JW ಲೈಬ್ರರಿ
JW ಲೈಬ್ರರಿ ವಿಶೇಷತೆಗಳು
ಬೈಬಲನ್ನು ಬಳಸಲು ಆ್ಯಪ್‌ನಲ್ಲಿರುವ ವಿಶೇಷತೆಗಳು
ಆರು ಬೈಬಲ್ ಭಾಷಾಂತರಗಳಿಂದ ನಿಮಗೆ ಬೇಕಾದದ್ದನ್ನು ಆರಿಸಿಕೊಳ್ಳಿ.
ಲಭ್ಯವಿರುವ ಎಲ್ಲಾ ಬೈಬಲ್ ಭಾಷಾಂತರಗಳನ್ನು ಹೋಲಿಸಿ ನೋಡಲು ವಚನದ ಸಂಖ್ಯೆಯನ್ನು ಒತ್ತಿ.
ಅದಕ್ಕೆ ಸಂಬಂಧಪಟ್ಟ ಇನ್ನಿತರ ವಿಷಯಗಳನ್ನು ತಿಳಿಯಲು ಪಾದಟಿಪ್ಪಣಿಯ ಚಿಹ್ನೆ ಅಥವಾ ರೆಫರೆನ್ಸ್ ಅಕ್ಷರವನ್ನು ಒತ್ತಿ.
ಬಳಸುವುದು ಹೇಗೆ?
ನೀವು ಓದುತ್ತಿರುವ ಸಾಹಿತ್ಯದ ಪುಟವನ್ನು ಎಡಕ್ಕೆ ಅಥವಾ ಬಲಕ್ಕೆ ತಿರುಗಿಸಲು ಸ್ವೈಪ್ ಮಾಡಬಹುದು.
ಓದುತ್ತಿರುವ ವಚನ ಅಥವಾ ಅಧ್ಯಾಯಕ್ಕೆ ಗುರುತು ಹಾಕಿ (ಬುಕ್‌ಮಾರ್ಕ್), ಎಲ್ಲಿ ನಿಲ್ಲಿಸಿದ್ದಿರೋ ಅಲ್ಲಿಂದಲೇ ಪುನಃ ಓದಬಹುದು.
ಇತ್ತೀಚಿಗೆ ಓದಿರುವ ಪ್ರಕಾಶನಗಳ ಪಟ್ಟಿ (ಹಿಸ್ಟರಿ) ಕಾಣಬಹುದು. ಅದನ್ನು ಬಳಸಿ ಓದಿದ ಆ ಪ್ರಕಾಶನಗಳನ್ನು ತಕ್ಷಣ ತೆರೆಯಬಹುದು.
ನೀವು ಓದುತ್ತಿರುವ ಪ್ರಕಾಶನದಲ್ಲಿ ಯಾವುದಾದರೂ ಪದಗಳನ್ನು ಹುಡಕಬೇಕೆಂದರೆ, “Search” (ಹುಡುಕಿ) ಎಂಬ ಚೌಕ ಬಳಸಬಹುದು.
ಕೂಟಗಳಿಗೆ ಬೇಕಾದ ಪ್ರಕಾಶನಗಳನ್ನು ನೋಡಿ.