ಯೆಹೋವನ ಸಮೀಪಕ್ಕೆ ಬನ್ನಿರಿ
ದೇವರು ಅವನ ಹತ್ತಿರ ಬರಲು ನಮ್ಮನ್ನು ಆಮಂತ್ರಿಸುತ್ತಾನೆ. ಬೈಬಲ್ ಸಹಾಯದಿಂದ ಇದನ್ನು ಹೇಗೆ ಮಾಡಬಹುದು ಅಂತ ಈ ಪುಸ್ತಕ ಕಲಿಸುತ್ತದೆ.
ಪ್ರಸ್ತಾವನೆ
ನೀವು ದೇವರೊಂದಿಗೆ ಎಂದೂ ಮುರಿಯದ ಬಂಧವನ್ನು ಬೆಸೆಯಬಹುದು.
ಅಧ್ಯಾಯ 1
“ಆಹಾ, ಈತನೇ ನಮ್ಮ ದೇವರು”
ಮೋಶೆಗೆ ದೇವರ ಹೆಸರು ಗೊತ್ತಿತ್ತು. ಹಾಗಿದ್ದ ಮೇಲೆ ಅವನು ಯಾಕೆ ದೇವರ ಹೆಸರ ಬಗ್ಗೆ ಕೇಳಿದನು?
ಅಧ್ಯಾಯ 2
ನೀವು ನಿಜವಾಗಿ ‘ದೇವರ ಸಮೀಪಕ್ಕೆ ಬರಬಲ್ಲಿರೊ?’
ಸ್ವರ್ಗ ಮತ್ತು ಭೂಮಿಯನ್ನು ಸೃಷ್ಟಿ ಮಾಡಿರುವ ಯೆಹೋವ ದೇವರು ನಮಗೊಂದು ಆಮಂತ್ರಣವನ್ನು ಮತ್ತು ಒಂದು ಮಾತನ್ನು ಕೊಟ್ಟಿದ್ದಾನೆ.
ಅಧ್ಯಾಯ 3
“ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು”
ಪರಿಶುದ್ಧತೆಗೂ ಸೌಂದರ್ಯಕ್ಕೂ ಬೈಬಲಿನಲ್ಲಿ ಸಂಬಂಧ ಕಲ್ಪಿಸಲಾಗಿದೆ ಯಾಕೆ?
ವಿಭಾಗ 1
‘ಮಹಾಶಕ್ತನು’
ಅಧ್ಯಾಯ 4
‘ಯೆಹೋವನ ಶಕ್ತಿಯು ಅಪಾರ’
ದೇವರಿಗಿರುವ ಶಕ್ತಿಯನ್ನು ನೋಡಿ ನಾವು ಹೆದರಬೇಕಾ? ಹೌದು ಎಂದರೂ ಸರಿಯೇ, ಇಲ್ಲ ಅಂದರೂ ಸರಿಯೇ.
ಅಧ್ಯಾಯ 5
ಸೃಷ್ಟಿಕಾರಕ ಶಕ್ತಿ—‘ಭೂಮಿ ಆಕಾಶವನ್ನು ನಿರ್ಮಿಸಿದವನು’
ದೇವರ ಸೃಷ್ಟಿಯಾದ ಬೃಹದಾಕಾರದ ಸೂರ್ಯನಿಂದ ಹಿಡಿದು ಪುಟ್ಟ ಝೇಂಕಾರದ ಹಕ್ಕಿ (ಹಮಿಂಗ್‌ಬರ್ಡ್) ವರೆಗೆ ಎಲ್ಲದರಿಂದ ನಾವು ಯೆಹೋವನ ಬಗ್ಗೆ ಪ್ರಾಮುಖ್ಯ ವಿಷಯಗಳನ್ನು ಕಲಿಯಬಹುದು.
ಅಧ್ಯಾಯ 7
ಸಂರಕ್ಷಣಾತ್ಮಕ ಶಕ್ತಿ—“ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ”
ದೇವರು ತನ್ನ ಸೇವಕರನ್ನು ಎರಡು ವಿಧದಲ್ಲಿ ಸಂರಕ್ಷಿಸುತ್ತಾನೆ. ಅದರಲ್ಲಿ ಒಂದು ವಿಧ ಇನ್ನೊಂದಕ್ಕಿಂತ ತುಂಬ ಮುಖ್ಯ.
ಅಧ್ಯಾಯ 8
ಪುನಸ್ಸ್ಥಾಪಿಸುವ ಶಕ್ತಿ—ಯೆಹೋವನು ‘ಎಲ್ಲವನ್ನು ಹೊಸದು ಮಾಡುತ್ತಾನೆ’
ಯೆಹೋವನು ಈಗಾಗಲೇ ಶುದ್ಧ ಆರಾಧನೆಯನ್ನು ಪುನಸ್ಸ್ಥಾಪಿಸಿದ್ದಾನೆ. ಮುಂದೆ ಆತನು ಏನನ್ನು ಪುನಸ್ಸ್ಥಾಪಿಸುತ್ತಾನೆ?
ಅಧ್ಯಾಯ 9
‘ದೇವರ ಶಕ್ತಿ ಆಗಿರುವ ಕ್ರಿಸ್ತನು’
ಯೇಸು ಮಾಡಿದ ಅದ್ಭುತಗಳು, ಆತನ ಬೋಧನೆ ಯೆಹೋವನ ಕುರಿತು ಏನು ತೋರಿಸಿಕೊಡುತ್ತದೆ?
ಅಧ್ಯಾಯ 10
ನಿಮ್ಮ ಶಕ್ತಿಯ ಪ್ರಯೋಗದಲ್ಲಿ ‘ದೇವರನ್ನು ಅನುಸರಿಸುವವರಾಗಿರಿ’
ನೀವು ಎಣಿಸುವುದಕ್ಕಿಂತ ಹೆಚ್ಚು ಶಕ್ತಿ ನಿಮ್ಮಲ್ಲಿರಬಹುದು-ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ಹೇಗೆ?
ವಿಭಾಗ 2
“ನ್ಯಾಯವನ್ನು ಪ್ರೀತಿಸುವವನು”
ಅಧ್ಯಾಯ 12
“ದೇವರಲ್ಲಿ ಅನ್ಯಾಯ ಉಂಟೋ?”
ದೇವರು ಅನ್ಯಾಯವನ್ನು ದ್ವೇಷಿಸುತ್ತಾನೆ ಅಂದಮೇಲೆ ಭೂಮಿಯಲ್ಲೆಲ್ಲ ಅನ್ಯಾಯನೇ ಯಾಕೆ ತುಂಬಿಕೊಂಡಿದೆ?
ಅಧ್ಯಾಯ 14
“ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ಈಡನ್ನು” ಯೆಹೋವನು ಏರ್ಪಡಿಸುತ್ತಾನೆ
ನೀವು ದೇವರಿಗೆ ಆಪ್ತರಾಗಲು ಸಹಾಯ ಮಾಡುವ ಸರಳವಾದ ಆದರೆ ಗಹನವಾದ ಒಂದು ಬೋಧನೆ.
ಅಧ್ಯಾಯ 15
ಯೇಸು ‘ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುತ್ತಾನೆ’
ಹಿಂದಿನ ಕಾಲದಲ್ಲಿ ಯೇಸು ಹೇಗೆ ನ್ಯಾಯವನ್ನು ಹೆಚ್ಚಿಸಿದನು? ಈಗ ಅದನ್ನು ಹೇಗೆ ಮಾಡುತ್ತಿದ್ದಾನೆ? ಮುಂದೆ ಆತನು ನ್ಯಾಯವನ್ನು ಹೇಗೆ ಸ್ಥಾಪಿಸುತ್ತಾನೆ?
ಅಧ್ಯಾಯ 16
ದೇವರೊಂದಿಗೆ ನಡೆಯುವುದರಲ್ಲಿ “ನ್ಯಾಯವನ್ನು ಆಚರಿಸುವದು”
“ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ” ಎಂದು ಯೇಸು ಎಚ್ಚರಿಸಿದ್ದು ಯಾಕೆ?
ವಿಭಾಗ 3
‘ವಿವೇಕವುಳ್ಳ ಹೃದಯವುಳ್ಳವನು’
ಅಧ್ಯಾಯ 17
‘ದೇವರ ವಿವೇಕವು ಎಷ್ಟೋ ಅಗಾಧ!’
ದೇವರ ವಿವೇಕ ಆತನ ಜ್ಞಾನ, ತಿಳುವಳಿಕೆ, ವಿವೇಚನಾಶಕ್ತಿಗಿಂತ ಶ್ರೇಷ್ಠ ಯಾಕೆ?
ಅಧ್ಯಾಯ 18
“ದೇವರ ವಾಕ್ಯ”ದಲ್ಲಿರುವ ವಿವೇಕ
ಬೈಬಲನ್ನು ದೇವರೇ ಬರೆಯಲಿಲ್ಲ ಅಥವಾ ದೇವದೂತರ ಕೈಯಲ್ಲೂ ಬರೆಸಲಿಲ್ಲ. ಬದಲಿಗೆ ಮನುಷ್ಯರ ಕೈಯಲ್ಲಿ ಬರೆಸಿದನು ಯಾಕೆ?
ಅಧ್ಯಾಯ 19
“ಪವಿತ್ರ ರಹಸ್ಯದಲ್ಲಿನ ದೇವರ ವಿವೇಕ”
ದೇವರು ಒಂದು ಸಮಯದಲ್ಲಿ ಗುಟ್ಟಾಗಿಟ್ಟ ಆದರೆ ಈಗ ಬಹಿರಂಗ ಮಾಡಿರುವ ಪವಿತ್ರ ರಹಸ್ಯ ಯಾವುದು?
ಅಧ್ಯಾಯ 21
“ದೇವರಿಂದ ಬರುವ ವಿವೇಕ”ವನ್ನು ಯೇಸು ಪ್ರಕಟಪಡಿಸುತ್ತಾನೆ
ಯೇಸುವನ್ನು ಹಿಡಿಯಲು ಕಳುಹಿಸಲಾದ ಸೈನಿಕರು ಅವನ ಬೋಧನೆಯನ್ನು ಕೇಳಿ ಬರಿಗೈಯಲ್ಲಿ ಹಿಂದೆ ಬಂದದ್ದು ಯಾಕೆ?
ಅಧ್ಯಾಯ 22
“ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?
ದೇವರ ವಿವೇಕವನ್ನು ನಾವು ಬೆಳೆಸಿಕೊಳ್ಳಲು ನೆರವಾಗುವ ನಾಲ್ಕು ಸೂತ್ರ ಬೈಬಲಿನಲ್ಲಿದೆ.
ವಿಭಾಗ 4
“ದೇವರು ಪ್ರೀತಿಸ್ವರೂಪಿಯು”
ಅಧ್ಯಾಯ 24
ನಮ್ಮನ್ನು ಯಾವುದೂ ‘ದೇವರ ಪ್ರೀತಿಯಿಂದ ಅಗಲಿಸಲಾರದು’
ದೇವರ ಪ್ರೀತಿಗೆ ನೀವು ಯೋಗ್ಯರಲ್ಲ, ಆತನ ದೃಷ್ಟಿಯಲ್ಲಿ ನಿಮಗೆ ಏನೂ ಬೆಲೆಯಿಲ್ಲ ಎಂಬ ಸುಳ್ಳುಗಳನ್ನು ಬುಡಸಮೇತ ಕಿತ್ತು ಬಿಸಾಕಿ.
ಅಧ್ಯಾಯ 25
“ನಮ್ಮ ದೇವರ ಕೋಮಲ ಕನಿಕರ”
ತಾಯಿಗೆ ಮಗುವಿನ ಕಡೆಗೆ ಇರುವಂಥದ್ದೇ ಭಾವನೆ ದೇವರಿಗೆ ನಿಮ್ಮ ಕಡೆಗಿದೆ. ಅದು ಹೇಗೆ?
ಅಧ್ಯಾಯ 26
‘ಕ್ಷಮಿಸಲು ಸಿದ್ಧನು’ ಆಗಿರುವ ದೇವರು
ಎಲ್ಲವು ದೇವರ ನೆನಪಿನಲ್ಲಿರುತ್ತದೆ ಅಂದಮೇಲೆ ಆತನು ನಮ್ಮ ತಪ್ಪನ್ನು ಕ್ಷಮಿಸಿ ಮರೆತುಬಿಡುವುದು ಹೇಗೆ?
ಅಧ್ಯಾಯ 29
‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲಿಕ್ಕಾಗಿ’
ಯೇಸುವಿನ ಪ್ರೀತಿಯ ಮೂರು ಮುಖಗಳು ಯೆಹೋವನ ಪ್ರೀತಿಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದವು.
ಅಧ್ಯಾಯ 31
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”
ನಿಮ್ಮನ್ನೇ ನೀವು ಕೇಳಿಕೊಳ್ಳಬಹುದಾದ ಅತಿ ಪ್ರಾಮುಖ್ಯ ಪ್ರಶ್ನೆ ಯಾವುದು? ಅದಕ್ಕೆ ಹೇಗೆ ಉತ್ತರಿಸುವಿರಿ?