ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!

ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!

ನೀವು ದ್ವೇಷಕ್ಕೆ ಗುರಿ ಆಗಿದ್ದೀರಾ?

ನೀವು ಗುರಿಯಾಗದಿದ್ರೂ ಬೇರೆಯವರು ಇದಕ್ಕೆ ಗುರಿ ಆಗೋದನ್ನ ನೋಡಿರಬಹುದು. ಜನಾಂಗ, ದೇಶ, ಧರ್ಮ, ಬಣ್ಣ ಇಂಥ ವಿಷಯಗಳ ಮೇಲೆ ಆಧರಿಸಿ ಜನ ಆಗಾಗ ದ್ವೇಷ ಕಾರೋದನ್ನು ನ್ಯೂಸ್‌ಗಳಲ್ಲಿ ನೋಡ್ತಾ ಇರ್ತೀವಿ. ಇದ್ರಿಂದಾಗೋ ಅಪರಾಧಗಳನ್ನ ತಡೆಯಲು ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೊಳಿಸ್ತಾ ಇದೆ.

ದ್ವೇಷಕ್ಕೆ ಗುರಿ ಆದವರು ಬೇರೆಯವರ ಮೇಲೂ ದ್ವೇಷ ಕಾರುತ್ತಾರೆ. ದ್ವೇಷಕ್ಕೆ ಗುರಿಯಾದ ವ್ಯಕ್ತಿ ಸೇಡು ತೋರಿಸುವಾಗ ದ್ವೇಷ ಒಂದು ಸರಪಳಿಯಂತೆ ಮುಂದುವರಿಯುತ್ತೆ.

ಕೆಲವೊಮ್ಮೆ ನೀವು ಪೂರ್ವಾಭಿಪ್ರಾಯ, ಅಪಹಾಸ್ಯ, ನಿಂದನೆ ಮತ್ತು ಬೆದರಿಕೆಗಳಂತಹ ಸನ್ನಿವೇಶಗಳನ್ನ ಎದುರಿಸಿರಬಹುದು. ಆದ್ರೆ ದ್ವೇಷ ಇಲ್ಲಿಗೆ ನಿಲ್ಲಲ್ಲ. ದ್ವೇಷದಿಂದಾಗಿ ಜನರನ್ನ ಪೀಡಿಸಬಹುದು, ಅವರ ವಸ್ತುಗಳನ್ನ ಹಾಳು ಮಾಡಬಹುದು, ಹಲ್ಲೆ, ಅತ್ಯಾಚಾರ, ಕೊಲೆ ಅಥವಾ ಸಾಮೂಹಿಕ ಹತ್ಯೆನೂ ಮಾಡಬಹುದು.

ಈ ಸಂಚಿಕೆ ದ್ವೇಷವನ್ನ ಜಯಿಸೋದು ಹೇಗೆ ಅಂತ ತಿಳಿಸುತ್ತೆ. ಅದಕ್ಕೆ ಸಹಾಯ ಮಾಡೋ ಕೆಲವು ಪ್ರಶ್ನೆಗಳನ್ನ ನೊಡೋಣ.

  • ಜನರಲ್ಲಿ ಯಾಕಿಷ್ಟು ದ್ವೇಷ ಇದೆ?

  • ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

  • ದ್ವೇಷದ ಜ್ವಾಲೆನೇ ಇಲ್ಲದಿರೋ ಪರಿಸ್ಥಿತಿ ಬರುತ್ತಾ?