ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Halfpoint Images/Moment via Getty Images

ಸದಾ ಎಚ್ಚರವಾಗಿರಿ! 

ಸೋಷಿಯಲ್‌ ಮೀಡಿಯಾ ಯುವ ಜನರನ್ನ ಹಾಳುಮಾಡ್ತಿದೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಸೋಷಿಯಲ್‌ ಮೀಡಿಯಾ ಯುವ ಜನರನ್ನ ಹಾಳುಮಾಡ್ತಿದೆ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಮೇ 23, 2023ರಲ್ಲಿ, ಸೋಷಿಯಲ್‌ ಮೀಡಿಯಾ ತುಂಬ ಯುವ ಜನರನ್ನ ಹಾಳುಮಾಡ್ತಿದೆ ಅಂತ ಅಮೇರಿಕಾದಲ್ಲಿರೋ ಆರೋಗ್ಯ ಅಧಿಕಾರಿ ಹೇಳಿದ್ದಾರೆ.

  •   “ಸೋಷಿಯಲ್‌ ಮೀಡಿಯಾದಿಂದ ಚಿಕ್ಕ ಮಕ್ಕಳಿಗೆ ಮತ್ತು ಯುವಜನರಿಗೆ ತುಂಬ ಪ್ರಯೋಜನ ಇದೆ, ಆದ್ರೆ ಅಷ್ಟೇ ಅಪಾಯನೂ ಇದೆ. ಅಷ್ಟೇ ಅಲ್ಲ ಅದು ಅವರ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನ ಹಾಳುಮಾಡುತ್ತೆ.”—ಸೋಷಿಯಲ್‌ ಮೀಡಿಯಾ ಆ್ಯಂಡ್‌ ಯೂತ್‌ ಮೆಂಟಲ್‌ ಹೆಲ್ತ್‌: ದ ಯು.ಎಸ್‌. ಸರ್ಜನ್‌ ಜನರಲ್ಸ್‌ ಅಡ್ವೈಸರಿ, 2023.

 ಈ ಅಡ್ವೈಸರಿ ರಿಸರ್ಚ್‌ನಿಂದ ನಾವ್ಯಾಕೆ ಇದ್ರ ಬಗ್ಗೆ ಜಾಸ್ತಿ ಗಮನ ಕೊಡಬೇಕು ಅಂತ ಗೊತ್ತಾಗುತ್ತೆ.

  •   12 ರಿಂದ 15 ವಯಸ್ಸಿನ ಮಕ್ಕಳು “ಪ್ರತಿದಿನ 3ಕ್ಕಿಂತ ಹೆಚ್ಚು ತಾಸು ಸೋಷಿಯಲ್‌ ಮೀಡಿಯಾದಲ್ಲಿ ಕಳೆಯುತ್ತಾರೆ. ಇದರಿಂದ ಖಿನ್ನತೆ, ಆತಂಕದ ಕಾಯಿಲೆ ಬಂದು ಮಕ್ಕಳ ಮಾನಸಿಕ ಆರೋಗ್ಯ ಹಾಳಾಗ್ತಿದೆ.”

  •   14 ವರ್ಷದವರು “ಸೋಷಿಯಲ್‌ ಮೀಡಿಯಾ ಬಳಸಿದಾಗ ಕಡಿಮೆ ನಿದ್ದೆ ಮಾಡ್ತಿದ್ದರು ರಾಗಿಂಗ್‌ಗೆ ಬಲಿಯಾಗ್ತಿದ್ದರು, ನಾನು ನೋಡೋಕೆ ಚೆನ್ನಾಗಿಲ್ಲ ಮತ್ತು ನಾಲಾಯಕ್ಕು ಅನ್ನೋ ಭಾವನೆ ಬರ್ತಿತ್ತು ಮತ್ತು ಖಿನ್ನತೆನೂ ಆಗ್ತಿತ್ತು. ಇವೆಲ್ಲಾ ಹುಡುಗರಿಗಿಂತ ಹುಡಿಗಿಯರಿಗೆ ಜಾಸ್ತಿ ಆಗ್ತಿತ್ತು.”

 ಈ ಅಪಾಯಗಳಿಂದ ಮಕ್ಕಳನ್ನ ತಪ್ಪಿಸೋಕೆ ಅಪ್ಪಅಮ್ಮ ಏನು ಮಾಡಬಹುದು? ಇದಕ್ಕೆ ಬೈಬಲ್‌ ಸಹಾಯಮಾಡುತ್ತೆ.

ಅಪ್ಪಅಮ್ಮ ಏನು ಮಾಡಬಹುದು?

 ನೀವು ತಿಳ್ಕೊಳ್ಳಿ. ಸೋಷಿಯಲ್‌ ಮೀಡಿಯಾದಿಂದ ಏನೆಲ್ಲ ಹಾನಿಯಾಗುತ್ತೆ ಅಂತ ತಿಳ್ಕೊಂಡು ಆಮೇಲೆ ಮಕ್ಕಳು ಅದನ್ನ ಬಳಸಬೇಕಾ ಬೇಡ್ವಾ ಅಂತ ನೀವು ತೀರ್ಮಾನ ಮಾಡಿ.

 ಸೋಷಿಯಲ್‌ ಮೀಡಿಯಾ ಬಳಸೋಕೆ ಮಕ್ಕಳಿಗೆ ಅನುಮತಿ ಕೊಡೋದಾದರೆ ಅದರಿಂದ ಆಗೋ ಅಪಾಯಗಳ ಬಗ್ಗೆ ತಿಳ್ಕೊಳ್ಳಿ ಮತ್ತು ಮಕ್ಕಳು ಆನ್‌ಲೈನ್‌ನಲ್ಲಿ ಏನೆಲ್ಲಾ ಮಾಡ್ತಿದ್ದಾರೆ ಅಂತ ನೋಡಿ. ಅದನ್ನ ಹೇಗೆ ಮಾಡೋದು?

 ಅಪಾಯಕಾರಿ ವಿಷಯಗಳಿಂದ ಮಕ್ಕಳನ್ನ ಕಾಪಾಡಿ. ಅಪಾಯಕಾರಿ ವಿಷಯಗಳನ್ನ ಗುರುತಿಸೋಕೆ ಮತ್ತು ಅದರಿಂದ ದೂರ ಇರೋಕೆ ನಿಮ್ಮ ಮಕ್ಕಳಿಗೆ ಕಲಿಸಿ.

 ಮಿತಿ ಇಡಿ. ಉದಾಹರಣೆಗೆ ಸೋಷಿಯಲ್‌ ಮೀಡಿಯಾ ಯಾವಾಗ ಬಳಸಬೇಕು ಮತ್ತು ಎಷ್ಟು ಹೊತ್ತು ಬಳಸಬೇಕು ಅಂತ ಮಕ್ಕಳಿಗೆ ಸ್ಪಷ್ಟವಾಗಿ ಹೇಳಿ.

  •   ಬೈಬಲ್‌ ತತ್ವ: “ಹಾಗಾಗಿ ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ.. . . ಬುದ್ಧಿ ಇರುವವ್ರ ತರ. . . ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:15, 16.

  •   ಚಲಿಸುವ ಚಿತ್ರಗಳಲ್ಲಿರೋಸೋಷಿಯಲ್‌ ನೆಟ್‌ವರ್ಕನ್ನು ಜಾಣರಾಗಿ ಬಳಸಿ ಅನ್ನೋ ವಿಡಿಯೋ ತೋರಿಸಿ ಮಿತಿಯಿಡೋದ್ರಿಂದ ಏನು ಪ್ರಯೋಜನ ಅಂತ ಮಕ್ಕಳಿಗೆ ಅರ್ಥಮಾಡಿಸಿ.