ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೂದಿ ದೇವಾಲಯದ ಪೊಲೀಸ್ರು ಯಾರಾಗಿದ್ದರು? ಅವ್ರಿಗೆ ಯಾವ ಕೆಲಸಗಳಿದ್ದವು?

ಯಾಜಕರಲ್ಲದ ಲೇವಿಯರಿಗೆ ಅನೇಕ ಕೆಲಸಗಳಿದ್ದವು. ಅದ್ರಲ್ಲಿ ಒಂದು ಪೊಲೀಸ್ರ ತರ ಕೆಲ್ಸ ಮಾಡೋದೇ ಆಗಿತ್ತು. ಈ ಪೊಲೀಸ್ರು ದೇವಾಲಯದ ಮುಖ್ಯಸ್ಥನ ಕೈಕೆಳಗೆ ಕೆಲ್ಸ ಮಾಡ್ತಿದ್ರು. ಇವ್ರ ಕೆಲ್ಸದ ಬಗ್ಗೆ ಯೆಹೂದಿ ಬರಹಗಾರನಾದ ಫಿಲೋ ಹೀಗೆ ಹೇಳ್ತಾನೆ: “ಇವರಲ್ಲಿ [ಲೇವಿಯರಲ್ಲಿ] ಕೆಲವ್ರು ದೇವಾಲಯದ ಮುಖ್ಯ ದ್ವಾರದ ಹತ್ರ ಕಾವಲುಗಾರರಾಗಿ ಕೆಲ್ಸ ಮಾಡ್ತಿದ್ರು. ಇನ್ನು ಕೆಲವ್ರು ಅತೀ ಪವಿತ್ರ ಸ್ಥಳದ ಹತ್ರ ಕಾವಲು ನಿಲ್ತಿದ್ರು. ಯಾರಾದ್ರೂ ನಿಯಮಕ್ಕೆ ವಿರುದ್ಧವಾಗಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಅತಿ ಪವಿತ್ರ ಸ್ಥಳದ ಒಳಕ್ಕೆ ಪ್ರವೇಶಿಸದಂತೆ ಇವ್ರು ತಡೆಯುತ್ತಿದ್ರು. ಬೇರೆ ಕೆಲವ್ರು ದೇವಾಲಯದ ಸುತ್ತ ರಾತ್ರಿ ಹಗಲು ಪಾಳಿಗನುಸಾರ ಗಸ್ತು ತಿರುಗುತ್ತಿದ್ರು.”

ಸನ್ಹೆದ್ರಿನ್‌ ಅಥವಾ ಹಿರೀಸಭೆ ಕೂಡ ಈ ಪೊಲೀಸ್ರನ್ನ ಉಪಯೋಗಿಸುತ್ತಿತ್ತು. ಯೆಹೂದ್ಯರಲ್ಲಿ ಈ ಗುಂಪಿಗೆ ಮಾತ್ರ ಶಸ್ತ್ರಾಸ್ತ್ರಗಳನ್ನ ಇಟ್ಕೊಳ್ಳೋಕೆ ರೋಮನ್‌ ಸರಕಾರ ಅನುಮತಿ ಕೊಟ್ಟಿತ್ತು.

ಯೇಸುವನ್ನು ಬಂಧಿಸಿದಾಗ ಆತನು ಅಧಿಕಾರಿಗಳಿಗೆ ‘ನಾನು ಪ್ರತಿದಿನ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಯಾಕೆ ಬಂಧಿಸಲಿಲ್ಲ?’ ಅಂತ ಕೇಳಿದ್ನು. (ಮತ್ತಾ. 26:55) ಈ ಅಧಿಕಾರಿಗಳು ದೇವಾಲಯದ ಪೊಲೀಸ್ರಾಗಿದ್ರಿಂದಲೇ ಯೇಸು ಈ ಪ್ರಶ್ನೆಯನ್ನ ಅವ್ರತ್ರ ಕೇಳಿದ್ನು ಅನ್ನೋದು ವಿದ್ವಾಂಸರಾದ ಜೊಯಾಕಿಮ್‌ ಜೆರೇಮಿಯಾಸ್‌ರ ಅಭಿಪ್ರಾಯ. ಇವ್ರ ಪ್ರಕಾರ ಇದಕ್ಕೂ ಮುಂಚೆ ಯೇಸುವನ್ನು ಬಂಧಿಸಲು ಬಂದ ಅಧಿಕಾರಿಗಳು ಕೂಡ ದೇವಾಲಯದ ಪೊಲೀಸ್ರೇ ಆಗಿದ್ರು. (ಯೋಹಾ. 7:32, 45, 46) ಸಮಯಾನಂತ್ರ ಯೇಸುವಿನ ಶಿಷ್ಯರನ್ನ ಸನ್ಹೆದ್ರಿನ್‌ಗೆ ಕರಕೊಂಡು ಬಂದವ್ರು ಕೂಡ ಈ ಪೊಲೀಸ್ರು ಮತ್ತವರ ಮುಖ್ಯಸ್ಥನೇ ಆಗಿದ್ರು. ಅಪೊಸ್ತಲ ಪೌಲನನ್ನ ದೇವಾಲಯದಿಂದ ಹೊರಕ್ಕೆ ಎಳೆದು ತಂದವ್ರು ಕೂಡ ಈ ಪೊಲೀಸ್ರೇ ಆಗಿರಬೇಕು.—ಅ. ಕಾ. 4:1-3; 5:17-27; 21:27-30.