ಪ್ರಾಣಿಗಳು ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾ?
ಬೈಬಲ್ ಕೊಡೋ ಉತ್ತರ
ಭೂಮಿಯಲ್ಲಿರೋ ಎಲ್ಲ ಜೀವಿಗಳಲ್ಲಿ ಮನುಷ್ಯರು ಮಾತ್ರ, ಅದ್ರಲ್ಲೂ ಕೇವಲ ಸ್ವಲ್ಪ ಜನ ಮಾತ್ರ ಸ್ವರ್ಗಕ್ಕೆ ಹೋಗ್ತಾರೆ ಅಂತ ಬೈಬಲ್ ಕಲಿಸುತ್ತೆ. (ಪ್ರಕಟನೆ 14:1, 3) ಅಲ್ಲಿ ಅವ್ರು ಯೇಸುವಿನ ಜೊತೆ ರಾಜರಾಗಿ ಮತ್ತು ಯಾಜಕರಾಗಿ ಆಳ್ತಾರೆ. (ಲೂಕ 22:28-30; ಪ್ರಕಟನೆ 5:9, 10) ಈಗಾಗಲೇ ಸತ್ತಿರೋರಲ್ಲಿ ಬಹಳಷ್ಟು ಜನ್ರನ್ನ ಇದೇ ಭೂಮಿ ಮೇಲೆ ವಾಸಿಸೋಕೆ ಜೀವಂತ ಎಬಿಸಲಾಗುತ್ತೆ.—ಕೀರ್ತನೆ 37:11, 29.
ಬೈಬಲ್ನಲ್ಲಿ ಎಲ್ಲಿಯೂ ಸಾಕುಪ್ರಾಣಿಗಳು ಅಥವಾ ನಾಯಿ ಸ್ವರ್ಗಕ್ಕೆ ಹೋಗುತ್ತೆ ಅಂತ ಹೇಳಲಿಲ್ಲ. ಅವು ‘ಸ್ವರ್ಗೀಯ ಕರೆಗೆ’ ಯೋಗ್ಯರಾಗೋಕೆ ಬೇಕಾದ ಹೆಜ್ಜೆಗಳನ್ನ ತಗೊಳ್ಳಲು ಆಗಲ್ಲ. (ಇಬ್ರಿಯ 3:1) ಈ ಹೆಜ್ಜೆಗಳಲ್ಲಿ ದೇವರ ಜ್ಞಾನವನ್ನ ಪಡ್ಕೊಳ್ಳೋದು, ಅದನ್ನ ನಂಬೋದು ಮತ್ತು ದೇವರ ಆಜ್ಞೆಗಳನ್ನ ಪಾಲಿಸೋದು ಒಳಗೂಡಿದೆ. (ಮತ್ತಾಯ 19:17; ಯೋಹಾನ 3:16; 17:3) ಕೇವಲ ಮನುಷ್ಯರನ್ನ ಮಾತ್ರ ಶಾಶ್ವತವಾಗಿ ಜೀವಿಸೋ ಉದ್ದೇಶದಿಂದ ಸೃಷ್ಟಿಸಲಾಗಿದೆ.—ಆದಿಕಾಂಡ 2:16, 17; 3:22, 23
ಸತ್ತ ಪ್ರಾಣಿ ಸ್ವರ್ಗಕ್ಕೆ ಹೋಗಬೇಕಂದ್ರೆ ಪುನರುತ್ಥಾನ ಆಗಲೇಬೇಕು. (1 ಕೊರಿಂಥ 15:42) ಬೈಬಲ್ನಲ್ಲಿ ಎಷ್ಟೋ ಸತ್ತವರನ್ನ ಎಬಿಸಿದ್ದರ ಬಗ್ಗೆ ತಿಳಿಸಲಾಗಿದೆ. (1 ಅರಸು 17:17-24; 2 ಅರಸು 4:32-37; 13:20, 21; ಲೂಕ 7:11-15; 8:41, 42, 49-56; ಯೋಹಾನ 11:38-44; ಅಪೊಸ್ತಲರ ಕಾರ್ಯ 9:36-42; 20:7-12) ಆದ್ರೆ ಅದೆಲ್ಲ ಮನುಷ್ಯರು ಹೊರತು ಪ್ರಾಣಿಗಳಲ್ಲ.
ಪ್ರಾಣಿಗಳು ಸತ್ತ ಮೇಲೆ ಅವುಗಳಿಗೆ ಏನಾಗುತ್ತೆ?
ಬೈಬಲ್ ಪ್ರಕಾರ ಮನುಷ್ಯ ಮತ್ತು ಪ್ರಾಣಿಗಳ ಜೀವ ದೇವರ ದೃಷ್ಟಿಯಲ್ಲಿ ಒಂದೇ ತರ ಇದೆ. (ಅರಣ್ಯಕಾಂಡ 31:28) ಮನುಷ್ಯ ಮತ್ತು ಪ್ರಾಣಿಯನ್ನ ನೆಲದ ಮಣ್ಣಿಂದ ಮಾಡಿ, ಜೀವಶ್ವಾಸವನ್ನ ಕೊಡಲಾಗಿದೆ. (ಆದಿಕಾಂಡ 2:7) ಮನುಷ್ಯ ಅಥವಾ ಪ್ರಾಣಿ ಸತ್ತ ನಂತ್ರ ಸೇರೋದು ಮಣ್ಣಿಗೆ. (ಪ್ರಸಂಗಿ 3:19, 20) ಇನ್ನೊಂದು ರೀತಿ ಹೇಳೋದಾದರೆ ಅಸ್ತಿತ್ವದಲ್ಲಿ ಇರಲ್ಲ. a
ಪ್ರಾಣಿಗಳು ಪಾಪ ಮಾಡ್ತವಾ?
ಇಲ್ಲ. ಪಾಪ ಅನ್ನೋದ್ರ ಅರ್ಥ, ದೇವರ ಮಟ್ಟಕ್ಕೆ ವಿರುದ್ಧವಾಗಿ ಯೋಚಿಸೋದು, ಭಾವಿಸೋದು ಮತ್ತು ನಡ್ಕೊಳ್ಳೋದಾಗಿದೆ. ಒಂದು ಪ್ರಾಣಿಯಲ್ಲಿ ಒಳ್ಳೇದು ಕೆಟ್ಟದು ನಿರ್ಧರಿಸೋ ಸಾಮರ್ಥ್ಯ ಇದ್ರೆ ಮಾತ್ರ ಪಾಪ ಮಾಡೋ ಸಾಧ್ಯತೆ ಇದೆ. ಆದ್ರೆ ಪ್ರಾಣಿಗಳಲ್ಲಿ ಈ ಸಾಮರ್ಥ್ಯ ಇಲ್ಲ. ಅವುಗಳು ಬದುಕಿರೋ ತನಕ ತಮ್ಮ ಸಹಜ ಜ್ಞಾನ ಅಥವಾ ಸ್ವಭಾವಕನುಸಾರ ನಡ್ಕೊಳ್ತವೆ. (2 ಪೇತ್ರ 2:12) ಅವುಗಳು ಪಾಪ ಮಾಡದಿದ್ರೂ ಸಾಯುತ್ತವೆ.
ಪ್ರಾಣಿಗಳ ಜೊತೆ ಕ್ರೂರವಾಗಿ ನಡ್ಕೊಳ್ಳೋದು ಸರಿನಾ?
ಸರಿಯಲ್ಲ. ದೇವರು ಮನುಷ್ಯರಿಗೆ ಪ್ರಾಣಿಗಳ ಮೇಲೆ ಅಧಿಕಾರ ಕೊಟ್ಟಿದ್ದಾನೆ. ಆದ್ರೆ ಅದ್ರ ಅರ್ಥ ಪ್ರಾಣಿಗಳ ಜೊತೆ ಕ್ರೂರವಾಗಿ ನಡ್ಕೊಳ್ಳಬೇಕು ಅಂತಲ್ಲ. (ಆದಿಕಾಂಡ 1:28; ಕೀರ್ತನೆ 8:6-8) ದೇವರು ಪ್ರತಿಯೊಂದು ಪ್ರಾಣಿಗಳನ್ನ ನೋಡ್ಕೊಳ್ತಾನೆ. ಅದು ಚಿಕ್ಕ ಪಕ್ಷಿ ಆದ್ರೂ ಸಹ ಅದನ್ನ ನೋಡ್ಕೊಳ್ತಾನೆ. (ಯೋನ 4:11; ಮತ್ತಾಯ 10:29) ದೇವರು ತನ್ನ ಆರಾಧನೆ ಮಾಡೋರಿಗೆ ಪ್ರಾಣಿಗಳ ಜೊತೆ ಸರಿಯಾಗಿ ನಡ್ಕೊಳ್ಳಬೇಕು ಅಂತ ಆಜ್ಞೆ ಕೊಟ್ಟಿದ್ದಾನೆ.—ವಿಮೋಚನಕಾಂಡ 23:12; ಧರ್ಮೋಪದೇಶಕಾಂಡ 25:4; ಜ್ಞಾನೋಕ್ತಿ 12:10.
a ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಮಗೆ ಏನು ಕಲಿಸುತ್ತದೆ? ಪುಸ್ತಕದ ಅಧ್ಯಾಯ 6 ರನ್ನ ನೋಡಿ.