ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವೆಬ್‌ಸೈಟಲ್ಲಿ . . .

ನಮ್ಮ ವೆಬ್‌ಸೈಟಲ್ಲಿ . . .

ಮುಖಪುಟದಲ್ಲಿದ್ದ ಲೇಖನ ಎಲ್ಲೋಯ್ತು?

jw.org ವೆಬ್‌ಸೈಟ್‌ನ ಮುಖಪುಟದಲ್ಲಿ ಇರೋ ಲೇಖನಗಳು ತುಂಬ ಚೆನ್ನಾಗಿವೆ. ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆನೇ ಆ ಲೇಖನಗಳಲ್ಲಿ ಇರುತ್ತೆ. ಬೈಬಲ್‌ ಭವಿಷ್ಯವಾಣಿಗಳು ಹೇಗೆ ನಿಜ ಆಗ್ತಿದೆ ಅಂತ ಆ ಲೇಖನಗಳು ವಿವರಿಸುತ್ತೆ. ಇವುಗಳನ್ನ ಸಹೋದರ ಸಹೋದರಿಯರು ಸೇವೇಲಿ ಬಳಸ್ತಾ ಇದ್ದಾರೆ. ಇವು ಎಲೆಕ್ಟ್ರಾನಿಕ್‌ ರೂಪದಲ್ಲಿ ಇರೋದ್ರಿಂದ ಬೇರೆಯವ್ರಿಗೆ ಅದನ್ನ ಕಳಿಸೋದು ತುಂಬ ಸುಲಭ. “ನಾವೀಗ ಹೊಸ ವಿಧಾನದಲ್ಲಿ ಸೇವೆ ಮಾಡ್ತಿದ್ದೀವಿ. ಹಾಗಾಗಿ ಈ ಲೇಖನಗಳನ್ನ ತುಂಬ ಚೆನ್ನಾಗಿ ಬಳಸ್ಕೊಳ್ಳೋಕೆ ಆಗ್ತಿದೆ” ಅಂತ ಒಬ್ಬ ಸಹೋದರ ಹೇಳ್ತಾರೆ.

ಮುಖಪುಟದಲ್ಲಿ ಹೊಸಹೊಸ ಲೇಖನಗಳು ಬರ್ತಾ ಇರುತ್ತೆ. ಆಗ ಹಳೇ ಲೇಖನಗಳು ಎಲ್ಲಿ ಹೋಗುತ್ತೆ?

  • jw.org ವೆಬ್‌ಸೈಟ್‌ನ ಮುಖಪುಟಕ್ಕೆ ಹೋಗಿ. “ಆಯ್ದ ವಿಷಯಗಳು” ಅನ್ನೋ ವಿಭಾಗದಲ್ಲಿರೋ “ಹೆಚ್ಚಿನ ಮಾಹಿತಿ” ಅನ್ನೋ ಲಿಂಕನ್ನ ಒತ್ತಿ. ಆಗ “ಇತ್ತೀಚಿಗೆ ಮುಖಪುಟದಲ್ಲಿ ಬಂದ ಹೊಸ ಲೇಖನಗಳು” ಅನ್ನೋ ಪುಟ ತೆರೆಯುತ್ತೆ. ಅಲ್ಲಿ ಹಳೇ ಲೇಖನಗಳು ಸಿಗುತ್ತೆ.

  • jw.org ಅಥವಾ JW ಲೈಬ್ರರಿಯಲ್ಲಿ “ಲೈಬ್ರರಿ” ಅನ್ನೋದನ್ನ ಒತ್ತಿ. ಅದ್ರಲ್ಲಿ “ಲೇಖನ ಸರಣಿಗಳು” ಅನ್ನೋ ವಿಭಾಗಕ್ಕೆ ಹೋಗಿ. ಅದ್ರಲ್ಲಿ “ಇತರ ವಿಷಯಗಳು” ಅನ್ನೋ ಲಿಂಕ್‌ ಒತ್ತಿ. ವೆಬ್‌ಸೈಟ್‌ನ ಮುಖಪುಟದಲ್ಲಿ ಬಂದಿದ್ದ ತುಂಬ ಲೇಖನಗಳು ಇಲ್ಲಿ ಸಿಗುತ್ತೆ.