ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನು ಹೇಗೆ ಕಾಣಿಸ್ತಾ ಇದ್ದೀನಿ?

ನಾನು ಹೇಗೆ ಕಾಣಿಸ್ತಾ ಇದ್ದೀನಿ?

 ನೀವು ಹಾಕೋ ಬಟ್ಟೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾ? ನಿಮ್ಮ ಬಟ್ಟೆ ನೋಡಿ ನೀವು ಎಂಥವರು ಅಂತ ಗೊತ್ತಾಗುತ್ತೆ. ನಿಮ್ಮ ಬಟ್ಟೆ ನೋಡಿ ಜನ ಏನು ನೆನಸ್ತಾರೆ?

 ಫ್ಯಾಷನ್‌ನಿಂದ ಆಗೋ ಮೂರು ತಪ್ಪುಗಳು ಮತ್ತು ಅದನ್ನ ಮಾಡದೇ ಇರೋದು ಹೇಗೆ?

ತಪ್ಪು #1: ಅಡ್ವರ್ಟೈಸ್ಮೆಂಟ್‌ ನೋಡಿ ಬಟ್ಟೆ ಹಾಕೊಳ್ತಾರೆ.

 ತೆರೇಸಾ ಅನ್ನೋ ಹದಿವಯಸ್ಸಿನ ಹುಡುಗಿ ಹೀಗೆ ಹೇಳ್ತಾಳೆ: “ಒಂದೇ ವಿಷಯದ ಬಗ್ಗೆ ತುಂಬ ಆ್ಯಡ್‌ಗಳನ್ನ ನೋಡಿದಾಗ ಅದನ್ನ ತಗೊಳ್ಳಲೇಬೇಕು ಅಂತ ಆಸೆ ಆಗುತ್ತೆ. ಒಂದೇ ಬಟ್ಟೆಯನ್ನ ತುಂಬ ಜನ ಹಾಕೋದನ್ನ ನೋಡುವಾಗ ಅದನ್ನ ನಾವೂ ಹಾಕಬೇಕು ಅಂತ ಅನ್ಸುತ್ತೆ.”

 “ಆ್ಯಡ್‌ಗಳನ್ನು ನೋಡಿ ಮರಳು ಆಗುವುದು ಬರೀ ಹುಡುಗಿಯರು ಅಷ್ಟೇ ಅಲ್ಲ ಹುಡುಗರೂ ಮರಳಾಗುತ್ತಾರೆ. ಫ್ಯಾಷನ್‌ ಹುಚ್ಚು ಹುಡುಗರಿಗೂ ಇದೆ. ಹುಡುಗರು ಚಿಕ್ಕವರಿರುವಾಗಲೇ ಅಡ್ವರ್ಟೈಸ್ಮೆಂಟ್‌ ಬಲೆಗೆ ಬಿದ್ದು ಬಿಡುತ್ತಾರೆ” ಅಂತ ದ ಎವ್ರಿಥಿಂಗ್‌ ಗೈಡ್‌ ಟು ರೈಸಿಂಗ್‌ ಅಡೊಲೆಸೆಂಟ್‌ ಬಾಯ್ಸ್‌ ಅನ್ನೋ ಪುಸ್ತಕ ಹೇಳುತ್ತೆ.

 ಇದನ್ನ ಮಾಡಿನೋಡಿ: “ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ, ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 14:15) ಈ ವಚನ ಹೇಳೋ ಪ್ರಕಾರ ಆ್ಯಡ್‌ಗಳನ್ನ ಕಣ್ಣು ಮುಚ್ಚಿ ನಂಬಬೇಡಿ. ಉದಾಹರಣೆಗೆ ಸೆಕ್ಸಿ ಬಟ್ಟೆಗಳ ಬಗ್ಗೆ ಆ್ಯಡ್‌ಗಳನ್ನ ನೋಡಿದಾಗ ನಿಮ್ಮನ್ನ ಹೀಗೆ ಕೇಳಿಕೊಳ್ಳಿ:

  •  ‘ಇವುಗಳನ್ನು ತಗೊಂಡ್ರೆ ನಿಜವಾಗಲೂ ಯಾರಿಗೆ ಲಾಭ ಆಗುತ್ತೆ?’

  •  ‘ನಾವು ಈ ತರ ಬಟ್ಟೆ ಹಾಕೊಂಡಾಗ ಜನ ನಮ್ಮನ್ನ ಹೇಗೆ ನೋಡ್ತಾರೆ?’

  •  ‘ನಾನು ಹಾಕೋ ಬಟ್ಟೆಯಿಂದ ನನಗೆ ಕೆಟ್ಟ ಹೆಸರು ಬಂದರೂ ಪರವಾಗಿಲ್ಲ ಅಂತನಾ?’

 ಫ್ಯಾಷನ್‌ ಟಿಪ್‌: ಒಂದು ವಾರ ಫ್ಯಾಷನ್‌ ಬಗ್ಗೆ ಬರೋ ಆ್ಯಡ್‌ಗಳನ್ನು ನೋಡಿ. ಆಮೇಲೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ಆ್ಯಡ್‌ಗಳು ಏನನ್ನ ಕಲಿಸುತ್ತಿದೆ? ಇತರ ಸ್ಟೈಲಿಶ್‌ ಬಟ್ಟೆಗಳನ್ನು ಹಾಕೋಕೆ ಅದು ನಿಮ್ಮನ್ನ ಪುಸಲಾಯಿಸುತ್ತಿದೆಯಾ? “ಸಕ್ಕತಾಗಿ ಕಾಣಿಸಬೇಕು, ಒಳ್ಳೆ ಬಟ್ಟೆ ಹಾಕಬೇಕು, ಸೆಕ್ಸಿಯಾಗಿ ಕಾಣಿಸಬೇಕು ಅನ್ನೋ ಪ್ರೆಶರ್‌ ಇದೆ” ಅಂತ ಹದಿವಯಸ್ಸಿನ ಕ್ಯಾರೆನ್‌ ಹೇಳ್ತಾಳೆ. ಹದಿವಯಸ್ಸಿನವರಿಗೆ ಚೆನ್ನಾಗಿ ಕಾಣಿಸಬೇಕು ಅಂತ ಆಸೆ ಇರುತ್ತೆ. ಇದನ್ನು ಇಟ್ಕೊಂಡೆ ಅಡ್ವರ್ಟೈಸ್ಮೆಂಟ್‌ ಕಂಪನಿಗಳು ಲಾಭ ಗಳಿಸುತ್ತಾರೆ.

ತಪ್ಪು #2: ಎಲ್ಲರೂ ಹಾಕೋ ಬಟ್ಟೆಯನ್ನೇ ನಾವು ಹಾಕಬೇಕು ಅಂದುಕೊಳ್ಳುತ್ತಾರೆ.

 ಮ್ಯಾನುಯೆಲ್‌ ಹೀಗೆ ಹೇಳುತ್ತಾನೆ: “ಒಂದುವೇಳೆ ಲೇಟೆಸ್ಟ್‌ ಫ್ಯಾಷನ್‌ ಬಟ್ಟೆ ಹಾಕ್ಕೊಂಡಿಲ್ಲ ಅಂದ್ರೆ ಇವರಿನ್ನೂ ಅಪ್ಡೇಟ್‌ ಆಗಿಲ್ಲ ಅಂತ ಆಡಿಕೊಳ್ಳುತ್ತಾರೆ.” ಹದಿವಯಸ್ಸಿನ ಆ್ಯನ ಕೂಡ ಇದನ್ನು ಒಪ್ಪಿಕೊಳ್ಳುತ್ತಾಳೆ. “ಇವತ್ತು ಫ್ಯಾಷನ್‌ ಅಲ್ಲ. ನಾವು ಅಪ್ಡೇಟ್‌ ಆಗಿದ್ದೀವಾ ಇಲ್ವಾ ಅನ್ನೋದೇ ಮುಖ್ಯ.”

 ಇದನ್ನ ಮಾಡಿನೋಡಿ: ಬೈಬಲ್‌ ಹೀಗೆ ಹೇಳುತ್ತೆ, “ಈ ಲೋಕ ನಿಮ್ಮನ್ನ ರೂಪಿಸೋಕೆ ಬಿಡಬೇಡಿ.” (ರೋಮನ್ನರಿಗೆ 12:2) ಈ ವಚನವನ್ನು ಮನ್ಸಲ್ಲಿ ಇಟ್ಕೊಂಡು ನಿಮ್ಮ ಕಬೋರ್ಡನ್ನು ಓಪನ್‌ ಮಾಡಿ ಹೀಗೆ ಕೇಳಿಕೊಳ್ಳಿ:

  •  ‘ನಾನು ಯಾಕೆ ಈ ತರ ಡ್ರೆಸ್‌ ಮಾಡಿಕೊಳ್ಳುತ್ತೇನೆ?’

  •  ‘ನಾನು ಹಾಕಿಕೊಳ್ಳುವುದು ಬರೀ ಬ್ರಾಂಡೆಡ್‌ ಬಟ್ಟೆನಾ?’

  •  ‘ಜನರನ್ನ ಮೆಚ್ಚಿಸೋಕ್ಕಂತ ನಾನು ಈ ತರ ಬಟ್ಟೆ ಹಾಕಿಕೊಳ್ಳುತ್ತಿದ್ದೇನಾ?’

 ಫ್ಯಾಷನ್‌ ಟಿಪ್‌: ಇವತ್ತು ಹದಿವಯಸ್ಸಿನ ಮಕ್ಕಳು ಸ್ಟೈಲಿಶ್‌ ಆಗಿರೋ ಬಟ್ಟೆ ಹಾಕಬೇಕು ಅಂತ ಇಷ್ಟಪಡುತ್ತಾರೆ. ಆದರೆ ಅದು ನಿಜ ಅಲ್ಲ. ಯಾಕೆಂದ್ರೆ ಒಬ್ಬ ವ್ಯಕ್ತಿಗೆ ಆತ್ಮವಿಶ್ವಾಸ ಇದ್ದರೆ ಜನ ನಮ್ಮ ಬಗ್ಗೆ ಏನು ಯೋಚಿಸ್ತಾರೆ ಅನ್ನೋದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ.

ತಪ್ಪು #3: ‘ಸೆಕ್ಸಿ ಬಟ್ಟೆ ಹಾಕಿದ್ರೆನೇ ಸಕ್ಕತಾಗಿ ಕಾಣೋದು’ ಅನ್ನೋ ಯೋಚನೆ.

 ಜೆನಿಫರ್‌ ಅನ್ನೋ ಹುಡುಗಿ ಹೀಗೆ ಹೇಳ್ತಾಳೆ: “ನಿಜ ಹೇಳಬೇಕಂದ್ರೆ ಕೆಲವೊಮ್ಮೆ ಅರೆಬರೆ ಬಟ್ಟೆ , ಚಿಕ್ಕ ಚಿಕ್ಕ ಬಟ್ಟೆ, ಟೈಟ್‌ ಆಗಿರೋ ಬಟ್ಟೆಹಾಕಿಕೊಳ್ಳೋಕೆ ಆಸೆ ಆಗುತ್ತೆ.”

 ಇದನ್ನ ಮಾಡಿನೋಡಿ: ಬೈಬಲ್‌ ಹೀಗೆ ಹೇಳುತ್ತೆ: ‘ಮೇಲೆ ಕಾಣಿಸೋ ಅಲಂಕಾರಕ್ಕಲ್ಲ, ಹೃದಯದಲ್ಲಿ ನೀವು ಎಷ್ಟು ಅಂದವಾಗಿದೀರ’ ಅನ್ನೋದಕ್ಕೆ ಬೆಲೆ ಜಾಸ್ತಿ. (1 ಪೇತ್ರ 3: 3, 4) ಈ ವಚನವನ್ನು ಮನಸ್ಸಲ್ಲಿಟ್ಟು ಹೀಗೆ ಯೋಚನೆ ಮಾಡಿ: ‘ನಿಮಗೆ ಕಣ್ಸೆಳೆಯೋ ಬಟ್ಟೆ ಮುಖ್ಯನಾ ಅಥವಾ ಕಣ್ಮರೆಯಲ್ಲಿರುವ ಒಳ್ಳೇ ಗುಣ ಮುಖ್ಯನಾ?’

 ಫ್ಯಾಷನ್‌ ಟಿಪ್‌: ನೀವು ‘ಸುಂದರವಾಗಿ ಕಾಣೋ’ ತರ ಮಾಡುವ ಗುಣ ಯಾವುದು ಗೊತ್ತಾ? ನಮ್ರತೆ. ಈ ಗುಣದ ಬಗ್ಗೆ ಜನರಿಗೆ ಗೊತ್ತಿಲ್ಲ ಅನ್ನೋದು ನಿಜಾನೇ. ಆದರೆ ಈ ತರ ಯೋಚನೆ ಮಾಡಿ ನೋಡಿ:

 ಮೂರು ಹೊತ್ತೂ ತಮ್ಮ ಬಗ್ಗೆನೇ ಮಾತಾಡುವವರ ಪರಿಚಯ ನಿಮಗಿದೆಯಾ? ಯಾವಾಗಲೂ ನಮ್ಮ ಬಗ್ಗೆನೇ ಮಾತಾಡಿದ್ರೆ ಜನ ನಮ್ಮನ್ನ ಇಷ್ಟಪಡ್ತಾರೆ ಅಂತ ಕೆಲವರು ನೆನಸ್ತಾರೆ. ಆದರೆ ಹೀಗೆ ಮಾಡೋದ್ರಿಂದಾನೇ ಅವರನ್ನು ಯಾರೂ ಇಷ್ಟ ಪಡಲ್ಲ ಅನ್ನೋದು ಅವರಿಗೆ ಗೊತ್ತಾಗಲ್ಲ.

ತಮ್ಮ ಬಗ್ಗೆನೇ ಮಾತಾಡೋರನ್ನ ಕಂಡರೆ ಹೇಗೆ ಜನರಿಗೆ ಇಷ್ಟ ಆಗಲ್ವೋ ಅದೇ ತರ ಬೇರೆಯವರ ಗಮನ ಸೆಳೆಯೋ ತರ ಬಟ್ಟೆ ಹಾಕೋರನ್ನ ಕಂಡರೂ ಇಷ್ಟ ಆಗಲ್ಲ.

 ಅದೇ ತರ ‘ಜನ ನಮ್ಮನ್ನು ನೋಡಲಿ’ ಅಂತ ಹಾಕೋ ಬಟ್ಟೆನೇ ನಮ್ಮನ್ನ ಅಸಹ್ಯವಾಗಿ ನೋಡೋ ತರ ಮಾಡುತ್ತೆ. ಹೀಗೆ ನಾವು ನಮ್ಮ ಬಗ್ಗೆ ಮಾತ್ರ ಯೋಚನೆ ಮಾಡ್ತೀವಿ ಅಂತ ತೋರಿಸ್ತಿರುತ್ತೀವಿ. ಬೇರೆಯವರು ನಮ್ಮನ್ನು ನೋಡಬೇಕಂತ ಎಂಥ ಬಟ್ಟೆ ಹಾಕೋಕೂ ರೆಡಿಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಂಥ ಅಪಾಯದಿಂದ ತಪ್ಪಿಸಿಕೊಳ್ಳಬೇಕಂದ್ರೆ ಸಭ್ಯ ಬಟ್ಟೆ ಹಾಕೋದನ್ನ ಕಲಿರಿ.

 ಬೇರೆಯವರ ಗಮನ ನಮ್ಮ ಮೇಲೆ ಬರಬಾರದಂದ್ರೆ ಮೈ ತೋರಿಸೋ ಬಟ್ಟೆ ಹಾಕಬಾರದು. ಅದರರ್ಥ ‘ಅಜ್ಜಿ ತರ ಬಟ್ಟೆ ಹಾಕಬೇಕು’ ಅಂತಲ್ಲ ಬದಲಿಗೆ ನಿಮ್ಮನ್ನ, ನಿಮ್ಮ ಸುತ್ತಮುತ್ತ ಇರೋರನ್ನ ನೀವು ಗೌರವಿಸುತ್ತೀರಾ ಅಂತ ಹದಿವಯಸ್ಸಿನ ಮೋನಿಕಾ ಹೇಳ್ತಾಳೆ.