ಬೈಬಲ್ ವಚನಗಳ ವಿವರಣೆ
ಕೀರ್ತನೆ 46:10—“ಶಾಂತವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ”
“ಸೋಲನ್ನ ಒಪ್ಕೊಳ್ಳಿ, ನಾನೇ ದೇವರು ಅಂತ ತಿಳ್ಕೊಳ್ಳಿ. ದೇಶಗಳಲ್ಲಿ ನನ್ನನ್ನ ಘನತೆಗೆ ಏರಿಸಲಾಗುತ್ತೆ, ಇಡೀ ಭೂಮಿ ನನ್ನನ್ನ ಮೇಲಕ್ಕೆ ಏರಿಸುತ್ತೆ.”—ಕೀರ್ತನೆ 46:10, ಹೊಸ ಲೋಕ ಭಾಷಾಂತರ.
“ಶಾಂತವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.”—ಕೀರ್ತನೆ 46:10, ಪವಿತ್ರ ಬೈಬಲ್.
ಕೀರ್ತನೆ 46:10—ಅರ್ಥ
ಎಲ್ರೂ ತನ್ನನ್ನ ಆರಾಧಿಸಬೇಕು ಮತ್ತು ಭೂಮಿಯನ್ನ ಆಳೋ ಹಕ್ಕು ತನಗೆ ಮಾತ್ರ ಇದೆ ಅಂತ ಅರ್ಥಮಾಡ್ಕೊಬೇಕು ಅನ್ನೋದು ದೇವರ ಇಷ್ಟ. ದೇವರಿಗೆ ಶಕ್ತಿ ಇದೆ ಮತ್ತು ಅಧಿಕಾರ ಇದೆ ಅನ್ನೋ ವಿಷ್ಯದಲ್ಲಿ ಯಾರಿಗೂ ಪ್ರಶ್ನೆ ಮಾಡೋಕೆ ಆಗಲ್ಲ. ಆದ್ರೆ ಯಾರು ಇದನ್ನ ಒಪ್ಕೊಳ್ತಾರೋ ಅವ್ರಿಗೆ ಶಾಶ್ವತಕ್ಕೂ ಜೀವಿಸೋ ಅವಕಾಶ ಸಿಗುತ್ತೆ.—ಪ್ರಕಟನೆ 4:11.
“ಸೋಲನ್ನ ಒಪ್ಕೊಳ್ಳಿ, ನಾನೇ ದೇವರು ಅಂತ ತಿಳ್ಕೊಳ್ಳಿ.” ಕೆಲವು ಬೈಬಲ್ ಭಾಷಾಂತರದಲ್ಲಿ ಈ ವಾಕ್ಯದ ಮೊದಲನೇ ಭಾಗ “ಶಾಂತವಾಗಿರ್ರಿ” ಅಂತ ಇದೆ. ಇದು ಭಯಭಕ್ತಿಯಿಂದ ಚರ್ಚಿನಲ್ಲಿ ಮಾತಾಡದೇ ಸುಮ್ಮನಿರಬೇಕು ಅನ್ನೋ ಆಜ್ಞೆ ಅಂತ ಕೆಲವರು ತಪ್ಪಾಗಿ ಅರ್ಥಮಾಡ್ಕೊಂಡಿದ್ದಾರೆ. ಆದ್ರೆ “ಸೋಲನ್ನ ಒಪ್ಕೊಳ್ಳಿ, ನಾನೇ ದೇವರು ಅಂತ ತಿಳ್ಕೊಳ್ಳಿ” ಅಂತ ಹೀಬ್ರುನಿಂದ ಭಾಷಾಂತರ ಆಗಿರೋ ಈ ಮಾತುಗಳನ್ನ ಸ್ವತಃ ಯೆಹೋವ a ದೇವರೇ ಎಲ್ಲಾ ಜನ್ರಿಗೆ ಹೇಳ್ತಿದ್ದಾನೆ. ಅದೇನಂದ್ರೆ ತನ್ನನ್ನ ವಿರೋಧಿಸೋದನ್ನ ನಿಲ್ಲಿಸಬೇಕು ಮತ್ತು ಆರಾಧನೆಗೆ ತಾನೊಬ್ಬನೇ ಯೋಗ್ಯ ಅನ್ನೋದನ್ನ ಅರ್ಥಮಾಡ್ಕೊಬೇಕು ಅಂತ ಆತನು ಹೇಳ್ತಿದ್ದಾನೆ.
2ನೇ ಕೀರ್ತನೆಯಲ್ಲೂ ಆತನು ಹೀಗೇ ಹೇಳಿದ್ದಾನೆ. ತನ್ನನ್ನ ವಿರೋಧಿಸೋರನ್ನ ಸುಮ್ಮನೆ ಬಿಡಲ್ಲ ಅಂತ ಯೆಹೋವ ಅಲ್ಲಿ ಹೇಳಿದ್ದಾನೆ. ಆದ್ರೆ ಆತನಿಗೆ ಅಧಿಕಾರ ಇದೆ ಅಂತ ಅರ್ಥಮಾಡ್ಕೊಳ್ಳೋ ಜನ್ರು ಮಾರ್ಗದರ್ಶನೆ, ಶಕ್ತಿ ಮತ್ತು ವಿವೇಕಕ್ಕಾಗಿ ಆತನ ಮೇಲೆ ಆತ್ಕೊಳ್ತಾರೆ. ಹೀಗೆ “ಆತನಲ್ಲಿ ಆಶ್ರಯ ಪಡ್ಕೊಳ್ಳೋ” ಜನ್ರು ಕಷ್ಟದ ಸಮಯದಲ್ಲೂ ಸುರಕ್ಷಿತವಾಗಿ ಇರ್ತಾರೆ ಮತ್ತು ಖುಷಿಯಾಗಿ ಇರ್ತಾರೆ.—ಕೀರ್ತನೆ 2:9-12.
“ದೇಶಗಳಲ್ಲಿ ನನ್ನನ್ನ ಘನತೆಗೆ ಏರಿಸಲಾಗುತ್ತೆ, ಇಡೀ ಭೂಮಿ ನನ್ನನ್ನ ಮೇಲಕ್ಕೆ ಏರಿಸುತ್ತೆ.” ಯೆಹೋವ ದೇವರು ಹಿಂದೆ ತನ್ನ ಮಹಾ ಶಕ್ತಿಯನ್ನ ಬಳಸಿ ಜನ್ರನ್ನ ಕಾಪಾಡಿದಾಗ ಅವರು ಆತನನ್ನ ಘನತೆಗೆ ಏರಿಸಿದ್ರು. (ವಿಮೋಚನಕಾಂಡ 15:1-3) ಅಷ್ಟೇ ಅಲ್ಲ ಭವಿಷ್ಯದಲ್ಲಿ ಎಲ್ಲಾ ಜನ್ರು ಯೆಹೋವನ ಅಧಿಕಾರ ಒಪ್ಕೊಂಡು ಆತನನ್ನ ಆರಾಧಿಸುವಾಗ ಅದಕ್ಕಿಂತ ಹೆಚ್ಚಾಗಿ ಘನತೆ ಸಿಗುತ್ತೆ.—ಕೀರ್ತನೆ 86:9, 10; ಯೆಶಾಯ 2:11.
ಕೀರ್ತನೆ 46:10—ಸಂದರ್ಭ
46ನೇ ಕೀರ್ತನೆಯನ್ನ “ತನ್ನ ಜನ್ರ ಪರವಾಗಿ ಹೋರಾಡೋ ಮಹಾ ರಕ್ಷಕನಾದ ದೇವರ ಶಕ್ತಿಯನ್ನ ಹಾಡಿ ಹೊಗಳೋ ಗೀತೆ” ಅಂತ ಒಂದು ಪುಸ್ತಕ ಹೇಳ್ತು. ದೇವಜನ್ರು ಕೀರ್ತನೆ 46ನ್ನ ಹಾಡುವಾಗ ಯೆಹೋವ ತಮ್ಮನ್ನ ಕಾಪಾಡ್ತಾನೆ ಮತ್ತು ಸಹಾಯ ಮಾಡ್ತಾನೆ ಅನ್ನೋ ಭರವಸೆಯನ್ನ ತೋರಿಸ್ತಿದ್ರು. (ಕೀರ್ತನೆ 46:1, 2) ಈ ಗೀತೆಯಲ್ಲಿರೋ ಪದಗಳು ಯೆಹೋವ ಯಾವಾಗ್ಲೂ ತಮ್ಮ ಜೊತೆ ಇರ್ತಾನೆ ಅಂತ ಅವರಿಗೆ ನೆನಪಿಸ್ತಿತ್ತು.—ಕೀರ್ತನೆ 46:7, 11.
ಯೆಹೋವ ತಮ್ಮನ್ನ ಕಾಪಾಡ್ತಾನೆ ಅನ್ನೋ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಆತನು ಈಗಾಗ್ಲೇ ಮಾಡಿರೋ ವಿಷ್ಯಗಳ ಬಗ್ಗೆ ಚೆನ್ನಾಗಿ ಯೋಚಿಸೋಕೆ ಈ ಕೀರ್ತನೆ ಸಹಾಯ ಮಾಡುತ್ತೆ. (ಕೀರ್ತನೆ 46:8) ಯೆಹೋವನಿಗೆ ಯುದ್ಧಗಳನ್ನ ನಿಲ್ಲಿಸೋ ಸಾಮರ್ಥ್ಯ ಇದೆ ಅನ್ನೋದ್ರ ಬಗ್ಗೆನೇ ಈ ಕೀರ್ತನೆಯಲ್ಲಿ ಹೇಳ್ತಿದೆ. (ಕೀರ್ತನೆ 46:9) ಹಿಂದಿನ ಕಾಲದಲ್ಲಿ ಯೆಹೋವ ದೇವರು ತನ್ನ ಜನ್ರನ್ನ ಶತ್ರು ಸೈನ್ಯದಿಂದ ಕಾಪಾಡಿದಾಗ ಒಂದರ್ಥದಲ್ಲಿ ಯುದ್ಧಗಳನ್ನ ನಿಲ್ಲಿಸಿದ. ಆದ್ರೆ ಆತನು ಇನ್ನು ಸ್ವಲ್ಪ ಸಮಯದಲ್ಲೇ ಇಡೀ ಭೂಮಿಯಲ್ಲಿ ನಡಿಯೋ ಯುದ್ಧಗಳನ್ನ ಸಂಪೂರ್ಣವಾಗಿ ನಿಲ್ಲಿಸಿಬಿಡ್ತಾನೆ ಅಂತ ಬೈಬಲ್ ಹೇಳುತ್ತೆ.—ಯೆಶಾಯ 2:4.
ಯೆಹೋವ ಇವತ್ತೂ ತನ್ನ ಜನ್ರಿಗೆ ಸಹಾಯ ಮಾಡ್ತಾನಾ? ಖಂಡಿತ. ಅಪೊಸ್ತಲ ಪೌಲ ಕ್ರೈಸ್ತರಿಗೆ ಯಾವಾಗ್ಲೂ ಯೆಹೋವನ ಮೇಲೆ ಆತ್ಕೊಳ್ಳಿ ಅಂತ ಪ್ರೋತ್ಸಾಹ ಕೊಟ್ಟ. (ಇಬ್ರಿಯ 13:6) ನಮ್ಮನ್ನ ಕಾಪಾಡೋಕೆ ಯೆಹೋವನಿಗೆ ಶಕ್ತಿ ಇದೆ ಅನ್ನೋ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ 46ನೇ ಕೀರ್ತನೆ ನಮಗೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ ದೇವರನ್ನ “ನಮ್ಮ ಆಶ್ರಯ, ನಮ್ಮ ಬಲ” ಆಗಿ ನೋಡೋಕೆ ಸಹಾಯ ಮಾಡುತ್ತೆ.—ಕೀರ್ತನೆ 46:1.
ಕೀರ್ತನೆಗಳು ಪುಸ್ತಕದ ಪರಿಚಯ ಅನ್ನೋ ವಿಡಿಯೋ ನೋಡಿ.
a ಯೆಹೋವ ಅನ್ನೋದು ದೇವರ ಹೆಸ್ರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.