ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುಟ್ಟ ಮಕ್ಕಳ ಬಾಯಿಂದ ಪ್ರೋತ್ಸಾಹದ ಮಾತುಗಳು

ಪುಟ್ಟ ಮಕ್ಕಳ ಬಾಯಿಂದ ಪ್ರೋತ್ಸಾಹದ ಮಾತುಗಳು

ಪುಟ್ಟ ಮಕ್ಕಳ ಬಾಯಿಂದ ಪ್ರೋತ್ಸಾಹದ ಮಾತುಗಳು

ಡಿಸೆಂಬರ್‌ 2009. ರಷ್ಯದ ಅತ್ಯುಚ್ಚ ನ್ಯಾಯಾಲಯ ಎತ್ತಿಹಿಡಿದ ನಿರ್ಣಯದಿಂದ ರಷ್ಯಾದ ಟಾಗನ್‌ರೋಗ್‌ನ ಯೆಹೋವನ ಸಾಕ್ಷಿಗಳ ಸ್ಥಳೀಯ ಧಾರ್ಮಿಕ ಸಂಸ್ಥೆಯ ಶಾಸನಬದ್ಧ ನೋಂದಣಿಯನ್ನು ರದ್ದುಗೊಳಿಸಲಾಯಿತು. ಅವರ ರಾಜ್ಯ ಸಭಾಗೃಹವನ್ನೂ ಅವರಿಂದ ಕಿತ್ತುಕೊಳ್ಳಲಾಯಿತು. ಮಾತ್ರವಲ್ಲ ಅವರ 34 ಪ್ರಕಾಶನಗಳು ಜನರಿಗೆ ಅಪಾಯಕಾರಿ ಎಂದು ಘೋಷಿಸಲಾಯಿತು. ಈ ಬೆಚ್ಚಿ ಬೀಳಿಸುವ ಸುದ್ದಿಯು, ತೀರ್ಪಿನಿಂದ ತೊಂದರೆಗೊಳಗಾದ ಸಾಕ್ಷಿಗಳ ಛಾಯಚಿತ್ರಗಳ ಸಮೇತ ಯೆಹೋವನ ಸಾಕ್ಷಿಗಳ ವೆಬ್‌ ಸೈಟ್‌ನಲ್ಲಿ ಬಿತ್ತರಗೊಂಡಿತು. ಅದರಲ್ಲಿ ಚಿಕ್ಕ ಮಕ್ಕಳ ಫೋಟೋಗಳು ಕೂಡ ಇದ್ದವು.

ಕೆಲವು ತಿಂಗಳುಗಳ ನಂತರ ರಷ್ಯಾದ ಯೆಹೋವನ ಸಾಕ್ಷಿಗಳ ಕಾರ್ಯಾಲಯಕ್ಕೆ ಒಂದು ಬಾಕ್ಸ್‌ನೊಂದಿಗೆ ಒಂದು ಪತ್ರ ತಲುಪಿತು. ಅದನ್ನು ಕಳುಹಿಸಿದ್ದು ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‌ನ ಒಂದು ಸಾಕ್ಷಿ ಕುಟುಂಬ. ಅವರು ರಷ್ಯಾದ ನ್ಯಾಯಾಲಯ ನೀಡಿದ ತೀರ್ಪಿನ ಸುದ್ದಿಯನ್ನು ವೆಬ್‌ ಸೈಟ್‌ನಲ್ಲಿ ನೋಡಿದ್ದರು. ಆ ಪತ್ರದಲ್ಲಿ ಅವರು ಬರೆದ್ದದ್ದೇನೆಂದರೆ “ಪ್ರೀತಿಯ ಸಹೋದರರೇ, ರಷ್ಯಾದಲ್ಲಿರುವ ಮಿತ್ರರ ನಂಬಿಕೆ ಮತ್ತು ಅವರು ಅನುಭವಿಸಿದ ಕಷ್ಟಗಳನ್ನು ನೋಡಿ ನಮ್ಮ ಮಗ ಕೋಡೀ ಮತ್ತು ಮಗಳು ಲೆರೀಸಳ ಮನ ಮಿಡಿಯಿತು. ಟಾಗನ್‌ರೋಗ್‌ನ ಮಕ್ಕಳಿಗಾಗಿ ಅವರು ಪತ್ರ ಮತ್ತು ಕಾರ್ಡ್‌ಗಳನ್ನು ಬರೆದಿದ್ದಾರೆ. ನಾವು ಅದರೊಂದಿಗೆ ಚಿಕ್ಕ ಚಿಕ್ಕ ಗಿಫ್ಟ್‌ಗಳನ್ನು ಕಳುಹಿಸಿದ್ದೇವೆ. ಇದರಿಂದ ದೂರದ ದೇಶಗಳಲ್ಲೂ ಯೆಹೋವನಿಗೆ ನಂಬಿಗಸ್ತರಾಗಿರುವ ಮತ್ತು ಅವರ ಬಗ್ಗೆ ಚಿಂತಿಸುವ ಮಕ್ಕಳಿದ್ದಾರೆಂದು ತಿಳಿಸಲು ಇಷ್ಟಪಡುತ್ತೇವೆ. ನಮ್ಮ ಮಕ್ಕಳು ಅವರಿಗೆ ತಮ್ಮ ಪ್ರೀತಿಯನ್ನು ಕಳುಹಿಸಿದ್ದಾರೆ.”

ಟಾಗನ್‌ರೋಗ್‌ನ ಮಕ್ಕಳು ತಮಗೆ ಗಿಪ್ಟ್‌ಗಳು ಸಿಕ್ಕಿದಾಗ ಅದನ್ನು ಕಳುಹಿಸಿದ ಆಸ್ಟ್ರೇಲಿಯದ ಆ ಸಾಕ್ಷಿ ಕುಟುಂಬಕ್ಕೆ ಧನ್ಯವಾದ ತಿಳಿಸಲು ಪತ್ರಗಳನ್ನು ಬರೆದರು. ಅದರಲ್ಲಿ ಮಕ್ಕಳು ಬಿಡಿಸಿದ ಮುದ್ದಾದ ಚಿತ್ರಗಳೂ ಇದ್ದವು. ಪುಟ್ಟ ಮಕ್ಕಳ ಬಾಯಿಂದ ಬಂದ ಪ್ರೋತ್ಸಾಹದ ಮಾತುಗಳಿಂದ ಮನಸ್ಪರ್ಶಗೊಂಡ ರಷ್ಯಾ ಬ್ರಾಂಚ್‌ನ ಸಹೋದರರೊಬ್ಬರು ಕೋಡೀ ಮತ್ತು ಲೆರೀಸಗೆ ಬರೆದದ್ದು: “ತಾವು ಮಾಡಿರದ ತಪ್ಪಿಗಾಗಿ ಮಕ್ಕಳೂ ದೊಡ್ಡವರೂ ಶಿಕ್ಷೆಯನ್ನು ಅನುಭವಿಸುವುದು ಎಷ್ಟೊಂದು ದುಃಖಕರ. ಟಾಗನ್‌ರೋಗ್‌ನಲ್ಲಿರುವ ನಮ್ಮ ಸಹೋದರ ಸಹೋದರಿಯರು ಯಾವುದೇ ತಪ್ಪನ್ನು ಮಾಡಿಲ್ಲವಾದರೂ ರಾಜ್ಯ ಸಭಾಗೃಹ ಅವರ ಕೈಬಿಟ್ಟು ಹೋಯಿತು. ಇದರಿಂದ ಅವರಿಗೆ ತುಂಬಾ ಬೇಸರವಾಗಿದೆ. ಪ್ರಪಂಚದ ಇನ್ನೊಂದು ಮೂಲೆಯಲ್ಲಿರುವ ಜೊತೆ ಕ್ರೈಸ್ತರು ತಮ್ಮ ಕುರಿತು ಚಿಂತಿಸುತ್ತಾರೆಂದು ತಿಳಿಯುವಾಗ ಖಂಡಿತ ಅವರು ಉತ್ತೇಜನ ಪಡೆದುಕೊಳ್ಳುವರು. ನೀವು ತೋರಿಸಿದ ಪ್ರೀತಿ ಮತ್ತು ಉದಾರಭಾವಕ್ಕೆ ಧನ್ಯವಾದಗಳು!”​—⁠ಕೀರ್ತ. 8:⁠2.

ನಾವು ಅಂತಾರಾಷ್ಟ್ರೀಯ ಕುಟುಂಬದ ಭಾಗವಾಗಿದ್ದೇವೆ. ನಾವು ಒಬ್ಬರಿಗೊಬ್ಬರು ತೋರಿಸುವ ಪ್ರೀತಿಯು ಜೀವನದ ಕಷ್ಟ, ಎಡರುತೊಡರುಗಳನ್ನು ತಾಳಿಕೊಳ್ಳಲು ಎಲ್ಲರಿಗೂ ಸಹಾಯ ಮಾಡುತ್ತದೆ. ಯೆಹೋವನ ಸಾಕ್ಷಿಗಳ ಪ್ರಕಾಶನಗಳು ಜನರಲ್ಲಿ ದ್ವೇಷವನ್ನು ಹುಟ್ಟಿಸುತ್ತವೆ ಎಂದು ನ್ಯಾಯಾಲಯವು ವಾದಿಸುತ್ತದೆ. ಆದರೆ ನಮ್ಮ ಮಕ್ಕಳು ದೇಶ, ಸಂಸ್ಕೃತಿಗಳ ಗಡಿ ಮೀರಿ ಒಬ್ಬರಿಗೊಬ್ಬರು ಪ್ರೀತಿಕಾಳಜಿ ತೋರಿಸುತ್ತಾರೆ. ಅವರ ಈ ಮನೋಭಾವ ಯೇಸುವಿನ ಈ ಮಾತನ್ನು ಸತ್ಯವೆಂದು ರುಜುಪಡಿಸುತ್ತದೆ: “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.”​—⁠ಯೋಹಾ 13:⁠35.

[ಪುಟ 32ರಲ್ಲಿರುವ ಚಿತ್ರಗಳು]

ರಷ್ಯಾದ ಮಕ್ಕಳು (ಎಡ) ಗಿಫ್ಟ್‌ಗಳನ್ನು ಕಳುಹಿಸಿದ ಆಸ್ಟ್ರೇಲಿಯದ ಮಕ್ಕಳು (ಬಲ)