ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1923—ನೂರು ವರ್ಷಗಳ ಹಿಂದೆ

1923—ನೂರು ವರ್ಷಗಳ ಹಿಂದೆ

“ಒಂದು ದೊಡ್ಡ ಬದಲಾವಣೆ ಈ ವರ್ಷದಲ್ಲಿ ಆಗುತ್ತೆ. ಕಷ್ಟಪಡ್ತಿರೋ ಜನ್ರಿಗೆ ಮುಂದೆ ಒಳ್ಳೇ ಕಾಲ ಬರುತ್ತೆ ಅಂತ ಸಿಹಿಸುದ್ದಿ ಸಾರೋ ಒಂದು ಒಳ್ಳೇ ಅವಕಾಶ ನಮಗಿದೆ” ಅಂತ ಜನವರಿ 1, 1923ರ ಕಾವಲಿನ ಬುರುಜು ಹೇಳಿತು. ಆ ವರ್ಷದಲ್ಲಿ ಬೈಬಲ್‌ ವಿದ್ಯಾರ್ಥಿಗಳು ಕೂಟಗಳಲ್ಲಿ, ಅಧಿವೇಶನಗಳಲ್ಲಿ ಮತ್ತು ಸಾರೋ ಕೆಲಸದಲ್ಲಿ ತುಂಬ ಬದಲಾವಣೆಗಳನ್ನ ಮಾಡಿದ್ರು. ಇದ್ರಿಂದ ಅವ್ರ ಮಧ್ಯ ಇದ್ದ ಒಗ್ಗಟ್ಟು ಜಾಸ್ತಿ ಆಯ್ತು.

ಒಗ್ಗಟ್ಟಾಗಿ ಇರೋಕೆ ಕೂಟಗಳು ಸಹಾಯ ಮಾಡ್ತು

ವಚನಗಳು ಮತ್ತು ಗೀತೆ ಸಂಖ್ಯೆ ಇದ್ದ ಕ್ಯಾಲೆಂಡರ್‌

ಪ್ರತಿವಾರ ಪ್ರಾರ್ಥನೆಯಲ್ಲಿ, ಆರಾಧನೆಯಲ್ಲಿ ಮತ್ತು ಟೆಸ್ಟಿಮನಿ ಕೂಟದಲ್ಲಿ ಯಾವ ವಚನವನ್ನ ಚರ್ಚಿಸ್ತಿದ್ರೋ ಅದ್ರ ವಿವರಣೆಯನ್ನ ಕಾವಲಿನ ಬುರುಜುವಿನಲ್ಲಿ ತಿಳಿಸ್ತಿದ್ರು. ಅಷ್ಟೇ ಅಲ್ಲ, ಪ್ರತಿವಾರ ಕೂಟದಲ್ಲಿ ಯಾವ ವಚನ ಚರ್ಚೆ ಮಾಡಬೇಕು ಮತ್ತು ಕುಟುಂಬ ಆರಾಧನೆ ಮಾಡುವಾಗ, ಬೈಬಲ್‌ನ ಓದಿ ಅಧ್ಯಯನ ಮಾಡುವಾಗ ಯಾವ ಹಾಡನ್ನ ಹಾಡಬೇಕು ಅಂತ ತಿಳಿಸೋಕೆ ಬೈಬಲ್‌ ವಿದ್ಯಾರ್ಥಿಗಳು ಒಂದು ಕ್ಯಾಲೆಂಡರನ್ನ ಪ್ರಿಂಟ್‌ ಮಾಡಿದ್ರು. ಈ ತರ ಸಂಘಟನೆ ಕೆಲವೊಂದು ಬದಲಾವಣೆಗಳನ್ನ ಮಾಡಿದ್ರಿಂದ ಎಲ್ರೂ ಒಗ್ಗಟ್ಟಿಂದ ಇರೋಕೆ ಸಹಾಯ ಆಯ್ತು.

ಬೈಬಲ್‌ ವಿದ್ಯಾರ್ಥಿಗಳು ಸಿಹಿಸುದ್ದಿ ಸಾರಿದಾಗ ತಮಗೆ ಸಿಕ್ಕ ಅನುಭವಗಳನ್ನ ಆ ಕೂಟದಲ್ಲಿ ಹೇಳ್ತಿದ್ರು, ಯೆಹೋವನಿಗೆ ಥ್ಯಾಂಕ್ಸ್‌ ಹೇಳ್ತಿದ್ರು, ಹಾಡನ್ನ ಹಾಡ್ತಿದ್ರು ಮತ್ತು ಪ್ರಾರ್ಥನೆನೂ ಮಾಡ್ತಿದ್ರು. ಆ ಕೂಟದಲ್ಲಿ ಏನು ನಡೀತಿತ್ತು ಅಂತ ಸಹೋದರಿ ಈವಾ ಬಾರ್ನೀಯವರು ನೆನಪಿಸ್ಕೊಳ್ತಾರೆ. ಅವರು 1923ರಲ್ಲಿ ದೀಕ್ಷಾಸ್ನಾನ ತಗೊಂಡ್ರು. ಆಗ ಅವ್ರಿಗೆ 15 ವರ್ಷ. “ಅಲ್ಲಿ ಸಹೋದರ ಸಹೋದರಿಯರು ತಮ್ಮ ಅನುಭವನ ಹೇಳುವಾಗ ‘ನಾನು ಮೊದ್ಲು ಯೆಹೋವ ನನಗೋಸ್ಕರ ಮಾಡಿರೋ ಎಲ್ಲ ವಿಷ್ಯಕ್ಕೂ ತುಂಬ ಥ್ಯಾಂಕ್ಸ್‌ ಹೇಳ್ತೀನಿ’ ಅಂತ ಶುರು ಮಾಡ್ತಿದ್ರು. ಅಲ್ಲಿ ಗಾಡ್ವಿನ್‌ ಅಂತ ಒಬ್ರು ಬ್ರದರ್‌ ಇದ್ರು. ಅವ್ರಿಗೆ ತುಂಬ ವಯಸ್ಸಾಗಿತ್ತು. ಅವರು ಯೆಹೋವ ಮಾಡಿದ ಪ್ರತಿಯೊಂದು ವಿಷ್ಯಕ್ಕೂ ಥ್ಯಾಂಕ್ಸ್‌ ಹೇಳ್ತಿದ್ರು. ಗಾಡ್ವಿನ್‌ ಬ್ರದರ್‌ ಮಾತಾಡ್ತಾನೇ ಇದ್ದಿದ್ದನ್ನ ನೋಡಿ ಕೂಟ ನಡಸ್ತಿದ್ದ ಸಹೋದರನಿಗೆ ಟೆನ್ಶನ್‌ ಆಯ್ತು. ಅದನ್ನ ಗಮನಿಸಿ ಗಾಡ್ವಿನ್‌ ಅವ್ರ ಹೆಂಡ್ತಿ ಅವ್ರ ಕೋಟ್‌ನ ಎಳೆದ್ರು. ಆಗ ಆ ಬ್ರದರ್‌ ಕೂತ್ಕೊಂಡ್ರು.”

ತಿಂಗಳಿಗೆ ಒಂದು ಸಲ ವಿಶೇಷ ಪ್ರಾರ್ಥನೆ, ಆರಾಧನೆ ಮತ್ತು ಟೆಸ್ಟಿಮನಿ ಕೂಟ ನಡೀತಿತ್ತು. “ಈ ಅರ್ಧ ಮೀಟಿಂಗ್‌ ಪೂರ್ತಿ ಸಹೋದರ ಸಹೋದರಿಯರು ಸೇವೆಯಲ್ಲಿ ಸಿಕ್ಕ ಅನುಭವದ ಬಗ್ಗೆ ಹೇಳಬೇಕು ಮತ್ತು ಸೇವೆ ಮಾಡ್ತಿದ್ದವ್ರನ್ನ ಪ್ರೋತ್ಸಾಹಿಸಬೇಕು . . . ಈ ಕೂಟಗಳಿಂದ ನಿಮ್ಮ ನಂಬಿಕೆ ಬಲವಾಗುತ್ತೆ ಅನ್ನೋ ಭರವಸೆ ನಮಗಿದೆ” ಅಂತ ಏಪ್ರಿಲ್‌ 1, 1923ರ ಕಾವಲಿನ ಬುರುಜು ಹೇಳಿತು.

ಕೆನಡಾದ 19 ವರ್ಷದ ಚಾರ್ಲ್ಸ್‌ ಮಾರ್ಟಿನ್‌ ಅನ್ನೋ ಪ್ರಚಾರಕ ಈ ಕೂಟಗಳಿಂದ ತುಂಬ ಪ್ರಯೋಜನ ಪಡ್ಕೊಂಡ್ರು. ಅವರು ಹೀಗೆ ಹೇಳ್ತಾರೆ: “ಮನೆಮನೆ ಸೇವೆನ ಹೇಗೆ ಮಾಡಬೇಕು ಅಂತ ನಾನು ಮೊದ್ಲು ಕಲಿತಿದ್ದು ಈ ಕೂಟದಲ್ಲೇ. ಎಲ್ರೂ ಸೇವೆಯಲ್ಲಿ ಸಿಕ್ಕ ಅನುಭವವನ್ನ ಈ ಕೂಟದಲ್ಲಿ ಹೇಳ್ತಾ ಇದ್ದಿದ್ರಿಂದ ಮುಂದೆ ಸೇವೆಯಲ್ಲಿ ಸಮಸ್ಯೆ ಬಂದಾಗ ಹೇಗೆ ಉತ್ತರ ಕೊಡಬೇಕು ಅಂತ ನನಗೆ ಗೊತ್ತಾಯ್ತು.”

ಒಗ್ಗಟ್ಟಾಗಿರೋಕೆ ಸಾರೋ ಕೆಲಸ ಸಹಾಯ ಮಾಡ್ತು

ಮೇ 1, 1923ರ ಬುಲೆಟಿನ್‌

ಎಲ್ರೂ ಒಗ್ಗಟ್ಟಾಗಿ ಇರೋಕೆ ಸಂಘಟನೆ ಇನ್ನೊಂದು ಏರ್ಪಾಡು ಮಾಡ್ತು. ಯಾವ್ಯಾವ ದಿನ ಸಿಹಿಸುದ್ದಿ ಸಾರಬೇಕು ಅಂತ ಹೇಳ್ತು. ಏಪ್ರಿಲ್‌ 1, 1923ರ ಕಾವಲಿನ ಬುರುಜುವಿನಲ್ಲಿ “ಪ್ರತಿ ತಿಂಗಳ ಮೊದಲನೇ ಮಂಗಳವಾರ ಸಿಹಿಸುದ್ದಿ ಸಾರಬೇಕು. 1923ರ, ಮೇ 1 ಮಂಗಳವಾರ ಇದು ಶುರುವಾಗುತ್ತೆ . . . ಎಲ್ಲಾ ಪ್ರಚಾರಕರು ಈ ಕೆಲಸದಲ್ಲಿ ಭಾಗವಹಿಸಬೇಕು . . . ಇದ್ರಿಂದ ಎಲ್ರೂ ಒಗ್ಗಟ್ಟಾಗಿ ಇರೋಕಾಗುತ್ತೆ” ಅಂತ ಹೇಳ್ತು.

ಈ ಕೆಲಸದಲ್ಲಿ ಯೌವನಸ್ಥರೂ ಕೈ ಜೋಡಿಸಿದ್ರು. ಅದ್ರಲ್ಲಿ ಒಬ್ರು 16 ವರ್ಷದ ಹೇಜ಼ಲ್‌ ಬರ್ಫರ್ಡ್‌. ಈ ಕೆಲಸದ ಬಗ್ಗೆ ಅವರು ಹೀಗೆ ಹೇಳ್ತಾರೆ: “ನಮಗೆ ಬುಲೆಟಿನ್‌ ಕೊಟ್ಟಿದ್ರು. ಅದ್ರಲ್ಲಿ ನಾವು ಸೇವೆಯಲ್ಲಿ ಏನು ಮಾತಾಡಬೇಕು ಅಂತ ಇತ್ತು. (ಅದು ಮಾದರಿ ಸಂಭಾಷಣೆಗಳ ತರ ಇತ್ತು) ಅದ್ರಲ್ಲಿ ಇರೋದನ್ನ ನಾವು ನೆನಪಲ್ಲಿ ಇಟ್ಕೊಬೇಕಿತ್ತು. a ನಾನು ತಾತನ ಜೊತೆ ಖುಷಿಖುಷಿಯಾಗಿ ಸೇವೆ ಮಾಡ್ತಿದ್ದೆ. ಆದ್ರೆ ಒಬ್ಬ ವಯಸ್ಸಾದ ಸಹೋದರ ‘ನೀನು ಸಿಹಿಸುದ್ದಿ ಸಾರಬಾರದು’ ಅಂತ ಹೇಳಿದ್ರು. ಯಾಕಂದ್ರೆ ‘ಯುವಕ ಯುವತಿಯರು’ ಎಲ್ರ ಜೊತೆ ಸೇರಿ ಯೆಹೋವನನ್ನ ಆರಾಧಿಸಬೇಕು ಅನ್ನೋ ಸತ್ಯನ ಕೆಲವರು ಇನ್ನೂ ಅರ್ಥ ಮಾಡ್ಕೊಂಡಿರಲಿಲ್ಲ.” (ಕೀರ್ತ. 148:12, 13) ಆದ್ರೂ ಸಹೋದರಿ ಬರ್ಫರ್ಡ್‌ ಸಾರೋದನ್ನ ನಿಲ್ಲಿಸಲಿಲ್ಲ. ಅವರು ಎರಡನೇ ಗಿಲ್ಯಡ್‌ ಶಾಲೆಗೆ ಹೋದ್ರು ಮತ್ತು ಪನಾಮದಲ್ಲಿ ಮಿಷನರಿಯಾಗಿ ಸೇವೆ ಮಾಡಿದ್ರು. ಹೋಗ್ತಾ ಹೋಗ್ತಾ ತಪ್ಪಾಗಿ ಯೋಚಿಸ್ತಿದ್ದ ಸಹೋದರರು ತಿದ್ದಿಕೊಂಡ್ರು.

ಒಗ್ಗಟ್ಟಾಗಿ ಇರೋಕೆ ಅಧಿವೇಶನಗಳು ಸಹಾಯ ಮಾಡ್ತು

ಅಧಿವೇಶನಗಳು ಸಹೋದರ ಸಹೋದರಿಯರು ಒಗ್ಗಟ್ಟಾಗಿ ಇರೋಕೆ ತುಂಬ ಸಹಾಯ ಮಾಡ್ತು. ಪ್ರತಿ ಅಧಿವೇಶನದಲ್ಲಿ ಸಾರೋಕೆ ಅಂತನೇ ಒಂದು ದಿನ ಇಡ್ತಿದ್ರು. ಕೆನಡಾದ ವಿನ್ನಿಪೆಗ್‌ನಲ್ಲಿ ಒಂದು ಅಧಿವೇಶನ ನಡಿತು. ಆ ಅಧಿವೇಶನಕ್ಕೆ ಬಂದವರು ಮಾರ್ಚ್‌ 31ರಂದು ಜನ್ರಿಗೆ ಸಿಹಿಸುದ್ದಿ ಸಾರಿದ್ರು. ಈ ತರ ಸಾರೋಕಂತಾನೇ ಒಂದು ದಿನ ಇಟ್ಟಿದ್ರಿಂದ ಏನಾದ್ರೂ ಪ್ರಯೋಜನ ಆಯ್ತಾ? ತುಂಬ ಜನ್ರಿಗೆ ಸಿಹಿಸುದ್ದಿ ಸಾರೋಕೆ ಆಯ್ತು. ಅಷ್ಟೇ ಅಲ್ಲ, ಆಗಸ್ಟ್‌ 5ನೇ ತಾರೀಕು ವಿನ್ನಿಪೆಗ್‌ನಲ್ಲಿ ನಡೆದ ಇನ್ನೊಂದು ಅಧಿವೇಶನಕ್ಕೆ ಸುಮಾರು 7,000 ಜನ ಬಂದ್ರು. ಕೆನಡಾದಲ್ಲಿ ನಡೆದ ಅಧಿವೇಶನಗಳಲ್ಲಿ ಅಲ್ಲಿ ತನಕ ಯಾವತ್ತೂ ಅಷ್ಟು ಜನ ಬಂದಿರ್ಲಿಲ್ಲ.

1923ರಲ್ಲಿ ಆಗಸ್ಟ್‌ 18-26ರ ತನಕ ಒಂದು ವಿಶೇಷ ಅಧಿವೇಶನ ನಡೀತು. ಅದು ಕ್ಯಾಲಿಫೋರ್ನಿಯದ ಲಾಸ್‌ ಏಂಜಲೀಸ್‌ನಲ್ಲಿತ್ತು. ಈ ಅಧಿವೇಶನದ ಬಗ್ಗೆ ನ್ಯೂಸ್‌ ಪೇಪರ್‌ಗಳಲ್ಲಿ ಹಾಕಿದ್ರು. ಅಷ್ಟೇ ಅಲ್ಲ ಸುಮಾರು 5,00,000 ಕರಪತ್ರಗಳನ್ನ ಹಂಚಿದ್ರು, ಬ್ಯಾನರ್‌ಗಳನ್ನ ಟ್ಯಾಕ್ಸಿ ಕಾರುಗಳಿಗೆ ಮತ್ತು ಸ್ವಂತ ಕಾರುಗಳಿಗೆ ಅಂಟಿಸಿ ಜಾಹೀರಾತು ಕೊಟ್ರು.

ಲಾಸ್‌ ಏಂಜಲೀಸ್‌ನಲ್ಲಿ ನಡೆದ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನ

ಆಗಸ್ಟ್‌ 25, ಶನಿವಾರದಂದು ಸಹೋದರ ರದರ್‌ಫರ್ಡ್‌ “ಕುರಿಗಳು ಮತ್ತು ಆಡುಗಳು” ಅಂತ ಒಂದು ಭಾಷಣ ಕೊಟ್ರು. ಅವರು ಆ ಭಾಷಣದಲ್ಲಿ “ಕುರಿಗಳು” ಅಂದ್ರೆ, ಪರದೈಸಲ್ಲಿ ಜೀವಿಸೋ ಯೋಗ್ಯತೆ ಇರೋ ಒಳ್ಳೇ ಮನಸ್ಸಿನ ಜನ್ರು ಅಂತ ಹೇಳಿದ್ರು. ಅವರು ಇನ್ನೊಂದು ಭಾಷಣನೂ ಕೊಟ್ರು. ಅದ್ರಲ್ಲಿ “ಎಚ್ಚರಿಕೆ” ಅಂತ ಹೇಳಿದ್ರು. ಚರ್ಚಿಲ್ಲಿ ಹೇಳೋದೆಲ್ಲ ಶುದ್ಧ ಸುಳ್ಳು, ಒಳ್ಳೇ ಮನಸ್ಸಿನ ಜನ್ರು ‘ಮಹಾ ಬಾಬೆಲ್‌ನ’ ಬಿಟ್ಟು ಬರಬೇಕು ಅಂತ ಹೇಳಿದ್ರು. (ಪ್ರಕ. 18:2, 4) ಈ ಎಚ್ಚರಿಕೆ ಸಂದೇಶನ ಕರಪತ್ರಗಳಲ್ಲಿ ಪ್ರಿಂಟ್‌ ಮಾಡಿದ್ರು. ಅದನ್ನ ಬೈಬಲ್‌ ವಿದ್ಯಾರ್ಥಿಗಳು ಲಕ್ಷಾಂತರ ಜನ್ರಿಗೆ ಕೊಟ್ರು.

“ಈ ಕೂಟಗಳಿಂದ ನಿಮ್ಮ ನಂಬಿಕೆ ಬಲವಾಗುತ್ತೆ”

ಈ ಅಧಿವೇಶನದ ಕೊನೇ ದಿನದಲ್ಲಿ ಸುಮಾರು 30,000 ಜನ ಬಂದಿದ್ರು. ಅವತ್ತು ಸಹೋದರ ರದರ್‌ಫರ್ಡ್‌ ಸಾರ್ವಜನಿಕ ಭಾಷಣ ಕೊಟ್ರು. ಅದ್ರ ವಿಷ್ಯ “ಕೋಟಿಗಟ್ಟಲೆ ಜನ್ರು ಹರ್ಮಗೆದೋನ್‌ ಯುದ್ಧಕ್ಕೆ ಹೋಗ್ತಿದ್ದಾರೆ, ಆದ್ರೆ ಲಕ್ಷಾಂತರ ಜನ್ರು ಮಾತ್ರ ಪಾರಾಗ್ತಾರೆ.” ತುಂಬ ಜನ ಬಂದಿದ್ರಿಂದ ಸಹೋದರರು ಲಾಸ್‌ ಏಂಜಲೀಸ್‌ನಲ್ಲಿ ಹೊಸದಾಗಿ ಕಟ್ಟಿದ್ದ ಕೊಲಿಸಿಯಮ್‌ ಸ್ಟೇಡಿಯಮ್‌ನ ಬಾಡಿಗೆಗೆ ತಗೊಂಡ್ರು. ಎಲ್ರೂ ಭಾಷಣವನ್ನ ಚೆನ್ನಾಗಿ ಕೇಳಿಸ್ಕೊಳ್ಳಬೇಕು ಅಂತ ಸ್ಪೀಕರ್‌ ವ್ಯವಸ್ಥೆ ಮಾಡಿದ್ರು. ಆ ಕಾಲದಲ್ಲಿ ಈ ಮುಂಚೆ ಸ್ಪೀಕರ್‌ಗಳೇ ಇರ್ಲಿಲ್ಲ. ಈ ಭಾಷಣವನ್ನ ಇನ್ನೂ ತುಂಬ ಜನ್ರು ರೇಡಿಯೋದಲ್ಲಿ ಕೇಳಿಸ್ಕೊಂಡ್ರು.

ಸಿಹಿಸುದ್ದಿ ಎಲ್ಲಾ ಕಡೆ ಹರಡಿತು

1923ರಲ್ಲಿ ಆಫ್ರಿಕಾ, ಯೂರೋಪ್‌, ಭಾರತ ಮತ್ತು ದಕ್ಷಿಣ ಅಮೆರಿಕಾದಲ್ಲಿ ಸಿಹಿಸುದ್ದಿ ಹರಡಿತು. ಭಾರತದಲ್ಲಿದ್ದ ಸಹೋದರ ಎ. ಜೆ. ಜೋಸೆಫ್‌ ತಮ್ಮ ಹೆಂಡತಿ ಮತ್ತು ಆರು ಮಕ್ಕಳನ್ನ ನೋಡ್ಕೊಳ್ಳೋದ್ರ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಉರ್ದು ಭಾಷೆಯಲ್ಲಿ ಪತ್ರಿಕೆಗಳನ್ನ ಮಾಡೋಕೆ ಸಹಾಯ ಮಾಡಿದ್ರು.

ವಿಲಿಯಂ ಆರ್‌. ಬ್ರೌನ್‌ ಮತ್ತು ಅವ್ರ ಕುಟುಂಬ

ಸಿಯೆರಾ ಲಿಯೋನ್‌ನಲ್ಲಿ ಆಲ್ಫ್ರೆಡ್‌ ಜೋಸೆಫ್‌ ಮತ್ತು ಲೆನರ್ಡ್‌ ಬ್ಲ್ಯಾಕ್‌ಮನ್‌ ಅನ್ನೋ ಇಬ್ರು ಬೈಬಲ್‌ ವಿದ್ಯಾರ್ಥಿಗಳು ಬ್ರೂಕ್ಲಿನ್‌ ಬೆತೆಲಿಗೆ ಒಂದು ಪತ್ರ ಬರೆದ್ರು. 1923ರ ಏಪ್ರಿಲ್‌ 14ರಂದು ಅವ್ರಿಗೆ ಉತ್ರ ಸಿಕ್ತು. ಅದ್ರ ಬಗ್ಗೆ ಆಲ್ಫ್ರೆಡ್‌ ಹೀಗೆ ಹೇಳ್ತಾರೆ: “ಶನಿವಾರ ರಾತ್ರಿ ನನಗೊಂದು ಕಾಲ್‌ ಬಂತು.” ಒಬ್ಬ ವ್ಯಕ್ತಿ ಗಡಸು ಧ್ವನಿಯಲ್ಲಿ ಆಲ್ಫ್ರೆಡ್‌ ಹತ್ರ “ಸಿಹಿಸುದ್ದಿ ಸಾರೋಕೆ ಪ್ರಚಾರಕರು ಬೇಕು ಅಂತ ವಾಚ್‌ ಟವರ್‌ ಸೊಸೈಟಿಗೆ ಪತ್ರ ಬರೆದಿದ್ದು ನೀವೇನಾ?” ಅಂತ ಕೇಳಿದ್ರು. ಅದಕ್ಕೆ ಆಲ್ಫ್ರೆಡ್‌ “ಹೌದು” ಅಂತ ಹೇಳಿದಾಗ ಫೋನಲ್ಲಿ ಮಾತಾಡ್ತಿದ್ದ ಆ ವ್ಯಕ್ತಿ, “ನನ್ನನ್ನೇ ಕಳಿಸಿದ್ದಾರೆ” ಅಂತ ಹೇಳಿದ್ರು. ಆ ವ್ಯಕ್ತಿ ಹೆಸ್ರು ವಿಲಿಯಂ ಆರ್‌. ಬ್ರೌನ್‌. ಅವರು ಕೆರೀಬಿಯನ್‌ನಿಂದ ತಮ್ಮ ಹೆಂಡತಿ ಆಂಟೋನ್ಯಾ ಮತ್ತು ಇಬ್ರು ಹೆಣ್ಮಕ್ಕಳು ಲೂಯಿಸ್‌ ಮತ್ತು ಲೂಸೀ ಜೊತೆ ಬಂದಿದ್ರು.

ಆಲ್ಫ್ರೆಡ್‌ ಹೀಗೆ ಹೇಳ್ತಾರೆ “ಮಾರನೇ ದಿನ ಬೆಳಗ್ಗೆ, ನಾನು ಮತ್ತು ಲೆನರ್ಡ್‌ ಪ್ರತಿವಾರ ಮಾಡೋ ಹಾಗೇ ಬೈಬಲನ್ನ ಓದಿ ಚರ್ಚಿಸ್ತಿದ್ವಿ. ಆಗ ಬಾಗಿಲ ಹತ್ರ ಯಾರೋ ಎತ್ತರವಾಗಿರೋ ಮನುಷ್ಯ ನಿಂತ ಹಾಗಾಯ್ತು. ಯಾರು ಅಂತ ತಲೆ ಎತ್ತಿ ನೋಡಿದ್ರೆ ವಿಲಿಯಂ ಆರ್‌. ಬ್ರೌನ್‌. ಅವ್ರಿಗೆ ಸಿಹಿಸುದ್ದಿ ಸಾರೋಕೆ ತುಂಬ ಹುರುಪಿತ್ತು. ಅದು ಎಷ್ಟಿತ್ತಂದ್ರೆ ಮಾರನೇ ದಿನಾನೇ ಸಾರ್ವಜನಿಕ ಭಾಷಣ ಕೊಡೋಕೆ ರೆಡಿ ಇದ್ರು.” ಬರೀ ಒಂದು ತಿಂಗಳ ಒಳಗೇ ಅವರು ತಂದಿದ್ದ ಎಲ್ಲಾ ಪುಸ್ತಕ ಪತ್ರಿಕೆಗಳನ್ನ ಜನ್ರಿಗೆ ಕೊಟ್ಟುಬಿಟ್ರು. ಅಷ್ಟರೊಳಗೆ ಇನ್ನೂ 5000 ಪುಸ್ತಕಗಳನ್ನ ಅವರು ತರಿಸ್ಕೊಂಡ್ರು. ಆದ್ರೆ ಆ ಪುಸ್ತಕಗಳೂ ಸಾಕಾಗ್ಲಿಲ್ಲ, ಇನ್ನೂ ಬೇಕಿತ್ತು. ಆದ್ರೂ ಜನ ಅವ್ರನ್ನ ಪುಸ್ತಕ ಮಾರಾಟಗಾರ ಅಂತ ಹೇಳಲಿಲ್ಲ, ಬದ್ಲಿಗೆ ಬೈಬಲ್‌ ಬ್ರೌನ್‌ ಅಂತ ಕರೀತಿದ್ರು. ಯಾಕಂದ್ರೆ ಅವರು ಭಾಷಣ ಕೊಡುವಾಗೆಲ್ಲ ತುಂಬ ವಚನಗಳಿಂದ ಕಲಿಸ್ತಾ ಇದ್ರು.

1923ರಲ್ಲಿದ್ದ ಮ್ಯಾಗ್ಡೆಬರ್ಗ್‌ ಬೆತೆಲ್‌

ಜರ್ಮನಿಯಲ್ಲಿರೋ ಬಾರ್ಮೆನ್‌ ಬೆತೆಲನ್ನ ಬೇರೆ ಕಡೆ ಸ್ಥಳಾಂತರಿಸಬೇಕು ಅಂತ ಸಹೋದರರು ತೀರ್ಮಾನಿಸಿದ್ರು. ಯಾಕಂದ್ರೆ ಅದು ತುಂಬ ಚಿಕ್ಕದಾಗಿತ್ತು. ಅದೂ ಅಲ್ಲದೇ, ಫ್ರಾನ್ಸ್‌ನವರು ಇನ್ನೇನು ಸ್ವಲ್ಪ ದಿನದಲ್ಲೇ ಆ ಊರನ್ನ ವಶಪಡಿಸ್ಕೊಳ್ತೀವಿ ಅಂತ ಬೆದರಿಕೆ ಹಾಕಿದ್ರು. ನಮ್ಮ ಸಹೋದರರಿಗೆ ಮ್ಯಾಗ್ಡೆಬರ್ಗ್‌ನಲ್ಲಿ ಒಂದು ಕಟ್ಟಡ ಸಿಕ್ತು. ಅದು ಅವ್ರಿಗೆ ಪತ್ರಿಕೆಗಳನ್ನ ಪ್ರಿಂಟ್‌ ಮಾಡೋಕೆ ಒಳ್ಳೇ ಜಾಗ ಆಗಿತ್ತು. ಜೂನ್‌ 19ರಷ್ಟಕ್ಕೆ ಸಹೋದರರು ಪ್ರಿಂಟಿಂಗ್‌ಗೆ ಬೇಕಾದ ವಸ್ತುಗಳನ್ನ ಮತ್ತು ಬೇರೆ ವಸ್ತುಗಳನ್ನ ಮ್ಯಾಗ್ಡೆಬರ್ಗ್‌ನಲ್ಲಿದ್ದ ಹೊಸ ಬೆತೆಲಿಗೆ ಕಳಿಸಿಬಿಟ್ರು. ಅವರು ಹೊಸ ಬೆತೆಲಿಗೆ ತಲುಪಿದ್ದಾರೆ ಅಂತ ಮುಖ್ಯಕಾರ್ಯಾಲಯಕ್ಕೆ ಸುದ್ದಿ ಬಂದ ಮಾರನೇ ದಿನನೇ ಫ್ರಾನ್ಸ್‌ನವರು ಬಾರ್ಮೆನ್‌ನನ್ನ ವಶಪಡಿಸ್ಕೊಂಡ್ರು. ಇದು ನ್ಯೂಸ್‌ ಪೇಪರಲ್ಲಿ ಬಂತು. ಅದನ್ನ ನೋಡಿದಾಗ ಸಹೋದರರಿಗೆ ಯೆಹೋವನೇ ಅವ್ರ ಕೈ ಹಿಡಿದು ಕರ್ಕೊಂಡು ಬಂದ ಹಾಗೆ ಅನಿಸ್ತು. ಅದಕ್ಕೆ ಅವರು ಯೆಹೋವನಿಗೆ ತುಂಬ ಥ್ಯಾಂಕ್ಸ್‌ ಹೇಳಿದ್ರು.

ಜಾರ್ಜ್‌ ಯಂಗ್‌, ಸಾರಾ ಫರ್ಗಸನ್‌ (ಬಲಕ್ಕೆ) ಮತ್ತು ಅವ್ರ ಸಹೋದರಿ ಜೊತೆ ನಿಂತಿದ್ದಾರೆ

ಜಾರ್ಜ್‌ ಯಂಗ್‌ ಅನ್ನೋ ಸಹೋದರನಿಗೆ ಸಿಹಿಸುದ್ದಿಯನ್ನ ಎಲ್ಲಾ ಕಡೆ ಸಾರಬೇಕು ಅನ್ನೋ ಆಸೆ ಇದ್ದಿದ್ರಿಂದ ತುಂಬ ಕಡೆ ಹೋಗ್ತಿದ್ರು. ಹೀಗೆ ಅವರು ಬ್ರೆಜಿಲ್‌ಗೆ ಬಂದಾಗ ಒಂದು ಹೊಸ ಬೆತೆಲನ್ನ ಶುರುಮಾಡೋಕೆ ಮತ್ತು ಪೋರ್ಚುಗೀಸ್‌ ಭಾಷೆಯಲ್ಲಿ ಕಾವಲಿನ ಬುರುಜುನ ಬಿಡುಗಡೆ ಮಾಡೋಕೆ ಸಹಾಯ ಮಾಡಿದ್ರು. ಕೆಲವೇ ತಿಂಗಳಲ್ಲಿ ಅವರು 7,000 ಪತ್ರಿಕೆಗಳನ್ನ ಜನ್ರಿಗೆ ಕೊಟ್ರು. ಬ್ರೆಜಿಲ್‌ನಲ್ಲಿ ಸಾರಾ ಫರ್ಗಸನ್‌ ಅನ್ನೋ ಒಬ್ರು ಸ್ತ್ರೀ ಇದ್ರು. ಅವರು 1899ರಿಂದ ಕಾವಲಿನ ಬುರುಜು ಪತ್ರಿಕೆಗಳನ್ನ ಓದ್ತಾ ಇದ್ರು. ಆದ್ರೆ ಇನ್ನೂ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡಿರ್ಲಿಲ್ಲ. ಸಹೋದರ ಜಾರ್ಜ್‌ ಯಂಗ್‌ ಅವ್ರನ್ನ ಭೇಟಿ ಮಾಡಿದ ಮೇಲೆ ಸಾರಾ ಮತ್ತು ಅವ್ರ ನಾಲ್ಕು ಜನ ಮಕ್ಕಳು ದೀಕ್ಷಾಸ್ನಾನ ತಗೊಂಡ್ರು.

ಹುರುಪಿಂದ ಯೆಹೋವನ ಸೇವೆ ಮಾಡೋಣ

1923ರಲ್ಲಿ ತುಂಬ ಬದಲಾವಣೆಗಳನ್ನ ಮಾಡಿದ್ರಿಂದ ಏನು ಪ್ರಯೋಜನ ಆಯ್ತು? “ಸಹೋದರ ಸಹೋದರಿಯರ ನಂಬಿಕೆ ಗಟ್ಟಿ ಆಯ್ತು. ನಾವು ಹೀಗೆ ಯೆಹೋವನ ಸೇವೆಯನ್ನ ಹುರುಪಿಂದ ಮಾಡೋಣ. ಮುಂದಿನ ವರ್ಷನೂ ಯೆಹೋವನ ಸೇವೆಯನ್ನ ಉಲ್ಲಾಸದಿಂದ ಮುಂದುವರಿಸೋಣ” ಅಂತ ಡಿಸೆಂಬರ್‌ 15, 1923ರ ಕಾವಲಿನ ಬುರುಜು ಹೇಳ್ತು.

1924ರಲ್ಲೂ ಬೈಬಲ್‌ ವಿದ್ಯಾರ್ಥಿಗಳು ಒಂದು ದೊಡ್ಡ ಸಾಧನೆ ಮಾಡಿದ್ರು. ಸಹೋದರರು ತಿಂಗಳಾನುಗಟ್ಟಲೆ ಸ್ಟೇಟನ್‌ ಐಲ್ಯಾಂಡ್‌ನಲ್ಲಿ ಕಷ್ಟ ಪಟ್ಟು ಕಟ್ಟಡಗಳನ್ನ ಕಟ್ತಿದ್ರು. ಆ ಜಾಗ ಬ್ರೂಕ್ಲಿನ್‌ಗೆ ತುಂಬ ಹತ್ರದಲ್ಲಿತ್ತು. 1924ರ ಆರಂಭದಲ್ಲಿ ಅವರು ಕೆಲಸ ಮುಗಿಸಿಬಿಟ್ರು. ಆ ಕಟ್ಟಡಗಳು ಮುಂದೆ ಸಹೋದರ ಸಹೋದರಿಯರಿಗೆ ಒಗ್ಗಟ್ಟಾಗಿರೋಕೆ ಮತ್ತು ಸಿಹಿಸುದ್ದಿನ ಇನ್ನೂ ತುಂಬ ಜನ್ರಿಗೆ ಸಾರೋಕೆ ಸಹಾಯ ಮಾಡ್ತು.

ಸ್ಟೇಟನ್‌ ಐಲ್ಯಾಂಡಲ್ಲಿ ಕೆಲಸ ಮಾಡಿದ ಟೀಮ್‌

a ಈಗ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ