JW ಪ್ರಸಾರ
ರೊಕುವಿನಲ್ಲಿ ಆಡಿಯೋ ಕೇಳಿಸಿಕೊಳ್ಳಿ
ಆಡಿಯೋ ವಿಭಾಗದಲ್ಲಿ ಆಡಿಯೋ ಕಾರ್ಯಕ್ರಮಗಳ ಹಲವಾರು ಗುಂಪುಗಳಿವೆ. ಉದಾ: ಸಂಗೀತ, ನಾಟಕಗಳು, ನಾಟಕರೂಪದ ಬೈಬಲ್ ವಾಚನ.
(ಗಮನಿಸಿ: ಈ ಪುಟದಲ್ಲಿ ರೊಕು 3 ರಿಮೋಟಿನ ಗುಂಡಿಗಳ ಚಿತ್ರಗಳನ್ನು ಕೊಡಲಾಗಿದೆ. ನಿಮ್ಮ ಬಳಿ ಇರುವ ರಿಮೋಟ್ ಸ್ವಲ್ಪ ಬೇರೆ ರೀತಿ ಇರಬಹುದು.)
JW ಪ್ರಸಾರದ ಮುಖಪುಟದಿಂದ ಆಡಿಯೋ ವಿಭಾಗವನ್ನು ಆಯ್ಕೆ ಮಾಡಿ. ಆಗ ಆಡಿಯೋ ಕಾರ್ಯಕ್ರಮಗಳ ಬೇರೆ ಬೇರೆ ಗುಂಪುಗಳು ಕಾಣಿಸುತ್ತದೆ. ಆಡಿಯೋ ಕಾರ್ಯಕ್ರಮಗಳನ್ನು ಹುಡುಕಿ ಕೇಳಿಸಿಕೊಳ್ಳಲು ಹೀಗೆ ಮಾಡಿ:
ಒಂದು ಆಡಿಯೋ ಕಾರ್ಯಕ್ರಮವನ್ನು ಕೇಳಿಸಿಕೊಳ್ಳಲು ಏನು ಮಾಡಬೇಕು?
ಆಡಿಯೋ ವಿಭಾಗದಲ್ಲಿ ಏನೆಲ್ಲ ಇದೆಯೆಂದು ನೋಡಲು ರೊಕು ರಿಮೋಟಿನಲ್ಲಿರುವ ಬಾಣದ ಗುರುತಿರುವ ಗುಂಡಿಗಳನ್ನು ಬಳಸಿ. ಬಾಣದ ಗುರುತನ್ನು ಒತ್ತುತ್ತಾ ಹೋದ ಹಾಗೇ ಒಂದೊಂದೇ ಆಡಿಯೋ ಎದ್ದುಕಾಣುತ್ತದೆ. ಜೊತೆಗೆ ಆ ಆಡಿಯೋದ ಹೆಸರು ಮತ್ತು ಅದು ಎಷ್ಟು ಸಮಯದ್ದು ಎಂದು ಡೀಟೇಲ್ಸ್ ಬಬಲ್ನಲ್ಲಿ ಕಾಣಿಸುತ್ತದೆ.
ಮೇಲೆ ಮತ್ತು ಕೆಳಗೆ ಮುಖ ಮಾಡಿರುವ ಬಾಣದ ಗುರುತು: ಬೇರೆ ಬೇರೆ ಆಡಿಯೋ ಗುಂಪುಗಳಿಗೆ ಹೋಗಲು ಇದು ಸಹಾಯ ಮಾಡುತ್ತದೆ. ಅಡ್ಡಸಾಲಿನಲ್ಲಿರುವ ಆಡಿಯೋಗಳ ಮೇಲುಗಡೆ ಆ ಆಡಿಯೋ ಗುಂಪಿನ ಹೆಸರು ಬರುತ್ತದೆ.
ಎಡಗಡೆ ಮತ್ತು ಬಲಗಡೆ ಮುಖ ಮಾಡಿರುವ ಬಾಣದ ಗುರುತು: ಒಂದು ಆಡಿಯೋ ಗುಂಪಿನಲ್ಲಿರುವ ಬೇರೆ ಬೇರೆ ಆಡಿಯೋಗಳಿಗೆ ಹೋಗಲು ಇದು ಸಹಾಯ ಮಾಡುತ್ತದೆ.
ಕಿವಿಮಾತು: ಪರದೆಯ ಮೇಲೆ ಬಲಗಡೆಯಲ್ಲಿ ಆ ಆಡಿಯೋ ಗುಂಪಲ್ಲಿ ಎಷ್ಟು ಆಡಿಯೋಗಳಿವೆ ಮತ್ತು ಎದ್ದುಕಾಣುವಂಥ ಆಡಿಯೋ ಎಷ್ಟನೇದು ಎಂದು ಕೊಡಲಾಗಿರುತ್ತದೆ.
ಆಡಿಯೋವನ್ನು ಆಯ್ಕೆ ಮಾಡಲು ಮತ್ತು ಆಡಿಯೋದ ವಿವರಣೆ ಇರುವ ಆಡಿಯೋ ಪ್ರೋಗ್ರಾಮ್ ಡೀಟೇಲ್ಸ್ ಅನ್ನು ನೋಡಲು ಓಕೆ ಒತ್ತಿ. ಈ ಪುಟದಲ್ಲಿ ಕಾಣಿಸುವ ಆಯ್ಕೆಗಳಲ್ಲಿ ನಿಮಗೆ ಬೇಕಾದದ್ದನ್ನು ಆಯ್ದುಕೊಳ್ಳಿ:
ಪ್ಲೇ: ಇದು ಆಡಿಯೋವನ್ನು ಮೊದಲಿನಿಂದ ಪ್ಲೇ ಮಾಡುತ್ತದೆ.
ಪಾಝ್ (Pause): ಈ ಗುಂಡಿಯನ್ನು ಒತ್ತಿದರೆ ಪ್ಲೇ ಆಗುತ್ತಿರುವ ಆಡಿಯೋ ನಿಂತುಹೋಗುತ್ತದೆ. ಪಾಝ್ ಗುಂಡಿಯನ್ನು ಮತ್ತೆ ಒತ್ತಿದರೆ ಆಡಿಯೋ ಪ್ಲೇ ಆಗುತ್ತದೆ.
ರಿಸ್ಯೂಮ್: ನಿಂತಿರುವ ಆಡಿಯೋವನ್ನು ಮತ್ತೆ ಪ್ಲೇ ಮಾಡುತ್ತದೆ.
ಗಮನಿಸಿ: ನೀವು ಆಡಿಯೋ ಪ್ರೋಗ್ರಾಮ್ ಡೀಟೇಲ್ಸ್ ಪುಟದಲ್ಲಿರುವಾಗ ನೀವು ಯಾವ ಆಡಿಯೋ ಕಾರ್ಯಕ್ರಮವನ್ನು ಆರಿಸಿಕೊಂಡಿದ್ದೀರೆಂದು ನಿಮ್ಮ ಟಿವಿ ನೆನಪಿಟ್ಟುಕೊಂಡಿರುತ್ತದೆ. ಆದರೆ ಆ ಪುಟವನ್ನು ಬಿಟ್ಟು ಮುಂದೆ ಹೋದಾಗ ಅದನ್ನು ಮರೆತುಬಿಡುತ್ತದೆ.
ಪ್ಲೇ ಆಲ್ ಇನ್ ದಿಸ್ ಕಲೆಕ್ಷನ್: ಈ ಗುಂಡಿಯನ್ನು ಒತ್ತಿದರೆ ನೀವು ಆಯ್ಕೆ ಮಾಡಿರುವ ಗುಂಪಲ್ಲಿರುವ ಎಲ್ಲ ಆಡಿಯೋಗಳು ಪ್ಲೇ ಆಗುತ್ತವೆ. ಯಾವ ಆಡಿಯೋ ಪರದೆಯ ಮೇಲೆ ಕಾಣಿಸುತ್ತಿದೆಯೋ ಅಲ್ಲಿಂದ ಆಡಿಯೋಗಳು ಪ್ಲೇ ಆಗುತ್ತವೆ.
ಗಮನಿಸಿ: ಗುಂಪಿನಲ್ಲಿರುವ ಎಲ್ಲಾ ಆಡಿಯೋಗಳು ಪ್ಲೇ ಆದಮೇಲೆ ತನ್ನಷ್ಟಕ್ಕೇ ನಿಂತುಹೋಗುತ್ತದೆ.
ಒಂದು ಗುಂಪಲ್ಲಿರುವ ಎಲ್ಲ ಆಡಿಯೋ ಕಾರ್ಯಕ್ರಮಗಳನ್ನು ಕೇಳಿಸಿಕೊಳ್ಳೋದು ಹೇಗೆ?
ಒಂದೊಂದೇ ಆಡಿಯೋವನ್ನು ಕೇಳಿಸಿಕೊಳ್ಳುವ ಹಾಗೇ ಒಂದು ಗುಂಪಲ್ಲಿರುವ ಎಲ್ಲಾ ಆಡಿಯೋಗಳನ್ನು ಒಂದಾದಮೇಲೆ ಒಂದರಂತೆ ಕೂಡ ಕೇಳಿಸಿಕೊಳ್ಳಬಹುದು. ಅದಕ್ಕಾಗಿ ಕೆಲವು ವಿಧಾನಗಳನ್ನು ಕೆಳಗೆ ಕೊಡಲಾಗಿದೆ:
ಪ್ಲೇ ಆಲ್ ಇನ್ ದಿಸ್ ಕಲೆಕ್ಷನ್: ನಿಮಗೆ ಬೇಕಾಗಿರುವ ಆಡಿಯೋ ಕಾರ್ಯಕ್ರಮವನ್ನು ಆಡಿಯೋ ಪುಟದಲ್ಲಿ ಆಯ್ಕೆ ಮಾಡಿಕೊಂಡ ಮೇಲೆ ಪ್ಲೇ ಆಲ್ ಇನ್ ದಿಸ್ ಕಲೆಕ್ಷನ್ ಒತ್ತಿ.
ಪ್ಲೇ ಆಲ್: ಈ ಆಯ್ಕೆಯನ್ನು ಒತ್ತಿದರೆ ಒಂದು ಗುಂಪಲ್ಲಿರುವ ಎಲ್ಲಾ ಆಡಿಯೋ ಕಾರ್ಯಕ್ರಮಗಳು ಮೊದಲಿನಿಂದ ಒಂದಾದಮೇಲೆ ಒಂದರಂತೆ ಪ್ಲೇ ಆಗುತ್ತದೆ.
ಶಫ್ಲ್: ಈ ಗುಂಡಿಯನ್ನು ಒತ್ತಿದರೆ ನೀವು ಆರಿಸಿಕೊಂಡ ಗುಂಪಲ್ಲಿರುವ ಆಡಿಯೋಗಳು ಪಟ್ಟಿಯಲ್ಲಿರುವಂತೆ ಪ್ಲೇ ಆಗದೆ ಮಧ್ಯೆ ಮಧ್ಯೆಯಿಂದ ಪ್ಲೇ ಆಗುತ್ತದೆ.
ಗಮನಿಸಿ: ಗುಂಪಿನಲ್ಲಿರುವ ಎಲ್ಲಾ ಆಡಿಯೋಗಳು ಪ್ಲೇ ಆದಮೇಲೆ ತನ್ನಷ್ಟಕ್ಕೇ ನಿಂತುಹೋಗುತ್ತದೆ.
ಆಡಿಯೋ ಪ್ಲೇ ಆಗುತ್ತಿರುವಾಗ ಯಾವೆಲ್ಲ ಆಯ್ಕೆಗಳಿವೆ?
ಆಡಿಯೋ ಪ್ಲೇ ಆಗುತ್ತಿರುವಾಗ ಕೆಳಗೆ ಕೊಡಲಾದ ಎಲ್ಲ ಆಯ್ಕೆಗಳನ್ನು ನಿಮ್ಮ ರೊಕು ರಿಮೋಟಿನ ಮೂಲಕ ಬಳಸಬಹುದು:
ಪಾಝ್ (Pause): ಈ ಗುಂಡಿಯನ್ನು ಒತ್ತಿದರೆ ಪ್ಲೇ ಆಗುತ್ತಿರುವ ಆಡಿಯೋ ನಿಂತುಹೋಗುತ್ತದೆ. ಪಾಝ್ ಗುಂಡಿಯನ್ನು ಮತ್ತೆ ಒತ್ತಿದರೆ ಆಡಿಯೋ ಪ್ಲೇ ಆಗುತ್ತದೆ.
ಫಾಸ್ಟ್ ಫಾರ್ವರ್ಡ್: ಈ ಗುಂಡಿ ಒತ್ತಿದರೆ ಪ್ಲೇ ಆಗುತ್ತಿರುವ ಆಡಿಯೋ ನಿಂತು ಕೆಲವು ಸೆಕೆಂಡುಗಳಷ್ಟು ಮುಂದೆ ಹೋಗಿ ಆಡಿಯೋ ಶುರುವಾಗುತ್ತದೆ.
ರಿವೈಂಡ್: ಈ ಗುಂಡಿ ಒತ್ತಿದರೆ ಪ್ಲೇ ಆಗುತ್ತಿರುವ ಆಡಿಯೋ ನಿಂತು ಕೆಲವು ಸೆಕೆಂಡುಗಳಷ್ಟು ಹಿಂದೆ ಹೋಗಿ ಆಡಿಯೋ ಶುರುವಾಗುತ್ತದೆ.
ಕಿವಿಮಾತು: ಈ ಫಾಸ್ಟ್ ಫಾರ್ವರ್ಡ್ ಮತ್ತು ರಿವೈಂಡ್ ಮಾಡುವಾಗ ಆಡಿಯೋ ಎಷ್ಟು ಮುಂದೆ ಅಥವಾ ಹಿಂದೆ ಹೋಗುತ್ತದೆ ಎಂದು ತಿಳಿಯಲು ಆಡಿಯೋ ಚಿತ್ರದ ಕೆಳಗೆ ಅಡ್ಡವಾಗಿರುವ ಕಡ್ಡಿಯನ್ನು ನೋಡಿ.
ಬಲಗಡೆ ಮುಖ ಮಾಡಿರುವ ಬಾಣದ ಗುರುತು: ಈ ಗುಂಡಿಯನ್ನು ಒತ್ತಿದರೆ ಗುಂಪಲ್ಲಿರುವ ಮುಂದಿನ ಆಡಿಯೋ ಕಾರ್ಯಕ್ರಮ ಶುರುವಾಗುತ್ತದೆ (ಅಥವಾ ಶಫ್ಲ್ ಅನ್ನು ನೀವು ಆರಿಸಿಕೊಂಡಿರುವುದಾದರೆ ಆ ಗುಂಪಲ್ಲಿರುವ ಯಾವುದಾದರೂ ಒಂದು ಆಡಿಯೋ ಶುರುವಾಗುತ್ತದೆ).
ಎಡಗಡೆ ಮುಖ ಮಾಡಿರುವ ಬಾಣದ ಗುರುತು: ಈ ಗುಂಡಿಯನ್ನು ಒತ್ತಿದರೆ ಗುಂಪಲ್ಲಿರುವ ಹಿಂದಿನ ಆಡಿಯೋ ಕಾರ್ಯಕ್ರಮ ಶುರುವಾಗುತ್ತದೆ (ಅಥವಾ ಶಫ್ಲ್ ಅನ್ನು ನೀವು ಆರಿಸಿಕೊಂಡಿರುವುದಾದರೆ ಇದಕ್ಕಿಂತ ಮುಂಚೆ ಯಾವ ಆಡಿಯೋ ಪ್ಲೇ ಆಯಿತೋ ಆ ಆಡಿಯೋ ಶುರುವಾಗುತ್ತದೆ).
ಬ್ಯಾಕ್ ಗುಂಡಿ: ಆಡಿಯೋ ಪುಟಕ್ಕೆ ವಾಪಸ್ಸು ಹೋಗುತ್ತದೆ.