ಬೈಬಲಲ್ಲಿ ಇರೋದೆಲ್ಲ ಮನುಷ್ಯರ ಆಲೋಚನೆನಾ?
ಬೈಬಲ್ ಕೊಡೋ ಉತ್ತರ
ಬೈಬಲನ್ನ ಪವಿತ್ರ ಗ್ರಂಥ ಅಂತಾನೂ ಕರಿತಾರೆ. ಈ ಗ್ರಂಥದಲ್ಲಿ ಎಷ್ಟೊಂದು ಬುದ್ಧಿಮಾತುಗಳು ಇವೆ ಅಂತ ಗೊತ್ತಾ? “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು” ಅಂತ ಬೈಬಲೇ ಹೇಳುತ್ತೆ. (2 ತಿಮೊತಿ 3:16) ಆದ್ರೆ ಅದನ್ನ ನಂಬೋಕೆ ನಮಗೆ ಆಧಾರ ಇರಬೇಕು. ಏನು ಆಧಾರ ಇದೆ ಅಂತ ನೋಡೋಣ.
ಬೈಬಲಲ್ಲಿ ತಿಳಿಸಿರೋ ಇತಿಹಾಸ ಸುಳ್ಳು ಅಂತ ಸಾಬೀತು ಮಾಡೋಕೆ ಇಲ್ಲಿ ತನಕ ಯಾರಿಗೂ ಆಗಿಲ್ಲ.
ಬೈಬಲನ್ನ ಬರೆದವರು ಮುಚ್ಚುಮರೆ ಇಲ್ಲದೇ ತಮ್ಮ ತಪ್ಪಿನ ಬಗ್ಗೆನೂ ಬರೆದಿದ್ದಾರೆ. ಇದೇ ಬೈಬಲ್ ಎಷ್ಟು ಸತ್ಯ ಅಂತ ತೋರಿಸುತ್ತೆ.
ಬೈಬಲಲ್ಲಿ ಒಂದು ಮುಖ್ಯ ವಿಷ್ಯ ಇದೆ. ಅದೇನಂದ್ರೆ ಇಡೀ ವಿಶ್ವವನ್ನ ಆಳೋ ಹಕ್ಕು ದೇವರಿಗೆ ಮಾತ್ರನೇ ಇದೆ ಮತ್ತು ಮನುಷ್ಯರ ಬಗ್ಗೆ ತನಗಿರೋ ಉದ್ದೇಶನ ನೆರವೇರಿಸೋಕೆ ಆತನು ತನ್ನ ಆಳ್ವಿಕೆನ ಈ ಭೂಮಿಗೆ ತರ್ತಾನೆ.
ಬೈಬಲನ್ನ ಬರೆದು ಸಾವಿರಾರು ವರ್ಷಗಳಾಗಿವೆ. ಆ ಕಾಲದಲ್ಲಿ ಎಷ್ಟೋ ಜನ ವಿಜ್ಞಾನಕ್ಕೆ ಸಂಬಂಧಪಟ್ಟ ಕೆಲವು ವಿಷ್ಯಗಳನ್ನ ತಪ್ಪಾಗಿ ನಂಬಿದ್ರು. ಆದ್ರೆ ಇದ್ಯಾವುದನ್ನೂ ಬೈಬಲಲ್ಲಿ ಬರೆದಿಲ್ಲ, ಅದ್ರಲ್ಲಿ ಸತ್ಯ ಮಾತ್ರನೇ ಇದೆ.
ಬೈಬಲಲ್ಲಿ ಹೇಳಿರೋ ಭವಿಷ್ಯವಾಣಿಗಳು ನಿಜ ಆಗಿದೆ ಅಂತ ಇತಿಹಾಸನೂ ತೋರಿಸ್ಕೊಡುತ್ತೆ.