ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಭದ್ರ ಭವಿಷ್ಯಕ್ಕೆ ವಿಶ್ವಾಸಾರ್ಹ ಮಾರ್ಗದರ್ಶನ ಇದೆಯಾ?

ಸುಭದ್ರ ಭವಿಷ್ಯಕ್ಕೆ ವಿಶ್ವಾಸಾರ್ಹ ಮಾರ್ಗದರ್ಶನ ಇದೆಯಾ?

ಸುಭದ್ರ ಭವಿಷ್ಯ ಪಡಿಯೋಕೆ ವಿಧಿ, ಶಿಕ್ಷಣ, ಐಶ್ವರ್ಯ ಮತ್ತು ಒಳ್ಳೇ ವ್ಯಕ್ತಿ ಆಗೋದು ಸಹಾಯ ಮಾಡುತ್ತೆ ಅಂತ ಜನ ನಂಬಿದ್ರ ಬಗ್ಗೆ ಹಿಂದಿನ ಲೇಖನದಲ್ಲಿ ನೋಡಿದ್ವಿ. ಈ ವಿಧಾನಗಳು ಹೇಗಿವೆ ಅಂದ್ರೆ ನಾವು ಹೋಗಿ ಸೇರಬೇಕಾದ ಸ್ಥಳಕ್ಕೆ ತಪ್ಪಾದ ನಕ್ಷೆಯನ್ನ ಬಳಸೋ ತರ ಇದೆ. ಹಾಗಂತ ಸುಭದ್ರ ಭವಿಷ್ಯ ಪಡಿಯೋಕೆ ವಿಶ್ವಾಸಾರ್ಹ ಮಾರ್ಗದರ್ಶನನೇ ಇಲ್ವಾ? ಖಂಡಿತ ಇದೆ!

ಅತ್ಯುನ್ನತ ಮೂಲದಿಂದ ಮಾರ್ಗದರ್ಶನ

ಸಾಮಾನ್ಯವಾಗಿ ನಿರ್ಣಯ ಮಾಡುವಾಗ, ದೊಡ್ಡವರ ಅಥವಾ ಬುದ್ಧಿವಂತರ ಹತ್ರ ಸಲಹೆ ಕೇಳ್ತೀವಿ. ಅದೇ ತರ ಸುಭದ್ರ ಭವಿಷ್ಯ ಪಡಿಯೋಕೆ ವಿಶ್ವಾಸಾರ್ಹ ಮಾರ್ಗದರ್ಶನವನ್ನು ದೊಡ್ಡವರ ಮತ್ತು ಬುದ್ಧಿವಂತರ ಹತ್ರ ಕೇಳಿ ತಿಳ್ಕೋಬಹುದು. ಇಂಥ ಸಲಹೆ ಪಡಿಯೋಕೆ ಸಹಾಯ ಮಾಡೋ ಒಂದು ಪವಿತ್ರ ಪುಸ್ತಕವನ್ನು ಸುಮಾರು 3,500 ವರ್ಷಗಳ ಹಿಂದೆ ಬರೆಯಲಾಯಿತು. ಆ ಪವಿತ್ರ ಪುಸ್ತಕವೇ ಬೈಬಲ್‌.

ನೀವು ಬೈಬಲನ್ನು ನಂಬಬಹುದಾ? ಹೌದು. ಯಾಕಂದ್ರೆ ಇದರ ಬರಹಗಾರ ಈ ವಿಶ್ವದಲ್ಲೇ ಅತೀ ವಿವೇಕಿ ಮತ್ತು ತುಂಬ ಅನುಭವ ಇರುವ ವ್ಯಕ್ತಿಯಾಗಿದ್ದಾನೆ. ಆತನನ್ನು “ಮಹಾ ವೃದ್ಧ” ಮತ್ತು “ಯುಗಯುಗಾಂತರಕ್ಕೂ” ಇರುವ ದೇವರು ಅಂತ ಹೇಳಲಾಗಿದೆ. (ದಾನಿಯೇಲ 7:9; ಕೀರ್ತನೆ 90:2, ಪಾದಟಿಪ್ಪಣಿ.) ‘ಸತ್ಯ ದೇವರು ಆಕಾಶ ಸೃಷ್ಟಿಸಿದನು. ಆತನು ಭೂಮಿಯನ್ನ ನಿರ್ಮಿಸಿದನು.’ (ಯೆಶಾಯ 45:18) ಆತನು ತನ್ನ ಹೆಸರನ್ನು ತಿಳಿಸಿದ್ದಾನೆ. ಆ ಹೆಸರೇ ಯೆಹೋವ.—ಕೀರ್ತನೆ 83:18.

ಸೃಷ್ಟಿಕರ್ತ ದೇವರು ಎಲ್ಲ ಮನುಷ್ಯರಿಗೋಸ್ಕರ ಬೈಬಲನ್ನು ಬರೆಸಿದ್ದಾನೆ. ಇದು ಒಂದೇ ಒಂದು ಸಂಸ್ಕೃತಿ ಮತ್ತು ಜನಾಂಗಕ್ಕೆ ಸೀಮಿತವಾಗಿಲ್ಲ. ಇದರಲ್ಲಿರೋ ಸಲಹೆಗಳು ಎಲ್ಲಾ ಕಾಲಕ್ಕೂ, ಎಲ್ಲರಿಗೂ ಪ್ರಯೋಜನವಾಗುತ್ತೆ. ಇದು ಬೇರೆಲ್ಲ ಪುಸ್ತಕಗಳಿಗಿಂತ ಹೆಚ್ಚು ಭಾಷೆಯಲ್ಲಿ ವಿತರಣೆ ಆಗ್ತಿದೆ. * ಹಾಗಾಗಿ ಈ ಪ್ರಪಂಚದ ಯಾವುದೇ ಮೂಲೆಯಲ್ಲಿ ಇರುವ ಜನರು ಬೈಬಲಲ್ಲಿರೋ ಮಾರ್ಗದರ್ಶನೆಯನ್ನು ಅರ್ಥ ಮಾಡ್ಕೊಂಡು ಪಾಲಿಸೋಕೆ ಆಗುತ್ತೆ. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ:

“ದೇವರು ಭೇದಭಾವ ಮಾಡಲ್ಲ . . . ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.”—ಅಪೊಸ್ತಲರ ಕಾರ್ಯ 10:34, 35.

ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ಹೇಗೆ ಮಾರ್ಗದರ್ಶನ ಕೊಡ್ತಾರೋ ಹಾಗೇ ಯೆಹೋವ ದೇವರು ಒಬ್ಬ ಪ್ರೀತಿಯ ತಂದೆ ತರ ತನ್ನ ವಾಕ್ಯದಿಂದ ನಮಗೆ ಮಾರ್ಗದರ್ಶನ ಕೊಡ್ತಾರೆ. (2 ತಿಮೊತಿ 3:16) ಆತನ ವಾಕ್ಯವನ್ನು ನಾವು ನಂಬಬಹುದು. ಯಾಕಂದ್ರೆ ನಮಗೆ ಯಾವುದು ಒಳ್ಳೇದು ಅಂತ ಆತನಿಗೆ ಚೆನ್ನಾಗಿ ಗೊತ್ತು.

ಇಂಥ ಭವಿಷ್ಯ ಪಡೆಯಲು ನೀವೇನು ಮಾಡಬೇಕು? ದಯವಿಟ್ಟು ಮುಂದಿನ ಲೇಖನ ನೋಡಿ.

^ ಪ್ಯಾರ. 6 ಬೈಬಲ್‌ ಭಾಷಾಂತರ ಮತ್ತು ವಿತರಣೆಯ ಬಗ್ಗೆ ಹೆಚ್ಚನ್ನು ತಿಳಿಯಲು www.pr418.com ಯಲ್ಲಿ ಬೈಬಲ್‌ ಬೋಧನೆಗಳು > ಇತಿಹಾಸ ಮತ್ತು ಬೈಬಲ್‌ ಅನ್ನುವಲ್ಲಿ ನೋಡಿ.

^ ಪ್ಯಾರ. 16 ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾಗಿರುವ ಕಾವಲಿನಬುರುಜು ನಂ. 2, 2018 ಪುಟ 6-9 ದಯವಿಟ್ಟು ನೋಡಿ. ಇದು www.pr418.com ಯಲ್ಲಿ ಲೈಬ್ರರಿ > ಪತ್ರಿಕೆಗಳು ಅನ್ನುವಲ್ಲಿ ಲಭ್ಯ.