ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವುದು ಸರಿ ಯಾವುದು ತಪ್ಪು? ಇದು ನಮ್ಮ ಮುಂದಿರೋ ಪ್ರಶ್ನೆ

ಯಾವುದು ಸರಿ ಯಾವುದು ತಪ್ಪು? ಇದು ನಮ್ಮ ಮುಂದಿರೋ ಪ್ರಶ್ನೆ

ನೀವು ಒಂದು ಸುಂದರವಾದ ಜಾಗಕ್ಕೆ ಹೋಗ್ಬೇಕು ಅಂತ ಪ್ಲ್ಯಾನ್‌ ಮಾಡ್ತಿದ್ದೀರ ಅಂದ್ಕೊಳ್ಳಿ. ಆದ್ರೆ ನೀವು ಅಲ್ಲಿಗೆ ಹೋಗ್ತಾ ಇರೋದು ಇದೇ ಮೊದಲ್ನೇ ಸಲ. ಆಗ ನೀವು ಏನ್‌ ಮಾಡ್ತೀರಾ? ನಿಮ್ಮ ಮುಂದೆ ಮೂರು ಆಯ್ಕೆ ಇದೆ:

  1. 1. ನಿಮ್ಗೆ ಯಾವುದು ಸರಿ ಅನ್ಸುತ್ತೋ ಆ ದಾರಿಲಿ ಹೋಗೋದು.

  2. 2. ಬೇರೆಯವರು ಹೋಗ್ತಿರೋ ದಾರಿನೇ ಸರಿ ಅಂದ್ಕೊಂಡು ಅವ್ರ ಹಿಂದೆ ಹೋಗೋದು.

  3. 3. ಜಿಪಿಎಸ್‌ ಅಥವಾ ಮ್ಯಾಪ್‌ ನೋಡೋದು. ಇಲ್ಲಾಂದ್ರೆ ಅಲ್ಲಿಗೆ ಹೋಗೋದು ಹೇಗೆ ಅಂತ ಚೆನ್ನಾಗಿ ತಿಳ್ಕೊಂಡಿರೋ ನಿಮ್ಮ ಫ್ರೆಂಡ್‌ ಮಾತನ್ನ ಕೇಳೋದು.

ನೀವು ಒಂದನೇ ಅಥವಾ ಎರಡನೇ ಆಯ್ಕೆಯಲ್ಲಿ ಇರೋ ತರ ಮಾಡಿದ್ರೆ ನೀವು ಹೋಗ್ತೀರ. ಆದ್ರೆ ನೀವು ಅಂದ್ಕೊಂಡಿರೋ ಜಾಗಕ್ಕೆ ಹೋಗ್ತೀರಾ ಇಲ್ವಾ ಅಂತ ಹೇಳಕ್ಕಾಗಲ್ಲ. ಆದ್ರೆ ನೀವು ಮೂರನೇ ಆಯ್ಕೆಯಲ್ಲಿ ಇರೋ ತರ ಮಾಡಿದ್ರೆ, ನೀವ್‌ ಅಂದ್ಕೊಂಡಿರೋ ಜಾಗಕ್ಕೆ ಹೋಗಿ ತಲುಪ್ತೀರ.

ಅದೇ ತರ ನಮ್ಮೆಲ್ರಿಗೂ ಒಂದು ಗುರಿಯಿದೆ. ನಮ್ಮ ಭವಿಷ್ಯ ಚೆನ್ನಾಗಿರಬೇಕು, ನಾವು ಮುಂದೆ ಜೀವನದಲ್ಲಿ ಖುಷಿ-ಖುಷಿಯಾಗಿ ಇರ್ಬೇಕು ಅನ್ನೋದೇ ಆ ಗುರಿ. ನಾವು ಸರಿಯಾದ ದಾರಿಲಿ ಹೋದ್ರೆ ಆ ಗುರಿನ ತಲುಪ್ತೀವಿ. ಹಾಗಾಗಿ ನಾವು ಯಾರ್‌ ಮಾತನ್ನ ಕೇಳಿ ತೀರ್ಮಾನ ಮಾಡ್ತೀವಿ ಅನ್ನೋದು ತುಂಬಾ ಮುಖ್ಯ.

ಯಾಕಂದ್ರೆ ಚಿಕ್ಕ ವಿಷ್ಯ ಆಗ್ಲಿ ದೊಡ್ಡ ವಿಷ್ಯ ಆಗ್ಲಿ ನಾವು ಮಾಡೋ ತೀರ್ಮಾನಗಳು ನಾವು ಯಾವುದನ್ನ ಸರಿ ಯಾವುದನ್ನ ತಪ್ಪು ಅಂದ್ಕೊಡಿದ್ದೀವಿ ಅಂತ ತೋರಿಸ್ಕೊಡುತ್ತೆ. ನಾವೇನಾದ್ರೂ ತಪ್ಪು ತೀರ್ಮಾನ ಮಾಡಿಬಿಟ್ರೆ ಅದ್ರಿಂದ ನಮಗಷ್ಟೇ ಅಲ್ಲ, ನಮ್‌ ಜೊತೆ ಇರೋರಿಗೂ ತೊಂದ್ರೆ ಆಗುತ್ತೆ. ಹಾಗಾಗಿ ಯಾವೆಲ್ಲ ವಿಷ್ಯಗಳಲ್ಲಿ ನಾವು ಹುಷಾರಾಗಿ ತೀರ್ಮಾನ ಮಾಡ್ಬೇಕು?

  • ಪ್ರಾಮಾಣಿಕತೆ, ಕೆಲಸ, ದುಡ್ಡು

  • ಮಕ್ಕಳನ್ನ ಬೆಳೆಸೋ ರೀತಿ

  • ಬೇರೆಯವ್ರ ಹತ್ರ ನಡ್ಕೊಳ್ಳೋ ರೀತಿ

  • ಸೆಕ್ಸ್‌ ಮತ್ತು ಮದುವೆ

ಈ ವಿಷ್ಯದ ಬಗ್ಗೆ ನಿಮ್ಗೆ ಏನ್‌ ಅನ್ಸುತ್ತೆ? ನೀವು ಮಾಡೋ ತೀರ್ಮಾನದಿಂದ ನೀವು ಮತ್ತು ನಿಮ್ಮ ಕುಟುಂಬದವರು ಖುಷಿಯಾಗಿ ಇರ್ತಿರ ಅನ್ನೋ ಗ್ಯಾರಂಟಿ ನಿಮಗಿದ್ಯಾ?

ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?

ಬೈಬಲ್‌ ನಿಮ್ಗೆ ಸಹಾಯ ಮಾಡುತ್ತೆ. ಅದನ್ನ ನೀವ್ಯಾಕೆ ನಂಬಬಹುದು, ಅದು ನಿಮ್ಗೆ ಹೇಗೆ ಸಹಾಯ ಮಾಡುತ್ತೆ ಅಂತ ತಿಳ್ಕೊಳ್ಳೋಕೆ ಈ ಪತ್ರಿಕೆ ಓದಿ ನೋಡಿ.