ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನ ಮಾಡಿ ನೋಡಿ!

ಬೈಬಲಲ್ಲಿರೋ ರತ್ನಗಳನ್ನ ಹುಡುಕಿ ಪಾಲಿಸಿ

ಬೈಬಲಲ್ಲಿರೋ ರತ್ನಗಳನ್ನ ಹುಡುಕಿ ಪಾಲಿಸಿ

ನಾವು ಬೈಬಲ್‌ ಓದುವಾಗ ಮುತ್ತು-ರತ್ನಗಳಂಥ ವಿಷ್ಯಗಳನ್ನ ಹುಡುಕ್ತೀವಿ. ಆದ್ರೆ ಬೈಬಲಿಂದ ಪೂರ್ತಿ ಪ್ರಯೋಜನ ಪಡ್ಕೊಳ್ಳೋಕೆ ಏನು ಮಾಡಬೇಕು?

ಇನ್ನೂ ಜಾಸ್ತಿ ತಿಳ್ಕೊಳ್ಳಿ: ಬೈಬಲಲ್ಲಿ ಘಟನೆಗಳನ್ನ ಓದುವಾಗ ಚೆನ್ನಾಗಿ ಯೋಚ್ನೆ ಮಾಡಬೇಕು. ಉದಾಹರಣೆಗೆ, ಆ ಘಟನೆಯನ್ನ ಯಾರು ಬರೆದ್ರು? ಯಾರಿಗೆ ಬರೆದ್ರು? ಯಾವಾಗ ಬರೆದ್ರು? ಅಂತ ಯೋಚ್ನೆ ಮಾಡಿ. ಅಷ್ಟೇ ಅಲ್ಲ, ಆಗ ಸನ್ನಿವೇಶ ಹೇಗಿತ್ತು? ಆ ಘಟನೆ ನಡಿಯೋದಕ್ಕಿಂತ ಮುಂಚೆ ಮತ್ತು ಆಮೇಲೆ ಏನಾಯ್ತು? ಅನ್ನೋದನ್ನೂ ತಿಳ್ಕೊಳ್ಳಿ.

ನೀವೇನು ಕಲಿಬಹುದು ಅಂತ ಯೋಚಿಸಿ: ಈ ತರ ಯೋಚಿಸೋಕೆ ಕೆಲವು ಪ್ರಶ್ನೆಗಳು ಸಹಾಯ ಮಾಡುತ್ತೆ: ನೀವೊಂದು ಘಟನೆ ಬಗ್ಗೆ ಓದುವಾಗ ಅಲ್ಲಿದ್ದ ಜನ್ರಿಗೆ ಹೇಗನಿಸ್ತು? ಅವರು ಯಾವ ಗುಣಗಳನ್ನ ತೋರಿಸಿದ್ರು? ಅವ್ರಲ್ಲಿರೋ ಗುಣಗಳನ್ನ ಯಾಕೆ ತೋರಿಸಬೇಕು ಅಥವಾ ಯಾಕೆ ತೋರಿಸಬಾರದು? ಅಂತ ಯೋಚಿಸಿ.

ಕಲ್ತಿದ್ದನ್ನ ಪಾಲಿಸಿ: ನೀವು ಸೇವೆಲಿ ಜನ್ರ ಜೊತೆ ಮತ್ತು ಬೇರೆಯವ್ರ ಜೊತೆ ಮಾತಾಡುವಾಗ, ನಡ್ಕೊಳ್ಳುವಾಗ ಕಲ್ತಿದ್ದನ್ನ ಅನ್ವಯಿಸಿ. ಆಗ ನೀವು ವಿವೇಕಿಗಳು ಅಂತ ತೋರಿಸ್ತೀರ. ಯಾಕಂದ್ರೆ “ವಿವೇಕಿಗಳೆಲ್ಲ ಈ ವಿಷ್ಯಗಳನ್ನ ಗಮನಿಸ್ತಾರೆ” ಅಂತ ಬೈಬಲ್‌ ಹೇಳುತ್ತೆ.—ಕೀರ್ತ. 107:43.

  • ಸಲಹೆ: ನಾವು ಕಲ್ತಿದ್ದನ್ನ ಪಾಲಿಸೋಕೆ ಮಧ್ಯವಾರದ ಕೂಟದಲ್ಲಿ ಬರೋ ಬೈಬಲಿನಲ್ಲಿರೋ ನಿಧಿ ಅನ್ನೋ ಭಾಗ ಸಹಾಯ ಮಾಡುತ್ತೆ. ಅದ್ರಲ್ಲಿ ಧ್ಯಾನಿಸೋಕೆ ಮತ್ತು ನಮ್ಮನ್ನೇ ಕೇಳ್ಕೊಳ್ಳೋಕೆ ಕೆಲವು ಪ್ರಶ್ನೆಗಳನ್ನ ಕೊಟ್ಟಿರುತ್ತಾರೆ. ಅದೂ ನಮಗೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ಅದ್ರಲ್ಲಿ ಕೊಟ್ಟಿರೋ ಚಿತ್ರಗಳಿಂದನೂ ನೀವೇನು ಕಲಿಬಹುದು ಅಂತ ಯೋಚ್ನೆ ಮಾಡಿ.