ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 20-21

“ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು”

“ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು”

20:28

ಜನರು ತಮ್ಮನ್ನು ಗಮನಿಸಬೇಕು ಮತ್ತು ಪೇಟೆಯಲ್ಲಿ ತಮ್ಮನ್ನು ನೋಡಿ ವಂದಿಸಬೇಕು ಎಂದು ಗರ್ವಿಷ್ಠ ಶಾಸ್ತ್ರಿಗಳು ಮತ್ತು ಫರಿಸಾಯರು ಬಯಸುತ್ತಿದ್ದರು

ಗರ್ವಿಷ್ಠ ಶಾಸ್ತ್ರಿಗಳು ಮತ್ತು ಫರಿಸಾಯರು ಜನರು ತಮ್ಮನ್ನು ಮೆಚ್ಚಬೇಕು, ತಮಗೇ ಪ್ರಾಮುಖ್ಯತೆ ಕೊಡಬೇಕು ಎಂದು ಬಯಸಿದರು. (ಮತ್ತಾ 23:5-7) ಆದರೆ ಯೇಸು ಅವರಂತೆ ಇರಲಿಲ್ಲ. ‘ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೆ’ ಬಂದನು. (ಮತ್ತಾ 20:28) ನಾವು ದೇವರ ಆರಾಧನೆಯಲ್ಲಿ ನಮಗೆ ಹೆಸರು, ಹೊಗಳಿಕೆ ಸಿಗುವಂಥ ಅಂಶಗಳನ್ನೇ ಹೆಚ್ಚಾಗಿ ಮಾಡುತ್ತೇವಾ? ನಾವು ಯೆಹೋವನಿಂದ ಒಳ್ಳೇ ಹೆಸರು ಪಡೆಯಬೇಕಾದರೆ ಯೇಸುವಿನಂತೆ ಇರಬೇಕು ಮತ್ತು ಬೇರೆಯವರಿಗೆ ಸಹಾಯ ಮಾಡಲು ನಮ್ಮಿಂದ ಆಗುವುದನ್ನೆಲ್ಲ ಮಾಡಬೇಕು. ನಾವು ಮಾಡುವ ಇಂಥ ಕೆಲಸಗಳು ಹೆಚ್ಚಾಗಿ ಬೇರೆಯವರ ಗಮನಕ್ಕೆ ಬರುವುದಿಲ್ಲ, ಯೆಹೋವನು ಮಾತ್ರ ಅವುಗಳನ್ನು ಗಮನಿಸುತ್ತಾನೆ. (ಮತ್ತಾ 6:1-4) ದೀನತೆ ಇರುವ ಸೇವಕರು . . .

  • ರಾಜ್ಯ ಸಭಾಗೃಹವನ್ನು ಶುಚಿಮಾಡುವುದರಲ್ಲಿ, ಸುಸ್ಥಿತಿಯಲ್ಲಿಡುವುದರಲ್ಲಿ ಕೈಜೋಡಿಸುತ್ತಾರೆ

  • ವಯಸ್ಸಾದವರಿಗೆ ಮತ್ತು ಬೇರೆಯವರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ

  • ದೇವರ ರಾಜ್ಯದ ಕೆಲಸಗಳಿಗೆ ಕಾಣಿಕೆ ಕೊಡುತ್ತಾರೆ