ಸುಖೀ ಸಂಸಾರಕ್ಕೆ ಸಲಹೆಗಳು | ಹೆತ್ತವರು
ಮಕ್ಕಳಿಗೆ ಬೋರ್ ಹೊಡೆದ್ರೆ ಏನ್ ಮಾಡೋದು?
ನಿಮ್ಮ ಮಕ್ಕಳು ಮನೆಯಲ್ಲಿದ್ದಾರೆ, ಅವ್ರಿಗೆ ಮಾಡಕ್ಕೇನೂ ಇಲ್ಲ. ಆಗ ನಿಮ್ಮ ಮಕ್ಕಳು ‘ನನ್ಗೆ ಬೋರ್ ಆಗ್ತಿದೆ’ ಅಂತ ಹೇಳಬಹುದು. ಅದಕ್ಕೆ ನೀವು ಅವ್ರಿಗೆ ‘ಹೋಗಿ ಟಿವಿ ನೋಡ್ಕೊ, ನಿನಗೆ ಇಷ್ಟ ಆಗೋ ವಿಡಿಯೋ ಗೇಮ್ ಆಡು’ ಅಂತ ಹೇಳೋ ಮುಂಚೆ ಈ ವಿಷ್ಯಗಳನ್ನ ಯೋಚಿಸಿ.
ಮಕ್ಕಳಿಗೆ ಬೋರ್ ಆದಾಗ ಹೆತ್ತವರು ಏನ್ ತಿಳ್ಕೊಂಡ್ರು
ಕೆಲವೊಂದು ಮನರಂಜನೆ ಮತ್ತು ಅದಕ್ಕೆ ತುಂಬ ಸಮಯ ಕೊಡೋದು ಮಕ್ಕಳನ್ನ ಇನ್ನೂ ಬೋರ್ ಮಾಡುತ್ತೆ. ರಾಬರ್ಟ್ ಅನ್ನೋ ತಂದೆ ಹೀಗೆ ಹೇಳ್ತಾರೆ: “ಕೆಲವು ಮಕ್ಕಳಿಗೆ ಟಿವಿ ನೋಡೋದು, ವಿಡಿಯೋ ಗೇಮ್ ಆಡೋದು ಬಿಟ್ರೆ ಬೇರೆಲ್ಲ ವಿಷ್ಯಗಳು ಬೋರ್ ಅನಿಸುತ್ತೆ. ಬೇರೆ ವಿಷ್ಯಗಳು ಅವ್ರಿಗೆ ಅಷ್ಟು ಖುಷಿ ಕೊಡಲ್ಲ.”
ರಾಬರ್ಟ್ ಅವ್ರ ಹೆಂಡತಿ ಬಾರ್ಬರಾ ಆ ಮಾತಿಗೆ ಕೂಡಿಸ್ತಾ ಹೀಗೆ ಹೇಳ್ತಾರೆ: “ನಿಜವಾದ ಜೀವನದಲ್ಲಿ ಯೋಚನೆ ಮಾಡಬೇಕಾಗುತ್ತೆ, ಶ್ರಮ ಹಾಕಬೇಕಾಗುತ್ತೆ ಮತ್ತು ಅದ್ರ ಪ್ರತಿಫಲ ನಿಧಾನವಾಗಿ ಇರುತ್ತೆ. ತುಂಬ ಸಮಯ ಟಿವಿ ನೋಡೋ, ವಿಡಿಯೋ ಗೇಮ್ ಆಡೋ ಮಕ್ಕಳಿಗೆ ಇದೆಲ್ಲ ತುಂಬ ಬೋರ್ ಅನಿಸುತ್ತೆ.”
ತುಂಬ ಸಮಯ ಸೋಶಿಯಲ್ ಮೀಡಿಯಾದಲ್ಲಿ ಕಳೆದ್ರೆ ನಮ್ಮ ಮೇಲೆ ನಮ್ಗೆ ಬೇಜಾರಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಡ್ಸ್ ಹಾಕೋ ಫೊಟೋ, ವಿಡಿಯೋಗಳನ್ನ ನೋಡ್ತಾ ಇದ್ರೆ ಯುವಕರಿಗೆ ತನ್ನ ಜೀವನ ತುಂಬ ಬೋರ್ ಆಗಿದೆ ಅಂತ ಅನಿಸುತ್ತೆ. ಬೆತ್ ಅನ್ನೋ ಹುಡುಗಿ ಹೀಗೆ ಹೇಳ್ತಾಳೆ: “‘ಎಲ್ಲರು ಎಂಜಾಯ್ ಮಾಡ್ತಿದ್ದಾರೆ, ನಾನ್ ಮಾತ್ರ ಮನೆಯಲ್ಲಿ ಇದ್ದೀನಿ’ ಅಂತ ಅನಿಸುತ್ತೆ.”
ಅಲ್ಲದೆ, ತುಂಬ ಸಮಯ ಸೋಶಿಯಲ್ ಮಿಡಿಯದಲ್ಲೇ ಮುಳುಗಿ ಹೋದ್ರೆ ಇನ್ನೂ ಹೆಚ್ಚು ಬೋರ್ ಆಗುತ್ತೆ, ಯಾರೂ ಇಲ್ಲ ಅಂತ ಅನಿಸುತ್ತೆ. ಕ್ರಿಸ್ ಅನ್ನೋ ಯುವಕ ಹೀಗೆ ಹೇಳ್ತಾನೆ: “ಅದ್ರಲ್ಲೇ ಮುಳುಗಿ ಹೋದಾಗ ತುಂಬ ಬಿಝಿ ಇದ್ದೀವಿ ಅಂತ ಅನಿಸುತ್ತೆ, ಆದ್ರೆ ಎಲ್ಲ ನೋಡಿ ಆದ್ಮೇಲೆ ಅದ್ರಿಂದ ಏನೂ ಪ್ರಯೋಜನ ಆಗಿರಲ್ಲ.”
ಬೋರ್ ಆಗೋದನ್ನ ಒಂದು ಅವಕಾಶವಾಗಿ ಬಳಸಬಹುದು
ಕ್ಯಾತ್ರೀನ್ ಅನ್ನೋ ತಾಯಿ ಹೀಗೆ ಹೇಳ್ತಾಳೆ: “ಮಕ್ಕಳಿಗೆ ಬೋರ್ ಆದಾಗ ಅವ್ರಿಗೆ ಹೊಸ-ಹೊಸ ರೀತಿಯಲ್ಲಿ ಯೋಚನೆ ಮಾಡೋಕೆ ಅವಕಾಶ ಸಿಗುತ್ತೆ. ಉದಾಹರಣೆಗೆ, ಮಕ್ಕಳಿಗೆ ಒಂದು ಬಾಕ್ಸ್ ಸಿಕ್ಕಿದ್ರೆ ಅವ್ರು ಕಾರ್ನಲ್ಲೋ, ಬೋಟ್ನಲ್ಲೋ ಅಥವಾ ಆಕಾಶನೌಕೆಯಲ್ಲೋ ಕೂತು ಹೋಗೋ ತರ ಚಿತ್ರಿಸಿಕೊಳ್ತಾರೆ. ಮಂಚದ ಮೇಲೆ ಇರೋ ಬ್ಲಾಂಕೆಟ್ನ್ನ ಅವ್ರು ಟೆಂಟ್ ತರ ಮಾಡ್ಕೊಳ್ತಾರೆ.”
ಒಂದು ಒಳ್ಳೇ ವಿಷ್ಯ ಏನಂದ್ರೆ, ಮನಶ್ಶಾಸ್ತ್ರಜ್ಞ ಶೆರೀ ಟರ್ಕಲ್ ಹೀಗೆ ಹೇಳ್ತಾರೆ, “ಬೋರ್ ಆದಾಗ ಹೊಸ-ಹೊಸ ವಿಷ್ಯ ಯೋಚನೆ ಮಾಡೋಕೆ ಆಗುತ್ತೆ.” a ಹಾಗಾಗಿ ಬೋರ್ ಆಗೋದು ಒಂದು ರೀತಿಯಲ್ಲಿ ಒಳ್ಳೇದೇ. ಡಿಸ್ಕನೆಕ್ಟಡ್ ಅನ್ನೋ ಪುಸ್ತಕ ಹೀಗೆ ಹೇಳುತ್ತೆ: “ನೀವು ಭಾರ ಎತ್ತಿದಾಗ ನಿಮ್ಮ ಮೂಳೆ ಮತ್ತು ಮಾಂಸಖಂಡಗಳು ಹೇಗೆ ಬಲವಾಗುತ್ತೋ ಅದೇ ತರ ಬೋರ್ ಆದ ಸಮಯದಲ್ಲಿ ನಿಮ್ಮ ಯೋಚನಾ ಸಾಮರ್ಥ್ಯವನ್ನ ಬಳಿಸಿದಾಗ ನೀವು ಹೊಸ-ಹೊಸ ರೀತಿಯಲ್ಲಿ ಯೋಚನೆ ಮಾಡೋಕಾಗುತ್ತೆ.”
ಸಾರಾಂಶ: ನಿಮ್ಮ ಮಕ್ಕಳಿಗೆ ಬೋರ್ ಆದಾಗ ಅದನ್ನ ಸಮಸ್ಯೆ ತರ ನೋಡಬೇಡಿ. ಬದಲಿಗೆ ಮಕ್ಕಳು ಹೊಸ-ಹೊಸ ವಿಷ್ಯಗಳನ್ನ ಕಲಿಯೋ ಒಂದು ಅವಕಾಶವಾಗಿ ನೋಡಿ.
ಮಕ್ಕಳಿಗೆ ಬೋರ್ ಹೊಡೆದ್ರೆ ನೀವೇನು ಮಾಡಬಹುದು?
ಸಾಧ್ಯ ಆದ್ರೆ ಮಕ್ಕಳು ಹೊರಗಡೆ ಹೋಗಿ ಆಟ ಆಡಲಿ. ಮೊದಲು ಹೇಳಿದ ಬಾರ್ಬರಾ ಹೀಗೆ ಹೇಳ್ತಾರೆ: “ಮಕ್ಕಳಿಗೆ ಸೂರ್ಯನ ಬೆಳಕು ಮತ್ತು ಶುದ್ಧ ಗಾಳಿ ಸಿಕ್ಕಿದ್ರೆ ಅವ್ರ ಬೋರ್ ಓಡಿ ಹೋಗುತ್ತೆ. ಅವರು ಮನೆ ಹೊರಗೆ ಆಟ ಆಡಿದ್ರೆ ಅವರ ಯೋಚನಾ ಸಾಮರ್ಥ್ಯ ಇನ್ನು ಹೆಚ್ಚಾಗುತ್ತೆ.”
ಬೈಬಲ್ ತತ್ವ: ‘ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ . . . ನಗುವ ಸಮಯ ಮತ್ತು ಕುಣಿದಾಡುವ ಸಮಯ.’—ಪ್ರಸಂಗಿ 3:1, 4.
ಸ್ವಲ್ಪ ಯೋಚಿಸಿ: ಮಕ್ಕಳು ಹೊರಗೆ ಹೋಗಿ ಆಟ ಆಡೋಕೆ ನಾನು ಯಾವಾಗೆಲ್ಲ ಬಿಡಬಹುದು? ಒಂದುವೇಳೆ ಹೊರಗೆ ಹೋಗಿ ಆಟ ಆಡೋಕೆ ಅವಕಾಶ ಇಲ್ಲಾಂದ್ರೆ ಮನೆ ಒಳಗೆ ಆಟ ಆಡ್ತಾ ಹೊಸ-ಹೊಸ ರೀತಿ ಯೋಚನೆ ಮಾಡೋಕೆ ಯಾವ ಆಟಗಳು ಇದೆ?
ಬೇರೆಯವರ ಬಗ್ಗೆ ಯೋಚನೆ ಮಾಡೋಕೆ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ. ಲಿಲ್ಯನ್ ಅನ್ನೋ ತಾಯಿ ಹೀಗೆ ಹೇಳ್ತಾರೆ: “ಅಕ್ಕಪಕ್ಕದ ಅಜ್ಜ-ಅಜ್ಜಿಗೆ ಸಹಾಯ ಮಾಡ್ತಾ ಗಾರ್ಡನ್ ಕ್ಲೀನ್ ಮಾಡಲಿ, ಅವ್ರಿಗೋಸ್ಕರ ಏನಾದ್ರೂ ಅಡುಗೆ ಮಾಡ್ಕೊಡಲಿ ಅಥವಾ ಅವ್ರನ್ನ ಮಾತಾಡಿಸಲಿ. ಹೀಗೆ ಬೇರೆಯವ್ರಿಗೆ ಸಹಾಯ ಮಾಡಿದ್ರೆ ಖಂಡಿತ ಮಕ್ಕಳಿಗೆ ಖುಷಿ ಆಗುತ್ತೆ.”
ಬೈಬಲ್ ತತ್ವ: “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು.”—ಜ್ಞಾನೋಕ್ತಿ 11:25.
ಸ್ವಲ್ಪ ಯೋಚಿಸಿ: ಬೇರೆಯವರಿಗೆ ಸಹಾಯ ಮಾಡ್ತಾ ಖುಷಿಯಿಂದ ಇರೋಕೆ ನೀವು ನಿಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡ್ತೀರಾ?
ಒಳ್ಳೇ ಮಾದರಿ ಇಡಿ. ಪ್ರತಿದಿನ ನೀವು ಮಾಡೋ ಕೆಲಸಗಳ ಬಗ್ಗೆ ನೀವು ಏನ್ ಮಾತಾಡ್ತಿರೋ ಅದು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ. ಸಾರಾ ಅನ್ನೋ ತಾಯಿ ಹೀಗೆ ಹೇಳ್ತಾರೆ: “ನಾವು ನಮ್ಮ ಜೀವನ ತುಂಬ ಬೋರಾಗಿದೆ ಅಂತ ತೋರಿಸಿದ್ರೆ ಮಕ್ಕಳು ಬೋರ್ ಆಗೋಕೆ ನಾವೇ ಕಾರಣ ಆಗಿಬಿಡ್ತೀವಿ. ಆದ್ರೆ ನಾವು ಮಾತಾಡ್ವಾಗ ಪ್ರತಿದಿನ ಮಾಡೋ ಕೆಲಸವನ್ನ ನಾವು ಎಂಜಾಯ್ ಮಾಡ್ತಿದ್ದೀವಿ ಅಂತ ತೋರಿಸಿಕೊಟ್ರೆ ನಮ್ಮ ಮಕ್ಕಳು ಕೂಡ ಆ ರೀತಿ ಯೋಚಿಸೋಕೆ ಸಹಾಯ ಮಾಡಿದ ಹಾಗೆ.”
ಬೈಬಲ್ ತತ್ವ: “ಹರ್ಷಹೃದಯನಿಗೆ ನಿತ್ಯವೂ ಔತಣ.”—ಜ್ಞಾನೋಕ್ತಿ 15:15.
ಸ್ವಲ್ಪ ಯೋಚಿಸಿ: ನಾನು ಪ್ರತಿದಿನ ಮಾಡೋ ಕೆಲಸ-ಕಾರ್ಯಗಳ ಬಗ್ಗೆ ಮಾತಾಡ್ವಾಗ ಅದನ್ನ ಮಕ್ಕಳು ಹೇಗೆ ತಗೊಳ್ತಾರೆ? ನನಗೆ ಬೋರ್ ಆದಾಗ ನಾನು ನಡ್ಕೊಳ್ಳೋ ರೀತಿ ನೋಡಿ ಮಕ್ಕಳಿಗೆ ಹೇಗೆ ಅನಿಸುತ್ತೆ?
ಕಿವಿಮಾತು: ಕ್ರಿಯೇಟಿವ್ ಆಗಿ ಏನ್ ಮಾಡಬಹುದು ಅಂತ ಒಂದು ಲಿಸ್ಟ್ ಮಾಡೋಕೆ ಮಕ್ಕಳಿಗೆ ಸಹಾಯ ಮಾಡಿ. ಆ್ಯಲಿಸನ ಅನ್ನೋ ತಾಯಿ ಹೀಗೆ ಹೇಳ್ತಾರೆ: “ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರು ತಮ್ಮ-ತಮ್ಮ ಐಡಿಯಗಳನ್ನ ಬರೆದು ಹಾಕೋಕೆ ಒಂದು ಸಲಹೆ ಬಾಕ್ಸ್ ಇದೆ.”
a ರಿಕ್ಲೈಮಿಂಗ್ ಕನ್ವರ್ಸೇಶನ್ ಪುಸ್ತಕದಿಂದ.