ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯ ಇಬ್ರು ಹೊಸ ಸದಸ್ಯರು

ಆಡಳಿತ ಮಂಡಲಿಯ ಇಬ್ರು ಹೊಸ ಸದಸ್ಯರು

ಜನವರಿ 18, 2023ರ ಬುಧವಾರ jw.orgನಲ್ಲಿ ಒಂದು ಸಿಹಿಸುದ್ದಿ ಬಂತು. ಗೇಜ್‌ ಫ್ಲೀಗಲ್‌ ಮತ್ತು ಜೆಫ್ರಿ ವಿಂಡರ್‌ ಅನ್ನೋ ಇಬ್ರು ಸಹೋದರರನ್ನ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿ ನೇಮಿಸಲಾಯ್ತು. ಇವ್ರಿಬ್ರೂ ತುಂಬ ವರ್ಷಗಳಿಂದ ಯೆಹೋವನಿಗೆ ನಿಯತ್ತಿಂದ ಸೇವೆ ಮಾಡ್ತಿದ್ದಾರೆ.

ಗೇಜ್‌ ಫ್ಲೀಗಲ್‌ ಮತ್ತು ಅವ್ರ ಹೆಂಡತಿ ನಾದಿಯಾ

ಸಹೋದರ ಫ್ಲೀಗಲ್‌ ಅಮೆರಿಕದ ಪಶ್ಚಿಮ ಪೆನ್ಸಿಲ್ವೇನಿಯದಲ್ಲಿ ಬೆಳೆದ್ರು. ಇವ್ರಿಗೆ ಅವ್ರ ಅಪ್ಪಅಮ್ಮನೇ ಸತ್ಯ ಕಲಿಸಿದ್ದು. ಇವರು ಹದಿವಯಸ್ಸಲ್ಲಿದ್ದಾಗ ಇವ್ರ ಅಪ್ಪಅಮ್ಮ ಕುಟುಂಬದ ಸಮೇತ ಹೆಚ್ಚು ಸೇವೆ ಮಾಡೋಕೆ ಒಂದು ಚಿಕ್ಕ ಊರಿಗೆ ಹೋದ್ರು. ಅದಾಗಿ ಸ್ವಲ್ಪ ಸಮಯದಲ್ಲೇ ಅಂದ್ರೆ ನವೆಂಬರ್‌ 20, 1988ರಲ್ಲಿ ಸಹೋದರ ಫ್ಲೀಗಲ್‌ ದೀಕ್ಷಾಸ್ನಾನ ತಗೊಂಡ್ರು.

ಫ್ಲೀಗಲ್‌ರವರ ಅಪ್ಪಅಮ್ಮ ಪೂರ್ಣ ಸಮಯದ ಸೇವೆ ಮಾಡೋಕೆ ಅವ್ರಿಗೆ ಯಾವಾಗ್ಲೂ ಪ್ರೋತ್ಸಾಹ ಕೊಡ್ತಾ ಇದ್ರು. ಅವರು ಸಂಚರಣ ಮೇಲ್ವಿಚಾರಕರನ್ನ, ಬೆತೆಲಲ್ಲಿ ಸೇವೆ ಮಾಡೋರನ್ನ ಆಗಾಗ ಮನೆಗೆ ಕರೀತಿದ್ರು. ಇವ್ರೆಲ್ಲ ಖುಷಿಖುಷಿಯಾಗಿ ಇರೋದನ್ನ ಸಹೋದರ ಫ್ಲೀಗಲ್‌ ನೋಡ್ತಿದ್ರು. ಹಾಗಾಗಿ ಅವರು ದೀಕ್ಷಾಸ್ನಾನ ಆಗಿ ಸ್ವಲ್ಪ ಸಮಯದಲ್ಲೇ ಅಂದ್ರೆ ಸೆಪ್ಟೆಂಬರ್‌ 1, 1989ರಲ್ಲಿ ರೆಗ್ಯುಲರ್‌ ಪಯನೀಯರಿಂಗ್‌ ಶುರು ಮಾಡಿದ್ರು. ಎರಡು ವರ್ಷ ಆದ್ಮೇಲೆ, ಅಂದ್ರೆ ಅಕ್ಟೋಬರ್‌ 1991ರಲ್ಲಿ ಅವರು ಬ್ರೂಕ್ಲಿನ್‌ ಬೆತೆಲ್‌ನಲ್ಲಿ ಸೇವೆ ಶುರು ಮಾಡಿದ್ರು. ಅಲ್ಲಿಗೆ ಹೋಗಬೇಕು ಅಂತ ಅವರು 12 ವರ್ಷ ಇದ್ದಾಗಲೇ ಗುರಿ ಇಟ್ಟಿದ್ರು.

ಸಹೋದರ ಫ್ಲೀಗಲ್‌ 8 ವರ್ಷ ಬೈಂಡಿಂಗ್‌ ಡಿಪಾರ್ಟ್‌ಮೆಂಟಲ್ಲಿ ಕೆಲಸ ಮಾಡಿದ್ರು. ಅದಾದ್ಮೇಲೆ ಅವ್ರಿಗೆ ಸರ್ವಿಸ್‌ ಡಿಪಾರ್ಟ್‌ಮೆಂಟಲ್ಲಿ ನೇಮಕ ಸಿಕ್ತು. ಆಗ ಅವರು ರಷ್ಯನ್‌ ಭಾಷೆಯ ಸಭೆಗೆ ಹೋಗ್ತಾ ಇದ್ರು. 2006ರಲ್ಲಿ ಇವರು ನಾದಿಯಾ ಅನ್ನೋ ಸಹೋದರಿಯನ್ನ ಮದುವೆ ಆದ್ರು. ಆಮೇಲೆ ಸಹೋದರಿನೂ ಫ್ಲೀಗಲ್‌ ಜೊತೆ ಸೇರಿ ಬೆತೆಲ್‌ ಸೇವೆ ಮಾಡಿದ್ರು. ಇವ್ರಿಬ್ರೂ ಮೊದ್ಲು ಪೋರ್ಚುಗೀಸ್‌ ಸಭೆಗೆ ಹೋಗ್ತಾ ಇದ್ರು. ಆಮೇಲೆ ಸ್ಪ್ಯಾನಿಷ್‌ ಸಭೆಗೆ ಹೋದ್ರು, ಅಲ್ಲಿ ಅವರು 10ಕ್ಕಿಂತ ಜಾಸ್ತಿ ವರ್ಷ ಇದ್ರು. ಈ ಸಹೋದರ ತುಂಬ ವರ್ಷ ಸರ್ವಿಸ್‌ ಡಿಪಾರ್ಟ್‌ಮೆಂಟಲ್ಲಿ ಕೆಲಸ ಮಾಡಿ ಆದ್ಮೇಲೆ ಟೀಚಿಂಗ್‌ ಕಮಿಟಿ ಆಫೀಸಲ್ಲಿ ಆಮೇಲೆ ಸರ್ವಿಸ್‌ ಕಮಿಟಿ ಆಫೀಸಲ್ಲಿ ಸೇವೆ ಮಾಡಿದ್ರು. ಅಷ್ಟೇ ಅಲ್ಲ, 2022ರ ಮಾರ್ಚ್‌ ತಿಂಗಳಲ್ಲಿ ಇವ್ರಿಗೆ ಆಡಳಿತ ಮಂಡಲಿಯ ಸರ್ವಿಸ್‌ ಕಮಿಟಿಯಲ್ಲಿ ಸಹಾಯಕರಾಗಿ ಸೇವೆ ಮಾಡೋ ನೇಮಕ ಸಿಕ್ತು.

ಜೆಫ್ರಿ ವಿಂಡರ್‌ ಮತ್ತು ಅವ್ರ ಹೆಂಡತಿ ಆ್ಯಂಜಲ

ಸಹೋದರ ವಿಂಡರ್‌ ಅಮೆರಿಕದ ಕ್ಯಾಲಿಫೋರ್ನಿಯಾದ ಮರಿಯೆಟಾದಲ್ಲಿ ಬೆಳೆದ್ರು. ಇವ್ರಿಗೂ ಅವ್ರ ಅಪ್ಪಅಮ್ಮನೇ ಸತ್ಯ ಕಲಿಸಿದ್ದು. ಇವರು ಮಾರ್ಚ್‌ 29, 1986ರಲ್ಲಿ ದೀಕ್ಷಾಸ್ನಾನ ತಗೊಂಡ್ರು. ಇದಾಗಿ ಒಂದೇ ತಿಂಗಳಲ್ಲಿ ಅವರು ಆಕ್ಸಿಲಿಯರಿ ಪಯನೀಯರಿಂಗ್‌ ಶುರುಮಾಡಿದ್ರು. ಅದ್ರಿಂದ ಅವ್ರಿಗೆ ತುಂಬ ಖುಷಿ ಸಿಕ್ತು. ಅದಕ್ಕೇ ಅವರು ಸ್ವಲ್ಪ ತಿಂಗಳಲ್ಲೇ ಅಂದ್ರೆ ಅಕ್ಟೋಬರ್‌ 1, 1986ರಲ್ಲಿ ರೆಗ್ಯುಲರ್‌ ಪಯನೀಯರಿಂಗ್‌ ಶುರು ಮಾಡಿದ್ರು.

ಸಹೋದರ ವಿಂಡರ್‌ ಹದಿವಯಸ್ಸಲ್ಲಿದ್ದಾಗ ಅವ್ರ ಇಬ್ರು ಅಣ್ಣಂದಿರು ಬೆತೆಲ್‌ನಲ್ಲಿ ಸೇವೆ ಮಾಡ್ತಿದ್ರು. ಒಂದ್ಸಲ ಅವರನ್ನ ನೋಡೋಕೆ ವಿಂಡರ್‌ ಬೆತೆಲ್‌ಗೆ ಹೋದ್ರು. ಆಗ ಅವ್ರಿಗೆ ದೊಡ್ಡವನಾದ ಮೇಲೆ ಬೆತೆಲ್‌ ಸೇವೆ ಮಾಡಬೇಕು ಅನ್ನೋ ಆಸೆ ಬಂತು. ಅಂತೂ ಇಂತೂ ಅವ್ರ ಆಸೆ ನೆರವೇರಿತು, ಮೇ 1990ರಲ್ಲಿ ವಾಲ್‌ಕಿಲ್‌ ಬೆತೆಲ್‌ಗೆ ಅವ್ರಿಗೆ ಆಮಂತ್ರಣ ಸಿಕ್ತು.

ಸಹೋದರ ವಿಂಡರ್‌ ಬೆತೆಲ್‌ನಲ್ಲಿ ಬೇರೆಬೇರೆ ಡಿಪಾರ್ಟ್‌ಮೆಂಟ್‌ಗಳಲ್ಲಿ ಕೆಲಸ ಮಾಡಿದ್ರು. ಕ್ಲೀನಿಂಗ್‌ ಡಿಪಾರ್ಟ್‌ಮೆಂಟ್‌, ಫಾರ್ಮ್‌ ಡಿಪಾರ್ಟ್‌ಮೆಂಟ್‌ ಮತ್ತು ಬೆತೆಲ್‌ ಆಫೀಸಲ್ಲಿ ಕೆಲಸ ಮಾಡಿದ್ರು. 1997ರಲ್ಲಿ ಆ್ಯಂಜಲ ಅನ್ನೋ ಸಹೋದರಿಯನ್ನ ಮದುವೆ ಆದ್ರು. ಆವಾಗಿಂದ ಇಲ್ಲಿ ವರೆಗೂ ಅವ್ರಿಬ್ರೂ ಬೆತೆಲ್‌ನಲ್ಲಿ ಒಟ್ಟಿಗೆ ಸೇವೆ ಮಾಡ್ತಿದ್ದಾರೆ. 2014ರಲ್ಲಿ ವಾರ್ವಿಕ್‌ಗೆ ಅವ್ರನ್ನ ಕಳಿಸಿದ್ರು. ಅಲ್ಲಿ ಅವರು ಮುಖ್ಯ ಕಾರ್ಯಾಲಯದ ನಿರ್ಮಾಣ ಕೆಲಸದಲ್ಲಿ ಸೇವೆ ಮಾಡಿದ್ರು. 2016ರಲ್ಲಿ ಪ್ಯಾಟರ್‌ಸನ್‌ನ ವಾಚ್‌ಟವರ್‌ ಶಿಕ್ಷಣ ಕೇಂದ್ರಕ್ಕೆ ಹೋದ್ರು, ಅಲ್ಲಿ ಅವರು ಆಡಿಯೋ-ವಿಡಿಯೋ ಸರ್ವಿಸ್‌ನಲ್ಲಿ ಕೆಲಸ ಮಾಡಿದ್ರು. ನಾಲ್ಕು ವರ್ಷ ಆದ್ಮೇಲೆ ಸಹೋದರ ವಿಂಡರ್‌ನ ಮತ್ತೆ ವಾರ್ವಿಕ್‌ಗೆ ಕಳಿಸಿದ್ರು. ಅಲ್ಲಿ ಅವರು ಪರ್ಸನಲ್‌ ಕಮಿಟಿ ಆಫೀಸಲ್ಲಿ ಸೇವೆ ಮಾಡಿದ್ರು. ಮಾರ್ಚ್‌ 2022ರಲ್ಲಿ ಅವ್ರನ್ನ ಆಡಳಿತ ಮಂಡಲಿಯ ಪರ್ಸನಲ್‌ ಕಮಿಟಿಯ ಸಹಾಯಕರಾಗಿ ನೇಮಿಸಲಾಯ್ತು.

ಯೆಹೋವ ಈ ಸಹೋದರರನ್ನ ನಮಗೆ “ಉಡುಗೊರೆಗಳಾಗಿ” ಕೊಟ್ಟಿದ್ದಾನೆ. ಹಾಗಾಗಿ ‘ಅವರು ಕಷ್ಟಪಟ್ಟು ಮಾಡ್ತಿರೋ ಸೇವೆಯನ್ನ ಆಶೀರ್ವದಿಸು’ ಅಂತ ಯೆಹೋವನ ಹತ್ರ ಬೇಡ್ಕೊಳ್ಳೋಣ. ಅವ್ರಿಗೆ ಸಹಾಯ ಮಾಡೋಕೂ ಆತನ ಹತ್ರ ಕೇಳ್ಕೊಳ್ಳೋಣ.—ಎಫೆ. 4:8.