ಮಾಹಿತಿ ಇರುವಲ್ಲಿ ಹೋಗಲು

ಸಹೋದರಿ ಆ್ಯನ ಮ್ಯಾಟ್ವೀವಾ

ಮೇ 14, 2024
ರಷ್ಯಾ

“ವಿಧೇಯತೆ ತೋರಿಸಿದ್ರೆ ಆಶೀರ್ವಾದ ಸಿಕ್ಕೇ ಸಿಗುತ್ತೆ”

“ವಿಧೇಯತೆ ತೋರಿಸಿದ್ರೆ ಆಶೀರ್ವಾದ ಸಿಕ್ಕೇ ಸಿಗುತ್ತೆ”

ಕ್ರಾಸ್ನೊಯಾರ್ಸ್ಕ್‌ ಪ್ರಾಂತ್ಯದ ಲೆಸೊಸಿಬಿರ್ಸ್ಕ್‌ ನಗರದ ನ್ಯಾಯಾಲಯವು ಸಹೋದರಿ ಆ್ಯನ ಮ್ಯಾಟ್ವೀವಾ ಅವರನ್ನ ಒಳಗೊಂಡ ಕೇಸಿನ ಬಗ್ಗೆ ತನ್ನ ತೀರ್ಪನ್ನ ಬೇಗನೇ ಪ್ರಕಟಿಸಲಿದೆ. ಯಾವ ಶಿಕ್ಷೆ ಕೊಡಬೇಕಂತ ಪ್ರಾಸಿಕ್ಯೂಟರ್‌ ಇನ್ನೂ ನಿರ್ಧರಿಸಿಲ್ಲ.

ವ್ಯಕ್ತಿಯ ಪರಿಚಯ

ಯೆಹೋವ ದೇವರ ಸಲಹೆ ಹಾಗೂ ಎಚ್ಚರಿಕೆಗಳಿಗೆ ಕಿವಿಗೊಟ್ಟು ಅದನ್ನ ಪಾಲಿಸಿದ್ರೆ, ನಾವು ಜೀವನದಲ್ಲಿ ಖುಷಿಯಾಗಿ ಇರ್ತೀವಿ ಅಂತ ಆ್ಯನಳ ಅನುಭವದಿಂದ ಕಲಿಯಬಹುದು.—ಕೀರ್ತನೆ 119:111, 112.

ಕಾಲ ರೇಖೆ

  1. ನವೆಂಬರ್‌ 25, 2021

    ಅಧಿಕಾರಿಗಳು ಸುಮಾರು ಒಂದು ವರ್ಷಗಳ ಕಾಲ ಸಹೋದರರ ಮಾತುಕತೆಯನ್ನ ಕದ್ದುಮುಚ್ಚಿ ರೆಕಾರ್ಡ್‌ ಮಾಡ್ತಿದ್ರು. ಲೆಸೊಸಿಬಿರ್ಸ್ಕ್‌ ನಲ್ಲಿ ಸಹೋದರಿ ಆ್ಯನ ಅವರ ಮನೆ ಸೇರಿ ಯೆಹೋವನ ಸಾಕ್ಷಿಗಳ ಆರು ಮನೆಗಳಲ್ಲಿ ಏನಾದರೂ ಸಿಗುತ್ತಾ ಅಂತ ಹುಡುಕಿದರು

  2. ಜನವರಿ 30, 2023

    ಕ್ರಿಮಿನಲ್‌ ಕೇಸ್‌ ದಾಖಲಾಯಿತು

  3. ಫೆಬ್ರವರಿ 17, 2023

    ಆ ಸ್ಥಳ ಬಿಟ್ಟು ಎಲ್ಲಿಗೂ ಹೋಗದ ಹಾಗೆ ನಿರ್ಬಂಧ ಹಾಕಿದರು

  4. ಡಿಸೆಂಬರ್‌ 29, 2023

    ಕ್ರಿಮಿನಲ್‌ ಕೇಸಿನ ವಿಚಾರಣೆ ಆರಂಭವಾಯಿತು