ಮೇ 23, 2024
ರಷ್ಯಾ
“ಯೆಹೋವನು ನನ್ನ ಜೊತೆ ಇರ್ತಾನೆ”
ಕರಾಚಾಯೆವೊ-ಸರ್ಕಾಸಿಯನ್ ಗಣರಾಜ್ಯದ ಉರುಪ್ಸ್ಕಿ ಜಿಲ್ಲಾ ನ್ಯಾಯಾಲಯವು ಸಹೋದರ ಅಲ್ಯಿಕ್ಸಿ ಪ್ಯಾಸಿಂಕೋವ್ ಅವರನ್ನ ಒಳಗೊಂಡ ಕೇಸಿನ ಬಗ್ಗೆ ತನ್ನ ತೀರ್ಪನ್ನ ಬೇಗನೇ ಪ್ರಕಟಿಸಲಿದೆ. ಯಾವ ಶಿಕ್ಷೆ ಕೊಡಬೇಕಂತ ಪ್ರಾಸಿಕ್ಯೂಟರ್ ಇನ್ನೂ ನಿರ್ಧರಿಸಿಲ್ಲ.
ವ್ಯಕ್ತಿಯ ಪರಿಚಯ
ನಾವು ಬೇರೆ ಬೇರೆ ರೀತಿಯ ಕಷ್ಟ ಪರೀಕ್ಷೆಗಳನ್ನ ಅನುಭವಿಸುತ್ತಿದ್ದರೂ, ನಾವು ಯಾವಾಗಲೂ ಯೆಹೋವನಲ್ಲಿ ಆಶ್ರಯ ಪಡ್ಕೊಂಡು ಖುಷಿಯಾಗಿರಬಹುದು ಅಂತ ಗೊತ್ತಾದಾಗ ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ.—ಕೀರ್ತನೆ 5:11.
ಕಾಲ ರೇಖೆ
ನವೆಂಬರ್ 23, 2021
ಅಧಿಕಾರಿಗಳು ಅಲ್ಯಿಕ್ಸಿಯವರನ್ನ ಕೆಲಸದ ಸ್ಥಳದಲ್ಲಿ ಬಂಧಿಸಿ ನಂತರ ಏನಾದರೂ ಸಿಗುತ್ತಾ ಅಂತ ಅವರ ಮನೆಯಲ್ಲಿ ಹುಡುಕಿದರು.
ಡಿಸೆಂಬರ್ 8, 2022
ಕ್ರಿಮಿನಲ್ ಕೇಸ್ ದಾಖಲಾಯಿತು
ಮಾರ್ಚ್ 3, 2023
ಅವರ ಮನೆಯನ್ನ ಎರಡನೇ ಸಾರಿ ಹುಡುಕಾಡಿದರು. ಅಲ್ಯಿಕ್ಸಿ ಹಾಗೂ ಯೂಲಿಯಾ ರನ್ನ ವಿಚಾರಣೆ ಮಾಡಿದರು
ಮಾರ್ಚ್ 31, 2023
ಅಲ್ಯಿಕ್ಸಿಯವರ ತಾಯಿ ಹಾಗೂ ಅವರ ಒಡಹುಟ್ಟಿದ ಸಹೋದರರ ಮನೆಗಳನ್ನ ಹುಡುಕಿದರು
ಅಕ್ಟೋಬರ್ 4, 2023
ಆ ಸ್ಥಳ ಬಿಟ್ಟು ಎಲ್ಲಿಗೂ ಹೋಗದ ಹಾಗೆ ನಿರ್ಬಂಧ ಹಾಕಿದರು
ಡಿಸೆಂಬರ್ 14, 2023
ಕ್ರಿಮಿನಲ್ ಕೇಸಿನ ವಿಚಾರಣೆ ಆರಂಭವಾಯಿತು