ಕಾವಲಿನಬುರುಜು - ಅಧ್ಯಯನ ಆವೃತ್ತಿ ಮಾರ್ಚ್ 2014

ಈ ಸಂಚಿಕೆಯಲ್ಲಿ, ತ್ಯಾಗದ ಮನೋಭಾವ ಬಿಟ್ಟುಬಿಡದಿರಲು ಏನು ಮಾಡಬೇಕೆಂದು ಮತ್ತು ನಮ್ಮ ಬಗ್ಗೆ ನಾವು ಸಕಾರಾತ್ಮಕ ನೋಟವನ್ನು ಇಟ್ಟುಕೊಳ್ಳುವುದು ಹೇಗೆಂದು ತಿಳಿಯಿರಿ. ವೃದ್ಧ ಜೊತೆವಿಶ್ವಾಸಿಗಳ ಮತ್ತು ಕುಟುಂಬ ಸದಸ್ಯರ ಕಾಳಜಿವಹಿಸುವುದು ಹೇಗೆಂದು ಕೂಡ ತಿಳಿಯಿರಿ.

ಅವಿಶ್ವಾಸಿ ಕುಟುಂಬ ಸದಸ್ಯರ ಹೃದಯವನ್ನು ಸ್ಪರ್ಶಿಸಿರಿ

ಯೇಸು ತನ್ನ ಸಂಬಂಧಿಕರೊಂದಿಗೆ ವ್ಯವಹರಿಸಿದ ರೀತಿಯಿಂದ ನಾವೇನು ಕಲಿಯುತ್ತೇವೆ? ಇತರ ಧರ್ಮವನ್ನು ಪಾಲಿಸುವ ಅಥವಾ ದೇವರನ್ನೇ ನಂಬದ ಸಂಬಂಧಿಕನಿಗೆ ನಮ್ಮ ನಂಬಿಕೆ ಕುರಿತು ಹೇಗೆ ಹೇಳಬಹುದು?

ಸ್ವತ್ಯಾಗ ಮನೋಭಾವವನ್ನು ಬಿಟ್ಟುಬಿಡಬೇಡಿ

ನಮ್ಮಲ್ಲಿರುವ ಸ್ವತ್ಯಾಗ ಮನೋಭಾವವನ್ನು ನಮಗೇ ಗೊತ್ತಾಗದ ಹಾಗೆ ಕುಗ್ಗಿಸುವ ಶತ್ರುವೊಂದಿದೆ. ಆ ಶತ್ರು ಯಾವುದೆಂದು ಮತ್ತು ಅದರ ವಿರುದ್ಧ ಹೋರಾಡುವುದು ಹೇಗೆಂದು ಈ ಲೇಖನ ತೋರಿಸುವುದು.

ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಿ

ಅನೇಕರು ಏಕೆ ನಕಾರಾತ್ಮಕ ಭಾವನೆಗಳ ವಿರುದ್ಧ ಹೋರಾಡುತ್ತಿದ್ದಾರೆ? ನಮ್ಮ ಬಗ್ಗೆ ಸಕಾರಾತ್ಮಕ ನೋಟವನ್ನು ಇಟ್ಟುಕೊಳ್ಳಲು ಬೈಬಲನ್ನು ಬಳಸುವುದು ಹೇಗೆಂದು ಈ ಲೇಖನದಲ್ಲಿ ಹೇಳಲಾಗಿದೆ.

ಕುಟುಂಬ ಆರಾಧನೆ—ಇನ್ನಷ್ಟು ಆನಂದದಾಯಕವಾಗಿ ಮಾಡಬಲ್ಲಿರೋ?

ಬೇರೆ ಬೇರೆ ದೇಶಗಳಲ್ಲಿರುವವರು ಕುಟುಂಬ ಆರಾಧನೆಯನ್ನು ಹೇಗೆ ಮಾಡುತ್ತಿದ್ದಾರೆ ಎಂಬುದರ ನಸುನೋಟ ಇಲ್ಲಿದೆ.

ವೃದ್ಧರನ್ನು ಗೌರವಿಸಿ

ವೃದ್ಧರನ್ನು ದೇವರು ಹೇಗೆ ಕಾಣುತ್ತಾನೆ ಎಂದು ತಿಳಿಯಿರಿ. ವಯಸ್ಕ ಮಕ್ಕಳಿಗೆ ತಮ್ಮ ವೃದ್ಧ ಹೆತ್ತವರ ಕಡೆಗೆ ಯಾವ ಜವಾಬ್ದಾರಿಗಳಿವೆ? ಸಭೆಗಳು ವೃದ್ಧ ಸಹೋದರ ಸಹೋದರಿಯರಿಗೆ ಗೌರವ ತೋರಿಸಲು ಏನು ಮಾಡಸಾಧ್ಯವಿದೆ?

ವೃದ್ಧರ ಕಾಳಜಿ ವಹಿಸಿರಿ

‘ಕಷ್ಟದ ದಿನಗಳು’ ಬರುವ ಮೊದಲೇ ವಯಸ್ಸಾಗುತ್ತಿರುವ ಹೆತ್ತವರು ಹಾಗೂ ವಯಸ್ಕ ಮಕ್ಕಳು ಆ ಕುರಿತು ಕೂತು ಮಾತಾಡಿ ಬೇಕಾದ ಸಿದ್ಧತೆಗಳನ್ನು, ನಿರ್ಣಯಗಳನ್ನು ಮಾಡಸಾಧ್ಯ. ಅವರು ಕೆಲವು ಸವಾಲುಗಳನ್ನು ಜಯಿಸುವುದು ಹೇಗೆ?

ನಿಮ್ಮ ಮಾತು—ಮೊದಲು “ಹೌದು” ನಂತರ “ಅಲ್ಲ” ಎಂದಾಗಿದೆಯೊ?

ಕ್ರೈಸ್ತರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಮೊದಲು ಹೌದು ಎಂದು ನಂತರ ಅಲ್ಲ ಎಂದು ಯಾವತ್ತೂ ಹೇಳಬಾರದು. ಒಂದುವೇಳೆ ನಾವು ಮಾಡಿದ ಯೋಜನೆಯನ್ನು ಬದಲಾಯಿಸಬೇಕಾಗಿ ಬಂದಲ್ಲಿ ಆಗೇನು? ಈ ಬಗ್ಗೆ ಅಪೊಸ್ತಲ ಪೌಲನ ಉದಾಹರಣೆಯಿಂದ ಕಲಿಯಿರಿ.