ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನೂ ನೋಡಿ!

ಇದನ್ನೂ ನೋಡಿ!

ಹೊಸ ತಿಳುವಳಿಕೆಯ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ

ಬೈಬಲ್‌ ಸತ್ಯಗಳ ಬಗ್ಗೆ ಮುಂಚಿಗಿಂತ ಈಗ ಯೆಹೋವ ಹೆಚ್ಚು ವಿಷ್ಯಗಳನ್ನ ಕಲಿಸ್ತಿದ್ದಾನೆ ಅಂತ ನೋಡಿದಾಗ ತುಂಬಾ ಖುಷಿಯಾಗುತ್ತೆ ಅಲ್ವಾ? (ದಾನಿ. 12:4) ಆದ್ರೂ ಈ ಹೊಸ ತಿಳುವಳಿಕೆಯನ್ನ ಅರ್ಥಮಾಡ್ಕೊಳ್ಳೋಕೆ ಕೆಲವೊಮ್ಮೆ ನಮಗೆ ಕಷ್ಟ ಆಗಬಹುದು. ಈ ಹೊಸ ತಿಳುವಳಿಕೆಯನ್ನ ನಾವೆಲ್ಲಿ ಹುಡುಕಬಹುದು?

ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ ಹೊಸ ತಿಳುವಳಿಕೆಗಳ ಬಗ್ಗೆ ಒಂದು ಪಟ್ಟಿನೇ ಕೊಟ್ಟಿದ್ದಾರೆ. ಅದ್ರಲ್ಲಿ “ಯೆಹೋವನ ಸಾಕ್ಷಿಗಳು” ಅನ್ನೋ ವಿಷ್ಯನ ಒತ್ತಿ. ಆಮೇಲೆ “ದೃಷ್ಟಿಕೋನಗಳು ಮತ್ತು ನಂಬಿಕೆಗಳು” ಅನ್ನೋ ಭಾಗಕ್ಕೆ ಹೋಗಿ. ಅಲ್ಲಿ “ನಮ್ಮ ನಂಬಿಕೆಗಳ ಕುರಿತ ಸ್ಪಷ್ಟೀಕರಣ” ಅನ್ನೋದನ್ನ ಒತ್ತಿ.

ನೀವು ಬೈಬಲ್‌ ಪ್ರಾಜೆಕ್ಟ್‌ ಮಾಡುವಾಗ ಯಾವುದಾದ್ರೂ ಒಂದು ಹೊಸ ತಿಳುವಳಿಕೆಯನ್ನ ಆರಿಸ್ಕೊಂಡು ಹಿಂದೆ ಅದ್ರ ಬಗ್ಗೆ ಏನು ಅಂದ್ಕೊಂಡಿದ್ವಿ, ಈಗ ಆ ತಿಳುವಳಿಕೆಯಲ್ಲಿ ಯಾಕೆ ಬದಲಾವಣೆ ಆಗಿದೆ ಅಂತ ಹುಡುಕಿ.