇರೋರಿಗೆ ಹೋಲಿಸಿದರೆ ನಮಗೇ ನಷ್ಟ ಅಂತ ಅನಿಸಬಹುದು. ಆದ್ರೆ ದೇವರು ತನ್ನ ನಿಷ್ಠಾವಂತ ಸೇವಕರನ್ನ ನೋಡಿಕೊಳ್ತಾನೆ ಅನ್ನೋ ಮಾತಿನ ಮೇಲೆ ನಂಬಿಕೆ ಇಡಬೇಕು. ಬೈಬಲಿನಲ್ಲಿ ಒಂದು ಕಡೆ ದಾವೀದ ಹೀಗೆ ಬರೆದಿದ್ದಾನೆ: “ನಾನು ಚಿಕ್ಕವನಾಗಿದ್ದೆ, ಈಗ ಮುದುಕನಾಗಿದ್ದೀನಿ. ಆದ್ರೂ ಇಲ್ಲಿ ತನಕ ದೇವರು ನೀತಿವಂತನ ಕೈಬಿಟ್ಟಿರೋದನ್ನಾಗಲಿ, ನೀತಿವಂತನ ಮಕ್ಕಳು ಊಟಕ್ಕಾಗಿ ಭಿಕ್ಷೆ ಬೇಡೋದನ್ನಾಗಲಿ ನಾನು ನೋಡಿಲ್ಲ.”—ಕೀರ್ತನೆ 37:25.

ತೆರಿಗೆ ಕಟ್ಟಬೇಕು ಅನ್ನೋ ನಿಯಮ ಪಾಲಿಸೋದ್ರಿಂದ ನಾವು ಸಮಾಧಾನದಿಂದ ಇರ್ತೀವಿ. ನೀವು ಕಟ್ಟೋ ತೆರಿಗೆಯನ್ನ ಸರ್ಕಾರ ಸರಿಯಾಗಿ ಉಪಯೋಗಿಸಿಲ್ಲ ಅಂದ್ರೆ ಅದಕ್ಕೆ ನೀವೇ ಹೊಣೆ ಅಂತ ದೇವರು ಹೇಳಲ್ಲ. ನೀವು ಕೊಡೋ ಬಾಡಿಗೆಯಿಂದ ನಿಮ್ಮ ಮಾಲೀಕ ಏನು ಮಾಡ್ತಿದ್ದಾನೆ ಅಂತ ತಲೆ ಕೆಡಿಸಿಕೊಳ್ಳೋ ಅವಶ್ಯಕತೆ ನಿಮಗಿಲ್ಲ. ದಕ್ಷಿಣ ಯೂರೋಪ್‌ನಲ್ಲಿರೋ, ಸ್ಟೆಲ್ವಿಯೊ ಅನ್ನೋ ವ್ಯಕ್ತಿ ಸತ್ಯ ಕಲಿಯೋ ಮುಂಚೆ ಅವನ ದೇಶದಲ್ಲಿ ನಡಿತಾ ಇರೋ ಅನ್ಯಾಯದ ವಿರುದ್ಧ ಹೋರಾಡೋಕೆ ಪ್ರಯತ್ನ ಮಾಡಿದ. ಆದ್ರೆ ಸ್ವಲ್ಪ ಸಮಯ ಆದ್ಮೇಲೆ ಅವನು ಆ ಪ್ರಯತ್ನವನ್ನ ಬಿಟ್ಟುಬಿಟ್ಟ. ಯಾಕೆ ಅಂತ ಅವನು ಹೇಳ್ತಾನೆ: “ಯಾವ ಮನುಷ್ಯನಿಗೂ ನ್ಯಾಯ, ಶಾಂತಿ ಮತ್ತು ಪ್ರೀತಿಯನ್ನ ಈ ಲೋಕದಲ್ಲಿ ತರೋಕೆ ಆಗಲ್ಲ, ಅದೆಲ್ಲ ಸರಿ ಮಾಡೋಕೆ ದೇವರ ಆಳ್ವಿಕೆಯಿಂದ ಮಾತ್ರ ಸಾಧ್ಯ.”

ನಾವು ಸ್ಟೆಲ್ವಿಯೊ ತರ ನಿಷ್ಠೆಯಿಂದ ‘ದೇವರದ್ದು ದೇವರಿಗೆ ಕೊಟ್ಟರೆ’ ಆತನು ನ್ಯಾಯ ಕೊಟ್ಟೆ ಕೊಡ್ತಾನೆ ಅಂತ ಕಣ್ಮುಚ್ಚಿ ನಂಬಬಹುದು. ಮಾನವ ಸರ್ಕಾರದಿಂದ ಆಗಿರೋ ಹಾನಿಯನ್ನ ಸಂಪೂರ್ಣವಾಗಿ ತೆಗೆದು ಹಾಕಿ, ಜನರಿಗೆ ದೇವರು ನ್ಯಾಯ ಕೊಡಿಸೋದನ್ನ ನಾವು ಬೇಗ ನೋಡಲಿಕ್ಕಿದ್ದೀವಿ.

[ಪಾದಟಿಪ್ಪಣಿ]

^ ಯೆಹೋವನ ಸಾಕ್ಷಿಗಳು ತೆರಿಗೆ ಕಟ್ಟಿದ್ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾವಲಿನಬುರುಜು, ನವೆಂಬರ್‌ 1, 2002, ಪುಟ 13, ಪ್ಯಾರ 15, ಮತ್ತು ಕಾವಲಿನಬುರುಜು ಮೇ 1, 1996, ಪುಟ 12 ಪ್ಯಾರ 7ನ್ನು ನೋಡಿ.

[ಬ್ಲರ್ಬ್‌]

ಯೆಹೋವನ ಆಲೋಚನೆಗಳು ನಮ್ಮ ಆಲೋಚನೆಗಳಿಗಿಂತ ಉನ್ನತ. ಅದಕ್ಕೆ ನಾವು ಆತನ ಆಲೋಚನೆಗಳಿಗೆ ತಕ್ಕ ಹಾಗೆ ನಮ್ಮ ಆಲೋಚನೆಗಳನ್ನ ಸರಿ ಹೊಂದಿಸಿಕೊಳ್ಳಬೇಕು.

[ಬ್ಲರ್ಬ್‌]

ದೇವರ ಮಾತನ್ನ ಕೇಳಿ ತೆರಿಗೆ ಕಟ್ಟುವಾಗ ನಮಗೆ ಒಳ್ಳೆ ಮನಸ್ಸಾಕ್ಷಿ ಇರುತ್ತೆ. ದೇವರು ನಮ್ಮ ಅಗತ್ಯಗಳನ್ನ ಪೂರೈಸ್ತಾನೆ ಅನ್ನೋ ನಂಬಿಕೆನೂ ನಮಗಿದೆ.

[ಚಿತ್ರ]

“ರಾಜಂದು ರಾಜನಿಗೆ ಕೊಡಿ, ಆದ್ರೆ ದೇವರದ್ದು ದೇವರಿಗೆ ಕೊಡಿ”

[ಕೃಪೆ]

Copyright British Museum