ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ದಾವೀದನ ಸೈನ್ಯದಲ್ಲಿ ವಿದೇಶಿಯರು ಯಾಕೆ ಇದ್ರು?

ದಾವೀದನ ಸೈನ್ಯದಲ್ಲಿ ಇದ್ದ ವೀರ ಸೈನಿಕರಲ್ಲಿ ಕೆಲವರು ವಿದೇಶಿಯರೂ ಇದ್ರು. ಯಾರಂದ್ರೆ ಅಮ್ಮೋನಿಯನಾದ ಚೆಲೆಕ್‌, ಹಿತ್ತಿಯನಾದ ಊರೀಯ ಮತ್ತು ಮೋವಾಬ್ಯನಾದ ಇತ್ಮ. a (1 ಪೂರ್ವ. 11:39, 41, 46) ಅಷ್ಟೇ ಅಲ್ಲ ಅವನ ಸೈನ್ಯದಲ್ಲಿ “ಕೆರೇತ್ಯರು, ಪೆಲೇತ್ಯರು . . . ಗಿತ್ತೀಯರು” ಕೂಡ ಇದ್ರು. (2 ಸಮು. 15:18) ಈ ಕೆರೇತ್ಯರು, ಪೆಲೇತ್ಯರು ಫಿಲಿಷ್ಟಿಯರ ಸಂಬಂಧಿಕರು ಆಗಿರಬಹುದು. (ಯೆಹೆ. 25:16) ಗಿತ್ತೀಯರು ಫಿಲಿಷ್ಟಿಯ ಪಟ್ಟಣದ ಗತ್‌ ಊರಿನವರು.—ಯೆಹೋ. 13:2, 3; 1 ಸಮು. 6:17, 18.

ಹಾಗಿದ್ರೂ ದಾವೀದ ಯಾಕೆ ವಿದೇಶಿಯರನ್ನ ತನ್ನ ಸೈನ್ಯದಲ್ಲಿ ಸೇರಿಸ್ಕೊಂಡ? ಯಾಕಂದ್ರೆ ಅವರು ತನಗೆ ಮತ್ತು ಯೆಹೋವನಿಗೆ ನಿಯತ್ತಾಗಿ ಇರ್ತಾರೆ ಅನ್ನೊ ನಂಬಿಕೆ ಅವನಿಗಿತ್ತು. ಉದಾಹರಣೆಗೆ ಕೆರೇತ್ಯರ ಮತ್ತು ಪೆಲೇತ್ಯರ ಬಗ್ಗೆ ದಿ ನ್ಯೂ ಇಂಟರ್‌ಪ್ರಿಟರ್ಸ್‌ ಡಿಕ್ಷನರಿ ಆಫ್‌ ದಿ ಬೈಬಲ್‌ “ದಾವೀದ ಆಳ್ವಿಕೆ ಮಾಡ್ತಿದ್ದಾಗ ಅವರು ಅವನಿಗೆ ತುಂಬಾ ನಿಯತ್ತಾಗಿದ್ರು. ಕಷ್ಟದ ಪರಿಸ್ಥಿತಿಯಲ್ಲೂ ಅವನನ್ನ ಬಿಟ್ಟುಹೋಗಲಿಲ್ಲ” ಅಂತ ಹೇಳುತ್ತೆ. ಅದನ್ನ ನಾವು ಹೇಗೆ ಹೇಳಬಹುದು? “ತೊಂದ್ರೆ ತಂದಿಡುವವನಾಗಿದ್ದ” ಶೆಬನ ಮಾತು ಕೇಳಿ “ಎಲ್ಲ ಇಸ್ರಾಯೇಲ್ಯರು” ದಾವೀದನನ್ನ ಬಿಟ್ಟು ಹೋದ್ರೂ ಕೆರೇತ್ಯರು, ಪೆಲೇತ್ಯರು ದಾವೀದನನ್ನ ಬಿಟ್ಟು ಹೋಗಲಿಲ್ಲ. ಅವರು ಶೆಬ ಎಬ್ಬಿಸಿದ ದಂಗೆಯನ್ನ ನಿಲ್ಲಿಸೋಕೂ ತುಂಬಾ ಪ್ರಯತ್ನ ಮಾಡಿದ್ರು. (2 ಸಮು. 20:1, 2, 7) ಇನ್ನೊಂದು ಸಲ ಏನಾಯ್ತು ಅಂದ್ರೆ ದಾವೀದನ ಮಗ ಅದೋನೀಯ ದಾವೀದನ ಸಿಂಹಾಸನ ಕಿತ್ತುಕೊಳ್ಳೋಕೆ ನೋಡಿದ. ಆದ್ರೆ ಆಗ್ಲೂ ಕೆರೇತ್ಯರು ಮತ್ತು ಪೆಲೇತ್ಯರು ದಾವೀದನಿಗೆ ನಿಯತ್ತಾಗಿದ್ರು ಮತ್ತು ಅವನ ಮಗ ಸೊಲೊಮೋನನನ್ನ ಯೆಹೋವ ದೇವರೇ ರಾಜನಾಗಿ ಆರಿಸಿದ್ದಾನೆ ಅಂತ ಗೊತ್ತಿದ್ರಿಂದ ಅವನನ್ನ ರಾಜನಾಗಿ ಮಾಡಿದ್ರು.—1 ಅರ. 1:24-27, 38, 39.

ದಾವೀದನಿಗೆ ನಿಯತ್ತಾಗಿದ್ದ ಇನ್ನೊಬ್ಬ ವ್ಯಕ್ತಿ ಗಿತ್ತೀಯನಾದ ಇತೈ. ಒಂದು ಸಲ ದಾವೀದನ ಮಗನಾದ ಅಬ್ಷಾಲೋಮ ಮತ್ತು ಅವನ ಜನ್ರು ದಾವೀದನಿಗೆ ತಿರುಗಿಬಿದ್ದಾಗ ಇತೈ ಮತ್ತು ಅವನ ಜೊತೆಗಿದ್ದ 600 ಸೈನಿಕರು ದಾವೀದನಿಗೆ ಸಹಾಯ ಮಾಡೋಕೆ ಬಂದ್ರು. ಆದ್ರೆ ಇತೈ ವಿದೇಶಿ ಆಗಿದ್ರಿಂದ ದಾವೀದ ಅವನನ್ನ ಯುದ್ಧಕ್ಕೆ ಕರ್ಕೊಂಡು ಹೋಗೋಕೆ ಮೊದಮೊದ್ಲು ಒಪ್ಪಲಿಲ್ಲ. ಆದ್ರೆ ಇತೈ ರಾಜನಿಗೆ “ಜೀವ ಇರೋ ಯೆಹೋವನ ಆಣೆ, ನನ್ನ ಒಡೆಯನಾದ ರಾಜನ ಆಣೆ, ನನ್ನ ಒಡೆಯನಾದ ರಾಜ ಎಲ್ಲಿ ಹೋದ್ರೂ ನಿನ್ನ ಈ ಸೇವಕ ನಿನ್ನನ್ನ ಬಿಟ್ಟು ಹೋಗಲ್ಲ. ನನ್ನ ಜೀವ ಕಳ್ಕೊಂಡ್ರೂ ಪರ್ವಾಗಿಲ್ಲ” ಅಂದ.—2 ಸಮು. 15:6, 18-21.

ಯೆಹೋವ ರಾಜನಾಗಿ ನೇಮಿಸಿದ ದಾವೀದನಿಗೆ ಇತೈ ನಿಯತ್ತಾಗಿ ಇದ್ದ

ಕೆರೇತ್ಯರು, ಪೆಲೇತ್ಯರು ಮತ್ತು ಗಿತ್ತೀಯರು ವಿದೇಶಿಯರಾಗಿದ್ರೂ ಯೆಹೋವನೇ ಸತ್ಯ ದೇವರು ಮತ್ತು ದಾವೀದನನ್ನ ಯೆಹೋವನೇ ರಾಜನಾಗಿ ಮಾಡಿದ್ದಾನೆ ಅಂತ ಅವರು ನಂಬಿದ್ರು. ಇವರು ತಮ್ಮ ಜೊತೆ ಇದ್ದಿದ್ದನ್ನ ನೋಡಿದಾಗ ದಾವೀದನಿಗೆ ಎಷ್ಟು ಖುಷಿಯಾಗಿರಬೇಕಲ್ವಾ!

a ಧರ್ಮೋಪದೇಶಕಾಂಡ 23:3-6ರಲ್ಲಿ ಅಮ್ಮೋನಿಯರು ಮತ್ತು ಮೋವಾಬ್ಯರು ಇಸ್ರಾಯೇಲ್ಯರ ಸಭೆಯಲ್ಲಿ ಸೇರಬಾರದಿತ್ತು ಅಂತ ದೇವರ ನಿಯಮ ಹೇಳುತ್ತೆ. ಅಂದ್ರೆ ಇದರರ್ಥ, ಅವರು ಯೆಹೋವನ ಸಭೆಯ ಸದಸ್ಯರಾಗಿ ಇರಬಾರದಿತ್ತು ಅಷ್ಟೇ. ಆದ್ರೆ ಇಸ್ರಾಯೇಲ್ಯರ ಜೊತೆ ಇರಬಹುದಿತ್ತು, ಅವರ ಜೊತೆ ಮಾತಾಡಬಹುದಿತ್ತು. ಶಾಸ್ತ್ರಗಳ ಒಳನೋಟ ಸಂಪುಟ 1ರಲ್ಲಿ ಪುಟ 95 ನೋಡಿ. (ಇಂಗ್ಲಿಷ್‌)