ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ನಿಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?

ದೇವರು ನಿಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?

ದೇವರು ನಿಜವಾಗ್ಲೂ ನಿಮ್ಮ ಪ್ರಾರ್ಥನೆನ ಕೇಳ್ತಾನೆ ಅಂತ ನಿಮಗೆ ಅನಿಸುತ್ತಾ?

ಪವಿತ್ರ ಗ್ರಂಥ ಏನು ಹೇಳುತ್ತೆ?

  • ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿಸಿಕೊಳ್ತಾನೆ. ‘ಯೆಹೋವನಿಗೆ ಪ್ರಾರ್ಥಿಸುವವರು, ಯಥಾರ್ಥವಾಗಿ ಪ್ರಾರ್ಥಿಸುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ’ ಅಂತ ಪವಿತ್ರ ಗ್ರಂಥ ಆಶ್ವಾಸನೆ ಕೊಡುತ್ತೆ.—ಕೀರ್ತನೆ 145:18, 19.

  • ದೇವರು ನಾವು ಆತನಿಗೆ ಪ್ರಾರ್ಥಿಸಬೇಕು ಅಂತ ಇಷ್ಟಪಡ್ತಾನೆ. “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ” ಅಂತ ಪವಿತ್ರ ಗ್ರಂಥ ಪ್ರೋತ್ಸಾಹಿಸುತ್ತೆ.—ಫಿಲಿಪ್ಪಿ 4:6.

  • ದೇವರು ನಮ್ಮ ಬಗ್ಗೆ ಚಿಂತಿಸ್ತಾನೆ. ನಮಗೆ ಯಾವೆಲ್ಲ ಸಮಸ್ಯೆಗಳಿವೆ ಚಿಂತೆಗಳಿವೆ ಅಂತ ದೇವರಿಗೆ ಚೆನ್ನಾಗಿ ಗೊತ್ತು ಮತ್ತು ನಮಗೆ ಸಹಾಯ ಮಾಡಬೇಕಂತ ಬಯಸ್ತಾನೆ. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಅಂತ ಪವಿತ್ರ ಗ್ರಂಥ ಹೇಳುತ್ತೆ.—1 ಪೇತ್ರ 5:7.