ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನ ಮಾಡಿ ನೋಡಿ!

ಯೆಹೋವನನ್ನ ಮೆಚ್ಚಿಸೋಕೆ ಇಷ್ಟಪಡೋರು ಒಳ್ಳೇ ತೀರ್ಮಾನ ಮಾಡ್ತಾರೆ

ಯೆಹೋವನನ್ನ ಮೆಚ್ಚಿಸೋಕೆ ಇಷ್ಟಪಡೋರು ಒಳ್ಳೇ ತೀರ್ಮಾನ ಮಾಡ್ತಾರೆ

ಏಸಾವ ಮತ್ತು ಯಾಕೋಬ ಇವ್ರಿಬ್ರಲ್ಲಿ ಯಾರು ಒಳ್ಳೇ ತೀರ್ಮಾನ ಮಾಡಿದ್ರು ಅಂತ ತಿಳ್ಕೊಳ್ಳೋಕೆ ಆದಿಕಾಂಡ 25:29-34 ಓದಿ.

ಒಂದು ವಿಷ್ಯದ ಪೂರ್ತಿಯಾಗಿ ತಿಳ್ಕೊಳ್ಳಿ. ಮೊದ್ಲು ಏನಾಯ್ತು? (ಆದಿ. 25:20-28) ಆಮೇಲೆ ಏನಾಯ್ತು? ಅಂತ ತಿಳ್ಕೊಳ್ಳಿ.—ಆದಿ. 27:1-46.

ಆ ವಿಷ್ಯದ ಬಗ್ಗೆ ಚಿಕ್ಕಚಿಕ್ಕ ಮಾಹಿತಿಯನ್ನೂ ತಿಳ್ಕೊಳ್ಳಿ. ಆ ಕಾಲದಲ್ಲಿ ಮೊದಲನೇ ಮಗನಿಗೆ ಯಾವೆಲ್ಲ ಹಕ್ಕುಗಳಿತ್ತು ಮತ್ತು ಜವಾಬ್ದಾರಿಗಳಿತ್ತು ಅಂತ ತಿಳ್ಕೊಳ್ಳಿ.—ಆದಿ. 18:18, 19; ಕಾವಲಿನಬುರುಜು10-E 5/1 ಪುಟ 13.

ಏನೆಲ್ಲಾ ಕಲಿತ್ರಿ ಅಂತ ಯೋಚಿಸಿ, ಅದನ್ನ ಪಾಲಿಸಿ. ಜ್ಯೇಷ್ಠ ಪುತ್ರನಿಗಿದ್ದ ಹಕ್ಕನ್ನ ಏಸಾವನಿಗಿಂತ ಯಾಕೋಬ ಯಾಕೆ ತುಂಬ ಅಮೂಲ್ಯವಾಗಿ ನೋಡಿದ? (ಇಬ್ರಿ. 12:16, 17; ಕಾವಲಿನಬುರುಜು03 10/15 ಪುಟ 28-29) ಅವ್ರಿಬ್ರ ಬಗ್ಗೆ ಯೆಹೋವನಿಗೆ ಹೇಗನಿಸ್ತು ಮತ್ತು ಯಾಕೆ? (ಮಲಾ. 1:2, 3) ಏಸಾವ ಒಳ್ಳೇ ತೀರ್ಮಾನ ತಗೊಳ್ಳೋಕೆ ಏನು ಮಾಡಬಹುದಿತ್ತು?

  • ನಿಮ್ಮನ್ನೇ ಕೇಳ್ಕೊಳ್ಳಿ, ‘ನಾನು ಇಡೀ ವಾರದಲ್ಲಿ ನನ್ನ ಸಮಯನ ಹೇಗೆ ಉಪಯೋಗಿಸ್ತಿದ್ದೀನಿ? ಇದ್ರಿಂದ ಯೆಹೋವನನ್ನ ಮೆಚ್ಚಿಸೋ ಆಸೆ ನನಗಿದೆ ಅಂತ ತೋರಿಸ್ತಿದ್ದೀನಾ? ಕುಟುಂಬ ಆರಾಧನೆ ಮಾಡೋಕೆ ನಾನು ಸಮಯ ಮಾಡ್ಕೊಳ್ತಾ ಇದ್ದೀನಾ?’