ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಏನು ಹೇಳುತ್ತದೆ?

ಬೈಬಲ್‌ ಏನು ಹೇಳುತ್ತದೆ?

ದೇವರ ರಾಜ್ಯ ಅಂದರೇನು?

ಅನೇಕರ ನಂಬಿಕೆ ಅದು ವ್ಯಕ್ತಿಯೊಬ್ಬನ ಹೃದಯದಲ್ಲಿನ ಒಳ್ಳೇ ಸ್ಥಿತಿ. ಇನ್ನೂ ಕೆಲವರ ಪ್ರಕಾರ, ಮನುಷ್ಯರ ಪ್ರಯತ್ನದಿಂದ ಲೋಕದಲ್ಲಿ ಶಾಂತಿ ಮತ್ತು ಐಕ್ಯತೆಯ ಪ್ರತಿಫಲವೇ ದೇವರ ರಾಜ್ಯ.

ನೀವೇನು ನಂಬುತ್ತೀರಿ?

ಬೈಬಲ್‌ ಏನನ್ನುತ್ತದೆ

‘ಪರಲೋಕ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, . . . ಆ [ಮಾನವ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.’ (ದಾನಿಯೇಲ 2:44) ಹಾಗಾಗಿ, ದೇವರ ರಾಜ್ಯ ಒಂದು ನಿಜವಾದ ಸರ್ಕಾರವಾಗಿದೆ.

ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?

  • ದೇವರ ರಾಜ್ಯ ಸ್ವರ್ಗದಿಂದ ಆಳುತ್ತದೆ.—ಮತ್ತಾಯ 10:7; ಲೂಕ 10:9.

  • ಈ ರಾಜ್ಯದ ಮೂಲಕ ದೇವರು ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿ ತನ್ನ ಉದ್ದೇಶವನ್ನು ನೆರವೇರಿಸುವನು.—ಮತ್ತಾಯ 6:10.

ದೇವರ ರಾಜ್ಯ ಯಾವಾಗ ಬರುತ್ತದೆ?

ನೀವೇನು ನೆನಸುತ್ತೀರಿ?

  • ಯಾರಿಗೂ ಗೊತ್ತಿಲ್ಲ

  • ಬೇಗ ಬರುತ್ತೆ

  • ಬರೋದೇ ಇಲ್ಲ

ಬೈಬಲ್‌ ಏನನ್ನುತ್ತದೆ

“ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾಯ 24:14) ದೇವರ ರಾಜ್ಯದ ಸುವಾರ್ತೆ ಎಲ್ಲಾ ಕಡೆ ಸಾರಿದ ನಂತರ ದೇವರ ರಾಜ್ಯ ಬರುವುದು. ಅದು ಇಂದಿರುವ ಎಲ್ಲಾ ಕೆಟ್ಟ ಪರಿಸ್ಥಿತಿಯನ್ನು ತೆಗೆದುಹಾಕುವುದು.

ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?

  • ದೇವರ ರಾಜ್ಯ ಯಾವಾಗ ಬರುತ್ತೆ ಅಂತ ಭೂಮಿಯ ಮೇಲಿರುವ ಯಾರಿಗೂ ಗೊತ್ತಿಲ್ಲ.—ಮತ್ತಾಯ 24:36.

  • ಬೈಬಲ್‌ ಪ್ರವಾದನೆಗಳು ತಿಳಿಸುವ ಪ್ರಕಾರ ದೇವರ ರಾಜ್ಯ ತುಂಬ ಬೇಗನೆ ಬರುತ್ತದೆ.—ಮತ್ತಾಯ 24:3, 7, 12. (wp16-E No. 5)