ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಳೆಯ ಬೈಬಲ್‌ ಹಸ್ತಪ್ರತಿಗಳಲ್ಲಿ ದೇವರ ಹೆಸರು

ಬೈಬಲ್‌ ಏನು ಹೇಳುತ್ತದೆ?

ಬೈಬಲ್‌ ಏನು ಹೇಳುತ್ತದೆ?

ದೇವರಿಗೆ ಹೆಸರಿದೆಯಾ?

ಅನೇಕರ ನಂಬಿಕೆ ಕೆಲವರು ದೇವರಿಗೆ ಹೆಸರಿಲ್ಲ ಅಂತ ಹೇಳಿದರೆ, ಇನ್ನು ಕೆಲವರು ದೇವರು ಅಥವಾ ಕರ್ತನು ಎನ್ನುವುದೇ ಆತನ ಹೆಸರು ಅಂತ ಹೇಳುತ್ತಾರೆ, ಮತ್ತೆ ಕೆಲವರು ಆತನಿಗೆ ಹತ್ತಾರು ಹೆಸರುಗಳಿವೆ ಅಂತ ಹೇಳುತ್ತಾರೆ. ನೀವೇನು ನಂಬುತ್ತೀರಿ?

ಬೈಬಲ್‌ ಏನನ್ನುತ್ತದೆ

“ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” —ಕೀರ್ತನೆ 83:18.

ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?

  • ದೇವರಿಗೆ ಅನೇಕ ಬಿರುದುಗಳಿವೆಯಾದರೂ ಆತನಿಗೆ ಒಂದು ಹೆಸರಿದೆ.—ವಿಮೋಚನಕಾಂಡ 3:15.

  • ದೇವರು ನಿಗೂಢ ವ್ಯಕ್ತಿಯಲ್ಲ, ಆತನ ಬಗ್ಗೆ ನಾವು ತಿಳಿದುಕೊಳ್ಳಬೇಕೆಂದು ಆತನು ಬಯಸುತ್ತಾನೆ.—ಅಪೊಸ್ತಲರ ಕಾರ್ಯಗಳು 17:27

  • ದೇವರೊಟ್ಟಿಗೆ ಸ್ನೇಹಿತರಾಗಲು ಮೊದಲು ಆತನ ಹೆಸರನ್ನು ತಿಳಿದುಕೊಳ್ಳಬೇಕು.—ಯಾಕೋಬ 4:8

ದೇವರ ಹೆಸರನ್ನು ಹೇಳುವುದು ತಪ್ಪಾ?

ನೀವೇನು ನೆನಸುತ್ತೀರಿ?

  • ಸರಿ

  • ತಪ್ಪು

  • ಅವರವರ ಇಷ್ಟ

ಬೈಬಲ್‌ ಏನನ್ನುತ್ತದೆ

“ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು.” (ವಿಮೋಚನಕಾಂಡ 20:7) ಅಗೌರವದ ವಿಷಯಗಳಿಗೆ ಮಾತ್ರ ದೇವರ ಹೆಸರನ್ನು ಉಪಯೋಗಿಸಬಾರದು.—ಯೆರೆಮೀಯ 29:9.

ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?

  • ಯೇಸುವಿಗೆ ದೇವರ ಹೆಸರು ಗೊತ್ತಿತ್ತು ಮತ್ತು ಆತನು ಅದನ್ನು ಉಪಯೋಗಿಸಿದನು.—ಯೋಹಾನ 17:25, 26.

  • ತನ್ನ ಹೆಸರಿಡಿದು ಕರೆಯಬೇಕು ಎನ್ನುವುದು ದೇವರ ಬಯಕೆ.—ಕೀರ್ತನೆ 105:1.

  • ಜನರು ದೇವರ ಹೆಸರನ್ನು ಮರೆತು ಹೋಗಬೇಕು ಅಂತ ದೇವರ ವೈರಿಗಳು ಪ್ರಯತ್ನಗಳನ್ನು ಮಾಡುತ್ತಾರೆ.—ಯೆರೆಮೀಯ 23:26. (w16-E No. 3)