ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?

ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?

ಪ್ಯಾಮೆಲಾ ಅನ್ನೋ ಸ್ತ್ರೀಗೆ ಕ್ಯಾನ್ಸರ್‌ ಇತ್ತು. ಅದಕ್ಕಾಗಿ ಡಾಕ್ಟರ್‌ ಹತ್ರ ಚಿಕಿತ್ಸೆ ಪಡ್ಕೊಂಡ್ರು. ಇದರ ಜೊತೆ ಈ ಕಷ್ಟದ ಸನ್ನಿವೇಶವನ್ನ ತಾಳಿಕೊಳ್ಳೋಕೆ ಬೇಕಾದ ಸಹಾಯಕ್ಕಾಗಿ ದೇವರ ಹತ್ರನೂ ಪ್ರಾರ್ಥಿಸುತ್ತಿದ್ರು. ಈ ಪ್ರಾರ್ಥನೆಯಿಂದ ಅವರಿಗೆ ಏನಾದ್ರು ಸಹಾಯ ಸಿಕ್ತಾ?

ಪ್ಯಾಮೆಲಾ ಹೇಳೋದು, “ಚಿಕಿತ್ಸೆಯ ಸಮಯದಲ್ಲಿ ನಂಗೆ ತುಂಬ ಹೆದರಿಕೆ ಆಗ್ತಿತ್ತು, ಏನು ಮಾಡಬೇಕು ಅಂತನೇ ಗೊತ್ತಾಗ್ತಿರಲಿಲ್ಲ. ಆದರೆ ಆ ಸಮಯದಲ್ಲಿ ಯೆಹೋವನಿಗೆ ಪ್ರಾರ್ಥಿಸಿದಾಗ ಮನಸ್ಸಿಗೆ ಸಮಾಧಾನ ಆಗ್ತಿತ್ತು ಮತ್ತು ಆ ನೋವನ್ನ ತಾಳಿಕೊಳ್ಳೋಕೆ ಬೇಕಾದ ಶಕ್ತಿ ಸಿಗ್ತಿತ್ತು. ಆ ಕಾಯಿಲೆಯ ನೋವು ಇನ್ನೂ ಹಾಗೇ ಇದ್ರೂ ಅದರ ಬಗ್ಗೆನೇ ಕೊರಗದೆ ಒಳ್ಳೇ ವಿಷಯಗಳಿಗೆ ಹೆಚ್ಚು ಗಮನ ಕೊಡೋಕೆ ಪ್ರಾರ್ಥನೆ ಸಹಾಯ ಮಾಡಿದೆ. ಈಗ ಯಾರಾದ್ರು ನನ್ನನ್ನ ಹೇಗಿದ್ದೀರಾ ಅಂತ ಕೇಳಿದ್ರೆ ‘ನಾನು ಪೂರ್ತಿಯಾಗಿ ಹುಷಾರಾಗಿಲ್ಲ, ಆದ್ರೂ ಖುಷಿಯಾಗಿದ್ದೀನಿ’ ಅಂತ ಹೇಳ್ತೀನಿ.”

ಜೀವನದಲ್ಲಿ ದೊಡ್ಡದೊಡ್ಡ ಸಮಸ್ಯೆಗಳು ಬಂದಾಗ ಮಾತ್ರ ಪ್ರಾರ್ಥಿಸಬೇಕು ಅಂತೇನಿಲ್ಲ. ಚಿಕ್ಕ-ಪುಟ್ಟ ಸಮಸ್ಯೆಗಳು ಬಂದಾಗಲೂ ನಮಗೆ ಸಹಾಯ ಬೇಕಾಗುತ್ತೆ, ಅವಾಗ್ಲೂ ಪ್ರಾರ್ಥಿಸಬಹುದು.

“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು” ಅಂತ ಪವಿತ್ರ ಗ್ರಂಥ ಹೇಳುತ್ತೆ. (ಕೀರ್ತನೆ 55:22) ಈ ಮಾತುಗಳಿಂದ ನಮಗೆಷ್ಟು ಬಲ ಸಿಗುತ್ತೆ ಅಲ್ವಾ! ನಾವು ಸರಿಯಾದ ರೀತೀಲಿ ಪ್ರಾರ್ಥಿಸಿದ್ರೆ ಬರೋ ಸಮಸ್ಯೆಗಳನ್ನ ಎದುರಿಸಲು ದೇವರು ಸಹಾಯ ಮಾಡ್ತಾನೆ.—“ ಪ್ರಾರ್ಥನೆ ಮಾಡಿದ್ರೆ ಸಿಗೋ ಪ್ರಯೋಜ್ನ” ಅನ್ನೋ ಚೌಕ ನೋಡಿ.