ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಮಾಡಿ ನೋಡಿ!

ಕುಟುಂಬ ಆರಾಧನೆ ಮತ್ತು ಬೈಬಲ್‌ ಅಧ್ಯಯನ ಮಾಡೋಕೆ ಸಲಹೆಗಳು

ಕುಟುಂಬ ಆರಾಧನೆ ಮತ್ತು ಬೈಬಲ್‌ ಅಧ್ಯಯನ ಮಾಡೋಕೆ ಸಲಹೆಗಳು

ನಾವು ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ ಎಲ್ರ ಜೊತೆಗೆ ಯೆಹೋವನನ್ನ ಆರಾಧಿಸ್ತೀವಿ. ಅಷ್ಟೇ ಅಲ್ಲ ಒಬ್ರೇ ಇರುವಾಗ ಮತ್ತು ಕುಟುಂಬದ ಜೊತೆಗೂ ಆತನನ್ನ ಆರಾಧಿಸ್ತೀವಿ. ಹಾಗಾಗಿ ನಾವು ಬೈಬಲ್‌ ಅಧ್ಯಯನ ಮಾಡುವಾಗ ಮತ್ತು ಕುಟುಂಬ ಆರಾಧನೆ ಮಾಡುವಾಗ ಏನೆಲ್ಲಾ ಮಾಡಬಹುದು?

  • ಕೂಟಗಳಿಗೆ ತಯಾರಿ ಮಾಡಿ. ಹಾಡುಗಳನ್ನ ಪ್ರ್ಯಾಕ್ಟೀಸ್‌ ಮಾಡಿ. ಕೂಟದಲ್ಲಿ ಉತ್ರ ಹೇಳೋಕೆ ತಯಾರಿ ಮಾಡಿ.

  • ಬೈಬಲ್‌ನಲ್ಲಿರೋ ಒಂದು ಘಟನೆ ಓದಿ. ಅದ್ರ ಚಿತ್ರ ಬಿಡಿಸಿ ಅಥವಾ ನೀವು ಅದ್ರಿಂದ ಏನು ಕಲಿತ್ರಿ ಅಂತ ಬರೀರಿ.

  • ಹಿಂದಿನ ಕಾಲದಲ್ಲಿ ಯೆಹೋವನ ಸೇವಕರು ಮಾಡಿದ ಪ್ರಾರ್ಥನೆ ಬಗ್ಗೆ ಓದಿ. ನೀವು ಇನ್ನೂ ಹೇಗೆ ಚೆನ್ನಾಗಿ ಪ್ರಾರ್ಥನೆ ಮಾಡಬಹುದು ಅಂತ ಯೋಚ್ನೆ ಮಾಡಿ.

  • jw.orgನಲ್ಲಿ ಒಂದು ವಿಡಿಯೋ ನೋಡಿ. ಅದ್ರ ಬಗ್ಗೆ ಬೇರೆಯವ್ರ ಹತ್ರ ಮಾತಾಡಿ ಅಥವಾ ನಿಮಗೆ ಏನು ಅನಿಸ್ತು ಅಂತ ಬರೀರಿ.

  • ಸೇವೆಯಲ್ಲಿ ಜನ್ರ ಜೊತೆ ಹೇಗೆ ಮಾತಾಡಬೇಕು ಅಂತ ಪ್ರ್ಯಾಕ್ಟೀಸ್‌ ಮಾಡಿ.

  • ಸೃಷ್ಟಿ ನೋಡಿ, ಅದ್ರಿಂದ ಯೆಹೋವನ ಬಗ್ಗೆ ಏನು ಕಲಿಬಹುದು ಅಂತ ಯೋಚಿಸಿ. a

a ಮಾರ್ಚ್‌ 2023ರ ಕಾವಲಿನಬುರುಜುವಿನಲ್ಲಿ “ಸೃಷ್ಟಿ ನೋಡಿ ಯೆಹೋವನ ಬಗ್ಗೆ ಕಲಿರಿ” ಅನ್ನೋ ಲೇಖನ ನೋಡಿ.