ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ JW.ORG ವೆಬ್‌ಸೈಟಿನ ಮುಖಪುಟ ಬಳಸಿ

ಸೇವೆಯಲ್ಲಿ JW.ORG ವೆಬ್‌ಸೈಟಿನ ಮುಖಪುಟ ಬಳಸಿ

ನಮ್ಮ ವೆಬ್‌ಸೈಟಿನ ಮುಖಪುಟದಲ್ಲಿ ಒಳ್ಳೇ ಮನಸ್ಸಿನ ಜನ್ರಿಗೆ ಇಷ್ಟ ಆಗೋ ಲೇಖನಗಳು, ವಿಡಿಯೋಗಳು ಇರುತ್ತೆ. (ಅಕಾ 13:48) ಹೆಚ್ಚಾಗಿ ಜನ್ರ ಬಾಯಲ್ಲಿರೋ ಅಥವಾ ನ್ಯೂಸಲ್ಲಿ ಹರಿದಾಡ್ತಿರೋ ವಿಷ್ಯಗಳೂ ಅದ್ರಲ್ಲಿ ಇರುತ್ತೆ.

ಈ ಮುಖಪುಟವನ್ನ ಸೇವೆಯಲ್ಲಿ ಹೇಗೆ ಬಳಸಬಹುದು?

  • ನಮ್ಮ ವೆಬ್‌ಸೈಟನ್ನ ಆಗಾಗ ನೋಡ್ತಾ ಇರಿ. ಮುಖಪುಟದಲ್ಲಿ “ಆಯ್ದ ವಿಷಯಗಳು” ಅನ್ನೋ ಭಾಗದಲ್ಲಿರೋ ಲೇಖನಗಳನ್ನ ನೋಡಿ. ಅವನ್ನ ಜನ್ರಿಗೆ ಹೇಗೆ ಪರಿಚಯಿಸೋದು ಅಂತ ಯೋಚ್ನೆ ಮಾಡಿ. (ಮುಖಪುಟದಲ್ಲಿ ಈ ಮುಂಚೆ ಬಂದಿದ್ದ ಲೇಖನಗಳನ್ನ ಹುಡುಕೋಕೆ “ಹೆಚ್ಚಿನ ಮಾಹಿತಿ” ಕ್ಲಿಕ್‌ ಮಾಡಿ.) ಹೀಗೆ ವೆಬ್‌ಸೈಟನ್ನ ಆಗಾಗ ನೋಡ್ತಾ ಇದ್ರೆ ಜನ್ರ ಹತ್ರ ಮಾತಾಡೋಕೆ ಹೊಸ ಹೊಸ ಐಡಿಯಗಳು ಸಿಗುತ್ತೆ.

  • ಮುಖಪುಟದಲ್ಲಿರೋ ವಿಡಿಯೋ ಅಥವಾ ಲೇಖನ ಬಳಸಿ ಮಾತು ಆರಂಭಿಸಿ. ಅದ್ರಲ್ಲಿರೋ ವಿಷ್ಯಗಳನ್ನ ನೋಡಿದಾಗ ಜನ್ರು ಯಾವುದ್ರ ಬಗ್ಗೆ ಯೋಚ್ನೆ ಮಾಡ್ತಿದ್ದಾರೆ ಅಂತ ಗೊತ್ತಾಗುತ್ತೆ.

  • ಜನ್ರಿಗೆ ಮುಖಪುಟ ತೋರಿಸಿ. ಯಾವುದಾದ್ರು ಒಂದು ವಿಷ್ಯನ ತೋರಿಸಿ ಜನ್ರ ಹತ್ರ ಮಾತಾಡಿ. ಅದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋದು ಹೇಗೆ ಅಂತ ತೋರಿಸ್ಕೊಡಿ.

  • ಲಿಂಕ್‌ ಕಳಿಸಿ. ಜನ್ರಿಗೆ ನಮ್ಮ ಹತ್ರ ಮಾತಾಡೋಕೆ ಇಷ್ಟ ಇಲ್ಲದಿರಬಹುದು. ಆದ್ರೆ ಅವರು ನಮ್ಮ ವೆಬ್‌ಸೈಟನ್ನ ನೋಡ್ತಾರೆ. ಹಾಗಾಗಿ ಆಸಕ್ತಿ ಇರೋರಿಗೆ ಮುಖಪುಟದ ಲಿಂಕನ್ನ ಅಥವಾ ಅದ್ರಲ್ಲಿರೋ ಲೇಖನದ ಅಥವಾ ವಿಡಿಯೋ ಲಿಂಕನ್ನ ಕಳಿಸಿ.