ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ವಾಹ್‌! ಚಿತ್ರ ಎಷ್ಟು ಚೆನ್ನಾಗಿದೆ!”

“ವಾಹ್‌! ಚಿತ್ರ ಎಷ್ಟು ಚೆನ್ನಾಗಿದೆ!”

“ವಾಹ್‌! ಚಿತ್ರ ಎಷ್ಟು ಚೆನ್ನಾಗಿದೆ!”

ಹೊಸ ಅಧ್ಯಯನ ಆವೃತ್ತಿಗಳು ಸಿಕ್ಕಿದಾಗ, ಅದರಲ್ಲಿರುವ ಚಿತ್ರಗಳನ್ನು ನೋಡಿ ಎಷ್ಟೋ ಸಾರಿ ನೀವು ಸಹ ಈ ರೀತಿ ಹೇಳಿದ್ದೀರಲ್ವಾ? ತುಂಬ ಜಾಗ್ರತೆಯಿಂದ ಶ್ರಮವಹಿಸಿ ಬಿಡಿಸಿದ ಸುಂದರ ಚಿತ್ರಗಳನ್ನು ಮತ್ತು ಛಾಯಾಚಿತ್ರಗಳನ್ನು ಖಂಡಿತ ಒಂದು ಉದ್ದೇಶಕ್ಕಾಗಿಯೇ ಕೊಟ್ಟಿರುತ್ತಾರೆ. ನಮಗೆ ಯೋಚಿಸಲು ಮತ್ತು ಅವುಗಳಲ್ಲಿರುವ ಭಾವನೆಗಳನ್ನು ಚೆನ್ನಾಗಿ ಗ್ರಹಿಸಲು ಸಹಾಯಮಾಡುವ ಕಲಿಕಾ ಮಾಧ್ಯಮಗಳವು. ಅದರಲ್ಲೂ ನಾವು ಕಾವಲಿನಬುರುಜು ಅಧ್ಯಯನಕ್ಕಾಗಿ ತಯಾರಿಮಾಡುವಾಗ ಮತ್ತು ಅಧ್ಯಯನದಲ್ಲಿ ಭಾಗವಹಿಸುವಾಗ ನಮಗವು ತುಂಬ ಸಹಾಯಕಾರಿ.

ಉದಾಹರಣೆಗೆ, ಪ್ರತಿಯೊಂದು ಅಧ್ಯಯನ ಲೇಖನದ ಆರಂಭದಲ್ಲಿ ಬರುವ ಚಿತ್ರವನ್ನು ಲೇಖನದಲ್ಲಿ ಏಕೆ ಕೊಟ್ಟಿದ್ದಾರೆ ಎಂದು ಸ್ವಲ್ಪ ಯೋಚಿಸಿ. ಅದು ಯಾರನ್ನು ಅಥವಾ ಯಾವುದನ್ನು ಚಿತ್ರಿಸುತ್ತೆ? ಅದು ಲೇಖನದ ಶೀರ್ಷಿಕೆ, ಮುಖ್ಯ ವಚನಕ್ಕೆ ಹೇಗೆ ಸಂಬಂಧಿಸಿದೆ? ಪ್ರತಿಯೊಂದು ಚಿತ್ರ ನೋಡಿದಾಗ ಅದು ಹೇಗೆ ಲೇಖನದಲ್ಲಿರುವ ವಿಷಯಕ್ಕೆ ಮತ್ತು ನಿಮ್ಮ ಜೀವನಕ್ಕೆ ಸಂಬಂಧಿಸಿದೆ ಎಂದು ಯೋಚಿಸಿ.

ಕಾವಲಿನಬುರುಜು ಅಧ್ಯಯನ ನಿರ್ವಾಹಕ ಪ್ರತಿಯೊಂದು ಚಿತ್ರದ ಬಗ್ಗೆ ಹೇಳಿಕೆ ನೀಡುವಂತೆ ಸಭಿಕರಿಗೆ ಅವಕಾಶ ಮಾಡಿಕೊಡುತ್ತಾರೆ. ಅದು ಅಧ್ಯಯನಕ್ಕೆ ಹೇಗೆ ಸಂಬಂಧಿಸಿದೆ ಮತ್ತು ಸಭಿಕರ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ಹೇಳಲು ಆಮಂತ್ರಿಸುತ್ತಾರೆ. ಕೆಲವು ಸಲ ಚಿತ್ರದ ಪಕ್ಕ ಅಥವಾ ಕೆಳಗೆ ವಿವರಣಾ ಬರಹವಿರುತ್ತೆ. ಅದು, ಚಿತ್ರ ಯಾವ ಪ್ಯಾರಾಗೆ ಸಂಬಂಧಿಸಿದೆ ಎಂದು ತಿಳಿಸುತ್ತೆ. ಇನ್ನು ಕೆಲವು ಸಲ ಚಿತ್ರವನ್ನು ಯಾವ ಪ್ಯಾರಾದಲ್ಲಿ ಚರ್ಚಿಸಬೇಕೆಂದು ನಿರ್ವಾಹಕರೇ ನಿರ್ಣಯಿಸುತ್ತಾರೆ. ಹೀಗೆ ದೇವರ ವಾಕ್ಯದಲ್ಲಿರುವ ವಿಷಯವನ್ನು ಚೆನ್ನಾಗಿ ಚಿತ್ರಿಸಿಕೊಂಡು ಅರ್ಥಮಾಡಿಕೊಳ್ಳಲು ಓದುಗರಿಗೆ ನೆರವಾಗುತ್ತೆ.

ಒಬ್ಬ ಸಹೋದರ ಹೀಗಂದರು: “ಚೆನ್ನಾಗಿ ಬರೆದಿರುವ ಲೇಖನದಲ್ಲಿ ಸುಂದರ ಚಿತ್ರಗಳು, ಚಿನ್ನದ ಹಾರಕ್ಕೆ ಮುತ್ತು ಪೋಣಿಸಿದಂತೆ.”

[ಪುಟ 32ರಲ್ಲಿರುವ ಚಿತ್ರ]

[ಪುಟ 32ರಲ್ಲಿರುವ ಚಿತ್ರ]

[ಪುಟ 32ರಲ್ಲಿರುವ ಚಿತ್ರ]