ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ಬೈಬಲನ್ನು ಕೆಲವರು ಹೇಗೆ ತಪ್ಪಾದ ವಿಧದಲ್ಲಿ ಬಳಸುತ್ತಾರೆ?

ಕೆಲವರು ಫಕ್ಕನೆ ಬೈಬಲನ್ನು ತೆರೆದು, ಕಣ್ಣಿಗೆ ಬಿದ್ದ ವಚನದಲ್ಲಿ ತಮಗೆ ಬೇಕಾದ ಮಾರ್ಗದರ್ಶನೆ ಇದೆಯೆಂದು ನಂಬುತ್ತಾರೆ. ಆದರೆ ಸತ್ಯ ಕ್ರೈಸ್ತರು ಮಾಟಮಂತ್ರ ಮಾಡುವುದಿಲ್ಲ. ಬದಲಿಗೆ ನಿಷ್ಕೃಷ್ಟ ಜ್ಞಾನ ಮತ್ತು ದೈವಿಕ ಮಾರ್ಗದರ್ಶನವನ್ನು ಪಡೆಯಲು ಬೈಬಲ್‌ ಅಧ್ಯಯನ ಮಾಡುತ್ತಾರೆ.—12/15, ಪುಟ 3.

ದೇವರ ಉತ್ತಮ ಮನೆವಾರ್ತೆಯವರಾಗಿ ಎಲ್ಲ ಕ್ರೈಸ್ತರು ಯಾವ ತತ್ವಗಳನ್ನು ಮನಸ್ಸಿನಲ್ಲಿಡಬೇಕು? (1 ಪೇತ್ರ 4:10)

ಕ್ರೈಸ್ತರಾಗಿರುವ ನಾವು ದೇವರಿಗೆ ಸೇರಿದವರು, ಆದ್ದರಿಂದ ಆತನನ್ನು ಮೆಚ್ಚಿಸಬೇಕು. ನಾವೆಲ್ಲರೂ ಒಂದೇ ರೀತಿಯ ಮಟ್ಟಗಳನ್ನು ಅನುಸರಿಸುತ್ತೇವೆ. ನಾವು ನಂಬಿಗಸ್ತರೂ ಭರವಸಾರ್ಹರೂ ಆಗಿರಬೇಕು.—12/15, ಪುಟ 10-12.

ಗತಿಸಿಹೋಗಲಿರುವ “ಲೋಕ” ಯಾವುದು?

ಗತಿಸಿಹೋಗಲಿರುವ “ಲೋಕ” ಎನ್ನುವುದು ದೇವರ ನೀತಿನಿಯಮಗಳನ್ನು ಉಲ್ಲಂಘಿಸುತ್ತಾ ಬದುಕುತ್ತಿರುವ ಮಾನವ ಸಮಾಜ. (1 ಯೋಹಾ. 2:17) ಆದರೆ, ಭೂಮಿ ಹಾಗೂ ನಂಬಿಗಸ್ತ ಮಾನವರು ಬದುಕಿ ಉಳಿಯುತ್ತಾರೆ.—1/1, ಪುಟ 5-7.

ಹೇಬೆಲನು ಸತ್ತುಹೋದರೂ ಇನ್ನೂ ಮಾತಾಡುತ್ತಾನೆ ಹೇಗೆ? (ಇಬ್ರಿ. 11:4)

ನಂಬಿಕೆಯ ಮೂಲಕ. ಅವನ ನಂಬಿಕೆಯಿಂದ ನಾವು ಕಲಿಯಬಹುದು, ಮತ್ತು ಅದನ್ನು ಅನುಕರಿಸಬಹುದು. ಅವನ ಮಾದರಿ ಜೀವಂತ ಹಾಗೂ ಪ್ರಸಕ್ತ.—1/1, ಪುಟ 12.

ನಮ್ಮನ್ನು ದೇವರಿಂದ ದೂರಮಾಡದಂತೆ ನೋಡಿಕೊಳ್ಳಬೇಕಾದ ಕ್ಷೇತ್ರಗಳು ಯಾವುವು?

ಅವುಗಳಲ್ಲಿ ಕೆಲವು: ನಮ್ಮ ಉದ್ಯೋಗ ಮತ್ತು ಜೀವನವೃತ್ತಿ, ನಾವು ಆರಿಸಿಕೊಳ್ಳುವ ಮನರಂಜನೆ ಮತ್ತು ವಿನೋದವಿಹಾರ, ಬಹಿಷ್ಕೃತ ಸಂಬಂಧಿಯೊಂದಿಗಿನ ಬಾಂಧವ್ಯ, ಆಧುನಿಕ ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ, ನಮ್ಮ ಆರೋಗ್ಯದ ಬಗ್ಗೆ ಚಿಂತೆ, ಹಣದ ಬಗ್ಗೆ ತಪ್ಪಾದ ದೃಷ್ಟಿಕೋನ, ನಮ್ಮ ಸ್ಥಾನಮಾನಕ್ಕೆ ಹೆಚ್ಚು ಮಹತ್ವ ಕೊಡುವುದು.—1/15, ಪುಟ 12-21.

ಮೋಶೆಯ ನಮ್ರಭಾವದಿಂದ ನಾವೇನು ಕಲಿಯಬಹುದು?

ಅಧಿಕಾರ ಸಿಕ್ಕಿದಾಗ ಮೋಶೆ ಅಹಂಕಾರಿಯಾಗಲಿಲ್ಲ. ಅವನು ತನ್ನ ಮೇಲಲ್ಲ, ದೇವರ ಮೇಲೆ ಭರವಸೆಯಿಟ್ಟನು. ನಾವು ಸಹ ಅಧಿಕಾರ, ಪ್ರತಿಭೆ ಇದ್ದರೂ ನಮ್ಮ ಮನಸ್ಸಿನೊಳಗೆ ಅಹಂ ಸುಳಿಯದಂತೆ ನೋಡಿಕೊಳ್ಳಬೇಕು. ಯೆಹೋವನಲ್ಲಿ ಭರವಸೆಯಿಡಬೇಕು. (ಜ್ಞಾನೋ. 3:5, 6)—4/1, ಪುಟ 5.

ಇಸ್ರಾಯೇಲ್ಯರು ‘ಹೃದಯ ಸುನ್ನತಿಯಿಲ್ಲದವರಾಗಿದ್ದರು’ ಎಂಬುದರ ಅರ್ಥವೇನು? (ಯೆರೆ. 9:26)

ಅವರು ಹಠಮಾರಿತನದಿಂದ ಯೆಹೋವನ ವಿರುದ್ಧ ತಿರುಗಿಬಿದ್ದಿದ್ದರು. ಅವರು ದೇವರ ಮಾತಿಗೆ ತಮ್ಮ ಹೃದಯ ಸ್ಪಂದಿಸದಂತೆ ಮಾಡಿದ ವಿಷಯಗಳನ್ನು ತೆಗೆದುಹಾಕಬೇಕಿತ್ತು, ಅಂದರೆ ದೇವರ ಚಿತ್ತಕ್ಕೆ ತದ್ವಿರುದ್ಧವಾಗಿರುವ ಯೋಚನೆಗಳನ್ನು, ಇಚ್ಛೆಗಳನ್ನು ಹಾಗೂ ಇರಾದೆಗಳನ್ನು ಕಿತ್ತೆಸೆಯಬೇಕಿತ್ತು. (ಯೆರೆ. 5:23, 24)—3/15, ಪುಟ 9-10.

ಯೆಹೋವನ ಸಂಘಟನೆಯ ಭೂಭಾಗದಲ್ಲಿ ಏನೆಲ್ಲ ಸೇರಿದೆ?

ಅದರಲ್ಲಿ ಆಡಳಿತ ಮಂಡಲಿ, ಬ್ರಾಂಚ್‌ ಕಮಿಟಿಗಳು, ಸಂಚರಣ ಮೇಲ್ವಿಚಾರಕರು, ಹಿರಿಯರ ಮಂಡಲಿಗಳು, ಸಭೆಗಳು, ಪ್ರಚಾರಕರು ಸೇರಿದ್ದಾರೆ.—4/15, ಪುಟ 29.

ಇಸ್ರಾಯೇಲ್ಯರು ದುಷ್ಕರ್ಮಿಗಳನ್ನು ಕಂಬದ ಮೇಲೆ ತೂಗುಹಾಕಿ ಕೊಲ್ಲುತ್ತಿದ್ದರಾ?

ಇಲ್ಲ. ಪ್ರಾಚೀನ ಕಾಲದಲ್ಲಿ ಬೇರೆ ಜನಾಂಗಗಳವರು ಹೀಗೆ ಮಾಡುತ್ತಿದ್ದರಾದರೂ ಇಸ್ರಾಯೇಲ್ಯರು ಮಾಡುತ್ತಿರಲಿಲ್ಲ. ಇಸ್ರಾಯೇಲ್ಯರಲ್ಲಿ ದುಷ್ಕರ್ಮಿಗಳನ್ನು ಮೊದಲು ಕಲ್ಲೆಸೆದು ಕೊಲ್ಲಲಾಗುತ್ತಿತ್ತು. (ಯಾಜ. 20:2, 27) ನಂತರ ಆ ವ್ಯಕ್ತಿಯ ಶವವನ್ನು, ಜನರಿಗೆ ಎಚ್ಚರಿಕೆಯಾಗಿ ಕಂಬಕ್ಕೆ ತೂಗುಹಾಕಲಾಗುತ್ತಿತ್ತು.—5/15, ಪುಟ 13.