ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು?

ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು?

ಒಮ್ಮೆ ಯೇಸು ಹೀಗೆ ಹೇಳಿದನು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕಾ. 20:35) ಇದು ಮುಖ್ಯವಾಗಿ ಯೆಹೋವನಿಗೆ ನಾವು ಉಡುಗೊರೆ ಕೊಡುವ ವಿಷಯಕ್ಕೆ ಅನ್ವಯಿಸುತ್ತದೆ. ಯಾಕೆ? ಯೆಹೋವನು ನಮಗೆ ಅನೇಕ ಉಡುಗೊರೆಗಳನ್ನು ಕೊಟ್ಟಿದ್ದಾನೆ. ಅದರಿಂದ ನಮಗೆ ತುಂಬ ಸಂತೋಷ ಆಗಿದೆ. ಆದರೆ ನಾವು ಯೆಹೋವನಿಗೆ ಉಡುಗೊರೆ ಕೊಡುವುದರಿಂದ ಇನ್ನೂ ಹೆಚ್ಚು ಸಂತೋಷ ಆಗುತ್ತದೆ. ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು? ಜ್ಞಾನೋಕ್ತಿ 3:9 “ನಿನ್ನ ಆದಾಯದಿಂದ . . . ಯೆಹೋವನನ್ನು ಸನ್ಮಾನಿಸು” ಎಂದು ಹೇಳುತ್ತದೆ. ಅಂದರೆ ನಮ್ಮ ಸಮಯ, ಶಕ್ತಿ, ಪ್ರತಿಭೆ ಮತ್ತು ಆಸ್ತಿ-ಪಾಸ್ತಿಗಳಿಂದ ನಾವು ಯೆಹೋವನನ್ನು ಸನ್ಮಾನಿಸಬಹುದು. ಸತ್ಯಾರಾಧನೆಗಾಗಿ ಇಂಥ ವಿಷಯಗಳನ್ನು ನಾವು ಬಳಸಿದರೆ ಯೆಹೋವನಿಗೆ ಉಡುಗೊರೆ ಕೊಟ್ಟಂತೆ ಆಗುತ್ತದೆ. ಇದರಿಂದ ನಮಗೆ ತುಂಬ ಸಂತೋಷ ಆಗುತ್ತದೆ.

ಯೆಹೋವನಿಗೆ ಉಡುಗೊರೆ ಕೊಡುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಕಾಣಿಕೆ ಕೊಡಲು ನಾವು ಏನು ಮಾಡಬೇಕು? ಕಾಣಿಕೆಯಾಗಿ ‘ಏನನ್ನಾದರೂ ತೆಗೆದಿಡಿ’ ಎಂದು ಅಪೊಸ್ತಲ ಪೌಲನು ಕೊರಿಂಥದವರಿಗೆ ಹೇಳಿದನು. (1 ಕೊರಿಂ. 16:2) ನೀವಿರುವ ಸ್ಥಳದಲ್ಲಿ ಕಾಣಿಕೆಯನ್ನು ಯಾವ ವಿಧಗಳಲ್ಲಿ ಕೊಡಬಹುದೆಂಬ ಹೆಚ್ಚಿನ ಮಾಹಿತಿ ನಿಮಗೆ ಬೇಕಾ? ಹಾಗಾದರೆ ಕೆಳಗಿರುವ ಚೌಕ ನೋಡಿ.

ಆನ್‌ಲೈನ್‌ನಲ್ಲಿ ಕಾಣಿಕೆ ಕೊಡುವ ವ್ಯವಸ್ಥೆ ಎಲ್ಲ ದೇಶಗಳಲ್ಲಿ ಇಲ್ಲ. ಆದರೆ ಬೇರೆ ಯಾವ ವಿಧಾನಗಳ ಮೂಲಕ ಕಾಣಿಕೆ ಕೊಡಬಹುದು ಎಂಬ ಮಾಹಿತಿ ಕಾಣಿಕೆ ಬಗ್ಗೆ ಇರುವ ವೆಬ್‌ ಪೇಜಲ್ಲಿ ಸಿಗುತ್ತದೆ. ಕೆಲವು ದೇಶಗಳಲ್ಲಿ, ಈ ವೆಬ್‌ ಪೇಜಲ್ಲಿ ಕಾಣಿಕೆ ಬಗ್ಗೆ ಸಾಮಾನ್ಯವಾಗಿ ಬರುವ ಪ್ರಶ್ನೆಗಳಿಗೆ ಉತ್ತರ ಇದೆ.