ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖ್ಯ ವಿಷಯ | ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು

ದೇವರಿಗೆ ಹೆಸರಿಲ್ಲ ಅನ್ನೋ ಸುಳ್ಳು

ದೇವರಿಗೆ ಹೆಸರಿಲ್ಲ ಅನ್ನೋ ಸುಳ್ಳು

ಅನೇಕರು ಏನು ನಂಬುತ್ತಾರೆ

“ದೇವರ ಹೆಸರನ್ನ ಬಳಸೋಕೆ ನಮಗೆ ಅನುಮತಿ ಸಿಕ್ಕಿಲ್ಲ, ಒಂದುವೇಳೆ ಸಿಕ್ಕಿದರೂ ಆ ಹೆಸರು ಏನು ಅಂತ ನಮಗೆ ಗೊತ್ತಿಲ್ಲ.”—ಪ್ರೊಫೆಸರ್‌ ಡೇವಿಡ್‌ ಕನಿಂಗ್‌ಹ್ಯಾಮ್‌, ತಿಯೊಲಾಜಿಕಲ್‌ ಸ್ಟಡಿಸ್‌.

ಬೈಬಲ್‌ನಲ್ಲಿರುವ ಸತ್ಯ

ದೇವರು ಹೀಗೆ ಹೇಳ್ತಾರೆ: “ನಾನು ಯೆಹೋವ. ಇದು ನನ್ನ ಹೆಸ್ರು.” (ಯೆಶಾಯ 42:8) ಯೆಹೋವ ಅನ್ನೋದು ಇಬ್ರಿಯ ಭಾಷೆಯ ಹೆಸರು. ಅದರ ಅರ್ಥ “ಆತನು ಆಗುವಂತೆ ಮಾಡ್ತಾನೆ.”—ಆದಿಕಾಂಡ 2:4, ಪಾದಟಿಪ್ಪಣಿ.

ನಾವು ಆತನ ಹೆಸರನ್ನ ಬಳಸಬೇಕು ಅನ್ನೋದು ಆತನ ಆಸೆ. ಯೆಹೋವನಿಗೆ ಧನ್ಯವಾದ ಹೇಳಿ, ಆತನ ಹೆಸ್ರಲ್ಲಿ ಪ್ರಾರ್ಥಿಸಿ, ಆತನ ಕೆಲಸಗಳ ಬಗ್ಗೆ ಜನಾಂಗಗಳಿಗೆ ಹೇಳಿ! ಆತನ ಹೆಸ್ರು ಶ್ರೇಷ್ಠ ಅಂತ ಪ್ರಕಟಿಸಿ.”—ಯೆಶಾಯ 12:4.

ಯೇಸು ದೇವರ ಹೆಸರನ್ನ ಬಳಸಿದನು. ಆತನ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೀಗೆ ಹೇಳಿದನು, “ನಾನು ನಿನ್ನ ಹೆಸ್ರನ್ನ ಇವ್ರಿಗೆ [ಯೇಸುವಿನ ಶಿಷ್ಯರಿಗೆ] ಚೆನ್ನಾಗಿ ಹೇಳ್ಕೊಟ್ಟಿದ್ದೀನಿ, ಇನ್ನೂ ಹೇಳ್ಕೊಡ್ತೀನಿ.” ಯೇಸು ದೇವರ ಪವಿತ್ರ ಹೆಸರನ್ನ ಯಾಕೆ ಬಳಸಿದನು? ಯೇಸು ಮುಂದುವರಿಸಿ ಹೇಳಿದ್ದು: “ಯಾಕಂದ್ರೆ ನೀನು ನನ್ನನ್ನ ಪ್ರೀತಿಸಿದ ಹಾಗೆ ಇವ್ರೂ ಒಬ್ಬರನ್ನೊಬ್ರು ಪ್ರೀತಿಸಬೇಕು ಮತ್ತು ನಾನು ಇವ್ರ ಜೊತೆ ಆಪ್ತನಾಗಿ ಇರಬೇಕು.”—ಯೋಹಾನ 17:26.

ಇದು ಯಾಕೆ ಮುಖ್ಯ

“ಒಬ್ಬ ವ್ಯಕ್ತಿಗೆ ದೇವರ ಹೆಸರು ಗೊತ್ತಿಲ್ಲ ಅಂದರೆ ಆತನು ದೇವರನ್ನ ಒಬ್ಬ ವ್ಯಕ್ತಿ ತರ ನೋಡಲ್ಲ, ಆತನನ್ನ ಪ್ರೀತಿಸಲ್ಲ, ಆತನನ್ನ ಒಂದು ಶಕ್ತಿ ತರ ನೋಡುತ್ತಾನೆ” ಅಂತ ದೇವತಾಶಾಸ್ತ್ರಜ್ಞ ವಾಲ್ಟರ್‌ ಲೋರಿ ಬರೆದರು.

ದೇವರ ವೈಯಕ್ತಿಕ ಹೆಸರನ್ನ ಮರೆಮಾಚೋದು ಅಥವಾ ಬದಲಾಯಿಸೋದು ಬೈಬಲಿನಿಂದ ಆತನ ಹೆಸರನ್ನ ತೆಗೆದುಹಾಕಿದ ಹಾಗೆ.

ವಿಕ್ಟರ್‌ ಪ್ರತಿವಾರ ಚರ್ಚಿಗೆ ಹೋಗುತ್ತಿದ್ದ. ಆದರೆ ಆತನಿಗೆ ದೇವರ ಬಗ್ಗೆ ಏನೂ ಗೊತ್ತಿರಲಿಲ್ಲ. ಆತನು ಹೇಳೋದು, “ನನಗೆ ದೇವರ ಬಗ್ಗೆ ಮೊದಲನೇ ಸಲ ಪರಿಚಯ ಆಗಿದ್ದು ಆತನ ಹೆಸರು ಯೆಹೋವ ಅಂತ ಗೊತ್ತಾದಾಗ. ಆತನ ಬಗ್ಗೆ ತುಂಬಾ ಕೇಳಿದ್ದೆ ಆದರೆ ಆತನು ನಿಜ ವ್ಯಕ್ತಿ ಅಂತ ನಂಬಿದ್ದು ಇದೇ ಮೊದಲನೇ ಸಲ. ನಾನು ಆತನನ್ನ ಒಬ್ಬ ನೈಜ ವ್ಯಕ್ತಿಯಾಗಿ ನೋಡಲು ಶುರು ಮಾಡ್ದೆ. ಆತನ ಜೊತೆಗೆ ಒಂದು ಆಪ್ತ ಸಂಬಂಧವನ್ನ ಬೆಳೆಸಿಕೊಂಡೆ.”

ಯಾರು ಯೆಹೋವ ದೇವರ ಹೆಸರನ್ನ ಬಳಸುತ್ತಾರೋ ಅಂಥವರಿಗೆ ಯೆಹೋವನು ಹತ್ತಿರ ಆಗುತ್ತಾನೆ. ಯಾರು ಆತನ ಹೆಸರನ್ನ ಧ್ಯಾನಿಸುತ್ತಾರೋ ದೇವರು ಅವರಿಗೆ ಹೀಗೆ ಮಾತು ಕೊಟ್ಟಿದ್ದಾನೆ: “ಒಬ್ಬ ತಂದೆ ತನ್ನ ವಿಧೇಯ ಮಗನಿಗೆ ಕನಿಕರ ತೋರಿಸೋ ಹಾಗೆ ನಾನು ಅವ್ರಿಗೆ ಕನಿಕರ ತೋರಿಸ್ತೀನಿ.” (ಮಲಾಕಿ 3:16, 17) ದೇವರ ಹೆಸರು ಹೇಳೋ ಪ್ರತಿಯೊಬ್ಬರಿಗೆ ಬೈಬಲ್‌ ಹೀಗೆ ಹೇಳುತ್ತೆ: “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”—ರೋಮನ್ನರಿಗೆ 10:13