ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಂದೆ ಬರೋ ಹೊಸಲೋಕಕ್ಕಾಗಿ ನೀವು ಈಗ್ಲೇ ತಯಾರಾಗಬಹುದು

ಸುಂದರ ಲೋಕ ಅತೀ ಹತ್ತಿರ!

ಸುಂದರ ಲೋಕ ಅತೀ ಹತ್ತಿರ!

ದೇವರು ಭೂಮಿಯನ್ನು ಸೃಷ್ಟಿಮಾಡಿದ್ದು ಒಳ್ಳೇ ಜನರು ಶಾಶ್ವತವಾಗಿ ಬದುಕೊಕೆ. (ಕೀರ್ತನೆ 37:29) ಅದಕ್ಕೆ ದೇವರು ಮೊದಲ ಮನುಷ್ಯರನ್ನು ಸೃಷ್ಟಿಮಾಡಿ ಅವರಿಗೆ ಕೊಟ್ಟ ಏದೆನ್‌ ತೋಟದ ತರನೇ ಇಡೀ ಭೂಮಿಯನ್ನು ಸುಂದರ ತೋಟವಾಗಿ ಮಾಡೋ ಕೆಲಸ ಕೊಟ್ರು.—ಆದಿಕಾಂಡ 1:28; 2:15.

ಇವತ್ತು ನಾವಿರೋ ಲೋಕ ದೇವರು ಇಷ್ಟಪಟ್ಟ ಆ ಏದೆನ್‌ ತೋಟದ ತರ ಇಲ್ಲ. ಹಾಗಂತ ಭೂಮಿ ಬಗ್ಗೆ ದೇವರ ಉದ್ದೇಶ ಏನು ಬದಲಾಗಿಲ್ಲ. ಅವ್ರು ತಮ್ಮ ಉದ್ದೇಶವನ್ನು ಖಂಡಿತ ನೆರವೇರಿಸ್ತಾರೆ. ಆದ್ರೆ ಅದನ್ನ ಹೇಗೆ ಮಾಡ್ತಾರೆ? ಈಗಾಗ್ಲೇ ಹಿಂದಿನ ಲೇಖನಗಳಲ್ಲಿ ಓದಿದ ಹಾಗೆ ದೇವರು ಈ ಭೂಮಿಯನ್ನು ನಾಶ ಮಾಡಲ್ಲ. ಬದಲಿಗೆ ಈ ಭೂಮಿಯಲ್ಲಿರೋ ಕೆಟ್ಟವರನ್ನು ನಾಶಮಾಡಿ, ಒಳ್ಳೆಯವರು ಅದ್ರಲ್ಲಿ ಬದುಕೋ ತರ ಮಾಡ್ತಾರೆ. ದೇವರ ಈ ಇಷ್ಟ ನೆರವೇರುವಾಗ ಭೂಮಿ ಮೇಲಿನ ಪರಿಸ್ಥಿತಿ ಹೇಗಿರುತ್ತೆ?

ಒಂದೇ ಸರ್ಕಾರ

ಸ್ವರ್ಗದಿಂದ ದೇವರ ಸರ್ಕಾರ ಆಳ್ವಿಕೆ ಮಾಡುವಾಗ ಭೂಮಿಯಲ್ಲಿರೋ ಎಲ್ಲರೂ ಸಂತೋಷವಾಗಿರ್ತಾರೆ. ಎಲ್ಲರೂ ಸಂತೃಪ್ತಿಯಿಂದ ಕೆಲಸ ಮಾಡುತ್ತಾರೆ. ಯೇಸು ಅದರ ರಾಜನಾಗಿ ಇರೋದ್ರಿಂದ ಈ ಲೋಕದ ನಾಯಕರ ತರ ಆಳ್ವಿಕೆ ಮಾಡಲ್ಲ. ಜನರನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅವರ ಅಗತ್ಯಗಳನ್ನೆಲ್ಲ ಪೂರೈಸುತ್ತಾನೆ. ಯಾಕೆಂದ್ರೆ ಯೇಸು ಪ್ರೀತಿ, ಕರುಣೆ, ದಯೆ ಇರೋ ಒಬ್ಬ ಒಳ್ಳೇ ರಾಜನಾಗಿದ್ದಾನೆ.—ಯೆಶಾಯ 11:4.

ಒಗ್ಗಟ್ಟಾದ ಜೀವನ

ಅಲ್ಲಿರೋ ಜನರೆಲ್ಲರೂ ನಮ್ಮದು ಈ ಭಾಷೆ, ಈ ದೇಶ, ಈ ಜನಾಂಗ ಅಂತ ಹೇಳ್ದೆ ಒಗ್ಗಟ್ಟಿಂದ ಇರ್ತಾರೆ. (ಪ್ರಕಟನೆ 7:9, 10) ಅಷ್ಟೇ ಅಲ್ಲ, ಅಲ್ಲಿರೋ ಜನರು ದೇವರನ್ನು ಮತ್ತು ತಮ್ಮ ಜೊತೆ ಇರುವವರನ್ನು ತುಂಬ ಪ್ರೀತಿಸುತ್ತಾರೆ. ಈ ಮುಂಚೆ ಭೂಮಿ ಹೇಗಿರಬೇಕು ಅಂತ ದೇವರು ಅಂದುಕೊಂಡಿದ್ರೋ ಅದೇ ತರ ಮಾಡೋಕೆ ಜನರೆಲ್ಲ ಕೈಜೋಡಿಸುತ್ತಾರೆ.—ಕೀರ್ತನೆ 115:16.

ಒಳ್ಳೇ ಪರಿಸರ

ದೇವರ ಸರ್ಕಾರ ಭೂಮಿ ಮೇಲೆ ಆಳುವಾಗ ವಾತಾವರಣ ದೇವರ ನಿಯಂತ್ರಣದಲ್ಲಿರುತ್ತೆ. (ಕೀರ್ತನೆ 24:1, 2) ದೇವರು ಯೇಸುವಿಗೂ ವಾತಾವರಣವನ್ನು ನಿಯಂತ್ರಿಸೋ ಶಕ್ತಿ ಕೊಟ್ಟಿದ್ದರು. ಅದಕ್ಕೆ ಯೇಸು ಭೂಮಿಯಲ್ಲಿದ್ದಾಗ ಸಮುದ್ರದ ಅಲೆಗಳನ್ನು ಶಾಂತ ಮಾಡಿದನು. (ಮಾರ್ಕ 4:39, 41) ಹೊಸಲೋಕದಲ್ಲಿ ಯೇಸು ರಾಜನಾಗಿ ಆಳುವಾಗ ಯಾರೂ ನೈಸರ್ಗಿಕ ವಿಪತ್ತಿಗೆ ಹೆದರಲ್ಲ. ಅಷ್ಟೇ ಅಲ್ಲ ಜನರು ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಾರೆ. ಅಲ್ಲಿರೋ ಪ್ರಾಣಿಗಳು ಯಾರಿಗೂ ಹಾನಿ ಮಾಡಲ್ಲ.—ಹೋಶೇಯ 2:18.

ಒಳ್ಳೇ ಆರೋಗ್ಯ ಮತ್ತು ಸಾಕಷ್ಟು ಆಹಾರ

ಹೊಸ ಲೋಕದಲ್ಲಿ ಒಳ್ಳೇ ಆರೋಗ್ಯ ಇರುತ್ತೆ. ಯಾರಿಗೂ ಕಾಯಿಲೆ ಬರಲ್ಲ, ವಯಸ್ಸಾಗಲ್ಲ, ಸಾಯಲ್ಲ. (ಯೆಶಾಯ 35:5, 6) ಮೊದಲ ಮನುಷ್ಯರಿಗೆ ಏದೆನ್‌ ತೋಟದಲ್ಲಿ ದೇವರು ಹೇಗೆ ಸಾಕಷ್ಟು ಆಹಾರ ಕೊಟ್ಟರೋ ಹಾಗೇ ಹೊಸಲೋಕದಲ್ಲೂ ತೃಪ್ತಿಪಡುವಷ್ಟು ಆಹಾರ ಕೊಡುತ್ತಾರೆ. (ಆದಿಕಾಂಡ 2:9) ದೇವರ ಜನರಾಗಿದ್ದ ಇಸ್ರಾಯೇಲ್ಯರ ತರ ನಮ್ಗೂ ಅಲ್ಲಿ ಊಟಕ್ಕೆ ಏನೂ ಕೊರತೆ ಇರಲ್ಲ.—ಯಾಜಕಕಾಂಡ 26:4, 5.

ಶಾಂತಿ ಮತ್ತು ಸುರಕ್ಷತೆ

ಇಡೀ ಭೂಮಿಯಲ್ಲಿ ಒಂದೇ ಸರ್ಕಾರ ಇರೋದ್ರಿಂದ ಎಲ್ರೂ ಸಂತೋಷ ಸಮಾಧಾನದಿಂದ ಇರ್ತಾರೆ. ಅಲ್ಲಿ ಯುದ್ಧಗಳಿರಲ್ಲ, ಯಾರೂ ಅಧಿಕಾರ ಚಲಾಯಿಸಲ್ಲ, ಒಬ್ಬರಿಗೊಬ್ಬರು ಪ್ರೀತಿಯಿಂದ ಇರ್ತಾರೆ. ದೇವರು ಅಲ್ಲಿರುವವರ ಅಗತ್ಯಗಳನ್ನೆಲ್ಲ ನೋಡಿಕೊಳ್ತಾರೆ. ಅದಕ್ಕೆ ಬೈಬಲ್‌ ಹೇಳುತ್ತೆ, “ಅವ್ರಲ್ಲಿ ಪ್ರತಿಯೊಬ್ಬನು ತನ್ನ ದ್ರಾಕ್ಷಿಬಳ್ಳಿ ಕೆಳಗೆ, ಅಂಜೂರ ಮರದ ಕೆಳಗೆ ಕೂತ್ಕೊಳ್ತಾನೆ, ಅವ್ರನ್ನ ಯಾರೂ ಹೆದರಿಸಲ್ಲ.”—ಮೀಕ 4:3, 4.

ಒಳ್ಳೇ ಮನೆ ಮತ್ತು ತೃಪ್ತಿ ತರೋ ಕೆಲಸ

ಪ್ರತಿ ಕುಟುಂಬದವರು ಯಾರ ಭಯನೂ ಇಲ್ಲದೆ ಸ್ವಂತ ಮನೆಯಲ್ಲಿ ಸುರಕ್ಷಿತವಾಗಿ ಇರ್ತಾರೆ. ಅವ್ರು ಮಾಡೋ ಕೆಲಸಕ್ಕೆ ಒಳ್ಳೇ ಪ್ರತಿಫಲ ಸಿಗುತ್ತೆ. ಬೈಬಲ್‌ ಹೇಳೋ ಹಾಗೆ ಹೊಸ ಲೋಕದಲ್ಲಿ “ಅವರು ಪಡೋ ಶ್ರಮ ವ್ಯರ್ಥವಾಗಲ್ಲ.”—ಯೆಶಾಯ 65:21-23.

ಒಳ್ಳೇ ಶಿಕ್ಷಣ

ಬೈಬಲ್‌ ಹೇಳುತ್ತೆ: “ಭೂಮಿ ಯೆಹೋವನ ಜ್ಞಾನದಿಂದ ತುಂಬಿಕೊಳ್ಳುತ್ತೆ.” (ಯೆಶಾಯ 11:9) ಅಲ್ಲಿರೋ ಜನರು ಯೆಹೋವ ದೇವರ ಅಪಾರ ವಿವೇಕದ ಬಗ್ಗೆ ಮತ್ತು ಆತನು ಮಾಡಿರೋ ಸುಂದರ ಸೃಷ್ಟಿಗಳ ಬಗ್ಗೆ ತುಂಬ ವಿಷ್ಯಗಳನ್ನು ಕಲಿತಾರೆ. ಅಲ್ಲಿ ಜನರು ತಮ್ಮ ಬುದ್ಧಿ ವಿವೇಕವನ್ನು ಬೇರೆಯವರಿಗೆ ಹಾನಿ ಮಾಡೋಕೆ ಉಪಯೋಗಿಸಲ್ಲ. (ಯೆಶಾಯ 2:4) ಬದ್ಲಿಗೆ ಶಾಂತಿ ಸಮಾಧಾನದಿಂದ ಇರೋಕೆ, ಭೂಮಿಯನ್ನು ಚೆನ್ನಾಗಿ ನೋಡಿಕೊಳ್ಳೋಕೆ ಕಲಿತಾರೆ.— ಕೀರ್ತನೆ 37:11.

ಕೊನೆಯಿಲ್ಲದ ಜೀವನ

ನಾವು ಪ್ರತಿದಿನ ಖುಷಿಯಾಗಿ ಇರಬೇಕು ಅಂತಾನೇ ದೇವರು ಈ ಭೂಮಿಯನ್ನು ಸೃಷ್ಟಿಮಾಡಿರೋದು. ನಾವೆಲ್ಲರೂ ಈ ಭೂಮಿಲಿ ಶಾಶ್ವತವಾಗಿ ಬದುಕಬೇಕು ಅನ್ನೋದೆ ದೇವರ ಆಸೆ. (ಕೀರ್ತನೆ 37:29; ಯೆಶಾಯ 45:18) ಅದಕ್ಕೆ ದೇವರು “ಮರಣವನ್ನ ಶಾಶ್ವತವಾಗಿ ಅಳಿಸಿಹಾಕ್ತಾನೆ.” (ಯೆಶಾಯ 25:8; ಪಾದಟಿಪ್ಪಣಿ) “ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ” ಅಂತ ಬೈಬಲ್‌ ಹೇಳುತ್ತೆ. (ಪ್ರಕಟನೆ 21:4) ಈ ಲೋಕಾಂತ್ಯವನ್ನು ಯಾರು ಪಾರಾಗಿ ಬರುತ್ತಾರೋ ಅವರಿಗೆ ಮತ್ತು ಜೀವಂತವಾಗಿ ಮತ್ತೆ ಎದ್ದು ಬರುವವರಿಗೆ ದೇವರು ಶಾಶ್ವತ ಜೀವ ಕೊಡುತ್ತಾರೆ.—ಯೋಹಾನ 5:28, 29; ಅಪೊಸ್ತಲರ ಕಾರ್ಯ 24:15.

ಹೊಸಲೋಕಕ್ಕೆ ಹೋಗಲು ಈಗಾಗ್ಲೇ ಲಕ್ಷಾಂತರ ಜನರು ತಯಾರಾಗಿದ್ದಾರೆ. ಅವರು ಯೆಹೋವ ದೇವರ ಬಗ್ಗೆ ಮತ್ತು ಆತನು ಕಳುಹಿಸಿಕೊಟ್ಟ ಯೇಸುವಿನ ಬಗ್ಗೆ ಕಲಿತಿರೋದ್ರಿಂದ, ಹೊಸಲೋಕದಲ್ಲಿ ದೇವರಿಗೆ ಇಷ್ಟ ಆಗೋತರ ಬದುಕೋಕೆ ಈಗ್ಲೇ ಪ್ರಯತ್ನ ಮಾಡ್ತಿದ್ದಾರೆ.—ಯೋಹಾನ 17:3.

ಲೋಕಾಂತ್ಯ ಪಾರಾಗಿ ಸುಂದರ ಲೋಕದಲ್ಲಿ ಇರೋಕೆ ಏನು ಮಾಡ್ಬೇಕು ಅಂತ ತಿಳಿಯೋಕೆ ಇಷ್ಟಪಡ್ತಿರಾ? ಎಂದೆಂದು ಖುಷಿಯಾಗಿ ಬಾಳೋಣ! ಪುಸ್ತಕದಿಂದ ಉಚಿತ ಬೈಬಲ್‌ ಅಧ್ಯಯನದ ಕೋರ್ಸ್‌ ಪಡೆಯಲು ಯೆಹೋವನ ಸಾಕ್ಷಿಗಳನ್ನು ಭೇಟಿಮಾಡಿ.