ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಪೂರ್ಣ ಮಾನಸಿಕ ಆರೋಗ್ಯ—ದೇವರ ಆಶೀರ್ವಾದ

ಪರಿಪೂರ್ಣ ಮಾನಸಿಕ ಆರೋಗ್ಯ—ದೇವರ ಆಶೀರ್ವಾದ

ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಹೊರಗೆ ಬರೋಕೆ ದೇವರು ಬೈಬಲ್‌ನಿಂದ ಮಾರ್ಗದರ್ಶನೆ ಮತ್ತು ಸಾಂತ್ವನ ಕೊಡ್ತಾನೆ.

ಅಷ್ಟೇ ಅಲ್ಲ, ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಆಗಿರೋ ನಷ್ಟವನ್ನ ಶಾಶ್ವತವಾಗಿ ತೆಗೆದುಹಾಕ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ.

ದೇವರು ಕೊಟ್ಟಿರೋ ಮಾತು ನೆರವೇರುವಾಗ ಕಹಿ ನೆನಪುಗಳು, ನೋವು ತರೋ ಭಾವನೆಗಳು ಮತ್ತು ಮಾನಸಿಕ ಒತ್ತಡಗಳು ಯಾರಿಗೂ “ನೆನಪಿಗೆ ಬರಲ್ಲ, ಅವುಗಳನ್ನ ಯಾರೂ ಕನಸುಮನಸ್ಸಲ್ಲೂ ಜ್ಞಾಪಿಸಿಕೊಳ್ಳಲ್ಲ.”—ಯೆಶಾಯ 65:17.

ನೆಮ್ಮದಿ ತರೋ ಈ ಮಾತುಗಳನ್ನ ಹೇಳಿರೋ ದೇವರು ಇವನ್ನ ಯಾವಾಗ ಮತ್ತು ಹೇಗೆ ನೆರವೇರಿಸ್ತಾನೆ ಅಂತ ತಿಳಿಯೋಕೆ ಯೆಹೋವನ ಸಾಕ್ಷಿಗಳು ನಿಮಗೆ ಸಂತೋಷದಿಂದ ಸಹಾಯ ಮಾಡ್ತಾರೆ.