ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

E+/taseffski/via Getty Images (Stock photo. Posed by model.)

ಸದಾ ಎಚ್ಚರವಾಗಿರಿ!

ಹದಿವಯಸ್ಸಿನವರ ಮಾನಸಿಕ ಆರೋಗ್ಯದಲ್ಲಿ ಆಗಿರೋ ಭಯಂಕರ ಬದಲಾವಣೆ—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಹದಿವಯಸ್ಸಿನವರ ಮಾನಸಿಕ ಆರೋಗ್ಯದಲ್ಲಿ ಆಗಿರೋ ಭಯಂಕರ ಬದಲಾವಣೆ—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಸೋಮವಾರ ಫೆಬ್ರವರಿ 13, 2023ರಂದು ಅಮೆರಿಕದಲ್ಲಿರೋ ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್‌ (ಸಿ.ಡಿ.ಸಿ) ಅನ್ನೋ ಒಂದು ಆರೋಗ್ಯ ಸಂಸ್ಥೆ ಹದಿವಯಸ್ಸಿನ ಮಕ್ಕಳ ಬಗ್ಗೆ ಒಂದು ವರದಿಯನ್ನ ಬಿಡುಗಡೆ ಮಾಡ್ತು. ಅದ್ರಲ್ಲಿ ಶಾಲೆಗೆ ಹೋಗೋ 40 ಪ್ರತಿಶತಕ್ಕಿಂತ ಹೆಚ್ಚಿನ ಹದಿವಯಸ್ಸಿನ ಮಕ್ಕಳು ಯಾವಾಗ್ಲೂ ಬೇಜಾರಲ್ಲಿ, ಗೊತ್ತುಗುರಿ ಇಲ್ಲದೆ ಇದ್ದಾರೆ ಅಂತ ವರದಿಸ್ತು.

 ಇದರ ಬಗ್ಗೆ ಆ ಆರೋಗ್ಯ ಸಂಸ್ಥೆಯ ಡೈರೆಕ್ಟರ್‌ ಡಾಕ್ಟರ್‌ ಕ್ಯಾಥ್ಲೀನ್‌ ಈಥೀಯೆರ್‌ ಹೀಗೆ ಹೇಳ್ತಾರೆ: “ಕಳೆದ ಹತ್ತು ವರ್ಷಗಳಲ್ಲಿ ಯುವಜನರ ಮಾನಸಿಕ ಆರೋಗ್ಯ ಹಾಳೋಗ್ತಾ ಬಂದಿರೋದನ್ನ ನಾವು ನೋಡಿದ್ದೇವೆ. ಆದ್ರೆ ಇತ್ತೀಚಿಗೆ ಹದಿವಯಸ್ಸಿನ ಹುಡುಗಿಯರಲ್ಲಿ ಇರೋ ಮಾನಸಿಕ ಅನಾರೋಗ್ಯ, ಆತ್ಮಹತ್ಯೆಯ ಯೋಚನೆ ಮತ್ತು ನಡುವಳಿಕೆ ಈ ಮುಂಚಿಗಿಂತ ಈಗ ತುಂಬಾನೇ ಜಾಸ್ತಿ ಆಗಿದೆ.

 ಅಷ್ಟೇ ಅಲ್ಲ ಆ ವರದಿಯಲ್ಲಿ ಹೀಗಿತ್ತು:

  •   10ರಲ್ಲಿ 1ಕ್ಕಿಂತ ಹೆಚ್ಚು ಹದಿವಯಸ್ಸಿನ ಹುಡುಗಿಯರಿಗೆ (14 ಪ್ರತಿಶತ) ಇಷ್ಟ ಇಲ್ಲ ಅಂದ್ರೂ ಸೆಕ್ಸ್‌ ಮಾಡುವಂತೆ ಒತ್ತಾಯ ಮಾಡಲಾಗಿದೆ. ಅಷ್ಟೇ ಅಲ್ಲ, ಡಾಕ್ಟರ್‌ ಈಥೀಯೆರ್‌ ಹೇಳ್ತಾರೆ: “ನಿಮಗೆ ಪರಿಚಯ ಇರೋ 10ರಲ್ಲಿ ಕಡಿಮೆಪಕ್ಷ 1 ಹದಿವಯಸ್ಸಿನ ಹುಡುಗಿಯನ್ನ ಅಥವಾ ಅದಕ್ಕಿಂತ ಜಾಸ್ತಿ ಹುಡುಗಿಯರನ್ನ ಅತ್ಯಾಚಾರ ಮಾಡಲಾಗಿದೆ. ಇದು ತುಂಬ ಮನಕಲಕುವ ವಿಷಯ ಆಗಿದೆ.”

  •   3ರಲ್ಲಿ ಹತ್ರತ್ರ 1 ಹದಿವಯಸ್ಸಿನ ಹುಡುಗಿ (30 ಪ್ರತಿಶತ) ಆತ್ಮಹತ್ಯೆ ಮಾಡ್ಕೊಳ್ಳೋದ್ರ ಬಗ್ಗೆ ಗಂಭೀರವಾಗಿ ಯೋಚಿಸಿದ್ದಾಳೆ.

  •   5ರಲ್ಲಿ ಹತ್ರತ್ರ 3 ಹದಿವಯಸ್ಸಿನ ಹುಡುಗಿಯರು (57 ಪ್ರತಿಶತ) ಯಾವಾಗ್ಲೂ ಬೇಜಾರಲ್ಲಿ, ಗೊತ್ತುಗುರಿ ಇಲ್ಲದೆ ಇದ್ದಾರೆ.

 ಈ ಅಂಕಿಅಂಶಗಳನ್ನ ನೋಡಿದಾಗ ಯಾರಿಗೆ ತಾನೇ ಬೇಜಾರ್‌ ಆಗಲ್ಲ ಹೇಳಿ. ಹದಿಪ್ರಾಯ ಯೌವನ ಅಂದ್ರೆನೇ ಸಂತೋಷ, ಆನಂದದ ಸಮಯ ಅಲ್ವಾ? ಹಾಗಾದ್ರೆ ಇವತ್ತಿನ ಯುವಪೀಳಿಗೆಗೆ ಒತ್ತಡದಿಂದ ಹೊರಗೆ ಬರೋಕೆ ಯಾವುದು ಸಹಾಯ ಮಾಡುತ್ತೆ? ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ ನೋಡೋಣ ಬನ್ನಿ.

ಹದಿಪ್ರಾಯದವರಿಗೆ ಬೈಬಲ್‌ನಲ್ಲಿ ತುಂಬ ಒಳ್ಳೇ ಸಲಹೆಗಳಿವೆ

 ನಾವು ಯಾವ ಕಾಲದಲ್ಲಿ ಜೀವಿಸ್ತಾ ಇದ್ದೀವಿ ಅಂತ ಬೈಬಲ್‌ ಮುಚ್ಚುಮರೆ ಇಲ್ಲದೆ ಹೇಳುತ್ತೆ. ಒತ್ತಡದಿಂದ ಕೂಡಿರೋ ಈ ಸಮಯದ ಬಗ್ಗೆ ಹೇಳ್ತಾ, “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ” ಅಂತ ಬೈಬಲ್‌ ಹೇಳುತ್ತೆ. (2 ತಿಮೊತಿ 3:1-5) ಆದ್ರೆ ಲೋಕವ್ಯಾಪಕವಾಗಿ ಇರೋ ಲಕ್ಷಾಂತರ ಹದಿವಯಸ್ಸಿನ ಮಕ್ಕಳು ಈಗಾಗಲೇ ಬೈಬಲ್‌ ಕೊಡೋ ಒಳ್ಳೇ ಸಲಹೆಗಳನ್ನ ಪಾಲಿಸ್ತಾ ಖುಷಿಯಾಗಿದ್ದಾರೆ. ಅವರಿಗೆ ಬರೋ ಸವಾಲುಗಳನ್ನ ಕಷ್ಟಗಳನ್ನ ಚೆನ್ನಾಗಿ ನಿಭಾಯಿಸ್ತಾ ಇದ್ದಾರೆ. ಅವರಿಗೆ ಸಹಾಯ ಮಾಡಿದ ಲೇಖನಗಳು ಕೆಳಗೆ ಇದೆ ನೋಡಿ.

 ಆತ್ಮಹತ್ಯೆಯ ಯೋಚನೆಯಿಂದ ಹೊರಬರೋಕೆ ಹದಿವಯಸ್ಸಿನ ಮಕ್ಕಳಿಗೆ ಸಹಾಯ ಇಲ್ಲಿದೆ

 ಖಿನ್ನತೆ, ಬೇಜಾರು ಅಥವಾ ತಪ್ಪಾದ ಯೋಚನೆ ವಿರುದ್ಧ ಹೋರಾಡ್ತಿರೋ ಹದಿವಯಸ್ಸಿನ ಮಕ್ಕಳಿಗೆ ಸಹಾಯ ಇಲ್ಲಿದೆ

 ಶಾಲೆಯಲ್ಲಿ ಬೇರೆಯವರು ರೇಗಿಸ್ತಾ ಇದ್ರೆ, ಸೈಬರ್‌ ಬೆದರಿಕೆ ಹಾಕ್ತಾ ಇದ್ರೆ ಹದಿವಯಸ್ಸಿನ ಮಕ್ಕಳು ಏನು ಮಾಡಬೇಕು?

 ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವನ್ನ ಎದುರಿಸ್ತಿರೋ ಹದಿವಯಸ್ಸಿನ ಮಕ್ಕಳಿಗೆ ಸಹಾಯ ಇಲ್ಲಿದೆ

ಬೈಬಲಲ್ಲಿ ಹೆತ್ತವರಿಗೂ ಸಲಹೆ ಇದೆ

 ಹದಿವಯಸ್ಸಿನ ಮಕ್ಕಳು ತಮ್ಮ ಜೀವನದಲ್ಲಿ ಬರೋ ಸವಾಲುಗಳನ್ನ ಜಯಿಸಬೇಕಾದ್ರೆ ಹೆತ್ತವರು ಅವರಿಗೆ ಸಹಾಯ ಮಾಡಬೇಕು. ಅದಕ್ಕೆ ಬೈಬಲ್‌ ಹೆತ್ತವರಿಗೂ ಸಲಹೆ ಕೊಡುತ್ತೆ. ಅಂಥ ಸಲಹೆಗಳಿರೋ ಕೆಲವು ಲೇಖನಗಳನ್ನ ನೋಡಿ.