ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 44

ದೇವರ ವಾಕ್ಯನ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ

ದೇವರ ವಾಕ್ಯನ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ

‘ಸತ್ಯದ ಉದ್ದ ಅಗಲ ಎತ್ತರ ಆಳ ಎಷ್ಟಂತ ಸಂಪೂಣವಾಗಿ ಅರ್ಥ ಮಾಡ್ಕೊಳ್ಳಿ.’—ಎಫೆ. 3:18.

ಗೀತೆ 116 ಬೆಳಕು ಹೆಚ್ಚುತ್ತದೆ

ಈ ಲೇಖನದಲ್ಲಿ ಏನಿದೆ? a

1-2. ಬೈಬಲನ್ನ ಚೆನ್ನಾಗಿ ಓದಿ ಅಧ್ಯಯನ ಮಾಡೋಕೆ ಏನು ಮಾಡಬೇಕು? ಅದಕ್ಕೊಂದು ಉದಾಹರಣೆ ಕೊಡಿ.

 ನೀವೊಂದು ಮನೆ ತಗೊಳ್ತಿದ್ದೀರ ಅಂದ್ಕೊಳ್ಳಿ. ಆ ಮನೆ ನೋಡೋಕೆ ಹೇಗಿದೆ ಅಂತ ನೀವು ಬರೀ ಒಂದು ಫೋಟೋ ನೋಡಿ ನಿರ್ಧಾರ ಮಾಡ್ತೀರಾ? ನೀವೇ ಆ ಮನೆಗೆ ಹೋಗಿ ಅದು ಹೇಗಿದೆ, ರೂಮ್‌ ಹೇಗಿದೆ ಅಂತೆಲ್ಲ ನೋಡ್ತೀರ. ಆ ಮನೆಯನ್ನ ಹೇಗೆ ಕಟ್ಟಿದ್ದಾರೆ ಅಂತನೂ ಓನರ್‌ ಹತ್ರ ಕೇಳಿ ತಿಳ್ಕೊಳ್ತೀರ. ಹೀಗೆ ಒಂದೊಂದು ಮೂಲೆನೂ ನೋಡಿ ಆ ಮನೆ ತಗೊಳ್ತೀರ.

2 ಬೈಬಲನ್ನ ಓದಿ ಅಧ್ಯಯನ ಮಾಡುವಾಗಲೂ ಇದೇ ತರ ಮಾಡಬೇಕು. “ಬೈಬಲ್‌ ತುಂಬ ದೊಡ್ಡದಾಗಿರೋ, ಎತ್ತರದಲ್ಲಿರೋ ಕಟ್ಟಡದ ತರ. ಅದಕ್ಕೆ ಆಳವಾದ ತಳಪಾಯ ಇರುತ್ತೆ” ಅಂತ ಒಬ್ಬ ಬರಹಗಾರ ಹೇಳಿದ. ಬೈಬಲನ್ನ ಚೆನ್ನಾಗಿ ಓದಿ ತಿಳ್ಕೊಬೇಕಂದ್ರೆ, ಮೇಲ್ಮೇಲೆ ಓದಿದ್ರೆ ಸಾಕಾಗಲ್ಲ. ಹಾಗೆ ಓದಿದ್ರೆ ಬರೀ ಕೆಲವು ವಿಷ್ಯಗಳನ್ನ ಮಾತ್ರ ತಿಳ್ಕೊಳ್ಳೋಕೆ ಆಗುತ್ತೆ. ಅದ್ರಲ್ಲಿ “ಮೊದಮೊದ್ಲು ಕಲಿತ” ವಿಷ್ಯಗಳಷ್ಟೇ ಇರುತ್ತೆ. (ಇಬ್ರಿ. 5:12) ನಾವು ಹೇಗೆ ಒಂದು ಮನೆ “ಒಳಗಡೆ” ಹೋಗಿ ಒಂದೊಂದು ಮೂಲೆನೂ ನೋಡ್ತೀವೋ, ಹಾಗೇ ಬೈಬಲಿನಲ್ಲಿರೋ ಚಿಕ್ಕಚಿಕ್ಕ ವಿಷ್ಯಗಳನ್ನ ಗಮನಿಸಬೇಕು. ಈ ರೀತಿ ಓದಬೇಕು ಅಂದ್ರೆ ನಾವೇನು ಮಾಡಬೇಕು? ಬೈಬಲಿನಲ್ಲಿರೋ ವಿಷ್ಯಗಳು ಹೇಗೆ ಒಂದಕ್ಕೊಂದು ಸಂಬಂಧಪಟ್ಟಿದೆ ಅಂತ ಯೋಚ್ನೆ ಮಾಡಬೇಕು. ಜೊತೆಗೆ ಬೈಬಲಲ್ಲಿರೋ ಯಾವ ವಿಷ್ಯಗಳನ್ನ ನೀವು ನಂಬ್ತೀರ ಅನ್ನೋದನ್ನಷ್ಟೇ ಅಲ್ಲ, ಯಾಕೆ ನಂಬ್ತೀರ ಅಂತನೂ ಯೋಚಿಸಬೇಕು.

3. ಅಪೊಸ್ತಲ ಪೌಲ ಸಹೋದರ ಸಹೋದರಿಯರಿಗೆ ಏನು ಮಾಡೋಕೆ ಹೇಳಿದ ಮತ್ತು ಯಾಕೆ? (ಎಫೆಸ 3:14-19)

3 ಬೈಬಲಿನಲ್ಲಿರೋ ಆಳವಾದ ಸತ್ಯಗಳನ್ನ ತಿಳ್ಕೊಂಡ್ರೆ, ಬೈಬಲನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ. ಅಪೊಸ್ತಲ ಪೌಲ ಸಹೋದರ ಸಹೋದರಿಯರಿಗೆ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡೋಕೆ ಹೇಳಿದ. ಅವರು ಹಾಗೆ ಮಾಡಿದ್ರೆ “ಸತ್ಯದ ಉದ್ದ ಅಗಲ ಎತ್ತರ ಆಳ ಎಷ್ಟಂತ ಸಂಪೂಣವಾಗಿ ಅರ್ಥ” ಮಾಡ್ಕೊಳ್ಳೋಕೆ ಆಗ್ತಿತ್ತು. ಅಷ್ಟೇ ಅಲ್ಲ ಅವರ ನಂಬಿಕೆ “ಬಲವಾಗಿ” ಬೇರೂರೋಕೆ ಮತ್ತು “ಸ್ಥಿರವಾಗಿ” ನಿಲ್ಲೋಕೆ ಅದು ಸಹಾಯ ಮಾಡ್ತಿತ್ತು. (ಎಫೆಸ 3:14-19 ಓದಿ.) ಅವ್ರ ತರ ನಾವೂ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡೋಕೆ ಏನು ಮಾಡಬೇಕು ಅಂತ ಈಗ ನೋಡೋಣ.

ಬೈಬಲಲ್ಲಿರೋ ಆಳವಾದ ಸತ್ಯಗಳನ್ನ ಹುಡುಕಿ

4. ದೇವರಿಗೆ ಹತ್ರ ಆಗೋಕೆ ಏನು ಮಾಡಬೇಕು? ಉದಾಹರಣೆ ಕೊಡಿ.

4 ಕ್ರೈಸ್ತರಾಗಿರೋ ನಾವು ಬೈಬಲಲ್ಲಿರೋ ಕೆಲವು ವಿಷ್ಯಗಳನ್ನ ತಿಳ್ಕೊಂಡ್ರೆ ಮಾತ್ರ ಸಾಕಾಗಲ್ಲ, ಯೆಹೋವನ ಬಗ್ಗೆ ಇರೋ “ಗಾಢವಾದ ವಿಷ್ಯಗಳನ್ನ” ತಿಳ್ಕೊಬೇಕು. ಅದಕ್ಕೆ ಆತನು ಕೊಡೋ ಪವಿತ್ರ ಶಕ್ತಿ ಸಹಾಯ ಮಾಡುತ್ತೆ. (1 ಕೊರಿಂ. 2:9, 10) ಅದನ್ನ ತಿಳ್ಕೊಳ್ಳೋಕೆ ಮತ್ತು ದೇವರಿಗೆ ಹತ್ರ ಆಗೋಕೆ ಬೈಬಲ್‌ ಪ್ರಾಜೆಕ್ಟ್‌ ಮಾಡಿ. ಉದಾಹರಣೆಗೆ, ಯೆಹೋವ ದೇವರು ಹಿಂದಿನ ಕಾಲದಲ್ಲಿ ತನ್ನ ಸೇವಕರಿಗೆ ಹೇಗೆಲ್ಲ ಪ್ರೀತಿ ತೋರಿಸಿದನು ಅಂತ ಹುಡುಕಿ. ಆಗ ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ. ಅಥವಾ ಯೆಹೋವ ದೇವರು ಇಸ್ರಾಯೇಲ್ಯರಿಗೆ ಹೇಗೆ ಆರಾಧನೆ ಮಾಡೋಕೆ ಹೇಳಿದ್ದನು ಅಂತ ಹುಡುಕಿ. ಆಗ ನಾವೂ ಅದೇ ತರ ಮಾಡ್ತಿದ್ದೀವಾ ಅಂತ ಗೊತ್ತಾಗುತ್ತೆ. ಇಲ್ಲಾಂದ್ರೆ ಯೇಸು ಭೂಮಿಗೆ ಬಂದ್ಮೇಲೆ ಆತನ ಬಗ್ಗೆ ಇರೋ ಭವಿಷ್ಯವಾಣಿಗಳು ಹೇಗೆಲ್ಲ ನಿಜ ಆಯ್ತು ಅಂತ ಅಧ್ಯಯನ ಮಾಡಿ.

5. ನೀವು ಯಾವ ವಿಷ್ಯದ ಬಗ್ಗೆ ಪ್ರಾಜೆಕ್ಟ್‌ ಮಾಡಬೇಕು ಅಂತ ಅಂದ್ಕೊಂಡಿದ್ದೀರಾ?

5 ನಾವು ಯಾವ ವಿಷ್ಯದ ಬಗ್ಗೆ ಪ್ರಾಜೆಕ್ಟ್‌ ಮಾಡಬಹುದು? ಇದ್ರ ಬಗ್ಗೆ ಕೆಲವು ಸಹೋದರ ಸಹೋದರಿಯರ ಹತ್ರ ಮಾತಾಡಿದಾಗ ಅವರು ಕೆಲವೊಂದು ವಿಷ್ಯಗಳನ್ನ ಹೇಳಿದ್ರು. ಅದು “ ಇದ್ರ ಬಗ್ಗೆ ಬೈಬಲ್‌ ಪ್ರಾಜೆಕ್ಟ್‌ ಮಾಡಿ” ಅನ್ನೋ ಚೌಕದಲ್ಲಿದೆ. ಇಂಥ ವಿಷ್ಯಗಳ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋದ್ರಲ್ಲಿ ಹುಡುಕಿ ನೋಡಿ. ಈ ತರ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿದ್ರೆ ಬೋರ್‌ ಆಗಲ್ಲ. ನಮ್ಮ ನಂಬಿಕೆನೂ ಗಟ್ಟಿಯಾಗುತ್ತೆ ಮತ್ತು ‘ದೇವರ ಬಗ್ಗೆ ಹೆಚ್ಚು ಕಲಿಯೋಕೂ’ ಆಗುತ್ತೆ. (ಜ್ಞಾನೋ. 2:4, 5) ನಾವೀಗ ಬೈಬಲಲ್ಲಿರೋ ಕೆಲವು ಆಳವಾದ ಸತ್ಯಗಳನ್ನ ಹುಡುಕೋಣ.

ಯೆಹೋವನ ಉದ್ದೇಶದ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ

6. (ಎ) ಪ್ಲ್ಯಾನ್‌ಗೂ ಉದ್ದೇಶಕ್ಕೂ ಏನು ವ್ಯತ್ಯಾಸ? (ಬಿ) ಮನುಷ್ಯರಿಗಾಗಿ ಮತ್ತು ಭೂಮಿಗಾಗಿ ಇರೋ ಯೆಹೋವನ ಉದ್ದೇಶ ‘ಶಾಶ್ವತವಾಗಿರುತ್ತೆ’ ಅಂತ ಹೇಗೆ ಹೇಳಬಹುದು? (ಎಫೆಸ 3:11)

6 ಒಂದು ಪ್ಲ್ಯಾನ್‌ಗೂ ಉದ್ದೇಶಕ್ಕೂ ತುಂಬ ವ್ಯತ್ಯಾಸ ಇದೆ. ಈಗ ನೀವು ಒಂದು ಜಾಗಕ್ಕೆ ಹೋಗಬೇಕು ಅಂತಿದ್ದೀರ ಅಂದ್ಕೊಳ್ಳಿ. ಅಲ್ಲಿಗೆ ಹೋಗೋಕೆ ನೀವು ಎಲ್ಲಾನೂ ರೆಡಿ ಮಾಡ್ಕೊಂಡಿರ್ತೀರ. ಒಂದು ದಾರಿಯಲ್ಲಿ ಹೋಗಬೇಕು ಅಂತ ಪ್ಲ್ಯಾನ್‌ ಮಾಡಿರ್ತೀರ. ಆದ್ರೆ ಒಂದುವೇಳೆ ಆ ದಾರಿನ ಮುಚ್ಚಿಬಿಟ್ಟಿದ್ದಾರೆ ಅಂತ ನಿಮಗೆ ಗೊತ್ತಾದ್ರೆ ನೀವು ಆ ಪ್ಲ್ಯಾನನ್ನೇ ಬಿಟ್ಟುಬಿಡಬೇಕಾಗುತ್ತೆ. ಆದ್ರೆ ಉದ್ದೇಶ ಹಾಗಲ್ಲ. ಯಾಕಂದ್ರೆ ನಮಗೆ ಎಲ್ಲಿಗೆ ಹೋಗಬೇಕು ಅಂತ ಚೆನ್ನಾಗಿ ಗೊತ್ತಿರೋದ್ರಿಂದ ಯಾವುದಾದ್ರೂ ಒಂದು ದಾರೀಲಿ ನಾವು ಹೋಗಬೇಕಾಗಿರೋ ಜಾಗಕ್ಕೆ ತಲುಪ್ತೀವಿ. ಯೆಹೋವ ಕೂಡ ಹಾಗೆನೇ. ಆತನಿಗೆ ಒಂದು “ಶಾಶ್ವತ ಉದ್ದೇಶ” ಇದೆ. (ಎಫೆ. 3:11) ಅದನ್ನ ನಮಗೆ ಒಂದೊಂದಾಗಿ ಹೇಳ್ತಾ ಬಂದಿದ್ದಾನೆ. ಆ ಉದ್ದೇಶನ ಸಾಧಿಸೋಕೆ ಯೆಹೋವ ಒಂದಿಲ್ಲ ಅಂದ್ರೆ ಇನ್ನೊಂದು ದಾರಿ ಆರಿಸ್ಕೊಳ್ತಾನೆ. ಯಾಕಂದ್ರೆ ತಾನು ಕೊಟ್ಟ “ಮಾತನ್ನ ಪೂರೈಸೋಕೆ ಪ್ರತಿಯೊಂದನ್ನ ಮಾಡಿದ್ದಾನೆ.” (ಜ್ಞಾನೋ. 16:4) ಆ ಉದ್ದೇಶ ನೆರವೇರಿದಾಗ ಸಿಗೋ ಆಶೀರ್ವಾದ ಶಾಶ್ವತವಾಗಿ ಇರುತ್ತೆ. ಹಾಗಾದ್ರೆ ಯೆಹೋವನ ಉದ್ದೇಶ ಏನು? ಅದನ್ನ ಸಾಧಿಸೋಕೆ ಒಂದು ದಾರಿ ಮುಚ್ಚಿ ಹೋದಾಗ ಇನ್ನೊಂದು ದಾರಿನ ಹೇಗೆ ಆರಿಸ್ಕೊಂಡನು?

7. ಆದಾಮ, ಹವ್ವ ಯೆಹೋವನ ಉದ್ದೇಶನ ಹಾಳುಮಾಡಿದಾಗ ಆತನು ಯಾವ ದಾರಿ ಹುಡುಕಿದನು? (ಮತ್ತಾಯ 25:34)

7 ದೇವರು ಮನುಷ್ಯರಿಗಾಗಿ ತನ್ನ ಉದ್ದೇಶ ಏನು ಅಂತ ಆದಾಮ ಹವ್ವಗೆ ಹೇಳಿದನು. ಆತನು ಅವ್ರಿಗೆ “ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ ತುಂಬ್ಕೊಳಿ. ಅದು ನಿಮ್ಮ ಅಧಿಕಾರದ ಕೆಳಗಿರಲಿ . . . ಎಲ್ಲ ಜೀವಿಗಳು ನಿಮ್ಮ ಕೈಕೆಳಗಿರಲಿ” ಅಂದನು. (ಆದಿ. 1:28) ಆದಾಮ ಹವ್ವ ಯೆಹೋವನ ಮಾತನ್ನ ಕೇಳದೇ ಆತನ ಉದ್ದೇಶನ ಹಾಳುಮಾಡಿದ್ರು. ಇದ್ರಿಂದ ಭೂಮಿಲಿರೋ ಎಲ್ರಿಗೂ ಪಾಪ, ಮರಣ ಬಂತು. ಹಾಗಂತ ಯೆಹೋವ ತನ್ನ ಉದ್ದೇಶನ ಕೈ ಬಿಟ್ಟುಬಿಟ್ನಾ? ಇಲ್ಲ. ಯೆಹೋವ ಇನ್ನೊಂದು ದಾರಿಯನ್ನ ಹುಡುಕಿದನು. ಸ್ವರ್ಗದಲ್ಲಿ ತನ್ನ ಆಳ್ವಿಕೆ ಶುರುಮಾಡೋಕೆ ಆತನು ತಕ್ಷಣ ತೀರ್ಮಾನಿಸಿದನು. (ಮತ್ತಾಯ 25:34 ಓದಿ.) ಆ ಆಳ್ವಿಕೆ ಬಗ್ಗೆ ಜನ್ರಿಗೆ ತಿಳಿಸೋಕೆ ಯೆಹೋವ ತನ್ನ ಮಗನನ್ನ ಭೂಮಿಗೆ ಕಳಿಸಿದನು. ಜನ್ರನ್ನ ಪಾಪ ಮತ್ತು ಮರಣದಿಂದ ಬಿಡಿಸೋಕೆ ಆತನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು. ಆಮೇಲೆ ಆತನು ಯೇಸುಗೆ ಮತ್ತೆ ಜೀವ ಕೊಟ್ಟು ಸ್ವರ್ಗದಲ್ಲಿ ತನ್ನ ಸರ್ಕಾರದ ರಾಜನಾಗಿ ನೇಮಿಸಿದನು. ಈಗ ನಾವು ದೇವರ ಇನ್ನೊಂದು ಉದ್ದೇಶದ ಬಗ್ಗೆ ನೋಡೋಣ.

ಭೂಮಿಯಲ್ಲಿ ಮತ್ತು ಸ್ವರ್ಗದಲ್ಲಿ ಇರೋರೆಲ್ಲ ಒಂದಾಗಿ ಯೆಹೋವ ದೇವರನ್ನ ನಿಯತ್ತಿಂದ ಆರಾಧಿಸುವಾಗ ನೀವೂ ಅಲ್ಲಿದ್ರೆ ಹೇಗಿರುತ್ತೆ? (ಪ್ಯಾರ 8 ನೋಡಿ)

8. (ಎ) ಬೈಬಲಲ್ಲಿರೋ ಮುಖ್ಯ ವಿಷ್ಯ ಯಾವುದು? (ಬಿ) ಎಫೆಸ 1:8-11ರಲ್ಲಿ ಹೇಳಿರೋ ತರ ಯೆಹೋವನ ಮುಖ್ಯ ಉದ್ದೇಶ ಏನು? (ಮುಖಪುಟ ಚಿತ್ರ ನೋಡಿ.)

8 ಯೆಹೋವ ತನ್ನ ಹೆಸ್ರಿಗೆ ಬಂದ ಕಳಂಕ ತೆಗೆದುಹಾಕ್ತಾನೆ. ಅದನ್ನ ಆತನು ಭೂಮಿ ಮೇಲೆ ತನ್ನ ಸರ್ಕಾರ ತಂದಾಗ ಮಾಡ್ತಾನೆ. ಇದೇ ಬೈಬಲಲ್ಲಿರೋ ಮುಖ್ಯ ವಿಷ್ಯ. ಯೆಹೋವ ದೇವರ ಉದ್ದೇಶ ಬದಲಾಗಲ್ಲ. ಅದು ಖಂಡಿತ ನೆರವೇರುತ್ತೆ. (ಯೆಶಾ. 46:10, 11 ಮತ್ತು ಪಾದಟಿಪ್ಪಣಿಗಳು; ಇಬ್ರಿ. 6:17, 18) ಇನ್ನು ಸ್ವಲ್ಪ ಸಮಯದಲ್ಲಿ ಇಡೀ ಭೂಮಿ ಸುಂದರ ತೋಟ ಆಗುತ್ತೆ. ಆಗ ಯಾವ ಕೊರತೆನೂ ಇರಲ್ಲ. ಅಲ್ಲಿ ನಾವೆಲ್ರೂ ‘ಶಾಶ್ವತವಾಗಿ ಜೀವನವನ್ನ ಆನಂದಿಸ್ತೀವಿ.’ (ಕೀರ್ತ. 22:26) ಇದಿಷ್ಟೇ ಅಲ್ಲ, ಯೆಹೋವ ದೇವರು ಇನ್ನೂ ತುಂಬ ವಿಷ್ಯಗಳನ್ನ ಮಾಡ್ತಾನೆ. ಮುಂದೆ ಸ್ವರ್ಗದಲ್ಲಿ, ಭೂಮಿಯಲ್ಲಿ ಇರೋ ತನ್ನ ಎಲ್ಲಾ ಸೇವಕರನ್ನ ಒಗ್ಗಟ್ಟಾಗಿರೋ ತರ ಮಾಡ್ತಾನೆ. ಅವರು ಆತನನ್ನ ರಾಜ ಅಂತ ಒಪ್ಕೊಳ್ತಾರೆ, ಆತನ ಮಾತು ಕೇಳ್ತಾರೆ. (ಎಫೆಸ 1:8-11 ಓದಿ.) ಯೆಹೋವ ತನ್ನ ಉದ್ದೇಶನ ಒಂದಲ್ಲಾ ಇನ್ನೊಂದು ದಾರಿಯಲ್ಲಿ ನೆರವೇರಿಸೋದನ್ನ ನೋಡುವಾಗ ನಮಗೆ ಆಶ್ಚರ್ಯ ಆಗುತ್ತೆ ಅಲ್ವಾ?

ಭವಿಷ್ಯದ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ

9. ನಾವು ಬೈಬಲ್‌ ಓದುವಾಗ ಭವಿಷ್ಯದ ಬಗ್ಗೆ ಯಾವೆಲ್ಲ ವಿಷ್ಯಗಳನ್ನ ತಿಳ್ಕೊತೀವಿ?

9 ಯೆಹೋವ ದೇವರು ಏದೆನ್‌ ತೋಟದಲ್ಲಿ ಒಂದು ಭವಿಷ್ಯವಾಣಿ ಹೇಳಿದನು. ಅದು ಆದಿಕಾಂಡ 3:15ರಲ್ಲಿದೆ. b ಈ ಭವಿಷ್ಯವಾಣಿ ನೆರವೇರೋಕೆ ತುಂಬ ಘಟನೆಗಳು ನಡೀಬೇಕಿತ್ತು. ಅಬ್ರಹಾಮನ ವಂಶದಲ್ಲಿ ಯೇಸು ಕ್ರಿಸ್ತ ಹುಟ್ಟಬೇಕಿತ್ತು. ಸೈತಾನ ಯೇಸು ಕ್ರಿಸ್ತನ ಕಾಲಿಗೆ ಗಾಯ ಮಾಡಬೇಕಿತ್ತು. (ಆದಿ. 22:15-18) ಅದನ್ನ ಅವನು ಕ್ರಿಸ್ತ ಶಕ 33ರಲ್ಲಿ ಮಾಡಿದ. (ಅ. ಕಾ. 3:13-15) ಇದೆಲ್ಲ ನಡಿಯೋಕೆ ಸಾವಿರಾರು ವರ್ಷಗಳು ಹಿಡೀತು. ಈ ಭವಿಷ್ಯವಾಣಿಯ ಕೊನೆಯಲ್ಲಿ ಸೈತಾನನ ತಲೆಯನ್ನ ಜಜ್ಜಲಾಗುತ್ತೆ ಅಂತನೂ ಹೇಳಿತ್ತು. ಇದು ನಡಿಯೋಕೆ ಸಾವಿರಕ್ಕಿಂತ ಜಾಸ್ತಿ ವರ್ಷಗಳು ಬೇಕು. (ಪ್ರಕ. 20:7-10) ಯೆಹೋವನ ಜನ್ರ ಮತ್ತು ಸೈತಾನನ ಕಡೆಯವ್ರ ನಡುವೆ ಇರೋ ದ್ವೇಷ ಇನ್ನೇನು ಮುಗಿಯೋಕೆ ಬಂದಾಗ ಏನೆಲ್ಲಾ ಆಗುತ್ತೆ ಅಂತನೂ ಬೈಬಲ್‌ ಹೇಳುತ್ತೆ.

10. (ಎ) ಬೇಗನೆ ಯಾವೆಲ್ಲ ಘಟನೆಗಳು ನಡಿಯುತ್ತೆ? (ಬಿ) ಅದಕ್ಕೆ ನಾವೆಲ್ರೂ ಹೇಗೆ ತಯಾರಾಗಬಹುದು? (ಪಾದಟಿಪ್ಪಣಿ ನೋಡಿ.)

10 ಯಾವ ಘಟನೆಗಳು ನಡಿಯುತ್ತೆ ಅಂತ ಈಗ ನೋಡೋಣ. ಮೊದಲನೇದಾಗಿ “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅಂತ ರಾಷ್ಟ್ರಗಳು ಘೋಷಣೆ ಮಾಡುತ್ತೆ. (1 ಥೆಸ. 5:2, 3) ಆಮೇಲೆ ಅವು ಸುಳ್ಳುಧರ್ಮಗಳ ಮೇಲೆ ಆಕ್ರಮಣ ಮಾಡುತ್ತೆ. ಆಗ “ದಿಢೀರಂತ” ಮಹಾ ಸಂಕಟ ಶುರುವಾಗುತ್ತೆ. (ಪ್ರಕ. 17:16) ಆಮೇಲೆ “ಮನುಷ್ಯಕುಮಾರ ಶಕ್ತಿ ಮತ್ತು ಮಹಾ ಅಧಿಕಾರದಿಂದ ಮೋಡಗಳ ಮೇಲೆ ಬರೋದನ್ನ ಅವರು ನೋಡ್ತಾರೆ.” (ಮತ್ತಾ. 24:30) ಆಗ ಯೇಸು ಆಡುಗಳು ಮತ್ತು ಕುರಿಗಳ ತರ ಇರೋ ಮನುಷ್ಯರನ್ನ ಬೇರೆಬೇರೆ ಮಾಡಿ ಅವ್ರಿಗೆ ನ್ಯಾಯ ತೀರಿಸ್ತಾನೆ. (ಮತ್ತಾ. 25:31-33, 46) ಇದನ್ನೆಲ್ಲ ನೋಡ್ಕೊಂಡು ಸೈತಾನ ಸುಮ್ನೆ ಇರ್ತಾನಾ? ಸೈತಾನನಿಗೆ ಯೆಹೋವನ ಸೇವಕರ ಮೇಲೆ ಎಷ್ಟು ಕೋಪ ಕುದಿತಾ ಇರುತ್ತಂದ್ರೆ ಅವ್ರ ಮೇಲೆ ಆಕ್ರಮಣ ಮಾಡೋಕೆ ಮಾಗೋಗಿನ ಗೋಗನನ್ನ ಅಂದ್ರೆ, ಜನಾಂಗಗಳ ಗುಂಪನ್ನ ಕಳಿಸ್ತಾನೆ. (ಯೆಹೆ. 38:2, 10, 11) ಇದಾದ ಸ್ವಲ್ಪ ಸಮಯದಲ್ಲೇ ಉಳಿದಿರೋ ಅಭಿಷಿಕ್ತ ಕ್ರೈಸ್ತರು ಸ್ವರ್ಗಕ್ಕೆ ಹೋಗ್ತಾರೆ. ಅವರು ಯೇಸು ಜೊತೆ ಸೇರಿ ಮಹಾ ಸಂಕಟದ ಕೊನೆಯಲ್ಲಿ ಹರ್ಮಗೆದೋನ್‌ ಯುದ್ಧ ಮಾಡ್ತಾರೆ. c (ಮತ್ತಾ. 24:31; ಪ್ರಕ. 16:14, 16) ಆಮೇಲೆ ಯೇಸು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆ ಭೂಮಿಯಲ್ಲಿ ಶುರುವಾಗುತ್ತೆ.—ಪ್ರಕ. 20:6.

ಕೋಟ್ಯಾಂತರ ವರ್ಷಗಳು ನಾವು ಯೆಹೋವನ ಬಗ್ಗೆ ಕಲಿಯುವಾಗ ಆತನಿಗೆ ನಾವು ಎಷ್ಟು ಹತ್ರ ಆಗ್ತೀವಿ ಅಂತ ಸ್ವಲ್ಪ ಯೋಚಿಸಿ (ಪ್ಯಾರ 11 ನೋಡಿ)

11. ಶಾಶ್ವತವಾಗಿ ಜೀವಿಸೋ ಸಮಯದಲ್ಲಿ ಯೆಹೋವನ ಜೊತೆ ನಿಮ್ಮ ಸಂಬಂಧ ಹೇಗಿರುತ್ತೆ? (ಚಿತ್ರನೂ ನೋಡಿ.)

11 ನಾವೀಗ ಸಾವಿರ ವರ್ಷದ ಆಳ್ವಿಕೆ ಆದ್ಮೇಲೆ ಏನಾಗುತ್ತೆ ಅಂತ ಯೋಚ್ನೆ ಮಾಡೋಣ. ದೇವರು ಮನುಷ್ಯರ ಹೃದಯದಲ್ಲಿ “ಶಾಶ್ವತವಾಗಿ ಜೀವಿಸೋ ಆಸೆಯನ್ನ” ಇಟ್ಟು ಸೃಷ್ಟಿ ಮಾಡಿದ್ದಾನೆ ಅಂತ ಬೈಬಲ್‌ ಹೇಳುತ್ತೆ. (ಪ್ರಸಂ. 3:11) ಹಾಗಾಗಿ ಶಾಶ್ವತವಾಗಿ ಜೀವಿಸುವಾಗ ನಮ್ಮ ಮತ್ತು ಯೆಹೋವನ ಮಧ್ಯ ಇರೋ ಸಂಬಂಧ ಹೇಗಿರುತ್ತೆ ಅಂತ ಸ್ವಲ್ಪ ಊಹಿಸಿ. ಇದ್ರ ಬಗ್ಗೆ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಪುಟ 319ರಲ್ಲಿ ಹೀಗೆ ಹೇಳುತ್ತೆ: “ನೂರಾರು, ಸಾವಿರಾರು, ಲಕ್ಷಾಂತರ, ಮತ್ತು ಕೋಟ್ಯಂತರ ವರ್ಷಗಳ ತನಕ ಜೀವಿಸಿದ ನಂತರ ನಮಗೆ ಯೆಹೋವ ದೇವರ ಕುರಿತು ಈಗ ತಿಳಿದಿರುವುದಕ್ಕಿಂತ ಎಷ್ಟೋ ಹೆಚ್ಚು ತಿಳಿದಿರುವುದು. ಆದರೂ ಕಲಿಯಲು ಅಗಣಿತ ಆಶ್ಚರ್ಯಕರ ವಿಷಯಗಳು ಇನ್ನೂ ಇವೆಯೆಂದು ನಮಗೆ ತಿಳಿದುಬರುವುದು. . . . ಅನಂತ ಜೀವನವು ನಾವು ಊಹಿಸಲೂ ಆಗದಷ್ಟು ವೈವಿಧ್ಯವುಳ್ಳದ್ದೂ ಅರ್ಥಭರಿತವೂ ಆಗಿರುವುದು ಮತ್ತು ಯೆಹೋವನ ಸಮೀಪಕ್ಕೆ ಬರುವುದು ಯಾವಾಗಲೂ ನಿತ್ಯಜೀವದ ಅತ್ಯಂತ ಪ್ರತಿಫಲದಾಯಕ ಭಾಗವಾಗಿರುವುದು.” ಬೈಬಲನ್ನ ಆಳವಾಗಿ ಅಧ್ಯಯನ ಮಾಡೋದ್ರಿಂದ ಇನ್ನೂ ಯಾವೆಲ್ಲ ವಿಷ್ಯಗಳನ್ನ ಕಲಿಬಹುದು?

ಸ್ವರ್ಗದ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ

12. ಸ್ವರ್ಗದಲ್ಲಿರೋ ವಿಷ್ಯಗಳನ್ನ ನಾವು ಹೇಗೆ ತಿಳ್ಕೊಬಹುದು?

12 ಯೆಹೋವ “ತುಂಬ ಎತ್ರದ ಸ್ಥಳದಲ್ಲಿ ನೆಲೆಸಿದ್ದಾನೆ” ಅಂತ ಬೈಬಲ್‌ ಹೇಳುತ್ತೆ. (ಯೆಶಾ. 33:5) ಅಷ್ಟೇ ಅಲ್ಲ, ಆತನ ಬಗ್ಗೆ ಮತ್ತು ಆತನ ಸ್ವರ್ಗೀಯ ಸಂಘಟನೆ ಬಗ್ಗೆನೂ ಕೆಲವು ವಿಷ್ಯಗಳನ್ನ ಹೇಳಿದೆ. (ಯೆಶಾ. 6:1-4; ದಾನಿ. 7:9, 10; ಪ್ರಕ. 4:1-6) ಅದ್ರ ಬಗ್ಗೆ ತಿಳ್ಕೊಳ್ಳೋಕೆ ಯೆಹೆಜ್ಕೇಲ ಪುಸ್ತಕ ಸಹಾಯ ಮಾಡುತ್ತೆ. ಅಲ್ಲಿ ಯೆಹೆಜ್ಕೇಲ “ದೇವರು ಆಕಾಶ ತೆರೆದು ತೋರಿಸಿದ ದರ್ಶನಗಳನ್ನ ನೋಡಿದೆ” ಅಂದ. (ಯೆಹೆ. 1:1) ಅದನ್ನ ನೀವು ಓದಿ ನೋಡಿ.

13. ಯೇಸು ಸ್ವರ್ಗದಲ್ಲಿ ನಮಗೋಸ್ಕರ ಮಾಡ್ತಿರೋ ವಿಷ್ಯಗಳನ್ನ ನೆನಸ್ಕೊಂಡಾಗ ಹೇಗನಿಸುತ್ತೆ? (ಇಬ್ರಿಯ 4:14-16)

13 ಯೇಸು ಸ್ವರ್ಗದಲ್ಲಿ ಒಬ್ಬ ರಾಜನಾಗಿ, ಪ್ರೀತಿಯ ಪುರೋಹಿತನಾಗಿ ನಮಗೋಸ್ಕರ ಏನೆಲ್ಲಾ ಮಾಡ್ತಿದ್ದಾನೆ ಅಂತ ಯೋಚ್ನೆ ಮಾಡಿ. ಆತನು ನಮಗೆ “ಅಪಾರ ಕೃಪೆ ತೋರಿಸೋ ದೇವರ ಸಿಂಹಾಸನದ ಹತ್ರ” ಹೋಗೋಕೆ ಸಹಾಯ ಮಾಡ್ತಾನೆ. ಆತನ ಮುಖಾಂತರ ನಾವು ಪ್ರಾರ್ಥನೆ ಮಾಡಬಹುದು, ಯೆಹೋವನ ಹತ್ರ ಸಹಾಯ ಕೇಳಬಹುದು. ಆಗ ಯೆಹೋವ ನಮಗೆ ಸರಿಯಾದ ಸಮಯಕ್ಕೆ ಸಹಾಯ ಮಾಡ್ತಾನೆ. (ಇಬ್ರಿಯ 4:14-16 ಓದಿ.) ಹಾಗಾಗಿ ನಾವು ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ಯೆಹೋವ ಮತ್ತು ಯೇಸು ನಮಗೋಸ್ಕರ ಏನೆಲ್ಲಾ ಮಾಡಿದ್ದಾರೋ, ಈಗ್ಲೂ ಸ್ವರ್ಗದಲ್ಲಿ ಏನೆಲ್ಲಾ ಮಾಡ್ತಿದ್ದಾರೋ ಅದನ್ನ ನೆನಪಿಸ್ಕೊಳ್ಳೋಣ. ಅವರು ತೋರಿಸೋ ಪ್ರೀತಿಯನ್ನ ನೆನಸ್ಕೊಂಡಾಗ ಯೆಹೋವನ ಸೇವೆನ ಇನ್ನೂ ಚೆನ್ನಾಗಿ ಮಾಡಬೇಕು ಅಂತ ಅನಿಸುತ್ತೆ ಅಲ್ವಾ?—2 ಕೊರಿಂ. 5:14, 15.

ಯೆಹೋವ ಮತ್ತು ಯೇಸುವಿನ ಶಿಷ್ಯರಾಗೋಕೆ ನೀವು ಬೇರೆಯವ್ರಿಗೆ ಸಹಾಯ ಮಾಡಿದ್ದೀರ ಅಂತ ನೆನಸಿ. ಅವರು ನಿಮ್ಮ ಜೊತೆ ಪರದೈಸಲ್ಲಿ ಇರುವಾಗ ಎಷ್ಟು ಖುಷಿಯಾಗುತ್ತೆ ಅಲ್ವಾ? (ಪ್ಯಾರ 14 ನೋಡಿ)

14. ಯೆಹೋವ ಮತ್ತು ಯೇಸುಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು? (ಚಿತ್ರಗಳನ್ನೂ ನೋಡಿ.)

14 ಯೆಹೋವ ಮತ್ತು ಯೇಸುಗೆ ಥ್ಯಾಂಕ್ಸ್‌ ಹೇಳೋಕೆ ನಾವೇನು ಮಾಡಬಹುದು? ಅವ್ರಿಬ್ಬರ ಶಿಷ್ಯರಾಗೋಕೆ ಜನ್ರಿಗೆ ನಾವು ಸಹಾಯ ಮಾಡಬಹುದು. (ಮತ್ತಾ. 28:19, 20) ಅಪೊಸ್ತಲ ಪೌಲನಿಗೂ ಯೆಹೋವ ಮತ್ತು ಯೇಸುಗೆ ಥ್ಯಾಂಕ್ಸ್‌ ಹೇಳಬೇಕು ಅಂತ ಅನಿಸ್ತು. ಅದಕ್ಕೆ ಅವನು ಏನು ಮಾಡಿದ? “ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು, ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು” ಅನ್ನೋದು ಯೆಹೋವನ ಆಸೆ ಅಂತ ತಿಳ್ಕೊಂಡು ಸಿಹಿಸುದ್ದಿ ಸಾರಿದ. (1 ತಿಮೊ. 2:3, 4) “ಹೇಗಾದ್ರೂ ಮಾಡಿ ಸ್ವಲ್ಪ ಜನ್ರನ್ನಾದ್ರೂ ರಕ್ಷಿಸಬೇಕಂತ” ಅವನು ಜನ್ರಿಗೆ ಸಿಹಿಸುದ್ದಿ ಸಾರೋಕೆ ತುಂಬ ಪ್ರಯತ್ನ ಮಾಡಿದ.—1 ಕೊರಿಂ. 9:22, 23.

ಬೈಬಲಲ್ಲಿರೋ ಸತ್ಯಗಳನ್ನ ಹುಡುಕ್ತಾ ಇರಿ

15. ಕೀರ್ತನೆ 1:2ರಲ್ಲಿ ಹೇಳೋ ತರ ನಮಗೆ ಯಾವುದ್ರಿಂದ ಖುಷಿ ಸಿಗುತ್ತೆ?

15 ‘ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಯಾರು ಖುಷಿಪಡ್ತಾರೋ,’ ‘ನಿಯಮ ಪುಸ್ತಕವನ್ನ ಯಾರು ಹಗಲೂರಾತ್ರಿ ಓದಿ ಧ್ಯಾನಿಸ್ತಾರೋ’ ಅವರು ಯಾವಾಗ್ಲೂ ಖುಷಿಯಾಗಿ ಇರ್ತಾರೆ. ಅವರು ಕೈಹಾಕೋ ಕೆಲಸ ಎಲ್ಲಾ ಚೆನ್ನಾಗಿ ನಡಿಯುತ್ತೆ ಅಂತ ಕೀರ್ತನೆಗಾರ ಹೇಳಿದ. (ಕೀರ್ತ. 1:1-3) ಈ ವಚನದ ಬಗ್ಗೆ ಜೋಸೆಫ್‌ ರಾಥರ್‌ಹ್ಯಾಮ್‌ ಸ್ಟಡೀಸ್‌ ಇನ್‌ ದ ಸಾಮ್ಸ್‌ ಅನ್ನೋ ಪುಸ್ತಕದಲ್ಲಿ “ಒಬ್ಬ ವ್ಯಕ್ತಿಗೆ ದೇವರ ಮಾರ್ಗದರ್ಶನೆ ತುಂಬ ಮುಖ್ಯ. ಅದನ್ನ ಅವನು ಹುಡುಕಬೇಕು, ಅಧ್ಯಯನ ಮಾಡಬೇಕು, ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. ಅಷ್ಟೇ ಅಲ್ಲ, ಯಾರಾದ್ರೂ ಒಂದು ದಿನ ಬೈಬಲನ್ನ ಓದಲಿಲ್ಲ ಅಂದ್ರೆ ಆ ದಿನ ವ್ಯರ್ಥನೇ” ಅಂತ ಹೇಳಿದ. ನಾವು ಬೈಬಲಲ್ಲಿ ಚಿಕ್ಕಚಿಕ್ಕ ವಿಷ್ಯನೂ ಗಮನಿಸಿದಾಗ, ಅವು ಒಂದಕ್ಕೊಂದು ಹೇಗೆ ಸಂಬಂಧಪಟ್ಟಿದೆ ಅಂತ ನೋಡಿದಾಗ ಬೈಬಲ್‌ ಓದೋಕೆ ನಮಗೆ ತುಂಬ ಖುಷಿಯಾಗುತ್ತೆ. ದೇವರ ವಾಕ್ಯದ ಆಳ, ಉದ್ದ, ಅಗಲ, ಎತ್ತರನೆಲ್ಲ ಹುಡುಕಿದಾಗ ನಮಗೆ ತುಂಬ ಖುಷಿ ಸಿಗುತ್ತೆ.

16. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

16 ಯೆಹೋವ ದೇವರ ವಾಕ್ಯದಲ್ಲಿರೋ ಆಳವಾದ ಸತ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಖಂಡಿತ ಆಗುತ್ತೆ. ಮುಂದಿನ ಲೇಖನದಲ್ಲಿ ನಾವು ಇನ್ನೂ ಒಂದು ಬೈಬಲ್‌ ಸತ್ಯದ ಬಗ್ಗೆ ತಿಳ್ಕೊಳ್ಳೋಣ. ಅದು ಯೆಹೋವನ ಆಧ್ಯಾತ್ಮಿಕ ಆಲಯ. ಅದ್ರ ಬಗ್ಗೆ ಪೌಲ ಇಬ್ರಿಯರಿಗೆ ಬರೆದ ಪತ್ರದಲ್ಲಿ ಹೇಳಿದ್ದಾನೆ. ಅದ್ರ ಬಗ್ಗೆ ಕಲಿಯುವಾಗ ನಿಮಗೆ ಖುಷಿ ಸಿಗುತ್ತೆ ಅನ್ನೋದ್ರಲ್ಲಿ ಸಂಶಯನೇ ಇಲ್ಲ.

ಗೀತೆ 113 ದೇವರ ವಾಕ್ಯಕ್ಕಾಗಿ ಕೃತಜ್ಞರು

a ಬೈಬಲನ್ನ ಓದೋದ್ರಿಂದ ನಾವು ಖುಷಿಯಾಗಿ ಇರ್ತೀವಿ. ಅದ್ರಿಂದ ನಮಗೆ ಪ್ರಯೋಜನನೂ ಇದೆ. ಅಷ್ಟೇ ಅಲ್ಲ ನಾವು ಯೆಹೋವಗೆ ಹತ್ರ ಆಗೋಕೆ ಆಗುತ್ತೆ. ಹಾಗಾಗಿ ದೇವರ ವಾಕ್ಯದ, “ಉದ್ದ ಅಗಲ ಎತ್ತರ ಆಳ” ತಿಳ್ಕೊಳ್ಳೋಕೆ ನಾವೇನು ಮಾಡಬೇಕು?

b ಜುಲೈ 2022ರ ಕಾವಲಿನಬುರುಜುವಿನಲ್ಲಿರೋ “ನಿರೀಕ್ಷೆ ಕೊಡೋ ಭವಿಷ್ಯವಾಣಿ” ಅನ್ನೋ ಲೇಖನ ನೋಡಿ.

c ಮುಂದೆ ಎಲ್ಲರ ಮೈ ಜುಮ್‌ ಅನಿಸೋ ಘಟನೆಗಳು ನಡಿಯುತ್ತೆ. ಅದಕ್ಕೆ ನಾವೆಲ್ಲರು ಈಗ್ಲಿಂದಾನೆ ತಯಾರಾಗಿರೋಕೆ ಏನು ಮಾಡಬೇಕು ಅನ್ನೋದು ದೇವರ ಸರ್ಕಾರ ಆಳ್ವಿಕೆ ಮಾಡ್ತಿದೆ! ಪುಸ್ತಕದ ಪುಟ 230ರಲ್ಲಿದೆ. ಇದು ಇಂಗ್ಲಿಷ್‌ನಲ್ಲಿದೆ.