ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕುಟುಂಬ ಸದಾ ಸಂತೋಷವಾಗಿರಲು ಏನು ಮಾಡಬೇಕು?

ನಿಮ್ಮ ಕುಟುಂಬ ಸದಾ ಸಂತೋಷವಾಗಿರಲು ಏನು ಮಾಡಬೇಕು?

ದೇವರ ವಾಕ್ಯದಿಂದ ಕಲಿಯಿರಿ

ನಿಮ್ಮ ಕುಟುಂಬ ಸದಾ ಸಂತೋಷವಾಗಿರಲು ಏನು ಮಾಡಬೇಕು?

ನಿಮ್ಮ ಮನಸ್ಸಿಗೆ ಬಂದಿರಬಹುದಾದ ಕೆಲವು ಪ್ರಶ್ನೆಗಳು ಈ ಲೇಖನದಲ್ಲಿವೆ. ಅವುಗಳ ಉತ್ತರಗಳು ದೇವರ ವಾಕ್ಯವಾದ ಬೈಬಲಿನಲ್ಲಿ ಎಲ್ಲಿವೆಯೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಉತ್ಸುಕರಾಗಿದ್ದಾರೆ.

1. ಮದುವೆಯಾಗದೆ ಒಟ್ಟಿಗೆ ಜೀವಿಸಿ ಸುಖೀ ಸಂಸಾರ ನಡಿಸಸಾಧ್ಯವೆ?

ವಿವಾಹ ಏರ್ಪಾಡನ್ನು ಆರಂಭಿಸಿದವನು ಸಂತೋಷದ ದೇವರಾಗಿರುವ ಯೆಹೋವನು. ಸಂತೋಷದ ಸಂಸಾರ ನಡೆಸಬೇಕಾದರೆ ಮದುವೆಮಾಡಿಕೊಳ್ಳುವುದು ಅಗತ್ಯ ಏಕೆಂದರೆ ಮದುವೆಮಾಡಿಕೊಂಡಾಗ ಒಬ್ಬ ಸಂಗಾತಿ ಸಿಗುವುದು ಮಾತ್ರವಲ್ಲ ಮಕ್ಕಳ ಪಾಲನೆ-ಪೋಷಣೆಗಾಗಿ ಸುಭದ್ರ ವಾತಾವರಣ ಲಭಿಸುತ್ತದೆ. ವಿವಾಹದ ಬಗ್ಗೆ ದೇವರ ನೋಟವೇನು? ಅದು ಶಾಶ್ವತ ಬಂಧವಾಗಿರಬೇಕು. ಕಾನೂನುಬದ್ಧ ಆಗಿರಬೇಕು. (ಲೂಕ 2:1-5) ಪತಿಪತ್ನಿ ಪರಸ್ಪರ ನಿಷ್ಠರಾಗಿರಬೇಕು. (ಇಬ್ರಿಯ 13:4) ಸಂಗಾತಿ ಹಾದರ ಮಾಡಿ ದ್ರೋಹಬಗೆದರೆ ಮಾತ್ರ ಕ್ರೈಸ್ತನೊಬ್ಬನು ವಿವಾಹ ವಿಚ್ಛೇದ ಮಾಡಿಕೊಳ್ಳಬಹುದು. ಇದು ಯೆಹೋವ ದೇವರ ನೋಟ.ಮತ್ತಾಯ 19:3-6, 9 ಓದಿ.

2. ಪತಿಪತ್ನಿ ಹೇಗಿರಬೇಕು?

ಯೆಹೋವನು ಸ್ತ್ರೀ-ಪುರುಷನನ್ನು ಸೃಷ್ಟಿಸಿದ್ದು ಅವರು ವಿವಾಹದ ಏರ್ಪಾಡಿನಲ್ಲಿ ಒಬ್ಬರಿಗೊಬ್ಬರು ಪೂರಕವಾಗಿರಬೇಕೆಂದೇ. (ಆದಿಕಾಂಡ 2:18) ಪುರುಷನು ಕುಟುಂಬದ ಯಜಮಾನ. ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸುವ, ಅವರಿಗೆ ದೇವರ ಬಗ್ಗೆ ಕಲಿಸುವ ಜವಾಬ್ದಾರಿ ಅವನಿಗಿದೆ. ಪತ್ನಿಗೆ ನಿಸ್ವಾರ್ಥ ಪ್ರೀತಿ ತೋರಿಸಬೇಕು. ಪತಿಪತ್ನಿ ಪರಸ್ಪರ ಪ್ರೀತಿ, ಗೌರವ ತೋರಿಸಬೇಕು. ಎಲ್ಲ ಪತಿಪತ್ನಿಯರು ಅಪರಿಪೂರ್ಣ ವ್ಯಕ್ತಿಗಳು, ತಪ್ಪು ಮಾಡೇ ಮಾಡುತ್ತಾರೆ. ಹಾಗಾಗಿ ಕುಟುಂಬದಲ್ಲಿ ಆನಂದ ಇರಬೇಕಾದರೆ ಒಬ್ಬರನ್ನೊಬ್ಬರು ಕ್ಷಮಿಸಲು ಸಹ ಕಲಿಯಬೇಕು.ಎಫೆಸ 4:31, 32; 5:22-25, 33; 1 ಪೇತ್ರ 3:7 ಓದಿ.

3. ವಿವಾಹದಲ್ಲಿ ಸಮಸ್ಯೆ ಎದ್ದೊಡನೆ ಸಂಗಾತಿಯನ್ನು ಬಿಟ್ಟುಬಿಡುವುದು ಸರಿಯಾ?

ದಾಂಪತ್ಯದಲ್ಲಿ ಸಮಸ್ಯೆ ತಲೆದೋರಿದಾಗ ಪ್ರೀತಿಯಿಂದ ನಿಮ್ಮಿಬ್ಬರ ಮಧ್ಯೆಯೇ ಅದನ್ನು ಬಗೆಹರಿಸಲು ಪ್ರಯತ್ನಿಸಿ. (1 ಕೊರಿಂಥ 13:4, 5) ಪ್ರತ್ಯೇಕ ಹೋಗುವುದೇ ಸಮಸ್ಯೆಗೆ ಪರಿಹಾರವೆಂದು ಎಣಿಸಬೇಡಿ. ಇದನ್ನು ಬೈಬಲ್‌ ಖಂಡಿಸುತ್ತದೆ. ಕೈಮೀರಿದ ಪರಿಸ್ಥಿತಿಯಲ್ಲಿ ಮಾತ್ರ ಕ್ರೈಸ್ತನೊಬ್ಬನು ಪ್ರತ್ಯೇಕ ಹೋಗುವುದರ ಕುರಿತು ಯೋಚಿಸಬಹುದು. ಆಗಲೂ ಹೋಗುವುದಾ ಬೇಡವಾ ಎನ್ನುವುದು ಅವನಿಗೆ/ಅವಳಿಗೆ ಬಿಟ್ಟ ವಿಷಯ.1 ಕೊರಿಂಥ 7:10-13 ಓದಿ.

4. ಮಕ್ಕಳೇ, ನೀವು ಹೇಗಿರಬೇಕೆಂದು ದೇವರ ಆಸೆ?

ನಿಮ್ಮ ಸಂತೋಷವೇ ಯೆಹೋವನ ಸಂತೋಷ. ಯೌವನವನ್ನು ಆನಂದಿಸಲು ಬೇಕಾದ ಸಲಹೆಯನ್ನು ಆತ ನಿಮಗೆ ಕೊಟ್ಟಿದ್ದಾನೆ. ಹೆತ್ತವರಿಗಿರುವ ಜ್ಞಾನ, ತಿಳಿವಳಿಕೆ, ಅನುಭವದಿಂದ ನೀವು ಪ್ರಯೋಜನ ಪಡೆಯಬೇಕು ಎನ್ನುವುದೂ ಆತನ ಆಸೆ. (ಕೊಲೊಸ್ಸೆ 3:20) ಆತನನ್ನು ಹರ್ಷಪಡಿಸಲು ನೀವು ಮಾಡುವ ಪ್ರತಿಯೊಂದು ವಿಷಯವನ್ನು ಆತ ಮೆಚ್ಚುತ್ತಾನೆ.ಪ್ರಸಂಗಿ 11:9–12:1; ಮತ್ತಾಯ 19:13-15; 21:15, 16 ಓದಿ.

5. ಹೆತ್ತವರೇ, ನಿಮ್ಮ ಮಕ್ಕಳ ಸಂತೋಷಕ್ಕೆ ನೀವು ಏನು ಮಾಡಬೇಕು?

ನೀವು ದುಡಿದು ಮಕ್ಕಳಿಗೆ ಆಹಾರ, ಬಟ್ಟೆಬರೆ, ವಸತಿ ಇವೆಲ್ಲವನ್ನು ಒದಗಿಸಬೇಕು ನಿಜ. (1 ತಿಮೊಥೆಯ 5:8) ಆದರೆ ಅವರ ಸಂತೋಷಕ್ಕೆ ಇದಷ್ಟೇ ಸಾಲದು. ದೇವರನ್ನು ಪ್ರೀತಿಸಿ ಆತ ಹೇಳುವಂತೆ ಮಾಡಲೂ ಅವರಿಗೆ ಕಲಿಸಬೇಕು. (ಎಫೆಸ 6:4) ಇದನ್ನೇ ನೀವು ಕ್ರಿಯೆಯಲ್ಲೂ ತೋರಿಸುವಾಗ ಅದು ಮಕ್ಕಳ ಎಳೇ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುತ್ತದೆ. ದೇವರ ವಾಕ್ಯವನ್ನು ಉಪಯೋಗಿಸಿ ಮಕ್ಕಳಿಗೆ ಸಲಹೆ ನೀಡುವಾಗ ಅದು ಅವರ ಆಲೋಚನಾ ಧಾಟಿಯನ್ನು ಸರಿಪಡಿಸುತ್ತದೆ.ಧರ್ಮೋಪದೇಶಕಾಂಡ 6:4-7; ಜ್ಞಾನೋಕ್ತಿ 22:6 ಓದಿ.

ಮಕ್ಕಳನ್ನು ಪ್ರೋತ್ಸಾಹಿಸಿ, ಶ್ಲಾಘಿಸಿ. ಅದು ಬಹು ಪ್ರಯೋಜನಕಾರಿ. ಅವರು ತಪ್ಪುಮಾಡಿದಾಗ ತಿದ್ದಿ. ಅಗತ್ಯವಿದ್ದರೆ ಶಿಕ್ಷೆಕೊಡಿ. ಇಂಥ ತರಬೇತು ಅವರು ತಪ್ಪು ಮಾರ್ಗ ಹಿಡಿದು ಸಂತೋಷ ಕಳಕೊಳ್ಳದಂತೆ ನೆರವಾಗುವುದು. (ಜ್ಞಾನೋಕ್ತಿ 22:15) ಹಾಗಂತ ಕ್ರೂರವಾಗಿ ಶಿಕ್ಷಿಸಬೇಡಿ.ಕೊಲೊಸ್ಸೆ 3:21 ಓದಿ.

ಹೆತ್ತವರನ್ನೂ ಮಕ್ಕಳನ್ನೂ ಮನಸ್ಸಿನಲ್ಲಿಟ್ಟು ಯೆಹೋವನ ಸಾಕ್ಷಿಗಳು ಅನೇಕ ಪುಸ್ತಕಗಳನ್ನು ಪ್ರಕಾಶಿಸಿದ್ದಾರೆ. ಇವು ಬೈಬಲ್‌ ಆಧರಿತ.ಕೀರ್ತನೆ 19:7, 11 ಓದಿ. (w11-E 10/01)

ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 14ನೇ ಅಧ್ಯಾಯ ನೋಡಿ.