ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಕ್ಕಳಿಗೆ ಕಲಿಸಿರಿ

ಒಬ್ಬ ಅಪರಾಧಿಯಿಂದ ನಮಗೇನಾದರೂ ಪಾಠ ಇದೆಯಾ?

ಒಬ್ಬ ಅಪರಾಧಿಯಿಂದ ನಮಗೇನಾದರೂ ಪಾಠ ಇದೆಯಾ?

ಈ ಚಿತ್ರದಲ್ಲಿ ಯೇಸು ಮಾತಾಡುತ್ತಿದ್ದಾನಲ್ಲಾ ಅವನೇ ಆ ಅಪರಾಧಿ. ಅವನು ಮಾಡಿದ ತಪ್ಪಿಗೆ ಅವನಿಗೀಗ ತುಂಬ ಬೇಜಾರಾಗುತ್ತಿದೆ. “ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ಜ್ಞಾಪಿಸಿಕೋ” ಅಂತ ಅವನು ಯೇಸುವಿಗೆ ಹೇಳುತ್ತಾನೆ. ಈಗ ಯೇಸು ಆ ಅಪರಾಧಿಯ ಹತ್ತಿರ ಮಾತಾಡುತ್ತಾನೆ. ನೀನದನ್ನು ಚಿತ್ರದಲ್ಲಿ ನೋಡಬಹುದು. ಯೇಸು ಅವನಿಗೆ ಏನು ಹೇಳಿದ ಅಂತ ನಿನಗೆ ಗೊತ್ತಾ? * “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಅಂತ ಮಾತು ಕೊಟ್ಟನು ಯೇಸು.

ಪರದೈಸ್‌ ಹೇಗಿರುತ್ತದೆ ಅಂತ ನೀನು ನೆನಸುತ್ತೀಯಾ?—ಅದನ್ನು ತಿಳಿದುಕೊಳ್ಳಲು ಮೊದಲ ಮನುಷ್ಯರಾದ ಆದಾಮ ಹವ್ವರಿಗಾಗಿ ದೇವರು ಪರದೈಸ್‌ ಮಾಡಿದ್ದರಲ್ಲಾ ಅದರ ಬಗ್ಗೆ ಕಲಿಯೋಣ. ಆ ಪರದೈಸ್‌ ಎಲ್ಲಿತ್ತು? ಸ್ವರ್ಗದಲ್ಲಿತ್ತಾ ಅಥವಾ ಭೂಮಿಯಲ್ಲಿತ್ತಾ?

ಅದು ಭೂಮಿಯಲ್ಲಿತ್ತು. ಆ ಅಪರಾಧಿಗೆ ಯೇಸು “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ” ಅಂತ ಹೇಳಿದ್ದರ ಅರ್ಥವೇನು? ಈ ಭೂಮಿ ಪರದೈಸಾಗುವಾಗ ಅಪರಾಧಿ ಅಲ್ಲಿ ಬದುಕುತ್ತಾನೆ ಅಂತ ಯೇಸು ಮಾತು ಕೊಟ್ಟನು. ಆ ಪರದೈಸ್‌ ಹೇಗಿರುತ್ತದೆ?—ನೋಡೋಣ.

ದೇವರು ಆದಾಮ ಮತ್ತು ಹವ್ವರನ್ನು ಸೃಷ್ಟಿಸಿದ ನಂತರ ಅವರನ್ನು ಇದೇ ಭೂಮಿ ಮೇಲೆ ಉದ್ಯಾನವನದಲ್ಲಿ ಅಂದರೆ ಪರದೈಸಿನಲ್ಲಿ ಇರುವಂತೆ ಏರ್ಪಾಡು ಮಾಡಿದನು ಅಂತ ಹೇಳುತ್ತೆ ಬೈಬಲ್‌. ಅದನ್ನು “ಏದೆನ್‌ ತೋಟ” ಅಂತ ಕರೆಯಲಾಗುತ್ತಿತ್ತು. ಆ ಸುಂದರ “ಏದೆನ್‌ ತೋಟ” ಹೇಗಿದ್ದಿರಬಹುದು ಅಂತ ಸ್ವಲ್ಪ ಯೋಚಿಸು ನೋಡೋಣ? — ಖಂಡಿತ ಆ ತೋಟ ಇವತ್ತು ಯಾರೂ ನೋಡಿರದಷ್ಟು ಸುಂದರ ಸ್ಥಳವಾಗಿತ್ತು!

ನಿನಗೇನು ಅನಿಸುತ್ತದೆ? ತಾನು ಮಾಡಿದ ತಪ್ಪಿನಿಂದಾಗಿ ಪಶ್ಚಾತ್ತಾಪಪಡುತ್ತಿರುವ ಅಪರಾಧಿ ಜತೆ ಯೇಸು ಭೂಮಿ ಮೇಲಿರುತ್ತಾನಾ?— ಇಲ್ಲ, ಸುಂದರ ತೋಟವಾಗಿರುವ ಭೂಮಿಯನ್ನು ಯೇಸು ಸ್ವರ್ಗದಿಂದ ರಾಜನಾಗಿ ಆಳುತ್ತಾನೆ. ಯೇಸು ಆ ಅಪರಾಧಿ ಜತೆ ಇರುತ್ತಾನೆ ಅಂದರೆ, ಭೂಮಿ ಸುಂದರ ತೋಟವಾಗುವಾಗ ಅಲ್ಲಿ ಆ ಅಪರಾಧಿಗೆ ಜೀವ ಕೊಟ್ಟು ಬದುಕುವ ಹಾಗೆ ಮಾಡುತ್ತಾನೆ ಅಂತ ಅರ್ಥ. ಆದರೆ ಯೇಸು ಒಬ್ಬ ಅಪರಾಧಿಯನ್ನು ಹೇಗೆ ಪರದೈಸ್‌ನ ಒಳಗೆ ಸೇರಿಸುತ್ತಾನೆ?— ಅದರ ಬಗ್ಗೆ ತಿಳಿದುಕೊಳ್ಳೋಣ.

ಆ ಅಪರಾಧಿ ಮಾಡಿದ್ದು ತುಂಬ ತಪ್ಪು ಕೆಲಸ ಅಂತ ನಮಗೆ ಗೊತ್ತು. ಅವನಂತೆ ಎಷ್ಟೋ ಜನ ಸಹ ಬೇರೆ ಬೇರೆ ರೀತಿಯ ತಪ್ಪು ಕೆಲಸ ಮಾಡಿದ್ದಾರೆ. ಇಂಥವರಲ್ಲಿ ಅನೇಕರು ತಪ್ಪು ಕೆಲಸ ಯಾಕೆ ಮಾಡಿದರೆಂದರೆ ಯೆಹೋವನ ಬಗ್ಗೆಯಾಗಲಿ ಆತನು ಮನುಷ್ಯರಿಂದ ಏನನ್ನು ಬಯಸುತ್ತಾನೆ ಎಂದಾಗಲಿ ಅವರಿಗೆ ತಿಳಿದಿರಲಿಲ್ಲ.

ಆದ್ದರಿಂದ ಆ ಅಪರಾಧಿಯನ್ನು ಮತ್ತು ಈಗಾಗಲೇ ಸತ್ತು ಹೋಗಿರುವ ದುಷ್ಟರನ್ನು ಭೂಮಿ ಪರದೈಸ್‌ ಆಗುವಾಗ ಪುನರುತ್ಥಾನ ಮಾಡಲಾಗುತ್ತೆ. ದೇವರ ಚಿತ್ತದ ಬಗ್ಗೆ ಅವರಿಗೆ ಹೇಳಿಕೊಡಲಾಗುತ್ತೆ. ಆಗ ಅವರಿಗೆ ದೇವರ ಮೇಲೆ ತಮಗಿರುವ ಪ್ರೀತಿಯನ್ನು ಸಾಬೀತುಪಡಿಸುವ ಅವಕಾಶ ಸಿಗುತ್ತೆ.

ಅವರದನ್ನು ಹೇಗೆ ಮಾಡಬಹುದು?— ದೇವರಿಗೆ ಏನು ಇಷ್ಟವೋ ಅದನ್ನೇ ಮಾಡುವ ಮೂಲಕ. ದೇವರನ್ನು ಪ್ರೀತಿಸುವ ಜನರ ಜತೆ ಪರದೈಸ್‌ನಲ್ಲಿ ಜೀವಿಸುವುದು ಎಷ್ಟು ಚೆನ್ನಾಗಿರುತ್ತೆ ಅಲ್ಲವಾ! ▪ (w13-E 06/01)

ನಿಮ್ಮ ಬೈಬಲಿನಲ್ಲೇ ಓದಿ

^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಪ್ರೋತ್ಸಾಹಿಸಿ.