ಡೈನೋಸಾರ್ಗಳ ಬಗ್ಗೆ ಬೈಬಲ್ ಏನು ಹೇಳುತ್ತೆ?
ಬೈಬಲ್ ಕೊಡೋ ಉತ್ತರ
ಡೈನೋಸಾರ್ಗಳ ಬಗ್ಗೆ ಬೈಬಲ್ ಏನೂ ಹೇಳಲ್ಲ. ಆದ್ರೆ, ‘ದೇವರೇ ಎಲ್ಲಾ ಸೃಷ್ಟಿ ಮಾಡಿದ್ರು’ ಅಂತ ಬೈಬಲ್ ಹೇಳುತ್ತೆ. ಹಾಗಂದ್ರೆ, ದೇವರು ಸೃಷ್ಟಿಮಾಡಿದ್ರಲ್ಲಿ ಡೈನೋಸಾರ್ಗಳು ಕೂಡ ಇತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. a (ಪ್ರಕಟನೆ 4:11) ಬೈಬಲಿನಲ್ಲಿ ಡೈನೋಸಾರ್ಗಳ ಬಗ್ಗೆ ತಿಳಿಸಲಿಲ್ಲವಾದ್ರೂ ಅದ್ರಲ್ಲಿ ತಿಳಿಸಿರೋ ಜೀವಿಗಳ ಪಟ್ಟಿಯಲ್ಲಿ ಡೈನೋಸಾರ್ಗಳು ಕೂಡ ಇದ್ದಿರಬಹುದು.
“ಮಹಾಜಲಚರಗಳು.”—ಆದಿಕಾಂಡ 1:21.
“ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳು.”—ಆದಿಕಾಂಡ 1:25.
“ಕಾಡು ಮೃಗಗಳು.”—ಆದಿಕಾಂಡ 1:25.
ಡೈನೋಸಾರ್ಗಳು ಬೇರೆ ಪ್ರಾಣಿಗಳಿಂದ ವಿಕಾಸ ಆಯ್ತಾ?
ಡೈನೋಸಾರ್ಗಳು ಬೇರೆ ಪ್ರಾಣಿಗಳಿಂದ ಹಂತ ಹಂತವಾಗಿ ವಿಕಾಸ ಆಗಿಲ್ಲ, ಅವು ಇದ್ದಕ್ಕಿದ್ದಂತೆ ಕಾಣಿಸಿಕೊಂಡವು ಅಂತ ಪಳೆಯುಳಿಕೆ ಅಧ್ಯಯನಗಳು ತಿಳಿಸುತ್ತೆ. ಇದು ಎಲ್ಲಾ ಪ್ರಾಣಿಗಳನ್ನ ದೇವರು ಸೃಷ್ಟಿ ಮಾಡಿದ್ರು ಅನ್ನೋ ಬೈಬಲಿನ ವಾಕ್ಯಕ್ಕೆ ಹೊಂದಿಕೆಯಲ್ಲಿದೆ. ಉದಾಹರಣೆಗೆ, ಕೀರ್ತನೆ 146:6 ರಲ್ಲಿ “ಭೂಮಿ, ಆಕಾಶ, ಸಾಗರ, ಚರಾಚರ ಇವುಗಳನ್ನು ನಿರ್ಮಿಸಿದವನೂ ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ” ಅಂತ ಹೇಳಿದೆ.
ಡೈನೋಸಾರ್ಗಳು ಯಾವಾಗ ಜೀವಿಸ್ತಿದ್ವು?
ಸಮುದ್ರದಲ್ಲಿ, ನೆಲದಲ್ಲಿ ಬದುಕೋ ಜೀವಿಗಳನ್ನ, ಸೃಷ್ಟಿಯ ಐದು ಮತ್ತು ಆರನೇ ದಿನಗಳಲ್ಲಿ ಸೃಷ್ಟಿಸಲಾಯಿತು ಅಂತ ಬೈಬಲ್ ಹೇಳುತ್ತೆ. b (ಆದಿಕಾಂಡ 1:20-25, 31) ಹಾಗಾದ್ರೆ ಡೈನೋಸಾರ್ಗಳು ತುಂಬ ಸಮಯದ ಮುಂಚೆನೇ ಸೃಷ್ಟಿಯಾಗಿ ತುಂಬ ಕಾಲ ಬದುಕಿದ್ದಿರಬೇಕು ಅಂತ ಇದರಿಂದ ಗೊತ್ತಾಗುತ್ತೆ.
ಬೆಹೇಮೋತ್ ಮತ್ತು ಲಿವ್ಯಾತಾನ್—ಡೈನೋಸಾರ್ಗಳಾ?
ಇಲ್ಲ. ಯೋಬ ಪುಸ್ತಕದಲ್ಲಿ ಹೇಳಿರೋ ಬೆಹೇಮೋತ್ ಮತ್ತು ಲಿವ್ಯಾತಾನ್ ಯಾವ ಪ್ರಾಣಿ ಅಂತ ನಿರ್ದಿಷ್ಟವಾಗಿ ಹೇಳಕ್ಕಾಗಲ್ಲ. ಆದ್ರೂ, ಬೆಹೇಮೋತ್ ಅನ್ನೋದು ನೀರಾನೆ ಮತ್ತು ಲಿವ್ಯಾತಾನ್ ಅನ್ನೋದು ಮೊಸಳೆ ಅಂತ ಸಾಮಾನ್ಯವಾಗಿ ಹೇಳಲಾಗುತ್ತೆ. ಈ ಹೇಳಿಕೆ, ಬೈಬಲ್ನಲ್ಲಿ ಹೇಳಿರೋ ವಿಷ್ಯಗಳ ಜೊತೆ ಹೊಂದಾಣಿಕೆಯಲ್ಲಿದೆ. (ಯೋಬ 40:15-23; 41:1, 14-17, 31) ದೇವರು ಯೋಬನಿಗೆ, ಈ ಪ್ರಾಣಿಗಳನ್ನ ಗಮನಿಸು ಅಂತ ಹೇಳ್ದಾಗ, ಡೈನೋಸಾರ್ ಜಾತಿನೇ ಅಳಿದು ಹೋಗಿ ಸುಮಾರು ವರ್ಷಗಳಾಗಿತ್ತು. ಇದ್ರಿಂದ ನಮಗೆ, “ಬೆಹೇಮೋತ್” ಮತ್ತು “ಲಿವ್ಯಾತಾನ್” ಡೈನೋಸಾರ್ ಆಗಿರೋಕೆ ಸಾಧ್ಯಾನೇ ಇಲ್ಲ ಅಂತ ಗೊತ್ತಾಗುತ್ತೆ.—ಯೋಬ 40:16; 41:8.
ಡೈನೋಸಾರ್ಗಳಿಗೆ ಏನಾಯ್ತು?
ಡೈನೋಸಾರ್ಗಳ ಅಳಿವಿನ ಬಗ್ಗೆ ಬೈಬಲ್ ಏನೂ ಹೇಳಲ್ಲ. ಆದ್ರೆ ಎಲ್ಲಾ “ ನಿನ್ನ [ದೇವರ] ಚಿತ್ತದಿಂದಲೇ” ಅಸ್ತಿತ್ವಕ್ಕೆ ಬಂದು ಸೃಷ್ಟಿಸಲ್ಪಟ್ಟವು ಅಂತ ಹೇಳುತ್ತೆ. (ಪ್ರಕಟನೆ 4:11) ಹಾಗಂದ ಮೇಲೆ ಡೈನೋಸಾರ್ಗಳನ್ನೂ ದೇವರು ಒಂದು ಉದ್ದೇಶದಿಂದನೇ ಸೃಷ್ಟಿ ಮಾಡಿದ್ದಿರಬೇಕು. ಆ ಉದ್ದೇಶ ನೆರವೇರಿದ ಮೇಲೆ ಅವುಗಳು ಅಳಿದು ಹೋಗೋಕೆ ದೇವರು ಅನುಮತಿಸಿರಬಹುದು.
a ಡೈನೋಸಾರ್ಗಳು ಜೀವಿಸಿದ್ವು ಅಂತ ಪಳೆಯುಳಿಕೆ ದಾಖಲೆಗಳು ನಿಖರವಾಗಿ ಹೇಳುತ್ತೆ. ಆ ದಾಖಲೆಯ ಪ್ರಕಾರ ಒಂದು ನಿರ್ದಿಷ್ಟ ಸಮಯದವರೆಗೆ ಬೇರೆ ಬೇರೆ ರೂಪ ಮತ್ತೆ ಗಾತ್ರದ ಡೈನೋಸಾರ್ಗಳು ಜೀವಿಸಿದ್ವು ಅಂತ ಹೇಳುತ್ತೆ.
b ಬೈಬಲ್ನಲ್ಲಿ “ದಿನ” ಅನ್ನೋ ಪದ ಸಾವಿರಾರು ವರ್ಷಗಳನ್ನ ಸೂಚಿಸುತ್ತೆ.—ಆದಿಕಾಂಡ 1:31; 2:1-4; ಇಬ್ರಿಯ 4:4, 11.